ಮಾರುತಿ ಸುಜುಕಿ ತಯಾರಿಸುತ್ತಿದೆ ಹೈಬ್ರಿಡ್​ ಎಲೆಕ್ಟ್ರಿಕ್​ ಕಾರು ; ಪೆಟ್ರೋಲ್​-ಡೀಸೆಲ್ ಬೇಕಿಲ್ಲ, ಚಾರ್ಚ್​ ಕೂಡ ಮಾಡಬೇಕಿಲ್ಲ

24-08-21 02:31 pm       Headline Karnataka News Network   ಡಿಜಿಟಲ್ ಟೆಕ್

ಜಪಾನ್ ಮೂಲದ ಟೊಯೋಟಾ ಕಂಪನಿ ಜತೆಗೂಡಿ ಮಾರುತಿ ಸುಜುಕಿ ಕಂಪನಿ ಹೈಬ್ರಿಡ್​ ಕಾರನ್ನು ತಯಾರಿಸುತ್ತಿದೆ. ಇದು ಇಂಧನ ಸಹಾಯವಿಲ್ಲ ಮತ್ತು ಚಾರ್ಜ್​ ಇಲ್ಲದೆಯೇ ಚಲಿಸಬಹುದಾದ ಕಾರು ಇದಾಗಿದೆ.

ಜಪಾನ್ ಮೂಲದ ಟೊಯೋಟಾ ಕಂಪನಿ ಜತೆಗೂಡಿ ಮಾರುತಿ ಸುಜುಕಿ ಕಂಪನಿ ಹೈಬ್ರಿಡ್​ ಕಾರನ್ನು ತಯಾರಿಸುತ್ತಿದೆ. ಇದು ಇಂಧನ ಸಹಾಯವಿಲ್ಲ ಮತ್ತು ಚಾರ್ಜ್​ ಇಲ್ಲದೆಯೇ ಚಲಿಸಬಹುದಾದ ಕಾರು ಇದಾಗಿದೆ. ಹಾಗಾದರೆ ಮಾರುತಿ ಸುಜುಕಿ ಕಂಪನಿ ತಯಾರಿಸುತ್ತಿರುವ ನೂತನ ಕಾರು ಹೇಗೆ ಚಲಿಸುತ್ತೇ? ಎಂಬ ಪ್ರಶ್ನೆ ಮೂಡಿರಬಹುದು. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್​- ಡಿಸೇಲ್​ ವಾಹನಗಳಿವೆ. ಅಷ್ಟು ಮಾತ್ರವಲ್ಲದೆ, ಎಲೆಕ್ಟ್ರಿಕ್​ ವಾಹನವನ್ನು ಬಳಸುವವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಹಲವಾರು ಕಂಪನಿ ನಾನಾ ತಂತ್ರಗಳೊಂದಿಗೆ, ಹೊಸ ವಿಶೇಷತೆಗಳನ್ನು ಒಳಗೊಂಡ ಕಾರನ್ನು ಅಭಿವೃದ್ಧಿ ಪಡಿಸುತ್ತಿದೆ. ಅದರಂತೆ ಮಾರುತಿ ಸುಜುಕಿ ಕಂಪನಿಯು ಜಪಾನ್ ಮೂಲದ ಟಯೋಟಾ ಕಂಪನಿಯೊಂದಿಗೆ ಜತೆಗೂಡಿ ಹೈಬ್ರಿಡ್​ ಎಲೆಕ್ಟ್ರಿಕ್​ ಕಾರು ಸಿದ್ಧಪಡಿಸುತ್ತಿದೆ.

ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್​ ವಾಹನಗಳ ಸಂಖ್ಯೆ ಏರುತ್ತಿದ್ದರು ಫಾಸ್ಟ್​ ಚಾಜಿಂಗ್​ ಸ್ಟೇಷನ್​ಗಳಿಲ್ಲ ಎಂಬ ಕೊರಗು ಗ್ರಾಹಕರಲ್ಲಿದೆ. ಇವೆಲ್ಲಾವನ್ನು ಗಮನಿಸಿದ ಮಾರುತಿ ಸುಜುಕಿ ಕಂಪನಿ ಹೊಸ ಹೈಬ್ರಿಡ್​ ಕಾರನ್ನು ಉತ್ಪಾದಿಸುತ್ತದೆ. ಮತ್ತೊಂದೆಡೆ ಟಾಟಾ ಮೋಟಾರ್ಸ್​, ಮಹೀಮದ್ರಾ, ಹುಂಡೈ ಕಂಪನಿಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್​ ವಾಹನ ವಿಚಾರದಲ್ಲಿ ಮಾರುತಿ ಸುಜುಕಿ ಹಿಂದುಳಿದಿದೆ. ಅದಕ್ಕೆ ಉತ್ತರವೆಂಬಂತೆ ಇದೀಗ ಹ್ರೈಬ್ರಿಡ್​ ಎಲೆಕ್ಟ್ರಿಕ್​ ಕಾರನ್ನು (ಎಚ್​ಇವಿ) ನಿರ್ಮಿಸುತ್ತಿದೆ. ಈ ಕಾರಿನ ವಿಶೇಷತೆ ಎಂದರೆ ಪೆಟ್ರೋಲ್​-ಡೀಸೆಲ್ ಬೇಕಿಲ್ಲ. ಚಾರ್ಚ್​ ಕೂಡ ಮಾಡಬೇಕಿಲ್ಲ. ಈ ಕಾರು ಸ್ವಯಂ ಚಾಲಿತವಾಗಿ ಚಾರ್ಜ್​ ಆಗಲಿದೆ.

ವಾಹನ ಚಲಾಯಿಸುವಾಗ ಕಾರಿನ ಬ್ಯಾಟರಿ ಸ್ವಯಂ ಚಾಲಿತವಾಗಿ ಚಾರ್ಜ್​ ಆಗಲಿದೆ. ಚಾಜಿಂಗ್​ ಸ್ಟೇಷನ್​ಗೆ ಹೋಗದೆ ಚಲಿಸುವ ವೇಳೆ ಚಾರ್ಜ್​ ಆಗುತ್ತದೆ.

ಮಾರುತಿ ಸುಜುಕಿ ತಯಾರಿಸುವ ಹೈಬ್ರಿಟ್​ ಕಾರು ಇಂಟರ್ನಲ್​ ಕಂಬುಷ್ಟನ್​ ಎಂಜಿನ್​ ಹೊಂದಿರಲಿದೆ. ಇದು ಬ್ಯಾಟರಿಗೆ ಪವರ್ ನೀಡಲಿದೆ. ಮುಂದಿನ ತಿಂಗಳು ಎಲೆಕ್ಟ್ರಿಕ್​ ವಾಹನಗಳ ಜಂಟಿ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಈ ಕಾರನ್ನು ಟೆಸ್ಟಿಂಗ್​ ನಡೆಸಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಓಡಾಡುತ್ತಿರುವ ಕಾರುಗಳು ಒಂದಲ್ಲಾ ಒಂದು ವಿಶೇಷತೆ ಹೊಂದಿದೆ. ಅದರಂತೆ ಬ್ಯಾಟರಿ ಚಾಲಿತ ಕಾರುಗಳಲ್ಲಿ ನಾನಾ ಫೀಚರ್​ಗಳನ್ನು ಅಳವಡಿಸಿದೆ. ಆದರೆ ಮಾರುತಿ ಸುಜುಕಿ ಇದೀಗ ತನ್ನ ಗ್ರಾಹಕರಿಗೆ ಮತ್ತಷ್ಟು ಉಪಕಾರವಾಗಲೆಂದು ಹೈಬ್ರಿಡ್​ ಕಾರನ್ನು ತಯಾರಿಸುತ್ತಿದೆ. ಹೈಬ್ರಿಡ್​ ಕಾರುಗಳು ಭಾರಕ್ಕೆ ಬಂದರೆ ಹಲವು ಪ್ರಯೋಜನಗಳಿದೆ.

(Kannada Copy of Gizbot Kannada)