ಸದ್ಯದಲ್ಲೇ 'ಜಿ-ಮೇಲ್‌' ಸೇರಲಿದೆ ಭಾರೀ ಅಚ್ಚರಿಯ ಫೀಚರ್‌; ಏನದು ಗೊತ್ತೆ?

09-09-21 11:14 am       Gizbot, Mantesh   ಡಿಜಿಟಲ್ ಟೆಕ್

ಗೂಗಲ್‌ ಕಂಪನಿಯ ಅತ್ಯುತ್ತಮ ಸೇವೆಗಳ ಪೈಕಿ ಜಿ-ಮೇಲ್‌ ಕೂಡಾ ಒಂದಾಗಿದ್ದು, ಸಂಸ್ಥೆಯ ಇತರೆ ಸೇವೆಗಳನ್ನು ಪಡೆಯಲು ಜಿ-ಮೇಲ್ ಬುನಾದಿಯಂತಿದೆ.

ಸರ್ಚ್ ಇಂಜಿನ್ ದೈತ್ಯ ಗೂಗಲ್‌ ಸಂಸ್ಥೆಯು ಹಲವು ಉಪಯುಕ್ತ ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ನೆರವು ಮಾಡಿದೆ. ಗೂಗಲ್‌ ಕಂಪನಿಯ ಅತ್ಯುತ್ತಮ ಸೇವೆಗಳ ಪೈಕಿ ಜಿ-ಮೇಲ್‌ ಕೂಡಾ ಒಂದಾಗಿದ್ದು, ಸಂಸ್ಥೆಯ ಇತರೆ ಸೇವೆಗಳನ್ನು ಪಡೆಯಲು ಜಿ-ಮೇಲ್ ಬುನಾದಿಯಂತಿದೆ. ಜಿ-ಮೇಲ್‌ನಲ್ಲಿ ಈಗಾಗಲೇ ಹಲವು ಅಪ್‌ಡೇಟ್‌ಗಳು ಆಗಿದ್ದು, ಹೀಗಾಗಿ ಜಿ-ಮೇಲ್ ಬರೀ ಮೇಲ್/ಸಂದೇಶ ಕಳುಹಿಸುವ ಅಥವಾ ಸ್ವೀಕರಿಸುವ ತಾಣವಾಗಿ ಉಳಿದಿಲ್ಲ. ಜಿ-ಮೇಲ್‌ನಲ್ಲಿ ಈಗ ಹೊಸದೊಂದು ಫೀಚರ್ ಸೇರ್ಪಡೆ ಆಗಲಿದ್ದು, ಬಳಕೆದಾರರು ಫುಲ್ ದಿಲ್‌ಖುಷ್ ಆಗಲಿದ್ದಾರೆ



ಹೌದು, ಗೂಗಲ್‌ನ ಜಿ-ಮೇಲ್‌ನಲ್ಲಿ ಸದ್ಯದಲ್ಲೇ ವಾಯಿಸ್‌ ಕರೆ ಹಾಗೂ ವಿಡಿಯೋ ಕರೆಗಳ ಸೇವೆ ಲಭ್ಯವಾಗಲಿದೆ. ಇ-ಮೇಲ್‌ಗಳನ್ನು ಕಳುಹಿಸುವ ಅಥವಾ ಸ್ವೀಕರಿಸುವ ಹೊರತಾಗಿ, ಇದು ಬಳಕೆದಾರರಿಗೆ ವೈಯಕ್ತಿಕ ಮತ್ತು ಗ್ರೂಪ್ ಚಾಟ್‌ಗಳು, ವಿಡಿಯೋ ಕಾನ್ಫರೆನ್ಸ್‌ಗಳು ಇದರೊಂದಿಗೆ ಪ್ರಸ್ತುತ ವಾಯಿಸ್‌ ಮತ್ತು ವೀಡಿಯೊ ಕರೆಗಳನ್ನು ಮಾಡಲು ಅನುಮತಿಸುತ್ತದೆ. ಜಿ-ಮೇಲ್ ಆಪ್‌ನಲ್ಲಿ ಗೂಗಲ್ ಮೀಟ್ ಮೂಲಕ ಕರೆ ಮಾಡಲಾಗುವುದು ಎಂಬುದನ್ನು ಗಮನಿಸಿ.



