ಯಾವೆಲ್ಲಾ ಐಫೋನ್‌ಗಳು iOS 15 ಅಪ್‌ಡೇಟ್‌ಗೆ ಸಪೋರ್ಟ್ ಪಡೆದಿವೆ; ಇಲ್ಲಿದೆ ಮಾಹಿತಿ!

15-09-21 04:17 pm       Gizbot, Mantesh   ಡಿಜಿಟಲ್ ಟೆಕ್

ಆಪಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಐಫೋನ್ 13, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್‌ ಮತ್ತು ಐಫೋನ್ 13 ಮಿನಿ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ.

ಆಪಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಐಫೋನ್ 13, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್‌ ಮತ್ತು ಐಫೋನ್ 13 ಮಿನಿ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ವಾಚ್‌ ಸೀರಿಸ್ 7, A15 ಬಯೋನಿಕ್ ಹಾಗೂ ಐಒಎಸ್ 15 ಅನ್ನು ಘೋಷಿಸಿದೆ. ಹೊಸ ಓಎಸ್‌ ಹಲವು ನೂತನ ಅಪ್‌ಡೇಟ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಐಫೋನ್ ಬಳಕೆದಾರರು ಐಒಎಸ್ 15 ಗೆ ಸೆಪ್ಟೆಂಬರ್ 20 ರಂದು ಅಪ್‌ಡೇಟ್‌ ಮಾಡಬಹುದೆಂದು ಆಪಲ್ ತಿಳಿಸಿದೆ.



ಆಪಲ್‌ನ ಹೊಸ A15 ಬಯೋನಿಕ್ ಪವರ್‌ಫುಲ್‌ ಆಗಿದ್ದು, A15 ಬಯೋನಿಕ್ ಪ್ರೊಸೆಸರ್‌ನಿಂದ ಸಿಂಗಲ್-ಕೋರ್ ಮತ್ತು ಮಲ್ಟಿ-ಕೋರ್ ಕಾರ್ಯಕ್ಷಮತೆಯನ್ನು ನಿರೀಕ್ಷಿಸಬಹುದು. ಅದಕ್ಕೆ ಪೂರಕವಾಗಿ ಐಓಎಸ್‌ 15 ಸಪೋರ್ಟ್‌ ಪಡೆದಿದೆ. ಹೊಸ ಐಓಎಸ್‌ 15 ನ ಕೆಲವು ಗಮನಾರ್ಹ ಫೀಚರ್ಸ್‌ಗಳೆಂದರೇ ನೋಟಿಫಿಕೇಶನ್ ಸಮ್ಮರಿ, ಫೋಕಸ್ ಮೋಡ್‌ಗಳು, ಲೈವ್ ಟೆಕ್ಸ್ಟ್‌ ಮತ್ತು ಹೊಸ ಸಫಾರಿ ಬ್ರೌಸರ್ ಆಗಿದೆ.



ಹಾಗೆಯೇ ಆಪಲ್ ಹೊಸ ಐಒಎಸ್ 15 ನ ಫೋಕಸ್ ಮೋಡ್‌ನಂತಹ ಫೀಚರ್‌ ಮೂಲಕ ದಿನದ ವಿವಿಧ ಸಮಯಗಳಲ್ಲಿ ಯಾವ ಅಪ್ಲಿಕೇಶನ್‌ಗಳು ಮತ್ತು ನೋಟಿಫಿಕೇಶನ್ ತಲುಪಬೇಕು ಎಂಬುದನ್ನು ನಿರ್ಧರಿಸಲು ನಿಮಗೆ ಅವಕಾಶ ನೀಡುತ್ತದೆ. ಹಾಗೆಯೇ ಇನ್ನೊಂದು ಪ್ರಮುಖ ಫೀಚರ್ ಎಂದರೇ ಅದು ಶೇರ್‌ಪ್ಲೇಆಗಿದೆ. ಇದು ಹೊಸ ಫೇಸ್‌ಟೈಮ್ ಫೀಚರ್‌ಗಳ ವಿಸ್ತರಣೆಯಾಗಿದೆ. ಶೇರ್‌ಪ್ಲೇ ಒಂದು ಫೇಸ್‌ಟೈಮ್ ಕರೆಯಲ್ಲಿರುವ ಸದಸ್ಯರುಗಳು ಸೇರಿ ಸಿನಿಮಾ ವೀಕ್ಷಿಸಲು, ಜೊತೆಯಾಗಿ ಮ್ಯೂಸಿಕ ಕೇಳಲು ಮತ್ತು ಗ್ರೂಪ್‌ ವಿಡಿಯೋ ಕಾನ್ಫರೆನ್ಸ್‌ನಂತೆಯೇ ತಮ್ಮ ಐಫೋನ್ ಸ್ಕ್ರೀನ್‌ ಶೇರ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಆದರೆ ಈ ಶೇರ್‌ಪ್ಲೇ ಫೀಚರ್ ಈ ವರ್ಷದ ಕೊನೆಯಲ್ಲಿ ಬರಲಿದೆ ಎಂದು ಆಪಲ್ ಇತ್ತೀಚೆಗೆ ಹೇಳಿದೆ.

