ಆಂಡ್ರಾಯ್ಡ್‌ನಲ್ಲಿ ಅಮೆಜಾನ್‌ ಅಲೆಕ್ಸಾ‌ವನ್ನು ಸೆಟ್‌ ಮಾಡುವುದು ಹೇಗೆ?

31-08-21 12:16 pm       Gizbot, Mutthuraju H M   ಡಿಜಿಟಲ್ ಟೆಕ್

ಅಮೆಜಾನ್‌ ಅಲೆಕ್ಸಾ ನಿಮಗೆ ಸಾಕಷ್ಟು ಅನುಕೂಲಕರವಾಗಿದೆ. ನಿಮ್ಮ ನೆಚ್ಚಿನ ಸ್ಮಾರ್ಟ್‌ಹೋಮ್‌ ಅಸಿಸ್ಟೆಂಟ್‌ ಆಗಿ ನೀವು ಹೇಳಿದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಹೋಮ್‌ ಅಸಿಸ್ಟೆಂಟ್‌ ಅಮೆಜಾನ್‌ ಅಲೆಕ್ಸಾ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇನ್ನು ಅಮೆಜಾನ್‌ ಅಲೆಕ್ಸಾ ತನ್ನ ಬಳಕೆದಾರರು ಬಳಸುವ ತಂತ್ರಜ್ಞಾನದೊಂದಿಗೆ ಸಂವಹನ ನಡೆಸಲು ಹೆಚ್ಚು ಅರ್ಥಗರ್ಭಿತ ಮಾರ್ಗವನ್ನು ಒದಗಿಸಲು ನ್ಯಾಚುರಲ್‌ ಸೌಂಡ್‌ ಅನುಭವಗಳನ್ನು ಬಳಸುತ್ತದೆ. ಅಷ್ಟೇ ಅಲ್ಲ ಅಲೆಕ್ಸಾ ನಿಮಗೆ ಕರೆಗಳನ್ನು ಮಾಡಲು, ಸಮಯವನ್ನು ಕೇಳಲು, ಸುದ್ದಿ ಪಡೆಯಲು, ಕರೆನ್ಸಿಗಳನ್ನು ಪರಿವರ್ತಿಸಲು, ಟೈಮರ್ ಹೊಂದಿಸಲು, ನಿಮ್ಮ ಸ್ಮಾರ್ಟ್ ಹೋಮ್ ಮತ್ತು ವಿವಿಧ ಕಾರ್ಯಗಳನ್ನು ನಿರ್ವಹಿಸಲು ಅನುಮತಿಸುತ್ತದೆ.

ಹೌದು, ಅಮೆಜಾನ್‌ ಅಲೆಕ್ಸಾ ನಿಮಗೆ ಸಾಕಷ್ಟು ಅನುಕೂಲಕರವಾಗಿದೆ. ನಿಮ್ಮ ನೆಚ್ಚಿನ ಸ್ಮಾರ್ಟ್‌ಹೋಮ್‌ ಅಸಿಸ್ಟೆಂಟ್‌ ಆಗಿ ನೀವು ಹೇಳಿದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತದೆ. ಇದಕ್ಕಗಿಯೇ ಅಲೆಕ್ಸಾದಲ್ಲಿ ಹಲವು ಮಾದರಿಯ ಫೀಚರ್ಸ್‌ಗಳನ್ನು ಅಳವಡಿಸಲಾಗಿದೆ. ಇನ್ನು ಅಲೆಕ್ಸಾ ಅಪ್ಲಿಕೇಶನ್‌ನೊಂದಿಗೆ ನೀವು ವಿವಿಧ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳನ್ನು ಜೋಡಿಸಬಹುದು. ಅಲ್ಲದೆ ನೀವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಅಲೆಕ್ಸಾವನ್ನು ಬಳಸಲು ಬಯಸಿದರೆ, ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೂಲಕ ನೀವು ಬಳಸಬಹುದು. ಹಾಗಾದ್ರೆ ಆಂಡ್ರಾಯ್ಡ್‌ ನಲ್ಲಿ ಅಮೆಜಾನ್‌ ಅಲೆಕ್ಸಾವನ್ನು ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.



ಆಂಡ್ರಾಯ್ಡ್‌ನಲ್ಲಿ ಅಮೆಜಾನ್‌ ಅಲೆಕ್ಸಾವನ್ನು ಸೆಟ್‌ ಮಾಡುವುದು ಹೇಗೆ?

