ಸದ್ಯದಲ್ಲೇ ವಾಟ್ಸಾಪ್‌ ಸೇರಲಿದೆ ಭಾರೀ ಕುತೂಹಲಕಾರಿ ಫೀಚರ್; ಏನದು ಗೊತ್ತಾ?

08-09-21 11:25 am       Gizbot, Mantesh   ಡಿಜಿಟಲ್ ಟೆಕ್

ತನ್ನ ನೂತನ ಅಪ್‌ಡೇಟ್‌ನಲ್ಲಿ ಒಂದಿಲ್ಲೊಂದು ಹೊಸ ಫೀಚರ್ ಸೇರಿಸುತ್ತ ಸಾಗಿರುವ ವಾಟ್ಸಾಪ್‌ ಈಗ ಮತ್ತೊಂದು ಕುತೂಹಲಕಾರಿ ಫೀಚರ್ಸ್‌ ಪರಿಚಯಿಸಲು ರೆಡಿಯಾಗಿದೆ.

ಜಗತ್ತಿನ ಜನಪ್ರಿಯ ಇನ್‌ಸ್ಟಂಟ್ ಮೆಸೆಜಿಂಗ್ ಆಪ್‌ 'ವಾಟ್ಸಪ್‌' ಸದ್ಯ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ತನ್ನ ಬಳಕೆದಾರರಿಗೆ ಈಗಾಗಲೇ ಹತ್ತು ಹಲವು ನೂತನ ಫೀಚರ್ಸ್‌ಗಳನ್ನು ಪರಿಚಯಿಸಿರುವ ಸಂಸ್ಥೆಯು, ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೆ ಪ್ರೈವೆಸಿ ಫೀಚರ್‌ಗಳನ್ನು ಅಳವಡಿಸಿದೆ. ತನ್ನ ನೂತನ ಅಪ್‌ಡೇಟ್‌ನಲ್ಲಿ ಒಂದಿಲ್ಲೊಂದು ಹೊಸ ಫೀಚರ್ ಸೇರಿಸುತ್ತ ಸಾಗಿರುವ ವಾಟ್ಸಾಪ್‌ ಈಗ ಮತ್ತೊಂದು ಕುತೂಹಲಕಾರಿ ಫೀಚರ್ಸ್‌ ಪರಿಚಯಿಸಲು ರೆಡಿಯಾಗಿದೆ.

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಅಪ್ಲಿಕೇಶನ್ ಈಗ ಆನ್‌ಲೈನ್‌ ಸ್ಟೇಟಸ್‌ ಹೈಡ್ ಮಾಡುವ ನೂತನ ಫೀಚರ್‌/ಆಯ್ಕೆಯನ್ನು ಪರಿಚಯಿಸಲಿದೆ. ಲಾಸ್ಟ್‌ ಸೀನ್ ಮರೆ ಮಾಡುವ ಆಯ್ಕೆ ಪರಿಚಯಿಸಲು ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಬಳಕೆದಾರರ ಪ್ರೊಫೈಲ್‌ನ ಮಾಹಿತಿಯನ್ನು ಯಾರು ನಿಖರವಾಗಿ ನೋಡಬಹುದು ಎಂಬುದರ ಮೇಲೆ ನಿಯಂತ್ರಣವನ್ನು ಅನುಮತಿಸಲು ಹೊಸ ಗೌಪ್ಯತೆ ಆಯ್ಕೆ ಅಭಿವೃದ್ಧಿಯಲ್ಲಿವೆ ಎಂದು ಆಂಡ್ರಾಯ್ಡ್ ಪೋಲಿಸ್ ತಾಣವು ವರದಿ ಮಾಡಿದೆ.



ಪ್ರಸ್ತುತ ವಾಟ್ಸಪ್ ಅಪ್ಲಿಕೇಶನ್‌ನಲ್ಲಿ ಬಳಕೆದಾರರ ಲಾಸ್ಟ್‌ ಸೀನ್, ಪ್ರೊಫೈಲ್ ಪಿಕ್ಚರ್ ಮತ್ತು ಅಬೌಟ್ ಮಾಹಿತಿಯನ್ನು ಮರೆ ಮಾಡಲು ಮೂರು ಆಯ್ಕೆಗಳಿವೆ. ಅವು ಕ್ರಮವಾಗಿ ಅನ್ನು ಎಲ್ಲರೂ, ಕಾಂಟ್ಯಾಕ್ಟ್‌ ಹಾಗೂ ಯಾರೂ ಇಲ್ಲ ಆಯ್ಕೆ ಕಾಣಬಹುದು. ಆದರೆ ಹೊಸ ಆಯ್ಕೆಯಲ್ಲಿ ಬಳಕೆದಾರರು ಅನುಮತಿ ನೀಡುವ ಕಾಂಟ್ಯಾಕ್ಟ್‌ ಮಾತ್ರ ಅವರ ವಾಟ್ಸಾಪ್ ಲಾಸ್ಟ್‌ ಸೀನ್ ನೋಡಬಹುದಾದ ಆಯ್ಕೆ ಸೇರಲಿದೆ ಎಂದು ಹೇಳಲಾಗುತ್ತಿದೆ.



ವಾಟ್ಸಾಪ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್ ಕಾಣಿಸದಂತೆ ಸೆಟ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ಲಾಸ್ಟ್‌ ಸೀನ್ ಅನ್ನು ಕಾಣಿಸದಂತೆ ಸೆಟ್ ಮಾಡಲು ನೀವು ಬಯಸಿದರೆ, ವಾಟ್ಸಾಪ್ ಆಪ್ ಅನ್ನು ತೆರೆಯಿರಿ ಮತ್ತು ಸೆಟ್ಟಿಂಗ್‌ಗಳ ವಿಭಾಗಕ್ಕೆ ಹೋಗಿ.