ಅದರಂತೆಯೇ ಐಪ್ಯಾಡ್‌ಓಎಸ್ 15 ಐಪ್ಯಾಡ್‌ ಸಹ ಆಕರ್ಷಕ ಫೀಚರ್ ಪಡೆದಿದ್ದು, ಕಾರ್ಯವೈಖರಿ ಹೆಚ್ಚಿಸಲಿದೆ. ಆಪ್ ಲೈಬ್ರರಿ, ರೀಸೈಜ್ ಮಾಡಬಹುದಾದ ವಿಜೆಟ್‌ಗಳು, ಅತ್ಯುತ್ತಮ ಮಲ್ಟಿಟಾಸ್ಕಿಂಗ್ ಮತ್ತು ಸ್ಪ್ಲಿಟ್ ಸ್ಕ್ರೀನ್‌ಗಾಗಿ ನ್ಯೂ ಮೆನು ಸೇರಿದಂತೆ ಕೆಲವು ಆಕರ್ಷಕ ಫೀಚರ್ಸ್‌ಗಳು ಮುಂದಿನ ಅಪ್‌ಡೇಟ್‌ನೊಂದಿಗೆ ಸೇರ್ಪಡೆ ಆಗಲಿವೆ. ಹಾಗಾದರೇ ಆಪಲ್‌ನ ಯಾವೆಲ್ಲಾ ಐಫೋನ್‌ ಹಾಗೂ ಐಪ್ಯಾಡ್‌ಗಳು ಹೊಸ ಓಎಸ್‌ ಅಪ್‌ಡೇಟ್‌ಗೆ ಸಪೋರ್ಟ್‌ ಮಾಡಲಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.



iOS 15 ಅಪ್‌ಡೇಟ್‌ಗೆ ಸಪೋರ್ಟ್ ಪಡೆದ ಐಫೋನ್‌ಗಳ ಲಿಸ್ಟ್‌:

  • ಐಫೋನ್ 13
  • ಐಫೋನ್ 13 ಮಿನಿ
  • ಐಫೋನ್ 13 ಪ್ರೊ
  • ಐಫೋನ್ 13 ಪ್ರೊ ಮ್ಯಾಕ್ಸ್
  • ಐಫೋನ್ 12
  • ಐಫೋನ್ 12 ಮಿನಿ
  • ಐಫೋನ್ 12 ಪ್ರೊ
  • ಐಫೋನ್ 12 ಪ್ರೊ ಮ್ಯಾಕ್ಸ್
  • ಐಫೋನ್ 11
  • ಐಫೋನ್ 11 ಪ್ರೊ
  • ಐಫೋನ್ 11 ಪ್ರೊ ಮ್ಯಾಕ್ಸ್
  • ಐಫೋನ್ Xs
  • ಐಫೋನ್ Xs ಮ್ಯಾಕ್ಸ್
  • ಐಫೋನ್ Xr
  • ಐಫೋನ್ X
  • ಐಫೋನ್ 8
  • ಐಫೋನ್ 8 ಪ್ಲಸ್
  • ಐಫೋನ್ 7
  • ಐಫೋನ್ 7 ಪ್ಲಸ್
  • ಐಫೋನ್ 6s
  • ಐಫೋನ್ 6s ಪ್ಲಸ್
  • ಐಫೋನ್ SE (1st ಜನರೇಷನ್)
  • ಐಫೋನ್ SE (2nd ಜನರೇಷನ್)
  • ಐಪಾಡ್‌ ಟಚ್ (7th ಜನರೇಷನ್)