  • ಹಂತ:1 ಗೂಗಲ್ ಪ್ಲೇ ಸ್ಟೋರ್‌ನಿಂದ ಅಮೆಜಾನ್ ಅಲೆಕ್ಸಾವನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ
  • ಹಂತ:2 ಆಪ್ ತೆರೆಯಲು ಅಮೆಜಾನ್ ಅಲೆಕ್ಸಾ ಆಪ್ ಐಕಾನ್ ಮೇಲೆ ಟ್ಯಾಪ್ ಮಾಡಿ
  • ಹಂತ:3 ನಿಮ್ಮ ಅಸ್ತಿತ್ವದಲ್ಲಿರುವ ಅಮೆಜಾನ್ ಖಾತೆ ಮಾಹಿತಿಗೆ ಲಾಗ್ ಇನ್ ಮಾಡಿ, ನಂತರ ಸೈನ್ ಇನ್ ಟ್ಯಾಪ್ ಮಾಡಿ. ನೀವು ಅಮೆಜಾನ್ ಖಾತೆಯನ್ನು ಹೊಂದಿಲ್ಲದಿದ್ದರೆ, ನೀವು ಒಂದನ್ನು ಕ್ರಿಯೆಟ್‌ ಮಾಡಬಹುದು.
  • ಹಂತ:4 ಅಸಿಸ್ಟೆಂಟ್‌ ಅಲೆಕ್ಸಾ ನಿಮ್ಮನ್ನು ತಿಳಿದುಕೊಳ್ಳಲು ಸಹಾಯ ಮಾಡುವ ಪಟ್ಟಿಯಿಂದ ನಿಮ್ಮ ಹೆಸರನ್ನು ಪರಿಶೀಲಿಸಿ ಮತ್ತು ಆಯ್ಕೆ ಮಾಡಿ. ನಾನು ಬೇರೆ ಯಾರೋ ಎಂಬುದನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಮಾಹಿತಿಯನ್ನು ಒದಗಿಸಬಹುದು.
  • ಹಂತ:5 ನಿಮ್ಮ ಸಂಪರ್ಕಗಳನ್ನು ಅಪ್ಲೋಡ್ ಮಾಡಲು ನೀವು ಅಮೆಜಾನ್ ಅನುಮತಿ ನೀಡಲು ಬಯಸಿದರೆ ಅನುಮತಿಸು ಆಯ್ಕೆಯನ್ನು ಆರಿಸಿ. ನೀವು ನಂತರದ ಆಯ್ಕೆಯನ್ನು ಸಹ ಟ್ಯಾಪ್ ಮಾಡಬಹುದು.
  • ಹಂತ:6 ಮುಂದಿನ ಸ್ಕ್ರೀನ್ ಗಳಲ್ಲಿ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ. ನೀವು ಅಪ್ಲಿಕೇಶನ್ ಇಂಟರ್ಫೇಸ್‌ನ ಅವಲೋಕನವನ್ನು ಪಡೆಯುತ್ತೀರಿ. ಹಂತ:7 ಅಲೆಕ್ಸಾ ಆಪ್ ಹೋಮ್ ಸ್ಕ್ರೀನ್‌ನಲ್ಲಿರುವಾಗ, ಅಲೆಕ್ಸಾ ಮಾಡಬಹುದಾದ ವಿಭಿನ್ನ ವಿಷಯಗಳನ್ನು ಅನ್ವೇಷಿಸಲು ಮೇಲಕ್ಕೆ ಸ್ವೈಪ್ ಮಾಡಿ.

ಅಲೆಕ್ಸಾವನ್ನು ಕಸ್ಟಮೈಸ್ ಮಾಡುವುದು ಹೇಗೆ?

  • ಹಂತ:1 ಆಪ್ ತೆರೆಯಲು ಅಮೆಜಾನ್ ಅಲೆಕ್ಸಾ ಆಪ್ ಐಕಾನ್ ಮೇಲೆ ಟ್ಯಾಪ್ ಮಾಡಿ,
  • ಹಂತ:2 ಕೆಳಗಿನ ಆಯ್ಕೆಯಲ್ಲಿರುವ ಸಾಧನಗಳ ಮೇಲೆ ಟ್ಯಾಪ್ ಮಾಡಿ.
  • ಹಂತ:3 ಎಲ್ಲಾ ಸಾಧನಗಳ ಆಯ್ಕೆಯನ್ನು ಟ್ಯಾಪ್ ಮಾಡಿ
  • ಹಂತ:4 ಈ ಫೋನ್‌ನಲ್ಲಿ ಅಲೆಕ್ಸಾವನ್ನು ಟ್ಯಾಪ್ ಮಾಡಿ.
  • ಹಂತ:5 ಈ ಕೆಳಗಿನ ಪರದೆಗಳಲ್ಲಿ, ನಿಮ್ಮ ಪ್ರದೇಶ, ಸಮಯ ವಲಯ ಮತ್ತು ಆದ್ಯತೆಯ ಮಾಪನ ಘಟಕಗಳನ್ನು ನೀವು ಗ್ರಾಹಕೀಯಗೊಳಿಸಬಹುದು.