ಫ್ಲಿಪ್‌ಕಾರ್ಟ್‌ನಲ್ಲಿ 'ಐಫೋನ್‌ 12' ಫೋನಿಗೆ ಅತೀ ದೊಡ್ಡ ಡಿಸ್ಕೌಂಟ್‌!

13-09-21 04:58 pm       Gizbot, Mantesh   ಡಿಜಿಟಲ್ ಟೆಕ್

ಫ್ಲಿಪ್‌ಕಾರ್ಟ್‌ ತಾಣವು ಐಫೋನ್ 12 ಫೋನಿಗೆ ಅತೀ ದೊಡ್ಡ ರಿಯಾಯಿತಿ ಘೋಷಿಸಿದ್ದು, ಐಫೋನ್‌ ಪ್ರಿಯರು ಫ್ಲಿಪ್‌ಕಾರ್ಟ್‌ನತ್ತ ಹಿಂದಿರುಗಿ ನೋಡುವಂತೆ ಮಾಡಿದೆ.

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ಆಫರ್‌ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತ ಸಾಗಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಸೇಲ್ ಆಯೋಜಿಸಿ ಗ್ರಾಹಕರ ಸೆಳೆಯುತ್ತದೆ. ಸದ್ಯ ಫ್ಲಿಪ್‌ಕಾರ್ಟ್‌ ತಾಣವು ಐಫೋನ್ 12 ಫೋನಿಗೆ ಅತೀ ದೊಡ್ಡ ರಿಯಾಯಿತಿ ಘೋಷಿಸಿದ್ದು, ಐಫೋನ್‌ ಪ್ರಿಯರು ಫ್ಲಿಪ್‌ಕಾರ್ಟ್‌ನತ್ತ ಹಿಂದಿರುಗಿ ನೋಡುವಂತೆ ಮಾಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌ ತಾಣವು ಈಗ ಐಫೋನ್ 12 ಫೋನ್‌ಗೆ ಆಕರ್ಷಕ ಡಿಸ್ಕೌಂಟ್‌ ತಿಳಿಸಿದೆ. ಐಫೋನ್‌ 12 ಫೋನಿಗೆ ಸುಮಾರು 13,000ರೂ.ಗಳ ವರೆಗೂ ರಿಯಾಯಿತಿ ಲಭ್ಯವಾಗಲಿದೆ. ಐಫೋನ್‌ 12 ಫೋನಿನ 64GB, 128GB ಮತ್ತು 256GB ಈ ಮೂರು ವೇರಿಯಂಟ್‌ಗಳು ಡಿಸ್ಕೌಂಟ್‌ನಲ್ಲಿ ಲಭ್ಯವಾಗಲಿವೆ. ಇನ್ನು ಇದೇ ಸೆ.14 ರಂದು ಆಪಲ್‌ ಕಂಪನಿಯು ತನ್ನ ಬಹುನಿರೀಕ್ಷಿತ ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಲಿದೆ.



ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 12 64GB ವೇರಿಯಂಟ್ ಫೋನ್ 66,999ರೂ.ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಅದೇ ರೀತಿ ಐಫೋನ್‌ 12 128GB ಸ್ಟೋರೇಜ್ ವೇರಿಯಂಟ್ ಫೋನ್ 71,999ರೂ. ಪ್ರೈಸ್ ಪಡೆದಿದೆ. ಇನ್ನು ಐಫೋನ್‌ 12 256GB ಸ್ಟೋರೇಜ್ ವೇರಿಯಂಟ್ ಫೋನ್ 81,999ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಎಸ್‌ಬಿಐ ಬ್ಯಾಂಕ್, ಐಸಿಐಸಿಐ ಬ್ಯಾಂಕ್‌, ಇಂಡಸ್ಇಂಡ್ ಬ್ಯಾಂಕ್ ಕಾರ್ಡುಗಳ ವಹಿವಾಟಿನಲ್ಲಿ ರಿಯಾಯಿತಿ ಸಿಗಲಿದೆ. ಆಕ್ಸಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ನಲ್ಲಿಯೂ ಕ್ಯಾಶ್‌ಬ್ಯಾಕ್‌ ಅವಕಾಶ ಇದೆ. ಹಾಗಾದರೇ ಐಫೋನ್‌ 12 ಫೋನಿನ ಫೀಚರ್ಸ್‌ ಏನು?..ಹಾಗೂ ನೂತನವಾಗಿ ಲಾಂಚ್ ಆಗುವ ಐಫೋನ್ 13 ಸರಣಿಯ ಬಗ್ಗೆ ನಿರೀಕ್ಷೆಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.



ಐಫೋನ್ 12 ಫೀಚರ್ಸ್‌

ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.



