ಬ್ರೇಕಿಂಗ್ ನ್ಯೂಸ್
19-08-21 11:13 am Gizbot, Mutthuraju H M ಡಿಜಿಟಲ್ ಟೆಕ್
ಟೆಕ್ ವಲಯದಲ್ಲಿ ರಿಯಲ್‌ಮಿ ಕಂಪೆನಿ ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ಜನಪ್ರಿಯತೆ ಸಾಧಿಸಿದೆ. ಈಗಾಗಲೇ ತನ್ನ ಆಕರ್ಷಕ ಸ್ಮಾರ್ಟ್‌ಫೋನ್‌ಗಳು, ಇಯರ್‌ಫೋನ್‌ಗಳು ಮಾತ್ರವಲ್ಲದೆ ಇದೀಗ ಲ್ಯಾಪ್‌ಟಾಪ್ ವಲಯಕ್ಕೂ ಕೂಡ ಕಾಲಿಟ್ಟಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಮೊದಲ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ರಿಯಲ್‌ಮಿ ಬುಕ್ ಸ್ಲಿಮ್ ಎಂದು ಹೆಸರಿಸಲಾಗಿದೆ. ಇನ್ನು ಈ ಲ್ಯಾಪ್‌ಟಾಪ್ 11ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ಮತ್ತು 2 ಕೆ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಹೊಂದಿದೆ.
ಹೌದು, ರಿಯಲ್‌ಮಿ ಭಾರತದಲ್ಲಿ ತನ್ನ ಮೊದಲ ಲ್ಯಾಪ್‌ಟಾಪ್ ಅನ್ನು ಲಾಂಚ್ ಮಾಡಿದೆ. ಇದು 100% ಎಸ್ ಆರ್ ಜಿಬಿ ಕಲರ್ ಹರವು ಹೊಂದಿದೆ. ಇದು ಮ್ಯಾಕ್‌ಬುಕ್ ಪ್ರೊಗಿಂತ ತೆಳ್ಳಗಿರುತ್ತದೆ ಮತ್ತು ಹಗುರವಾಗಿರುತ್ತದೆ. ಇನ್ನು ಈ ಲ್ಯಾಪ್‌ಟಾಪ್ ಐರಿಸ್ XE ಇಂಟಿಗ್ರೇಟೆಡ್ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ರಿಯಲ್‌ಮಿ ಬುಕ್ ಸ್ಲಿಮ್ ಲ್ಯಾಪ್‌ಟಾಪ್ 2160 × 1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ 14 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 3:2 ರ ಅನುಪಾತವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಅನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನ ಅನಿರ್ದಿಷ್ಟ ಆವೃತ್ತಿಯಿಂದ ರಕ್ಷಿಸಲಾಗಿದೆ. ಇದು ಐರಿಸ್ XE ಇಂಟಿಗ್ರೇಟೆಡ್ ಗ್ರಾಫಿಕ್ಸ್‌ನೊಂದಿಗೆ ಜೋಡಿಯಾಗಿರುವ 11 ನೇ ಜನ್ ಇಂಟೆಲ್ ಕೋರ್ i5 ಪ್ರೊಸೆಸರ್‌ನಿಂದ ಶಕ್ತಿಯನ್ನು ಹೊಂದಿದೆ.
ಈ ಲ್ಯಾಪ್‌ಟಾಪ್ ಡ್ಯುಯಲ್-ಫ್ಯಾನ್ ಕೂಲಿಂಗ್ ಅನ್ನು ಸಹ ಒಳಗೊಂಡಿದೆ. ಇದು ಭಾರೀ ಕೆಲಸದ ಹೊರೆಗಳ ಸಮಯದಲ್ಲಿ ಲ್ಯಾಪ್ಟಾಪ್ ಅನ್ನು ತಂಪಾಗಿರಿಸುತ್ತದೆ. ಇನ್ನು ಈ ಲ್ಯಾಪ್‌ಟಾಪ್ 8GB RAM ಮತ್ತು 512GB SSD ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತದೆ. ಅಲ್ಲದೆ I/O ಟೈಪ್-ಸಿ ಯುಎಸ್‌ಬಿ 3, ಟೈಪ್-ಸಿ ಯುಎಸ್‌ಬಿ 4/ಥಂಡೆಬೋಲ್ಡ್ ಪೋರ್ಟ್, ಟೈಪ್-ಎ ಯುಎಸ್‌ಬಿ 3 ಮತ್ತು ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.