ಹಂತ 2: ನಂತರ ಖಾತೆ/Account ಸೆಕ್ಷೆನ್‌ಗೆ ಹೋಗಿ ಮತ್ತು Privacy/ಗೌಪ್ಯತೆಯನ್ನು ಟ್ಯಾಪ್ ಮಾಡಿ. (ನೀವು ಸೇವ್ ಮಾಡುವ ಯಾವುದೇ ಸೆಟ್ಟಿಂಗ್‌ಗಳು ಮೆಸೇಜಿಂಗ್ ಆಪ್‌ನ ಮೊಬೈಲ್ ಮತ್ತು ವೆಬ್ ಆವೃತ್ತಿ ಎರಡಕ್ಕೂ ಅನ್ವಯಿಸುತ್ತದೆ ಎಂಬುದನ್ನು ಗಮನಿಸಬೇಕು.)

ಹಂತ 3: ತದ ನಂತರ, ಲಾಸ್ಟ್‌ ಸೀನ್ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ ಮತ್ತು ಸೆಟ್ಟಿಂಗ್ ಅನ್ನು Nobody ಆಯ್ಕೆಗೆ ಬದಲಿಸಿರಿ.



ಐಓಎಸ್‌ ಡಿವೈಸ್‌ನಲ್ಲಿ ವಾಟ್ಸಾಪ್ ಲಾಸ್ಟ್‌ ಸೀನ್ ಹೈಡ್ ಮಾಡಲು ಈ ಕ್ರಮ ಫಾಲೋ ಮಾಡಿ:

* ವಾಟ್ಸಾಪ್ ಖಾತೆ ತೆರೆಯಿರಿ

* ನಂತರ ಕೆಳಗಿನ ಎಡಭಾಗದಲ್ಲಿರುವ ಸೆಟ್ಟಿಂಗ್ಸ್ ಆಯ್ಕೆ ಮೇಲೆ ಟ್ಯಾಪ್ ಮಾಡಿ.

* ಅಕೌಂಟ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ. * ತದ ನಂತರ ಪ್ರೈವಸಿ ಆಯ್ಕೆ ಮೇಲೆ ಟ್ಯಾಪ್ ಮಾಡಿ.

* ಲಾಸ್ಟ್ ಸೀನ್ ನೋಡಿದ ಮೇಲೆ ಟ್ಯಾಪ್ ಮಾಡಿ.

* ಅಲ್ಲಿ ಕಾಣುವ ಆಯ್ಕೆಗಳಲ್ಲಿ ನಿಮ್ಮ ಪ್ರೈವಸಿ ಅಗತ್ಯಗಳಿಗೆ ಸರಿಹೊಂದುವ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿ.



ಬಳಕೆದಾರರು ಗಮನಿಸಬೇಕಾದ ಪ್ರಮುಖ ಅಂಶ

* Everyone My Contacts ಮತ್ತು Nobody ಸೇರಿದಂತೆ ನೀವು ಮೂರು ಆಯ್ಕೆಗಳನ್ನು ಪಡೆಯುತ್ತೀರಿ. ಮೊದಲನೆಯದು ಮೂಲತಃ ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ಹೊಂದಿರುವ ಜನರು ಮಾತ್ರ ನಿಮ್ಮ ಲಾಸ್ಟ್‌ ಸೀನ್ ನೋಡಲು ಸಾಧ್ಯ.

* ಎರಡನೆಯ ಆಯ್ಕೆ ಎಂದರೆ ನಿಮ್ಮ ಸಂಪರ್ಕಗಳು ಮಾತ್ರ ನೀವು ವಾಟ್ಸಾಪ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್ ನೋಡಿದ್ದನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

* ನೀವು "ಯಾರೂ" ಆಯ್ಕೆಯನ್ನು ಸಕ್ರಿಯಗೊಳಿಸಿದರೆ, ನಿಮ್ಮ ವಾಟ್ಸಾಪ್ ಲಾಸ್ಟ್‌ ಸೀನ್ ಯಾರೂ ನೋಡಲು ಸಾಧ್ಯವಾಗುವುದಿಲ್ಲ.

* ನೀವು ಯಾವಾಗ ಬೇಕಾದರೂ ಲಾಸ್ಟ್‌ ಸೀನ್ ಯಾವುದೇ ಆಯ್ಕೆಯನ್ನು ನೀವು ಆಯ್ಕೆ ಮಾಡಬಹುದು.



ವಾಟ್ಸಾಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಹೀಗೆ ಮಾಡಿ:

ಹಂತ 1: ಮೊದಲು ವಾಟ್ಸಾಪ್ ಅಪ್ಲಿಕೇಶನ್ ಗೆ ಭೇಟಿ ನೀಡಿ ಮತ್ತು ನಂತರ ಸೆಟ್ಟಿಂಗ್ಸ್ ವಿಭಾಗವನ್ನು ತೆರೆಯಿರಿ.

ಹಂತ 2: ನಂತರ, Account/ಖಾತೆ ಗೆ ಹೋಗಿ ಮತ್ತು Privacy/ಗೌಪ್ಯತೆ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಹಂತ 3: ತದ ನಂತರ Read Receipts ಆಯ್ಕೆಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಾಟ್‌ಗಳಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಅದನ್ನು ನಿಷ್ಕ್ರಿಯಗೊಳಿಸಿ.