ಇಂದು ಎಂಟ್ರಿ ಕೊಡಲಿದೆ 'ಐಫೋನ್‌ 13' ; ಲೈವ್ ವೀಕ್ಷಣೆ ಹೇಗೆ!

14-09-21 04:26 pm       Gizbot, Mantesh   ಡಿಜಿಟಲ್ ಟೆಕ್

ವಿಶ್ವ ಮೊಬೈಲ್‌ ವಲಯವೇ ಬಹುನಿರೀಕ್ಷೆಯಿಂದ ಕಾಯುತ್ತಿರುವ ಆಪಲ್‌ ಐಫೋನ್‌ 13 ಸರಣಿಯು ಇಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ. ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಹೆಸರಿನ ಈ ಕಾರ್ಯಕ್ರಮವು ಭಾರತೀಯ ಕಾಲಮಾನ ರಾತ್ರಿ 10:30 ಕ್ಕೆ ಪ್ರಾರಂಭವಾಗಲಿದೆ.

ವಿಶ್ವ ಮೊಬೈಲ್‌ ವಲಯವೇ ಬಹುನಿರೀಕ್ಷೆಯಿಂದ ಕಾಯುತ್ತಿರುವ ಆಪಲ್‌ ಐಫೋನ್‌ 13 ಸರಣಿಯು ಇಂದು (ಸೆ. 14) ಅಧಿಕೃತವಾಗಿ ಬಿಡುಗಡೆ ಆಗಲಿದೆ. ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಹೆಸರಿನ ಈ ಕಾರ್ಯಕ್ರಮವು ಭಾರತೀಯ ಕಾಲಮಾನ ರಾತ್ರಿ 10:30 ಕ್ಕೆ ಪ್ರಾರಂಭವಾಗಲಿದೆ. ಇನ್ನು ಗ್ರಾಹಕರು ಈ ಕಾರ್ಯಕ್ರಮವನ್ನು ಆಪಲ್‌ನ ಅಧಿಕೃತ ಈವೆಂಟ್‌ ಪೇಜ್‌ನಲ್ಲಿ https://www.apple.com/apple-events/ ಲೈವ್ ಸ್ಟ್ರೀಮ್ ಮಾಡಬಹುದಾಗಿದೆ.



ಆಪಲ್ ಈವೆಂಟ್ 2021

ಆಪಲ್ ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಈವೆಂಟ್‌ ನಲ್ಲಿ ಯಾವೆಲ್ಲಾ ಡಿವೈಸ್‌ಗಳು ಲಾಂಚ್ ಆಗಲಿವೆ ಎಂದು ಕಂಪನಿಯು ಅಧಿಕೃತದ ಮಾಹಿತಿ ಬಹಿರಂಗಪಡಿಸಿಲ್ಲ. ಆದಾಗ್ಯೂ, ಕಂಪನಿಯು ಐಫೋನ್ 13 ಸರಣಿಯಲ್ಲಿ ನಾಲ್ಕು ಐಫೋನ್‌ಗಳನ್ನು ಲಾಂಚ್ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ ಐಫೋನ್ 13 ಸರಣಿಯೊಂದಿಗೆ ಆಪಲ್ ಸೀರಿಸ್ ವಾಚ್ 7 ಮತ್ತು ಏರ್‌ಪಾಡ್‌ 3 ಡಿವೈಸ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ.



ಆಪಲ್‌ ಐಫೋನ್ 13 ಸರಣಿಯ ಫೋನ್‌ಗಳು

ಬಹುನಿರೀಕ್ಷಿತ ಆಪಲ್‌ ಐಫೋನ್ 13 ಸರಣಿಯ ಇಂದು ಲಾಂಚ್ ಆಗಲಿದೆ. ಈ ಸರಣಿಯು ಐಫೋನ್ 13, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್‌ ಮತ್ತು ಐಫೋನ್ 13 ಮಿನಿ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕಂಪನಿಯು ಐಫೋನ್ 13 ಸರಣಿಯ ಫೀಚರ್ಸ್‌ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ ಆನ್‌ಲೈನ್‌ನಲ್ಲಿ ಐಫೋನ್ 13 ಫೀಚರ್ಸ್‌ಗಳು ಲೀಕ್ ಆಗಿವೆ. ಆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಪಲ್‌ನ ಇಂದಿನ ಈವೆಂಟ್‌ನಲ್ಲಿ 2021, ಕಂಪನಿಯು ಆಪಲ್ ವಾಚ್ ಸರಣಿ 7 ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೊಸ ಆಪಲ್ ವಾಚ್ ಫಾರ್ ಐಫೋನ್ ಹೊಸ ವಿನ್ಯಾಸ ಮತ್ತು ಕೆಲವು ಮುಖ್ಯ ಅಪ್‌ಗ್ರೇಡ್‌ಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.