ಐಫೋನ್‌ 13 ಸರಣಿಯ ನಿರೀಕ್ಷೆಗಳು

ಈ ಬಾರಿಯ ಆಪಲ್‌ ಈವೆಂಟ್ 2021 ಕಾರ್ಯಕ್ರಮದಲ್ಲಿ ನಾಲ್ಕು ಐಫೋನ್‌ಗಳು ಬಿಡುಗಡೆ ಆಗುವ ಸಾಧ್ಯತೆಗಳು ಇವೆ. ಕ್ರಮವಾಗಿ ಅವುಗಳು ಐಫೋನ್ 13 ಮಿನಿ, ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್‌ ಎನ್ನಲಾಗಿದೆ. ಹಾಗೆಯೇ ಬಹುನಿರೀಕ್ಷಿತ ಐಫೋನ್ 13 ಸರಣಿಯ ಐಫೋನ್ 13 ಮಿನಿ, ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್‌ ಈ ಎಲ್ಲ ಐಫೋನ್‌ಗಳು 5G ಸಪೋರ್ಟ್‌ ಪಡೆದಿರಲಿವೆ ಎಂದು ನಿರೀಕ್ಷಿಸಲಾಗುತ್ತಿದೆ.



ಐಫೋನ್‌ 13 ವಿಶೇಷತೆ

ಒಂದಿಲ್ಲೊಂದು ವಿಶೇಷತೆಯೊಂದಿಗೆ ಹೊಸ ಸರಣಿಯನ್ನು ಆಪಲ್ ಲಾಂಚ್ ಮಾಡುತ್ತದೆ. ಹಾಗೆಯೇ ಈ ಬಾರಿಯ ಐಫೋನ್‌ 13 ಸರಣಿಯು ವಿಶೇಷ ಕ್ಯಾಮೆರಾ ಫೀಚರ್‌ ಹೊಂದಿರಲಿದೆ ಎಂದು ಹೇಳಲಾಗಿದೆ. ಹಾಗೆಯೇ ಬಿಡುಗಡೆ ಆಗಲಿರುವ ಹೊಸ ಐಫೋನ್ 13 ಫೋಣ್‌ಗಳು ಐಪ್ಯಾಡ್ ಪ್ರೊ ಮಾದರಿಯಂತೆ 120Hz ರೀಫ್ರೇಶ್ ರೇಟ್ ಹೊಂದಿರಲಿವೆ. ಹಾಗೆಯೇ 'ಪ್ರೊಮೋಷನ್' ಮಾದರಿಯಲ್ಲಿ ಬರಲಿವೆ ಎಂದು ಅಂದಾಜಿಸಲಾಗಿದೆ.



ಆಪಲ್ ಐಫೋನ್ 13 ಸರಣಿಯ ಜೊತೆಗೆ ಇತರೆ ಡಿವೈಸ್‌ಗಳು ಲಾಂಚ್

ಈ ಬಾರಿಯ ಆಪಲ್ ಕಾರ್ಯಕ್ರಮದಲ್ಲಿ ಐಫೋನ್ 13 ಸರಣಿಯ ಜೊತೆಗೆ ಆಪಲ್ ವಾಚ್, ಆಪಲ್ ಏರ್‌ಪಾಡ್ಸ್‌ ಡಿವೈಸ್‌ಗಳು ಲಾಂಚ್ ಆಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಆಪಲ್ ಕಾರ್ಯಕ್ರಮದಲ್ಲಿ ಆಪಲ್ ವಾಚ್ ಸರಣಿ 7 ಅನಾವರಣ ಆಗಲಿದೆ ಎನ್ನಲಾಗಿದೆ. ಇನ್ನು ಈ ಆಪಲ್ ವಾಚ್ ಅಪ್‌ಡೇಟ್‌ ವಿನ್ಯಾಸದೊಂದಿಗೆ ಲಾಂಚ್ ಆಗಲಿದೆ ಎನ್ನಲಾಗಿದೆ. ಆಪಲ್ ವಾಚ್ ಸರಣಿ 7 ಪ್ರಸ್ತುತ 40mm ಮತ್ತು 44mm ಗಾತ್ರಗಳ ಆಯ್ಕೆಗಳಲ್ಲಿ ಇದ್ದು, ಹೊಸ ಸರಣಿಯು 41mm ಮತ್ತು 45mm ಗಾತ್ರದ ಆಯ್ಕೆಗಳಲ್ಲಿ ಬರುತ್ತದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಐಫೋನ್ 13 ಸರಣಿಯಂತೆ ಆಪಲ್ ಏರ್‌ಪಾಡ್ಸ್ 3 ಡಿವೈಸ್ ಸಹ ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಈ ಡಿವೈಸ್ ಸಾಕಷ್ಟು ಅಪ್‌ಡೇಟ್‌ ಹೊಂದಿದ ಇಯರ್‌ಬಡ್‌ ಆಗಿರಲಿದೆ ಎನ್ನಲಾಗಿದೆ.