ಈ ನಿಟ್ಟಿನಲ್ಲಿ, ಜಿ-ಮೇಲ್ ಚಾಟ್, ಸ್ಪೇಸ್‌ಗಳು ಮತ್ತು ಗೂಗಲ್‌ ಮೀಟ್‌ಗೆ ಪ್ರವೇಶ ಕೇಂದ್ರವಾಗಿ ಕೆಲಸ ಮಾಡಲಿದೆ. ಸಹಜವಾಗಿ, ಹೆಚ್ಚು ಸಮರ್ಪಿತ ಇಂಟರ್ಫೇಸ್ ಬಯಸುವವರಿಗೆ ಅಪ್ಲಿಕೇಶನ್‌ಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಟೆಕ್ ದೊಡ್ಡಣ್ಣ ಗೂಗಲ್, ಭವಿಷ್ಯದಲ್ಲಿ ಯಾವಾಗಲಾದರೂ ಗೂಗಲ್ ಮೀಟ್‌ಗೆ ವಾಯಿಸ್‌ ಮತ್ತು ವೀಡಿಯೊ ಕರೆ ಮಾಡುವ ಫೀಚರ್‌ ಅನ್ನು ಪರಿಚಯಿಸುವ ಭರವಸೆ ನೀಡಿದೆ. ಪ್ರಸ್ತುತ ಈ ಸೇವೆಯು ಎಂಟರ್‌ಪ್ರೈಸ್ ಗ್ರಾಹಕರಿಗೆ ಲಭ್ಯತೆ ಶುರುವಾಗಿದೆ ಮತ್ತು ಶೀಘ್ರದಲ್ಲೇ ಇತರೆ ಸಾಮಾನ್ಯ ಜಿ-ಮೇಲ್‌ ಬಳಕೆದಾರರಿಗೂ ಲಭ್ಯವಾಗಲಿದೆ.