ಐಫೋನ್‌ 13 ಸರಣಿಯ ನಿರೀಕ್ಷಿತ ಫೀಚರ್ಸ್‌

ಐಫೋನ್ 13 ಮಿನಿ ಫೋನ್ 5.4 ಇಂಚಿನ ಸ್ಕ್ರೀನ್ ಹೊಂದಿರಲಿದೆ. ಐಫೋನ್ 13 ಫೋನ್ 6.1 ಇಂಚಿನ ಗಾತ್ರ ಪಡೆದಿರಲಿದೆ. ಐಫೋನ್ 13 ಪ್ರೊ ಫೋನ್ ಮಾಡೆಲ್‌ ಸಹ 6.1 ಇಂಚಿನ ಸ್ಕ್ರೀನ್ ಹೊಂದಿರಲಿದೆ. ಇನ್ನು ಐಫೋನ್ 13 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಬಾರಿಯ ಐಫೋನ್‌ 13 ಸರಣಿಯು ವಿಶೇಷ ಕ್ಯಾಮೆರಾ ಫೀಚರ್‌ ಹೊಂದಿರಲಿದೆ ಎಂದು ಹೇಳಲಾಗಿದೆ. ಇನ್ನು ಈ ಫೋನ್‌ಗಳು ಕಂಚು ಮತ್ತು ಗ್ರ್ಯಾಫೈಟ್ ಗ್ರೇ ಬಣ್ಣಗಳ ಆಯ್ಕೆಯನ್ನು ಹೊಂದಿರುವ ಸಾಧ್ಯತೆಗಳು ಇವೆ. ಹಾಗೆಯೇ ಬಿಡುಗಡೆ ಆಗಲಿರುವ ಹೊಸ ಐಫೋನ್ 13 ಫೋನ್‌ ಗಳು ಐಪ್ಯಾಡ್ ಪ್ರೊ ಮಾದರಿಯಂತೆ 120Hz ರೀಫ್ರೇಶ್ ರೇಟ್ ಹೊಂದಿರಲಿವೆ. ಹಾಗೆಯೇ 'ಪ್ರೊಮೋಷನ್' ಮಾದರಿಯಲ್ಲಿ ಬರಲಿವೆ ಎಂದು ಅಂದಾಜಿಸಲಾಗಿದೆ.



ಆಪಲ್ ವಾಚ್, ಆಪಲ್ ಏರ್‌ಪಾಡ್ಸ್‌ ಡಿವೈಸ್‌ಗಳು ಲಾಂಚ್

ಈ ಬಾರಿಯ ಆಪಲ್ ಕಾರ್ಯಕ್ರಮದಲ್ಲಿ ಐಫೋನ್ 13 ಸರಣಿಯ ಜೊತೆಗೆ ಆಪಲ್ ವಾಚ್, ಆಪಲ್ ಏರ್‌ಪಾಡ್ಸ್‌ ಡಿವೈಸ್‌ಗಳು ಲಾಂಚ್ ಆಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಕೆಲವು ಲೀಕ್ ಮಾಹಿತಿಗಳಂತೆ ಆಪಲ್ ವಾಚ್ ಸೀರೀಸ್ 7 ಆಪಲ್ ವಾಚ್ ಸರಣಿಯಂತೆಯೇ ಆರೋಗ್ಯದ ಫೀಚರ್ಸ್‌ಗಳೊಂದಿಗೆ ಬರಬಹುದು ಎಂದು ತಿಳಿಸಿವೆ. ಆಪಲ್ ಕಾರ್ಯಕ್ರಮದಲ್ಲಿ ಆಪಲ್ ವಾಚ್ ಸರಣಿ 7 ಅನಾವರಣ ಆಗಲಿದೆ ಎನ್ನಲಾಗಿದೆ.

ಇನ್ನು ಈ ಆಪಲ್ ವಾಚ್ ಅಪ್‌ಡೇಟ್‌ ವಿನ್ಯಾಸದೊಂದಿಗೆ ಲಾಂಚ್ ಆಗಲಿದೆ ಎನ್ನಲಾಗಿದೆ. ಆಪಲ್ ವಾಚ್ ಸರಣಿ 7 ಪ್ರಸ್ತುತ 40mm ಮತ್ತು 44mm ಗಾತ್ರಗಳ ಆಯ್ಕೆಗಳಲ್ಲಿ ಇದ್ದು, ಹೊಸ ಸರಣಿಯು 41mm ಮತ್ತು 45mm ಗಾತ್ರದ ಆಯ್ಕೆಗಳಲ್ಲಿ ಬರುತ್ತದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಐಫೋನ್ 13 ಸರಣಿಯಂತೆ ಆಪಲ್ ಏರ್‌ಪಾಡ್ಸ್ 3 ಡಿವೈಸ್ ಸಹ ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಈ ಡಿವೈಸ್ ಸಾಕಷ್ಟು ಅಪ್‌ಡೇಟ್‌ ಹೊಂದಿದ ಇಯರ್‌ಬಡ್‌ ಆಗಿರಲಿದೆ ಎನ್ನಲಾಗಿದೆ.