ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ 3 ಮತ್ತು ಗ್ಯಾಲಕ್ಸಿ ಫ್ಲಿಪ್ 3 ಲಾಂಚ್!

17-08-21 12:35 pm       Gizbot, Mantesh   ಡಿಜಿಟಲ್ ಟೆಕ್

ದಕ್ಷಿಣ ಕೊರಿಯಾ ಟೆಕ್ ಸಂಸ್ಥೆ ಸ್ಯಾಮ್‌ಸಂಗ್‌ ಇದೀಗ ಭಾರತದಲ್ಲಿ ಹೊಸದಾಗಿ ಗ್ಯಾಲಕ್ಸಿ ಫೋಲ್ಡ್‌ 3 ಮತ್ತು ಗ್ಯಾಲಕ್ಸಿ ಫ್ಲಿಪ್ 3 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ದಕ್ಷಿಣ ಕೊರಿಯಾ ಟೆಕ್ ಸಂಸ್ಥೆ ಸ್ಯಾಮ್‌ಸಂಗ್‌ ಇದೀಗ ಭಾರತದಲ್ಲಿ ಹೊಸದಾಗಿ ಗ್ಯಾಲಕ್ಸಿ ಫೋಲ್ಡ್‌ 3 ಮತ್ತು ಗ್ಯಾಲಕ್ಸಿ ಫ್ಲಿಪ್ 3 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹೈ ಎಂಡ್‌ ಫ್ಲ್ಯಾಗ್‌ಶಿಫ್‌ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಫೋನ್‌ಗಳು ಗ್ರಾಹಕರ ಗಮನ ಸೆಳೆದಿವೆ. ಇವುಗಳಲ್ಲಿ ಗ್ಯಾಲಕ್ಸಿ ಫೋಲ್ಡ್‌ 3 ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಗ್ಯಾಲಕ್ಸಿ ಫ್ಲಿಪ್ 3 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಗ್ಯಾಲಕ್ಸಿ ಫೋಲ್ಡ್‌ 3 ಮತ್ತು ಗ್ಯಾಲಕ್ಸಿ ಫ್ಲಿಪ್ 3 ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಗ್ಯಾಲಕ್ಸಿ ಫೋಲ್ಡ್‌ 3 UDC- ಅಂಡರ್‌ ಡಿಸ್‌ಪ್ಲೇ ಕ್ಯಾಮೆರಾ ಹೊಂದಿದ ಸ್ಯಾಮ್‌ಸಂಗ್‌ನ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಹಾಗೆಯೇ ಈ ಫೋನಿನ ಮೂರು ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಸೆನ್ಸಾರ್‌ ಪಡೆದಿವೆ. ಹಾಗೆಯೇ 12GB RAM ವೇರಿಯಂಟ್‌ನ ಆಯ್ಕೆಯನ್ನು ಪಡೆದಿದೆ. ಹಾಗೆಯೇ ಗ್ಯಾಲಕ್ಸಿ ಫ್ಲಿಪ್ 3 ಫೋನ್ 128GB ಮತ್ತು 256GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ. ಹಾಗಾದರೇ ಗ್ಯಾಲಕ್ಸಿ ಫೋಲ್ಡ್‌ 3 ಮತ್ತು ಗ್ಯಾಲಕ್ಸಿ ಫ್ಲಿಪ್ 3 ಸ್ಮಾರ್ಟ್‌ಫೋನ್‌ಗಳ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.



ಡಿಸ್‌ಪ್ಲೇ ರಚನೆ ಮತ್ತು ಡಿಸೈನ್

ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್ ಡ್ಯುಯಲ್ ಡಿಸ್‌ಪ್ಲೇ ರಚನೆಯನ್ನು ಹೊಂದಿದೆ. 7.6 ಇಂಚಿನ ಡೈನಾಮಿಕ್ AMOLED 2X ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಪಡೆದಿದ್ದು, 120Hz ರೀಫ್ರೇಶ್ ರೇಟ್ ಪಡೆದಿದೆ. ಡಿಸ್‌ಪ್ಲೇ ಅನುಪಾತವು 22.5:18 ಆಗಿದೆ. ಹಾಗೆಯೇ ಫೋನಿನ ಕವರ್‌ ಸ್ಕ್ರೀನ್ 6.2-ಇಂಚಿನ HD+ (832x2,268 ಪಿಕ್ಸೆಲ್‌ಗಳು) ಡೈನಾಮಿಕ್ AMOLED 2X ಡಿಸ್‌ಪ್ಲೇ 120Hz ರಿಫ್ರೆಶ್ ದರದಲ್ಲಿದೆ.



ಪ್ರೊಸೆಸರ್ ಬಲವೇನು

ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI ಬೆಂಬಲಿತ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್ ಇದೆ. ಇನ್ನು ಈ ಫೋನ್ 12GB + 256GB ಮತ್ತು 12GB + 512GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ.



ಸ್ಪೆಷಲ್ ಕ್ಯಾಮೆರಾ

ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮೂರು ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಸೆನ್ಸಾರ್‌ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾ (ಕವರ್‌ ಕ್ಯಾಮೆರಾ) 10 ಎಂಪಿ ಸೆನ್ಸಾರ್‌ನಲ್ಲಿದೆ.


ಬ್ಯಾಟರಿ ಲೈಫ್

ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್ 4,400mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ 25W ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಹಾಗೆಯೇ ಈ ಫೋನ್ ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಇದು ಎಸ್‌ ಪೆನ್‌ ಪ್ರೊ ಸೌಲಭ್ಯ ಹೊಂದಿದೆ.



ಗ್ಯಾಲಕ್ಸಿ ಫ್ಲಿಪ್ 3 ಫೋನಿನ ಫೀಚರ್ಸ್‌

ಗ್ಯಾಲಕ್ಸಿ ಫ್ಲಿಪ್ 3 ಫೋನ್‌ 1,080x2,640 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥದೊಂದಿಗೆ 6.7 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಡಿಸ್‌ಪ್ಲೇಯು ಡೈನಾಮಿಕ್ AMOLED 2X ಸಪೋರ್ಟ್‌ ಸಹ ಪಡೆದಿದೆ. ಹಾಗೆಯೇ ಆಕ್ಟಾ ಕೋರ್ SoC ಪ್ರೊಸೆಸರ್‌ ಬಲವನ್ನು ಒಳಗೊಂಡಿದೆ. ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿವೆ. ಸೆಲ್ಫಿ ಕ್ಯಾಮೆರಾವು 10 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 15W ಫಾಸ್ಟ್‌ ಚಾರ್ಜಿಂಗ್ ಜೊತೆಗೆ 3,300mAh ಡ್ಯುಯಲ್ ಸೆಲ್ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.



ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್ 12GB + 256GB ವೇರಿಯಂಟ್ ಬೆಲೆಯು 1,49,999ರೂ. ಆಗಿದೆ. ಅದೇ ರಿತಿ 12GB + 512GB ಸ್ಟೋರೇಜ್‌ನ ವೇರಿಯಂಟ್‌ 1,57,999ರೂ. ಆಗಿದೆ. ಗ್ಯಾಲಕ್ಸಿ ಫ್ಲಿಪ್ 3 ಫೋನ್ 8GB RAM + 128GB ವೇರಿಯಂಟ್ 84,999ರೂ.ಗಳ ಬೆಲೆಯನ್ನು ಪಡೆದಿದೆ. ಹಾಗೂ 8GB RAM + 256GB ವೇರಿಯಂಟ್ 88,999ರೂ. ಆಗಿದೆ.

(Kannada Copy of Gizbot Kannada)