ಇದಲ್ಲದೆ ಈ ಹೊಸ ಲ್ಯಾಪ್ಟಾಪ್ ವೈ-ಫೈ 6 ನೊಂದಿಗೆ ಬರುತ್ತದೆ ಮತ್ತು ಹರ್ಮನ್ ಕಾರ್ಡನ್ ಟ್ಯೂನ್ ಮಾಡಿದ ಸ್ಟೀರಿಯೋ ಸ್ಪೀಕರ್‌ಗಳನ್ನು ಪ್ಯಾಕ್ ಮಾಡುತ್ತದೆ. ಇದು 54Wh ಬ್ಯಾಟರಿಯೊಂದಿಗೆ ಬರುತ್ತದೆ, ಇದು ಒಂದೇ ಚಾರ್ಜ್‌ನಲ್ಲಿ 11 ಗಂಟೆಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ ಈ ಲ್ಯಾಪ್ಟಾಪ್ 65W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಕೇವಲ 30 ನಿಮಿಷಗಳಲ್ಲಿ 0-50 ಪ್ರತಿಶತದಷ್ಟು ಚಾರ್ಜ್ ಅನ್ನು ಒದಗಿಸುತ್ತದೆ ಎಂದು ಕಂಪನಿ ಹೇಳುತ್ತದೆ.
ರಿಯಲ್‌ಮಿ ಬುಕ್ ಸ್ಲಿಮ್ ಲ್ಯಾಪ್‌ಟಾಪ್ ಮೈಕ್ರೋಸಾಪ್ಟ್ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಈ ವರ್ಷದ ಕೊನೆಯಲ್ಲಿ ಪ್ರಾರಂಭವಾದಾಗ ವಿಂಡೋಸ್ 11 ಗೆ ಉಚಿತ ಅಪ್ಗ್ರೇಡ್ ಬರುತ್ತದೆ. ಲ್ಯಾಪ್ಟಾಪ್ ಹೊಸ ಪಿಸಿ ಕನೆಕ್ಟ್ ಆಪ್ ನೊಂದಿಗೆ ಬರುತ್ತದೆ, ಇದು ವೈಫೈ ಡೈರೆಕ್ಟ್ ಮೂಲಕ ಬಳಕೆದಾರರಿಗೆ ಲ್ಯಾಪ್ಟಾಪ್ ಒಳಗೆ ತಮ್ಮ ರಿಯಲ್ ಮಿ ಫೋನುಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಒದಗಿಸುತ್ತದೆ.
ರಿಯಲ್‌ಮಿ ಬುಕ್ ಸ್ಲಿಮ್ 11 ನೇ ಜನ್ ಇಂಟೆಲ್ ಕೋರ್ i3 ಪ್ರೊಸೆಸರ್ 8GB RAM/256GB SSD ಸ್ಟೋರೇಜ್ ವೇರಿಯೆಂಟ್‌ಗೆ ಭಾರತದಲ್ಲಿ 46,999ರು, ಬೆಲೆ ಹೊಂದಿದೆ. ಹಾಗೆಯೇ 11 ನೇ ಜೆನ್ ಇಂಟೆಲ್ ಕೋರ್ i5 ಪ್ರೊಸೆಸರ್ 8GB RAM/512GB ಸ್ಟೋರೇಜ್ ವೇರಿಯಂಟ್‌ಗೆ ರೂ 59,999. ಬೆಲೆ ನಿಗಧಿಪಡಿಸಲಾಗಿದೆ. ಈ ಲ್ಯಾಪ್‌ಟಾಪ್‌ಗಳು ರಿಯಲ್ ಬ್ಲೂ ಮತ್ತು ರಿಯಲ್ ಗ್ರೇ ಕಲರ್ ಆಯ್ಕೆಗಳಲ್ಲಿ ಲಭ್ಯವಿರುತ್ತವೆ. ಇನ್ನು ಲಾಂಚ್ ಆಫರ್‌ನಲ್ಲಿ ರಿಯಲ್‌ಮಿ ಬುಕ್ ಸ್ಲಿಮ್ ಕೋರ್ i3 ರೂಪಾಂತರಕ್ಕೆ ರೂ 44,999 ಮತ್ತು ಕೋರ್ i5 ರೂಪಾಂತರಕ್ಕೆ ರೂ 56,999 ಬೆಲೆ ನೀಡಲಾಗಿದೆ. ಈ ಎರಡೂ ರೂಪಾಂತರಗಳು ಆಗಸ್ಟ್ 30 ರಿಂದ Realme.com, Flipkart ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತವೆ.
(Kannada Copy of Gizbot Kannada)
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 06:33 pm
Mangalore Correspondent
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm