ಸ್ಯಾಮ್‌ಸಂಗ್‌ನಿಂದ ಗ್ಯಾಲಕ್ಸಿ A21 ಸ್ಯಾಂಪಲ್ ಫೋನ್ ಬಿಡುಗಡೆ!

28-08-21 02:56 pm       Gizbot, Mantesh   ಡಿಜಿಟಲ್ ಟೆಕ್

ಗ್ಯಾಲಕ್ಸಿ A21 ಸ್ಯಾಂಪಲ್ ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಬೇಸಿಕ್ ಮಾದರಿಯ ಫೀಚರ್ಸ್‌ ಪಡೆದಿದೆ.

ದಕ್ಷಿಣ ಕೊರಿಯಾ ಮೂಲದ ಟೆಕ್‌ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗೆ ಗ್ಯಾಲಕ್ಸಿ A ಮತ್ತು ಗ್ಯಾಲಕ್ಸಿ M ಸರಣಿಯಲ್ಲಿ ಹಲವು ಬಜೆಟ್‌ ಬೆಲೆಯ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಆ ಪೈಕಿ ಗ್ಯಾಲಕ್ಸಿ A ಸರಣಿಯ ಫೋನ್‌ಗಳು ಗ್ರಾಹಕರನ್ನು ಸೆಳೆದಿವೆ. ಅದರ ಮುಂದುವರಿದ ಭಾಗವಾಗಿ ಸಂಸ್ಥೆಯು ಇದೀಗ ಹೊಸದಾಗಿ ಗ್ಯಾಲಕ್ಸಿ A21 ಸ್ಯಾಂಪಲ್ ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಬೇಸಿಕ್ ಮಾದರಿಯ ಫೀಚರ್ಸ್‌ ಪಡೆದಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಜಪಾನ ಮಾರುಕಟ್ಟೆಯಲ್ಲಿ ಹೊಸದಾಗಿ ಗ್ಯಾಲಕ್ಸಿ A21 ಸ್ಯಾಂಪಲ್ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಆದರೆ ಈ ಫೋನ್ ಗ್ಯಾಲಕ್ಸಿ A21 ಫೋನ್‌ಗಿಂತ ಸ್ವಲ್ಪ ಭಿನ್ನವಾಗಿದೆ. ಬೇಸಿಕ್ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಅನ್ನು ಹೊಂದಿದೆ. ಹಾಗಾದರೇ ಗ್ಯಾಲಕ್ಸಿ A21 ಸ್ಯಾಂಪಲ್ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.



ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಗ್ಯಾಲಕ್ಸಿ A21 ಸ್ಯಾಂಪಲ್ ಸ್ಮಾರ್ಟ್‌ಫೋನ್‌ 720 x 1,560 ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿರುವ 5.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. TFT ಮಾದರಿಯ ಡಿಸ್‌ಪ್ಲೇಯಿದ್ದು, 16.77 ಮಿಲಿಯನ್ ಕಲರ್‌ಗಳ ಸಂಯೋಜನೆ ಪಡೆದಿದೆ.



ಪ್ರೊಸೆಸರ್‌ ಸಾಮರ್ಥ್ಯ ಎಷ್ಟು

ಗ್ಯಾಲಕ್ಸಿ A21 ಸ್ಯಾಂಪಲ್ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ Exynos 7884B SoC ಪ್ರೊಸೆಸರ್‌ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್ ಬೆಂಬಲದಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್ 3GB RAM + 64GB ಸ್ಟೋರೇಜ್‌ನ ವೇರಿಯಂಟ್ ಆಯ್ಕೆ ಹೊಂದಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ 1TB ವರೆಗೂ ವಿಸ್ತರಿಸಲು ಅವಕಾಶ ಹೊಂದಿದೆ.



ಸಿಂಗಲ್ ರಿಯರ್ ಕ್ಯಾಮೆರಾ

ರಚನೆ ಗ್ಯಾಲಕ್ಸಿ A21 ಸ್ಯಾಂಪಲ್ ಸ್ಮಾರ್ಟ್‌ಫೋನ್‌ ಸಿಂಗಲ್ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಅದು 13 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಸೆಲ್ಫಿಗಾಗಿ 5 ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ ಎಡಿಟಿಂಗ್ ಆಯ್ಕೆಗಳು ಇವೆ.



ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಗ್ಯಾಲಕ್ಸಿ A21 ಸ್ಯಾಂಪಲ್ ಸ್ಮಾರ್ಟ್‌ಫೋನ್‌ 3,600mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್ ಸಾಮರ್ಥ್ಯವನ್ನು ಪಡೆದಿದೆ. ಸಂಪರ್ಕ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ v5, ಜಿಪಿಎಸ್, ಮತ್ತು ಯುಎಸ್‌ಬಿ ಟೈಪ್‌-ಸಿ ಪೋರ್ಟ್ ಸೇರಿವೆ. ಆನ್‌ಬೋರ್ಡ್‌ನಲ್ಲಿರುವ ಸೆನ್ಸರ್‌ಗಳು ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಸಾಮೀಪ್ಯ ಸೆನ್ಸರ್ ಅನ್ನು ಒಳಗೊಂಡಿವೆ. ಯಾವುದೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇಲ್ಲ ಆದರೆ ಫೋನ್ ಫೇಸ್ ಅನ್‌ಲಾಕ್ ವೈಶಿಷ್ಟ್ಯದೊಂದಿಗೆ ಬರುತ್ತದೆ.

ಬೆಲೆ ಮತ್ತು ಲಭ್ಯತೆ

ಗ್ಯಾಲಕ್ಸಿ A21 ಸ್ಯಾಂಪಲ್ ಫೋನ್ ಬೆಲೆಯು ಜಪಾನನಲ್ಲಿ JPY 22,000ಆಗಿದೆ. (ಭಾರತದಲ್ಲಿ ಅಂದಾಜು 14,700ರೂ. ಎನ್ನಲಾಗಿದೆ). ಹಾಗೆಯೇ ಈ ಫೋನ್ ಬ್ಲ್ಯಾಕ್ ಮತ್ತು ವೈಟ್‌ ಬಣ್ಣಗಳ ಆಯ್ಕೆಯನ್ನು ಪಡೆದಿದೆ.