ಈಗ ಇರುವಂತೆ, ಜಿ-ಮೇಲ್‌ ಅಡಿಯಲ್ಲಿರುವ ಗೂಗಲ್ ಮೀಟ್ ಟ್ಯಾಬ್ ಬಳಕೆದಾರರಿಗೆ ವರ್ಚುವಲ್ ಮೀಟಿಂಗ್ ಆರಂಭಿಸುವ ಅಥವಾ ಸೇರುವ ಆಯ್ಕೆಯನ್ನು ನೀಡಲಿದೆ. ಹಾಗೆಯೇ ಬಳಕೆದಾರರ ಕಾಂಟ್ಯಾಕ್ಟ್‌ಗಳಿಗೆ ಕರೆಗಳನ್ನು ಮಾಡುವ ಫೀಚರ್‌ ಸಹ ಇದರ ವಿಭಾಗದಲ್ಲಿ ಸೇರ್ಪಡೆ ಮಾಡಲಾಗುತ್ತದೆ. ಬಳಕೆದಾರರು ಗೂಗಲ್ ಡ್ಯುಯೊ ಅಥವಾ ಗೂಗಲ್ ಸ್ಕೈಪ್‌ನಂತಹ ಯಾವುದೇ ಇತರ VOIP ಆಪ್‌ನಂತೆಯೇ ಆಪ್ ಮೂಲಕ ಒಂದೇ ಸಂಪರ್ಕಕ್ಕೆ ವೈಯಕ್ತಿಕ ವಾಯಿಸ್‌ ಕರೆ ಮತ್ತು ವಿಡಿಯೋ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಜಿ-ಮೇಲ್‌ ಪ್ಲಾಟ್‌ಫಾರ್ಮ್‌ನಲ್ಲಿ ವಾಯಿಸ್‌ ಮತ್ತು ವಿಡಿಯೋ ಕರೆ ಮಾಡುವ ಫೀಚರ್‌ನ ಹೊರತಾಗಿ, ಗೂಗಲ್ ತನ್ನ ಇತರೆ ಸೇವೆಗಳಾದ ಗೂಗಲ್ ಸ್ಪೇಸಸ್ ಮತ್ತು ಗೂಗಲ್ ಕ್ಯಾಲೆಂಡರ್‌ನಲ್ಲಿಯೂ ಕೆಲವು ಹೊಸ ಫೀಚರ್ಸ್‌ ಸೇರಲಿವೆ. ಗೂಗಲ್ ಮೀಟ್ ಗಾಗಿ ಹೊಸ ಕಂಪ್ಯಾನಿಯನ್ ಮೋಡ್ ಸಹ ಇದೆ. ಈ ಆಯ್ಕೆಯು ಬಳಕೆದಾರರಿಗೆ ವರ್ಚುವಲ್ ಮೀಟಿಂಗ್‌ಗಳಿಗಾಗಿ ಕಾನ್ಫರೆನ್ಸ್ ರೂಮ್‌ನ ಆಡಿಯೋ ವಿಶುವಲ್ ಹಾರ್ಡ್‌ವೇರ್ ಅನ್ನು ಬಳಸಲು ಅನುಮತಿ ನೀಡುತ್ತದೆ. ಇದರೊಂದಿಗೆ ಟೆಕ್ ದೈತ್ಯ ಗೂಗಲ್ ತನ್ನ ಗೂಗಲ್ ಮೀಟ್ ಹಾರ್ಡ್‌ವೇರ್ ಇಕೋ ಸಿಸ್ಟಮ್ ವ್ಯಾಪ್ತಿ ವಿಸ್ತರಿಸುತ್ತಿದೆ.

ಜಿ-ಮೇಲ್‌ ಪ್ಲಾಟ್‌ಫಾರ್ಮ್‌ನಲ್ಲಿ ವಾಯಿಸ್‌ ಮತ್ತು ವಿಡಿಯೋ ಕರೆ ಮಾಡುವ ಫೀಚರ್‌ನ ಹೊರತಾಗಿ, ಗೂಗಲ್ ತನ್ನ ಇತರೆ ಸೇವೆಗಳಾದ ಗೂಗಲ್ ಸ್ಪೇಸಸ್ ಮತ್ತು ಗೂಗಲ್ ಕ್ಯಾಲೆಂಡರ್‌ನಲ್ಲಿಯೂ ಕೆಲವು ಹೊಸ ಫೀಚರ್ಸ್‌ ಸೇರಲಿವೆ. ಗೂಗಲ್ ಮೀಟ್ ಗಾಗಿ ಹೊಸ ಕಂಪ್ಯಾನಿಯನ್ ಮೋಡ್ ಸಹ ಇದೆ. ಈ ಆಯ್ಕೆಯು ಬಳಕೆದಾರರಿಗೆ ವರ್ಚುವಲ್ ಮೀಟಿಂಗ್‌ಗಳಿಗಾಗಿ ಕಾನ್ಫರೆನ್ಸ್ ರೂಮ್‌ನ ಆಡಿಯೋ ವಿಶುವಲ್ ಹಾರ್ಡ್‌ವೇರ್ ಅನ್ನು ಬಳಸಲು ಅನುಮತಿ ನೀಡುತ್ತದೆ. ಇದರೊಂದಿಗೆ ಟೆಕ್ ದೈತ್ಯ ಗೂಗಲ್ ತನ್ನ ಗೂಗಲ್ ಮೀಟ್ ಹಾರ್ಡ್‌ವೇರ್ ಇಕೋ ಸಿಸ್ಟಮ್ ವ್ಯಾಪ್ತಿ ವಿಸ್ತರಿಸುತ್ತಿದೆ.