ಭಾರತದಲ್ಲಿ ಶಿಯೋಮಿ 11 ಲೈಟ್‌ NE 5G ಸ್ಮಾರ್ಟ್‌ಫೋನ್‌ ಬೆಲೆ ಬಹಿರಂಗ!

19-09-21 01:31 pm       Gizbot, Mutthuraju H M   ಡಿಜಿಟಲ್ ಟೆಕ್

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿಯ ಫೋನ್‌ಗಳು ಜನಪ್ರಿಯತೆ ಗಳಿಸಿವೆ. ಇದೇ ಕಾರಣಕ್ಕೆ ಶಿಯೋಮಿ ಕಂಪೆನಿ ತನ್ನ ವೈವಿದ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಲೇ ಬಂದಿದೆ.

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿಯ ಫೋನ್‌ಗಳು ಜನಪ್ರಿಯತೆ ಗಳಿಸಿವೆ. ಇದೇ ಕಾರಣಕ್ಕೆ ಶಿಯೋಮಿ ಕಂಪೆನಿ ತನ್ನ ವೈವಿದ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಲೇ ಬಂದಿದೆ. ಇದೀಗ ಬಾರತದ ಮಾರುಕಟ್ಟೆಗೆ ಹೊಸ ಶಿಯೋಮಿ 11 ಲೈಟ್‌ NE 5Gಯನ್ನು ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಇದೇ ಸೆಪ್ಟೆಂಬರ್ 29ರಂದು ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಇದರ ನಡುವೆಯೆ ಈ ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಕಲರ್‌ ಆಯ್ಕೆಯ ವಿವರಗಳು ಬಹಿರಂಗಗೊಂಡಿದೆ.

ಹೌದು, ಭಾರತದಲ್ಲಿ ಶಿಯೋಮಿ 11 ಲೈಟ್‌ NE 5G ಸ್ಮಾರ್ಟ್‌ಫೋನ್‌ ಬೆಲೆ ವಿವರ ಬಹಿರಂಗಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ RAM + ಸ್ಟೋರೇಜ್ ಕಾನ್ಫಿಗರೇಶನ್‌ಗಳ ಜೊತೆಗೆ ಭಾರತೀಯ ಮಾರುಕಟ್ಟೆಗೆ ಬರಬಹುದು ಎಂದು ಊಹಿಸಲಾಗಿದೆ. ಇದಲ್ಲದೆ ಈ ಫೋನ್ ಮೂರು ಬಣ್ಣಗಳ ಆಯ್ಕೆಗಳಲ್ಲಿ ಬರಬಹುದು ಮತ್ತು ಒಂದು ಹೆಚ್ಚುವರಿ ಬಣ್ಣದ ಆಯ್ಕೆಯನ್ನು ನಂತರದ ದಿನಗಳಲ್ಲಿ ಅನಾವರಣಗೊಳಿಸಬಹುದು ಎಂದು ಹೇಳಲಾಗ್ತಿದೆ. ಈ ಸ್ಮಾರ್ಟ್‌ಫೋನ್‌ ಆರಂಬಿಕ ಬೆಲೆ 21,999ರೂ ಆಗಿರಲಿದೆ ಎನ್ನಲಾಗಿದೆ. ಹಾಗಾದ್ರೆ ಶಿಯೋಮಿ 11 ಲೈಟ್‌ NE 5G ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.ಡಿಸ್‌ಪ್ಲೇ

ಶಿಯೋಮಿ 11 ಲೈಟ್‌ NE 5G ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55-ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿರಲಿದೆ. ಇದು 10-ಬಿಟ್ ಫ್ಲಾಟ್ AMOLED ಟ್ರೂಲಿ-ಕಲರ್‌ ಡಿಸ್‌ಲೇ ಆಗಿದೆ. ಇನ್ನು ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ.ಪ್ರೊಸೆಸರ್‌ ಯಾವುದು?

ಶಿಯೋಮಿ 11 ಲೈಟ್‌ NE 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 11 ನಲ್ಲಿ MIUI 12.5 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು 8GB RAM ಮತ್ತು 256GB ವರೆಗೆ ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಒದಗಿಸಲಿದೆ.ಕ್ಯಾಮೆರಾ ವಿಶೇಷ

ಶಿಯೋಮಿ 11 ಲೈಟ್‌ 5G NE ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64MP ಸೆನ್ಸಾರ್‌, ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 5MP ಟೆಲಿಮಾಕ್ರೋ ಶೂಟರ್ ಹೊಂದಿರಲಿದೆ. ಇದಲ್ಲದೆ 20 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ ಎನ್ನಲಾಗಿದೆ.ಬ್ಯಾಟರಿ ಮತ್ತು ಇತರೆ

ಈ ಸ್ಮಾರ್ಟ್‌ಫೋನ್‌ 4,250mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌,, ವೈಫೈ, ಹಾಟ್‌ಸ್ಪಾಟ್‌, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಹೊಂದಿರಲಿದೆ.ಬೆಲೆ ಮತ್ತು ಲಭ್ಯತೆ

ಶಿಯೋಮಿ 11 ಲೈಟ್‌ 5G NE ಸ್ಮಾರ್ಟ್‌ಫೋನ್‌ 21,999ರೂ ಬೆಲೆ ಹೊಂದಿರಲಿದೆ ಎನ್ನಲಾಗಿದೆ. ಇದು 6GB RAM + 128GB ಸ್ಟೋರೇಜ್, 8GB RAM + 128GB ಸ್ಟೋರೇಜ್, ಮತ್ತು 8GB RAM + 256GB ಸ್ಟೋರೇಜ್ ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ವೈಟ್‌, ಪಿಂಕ್‌, ಬ್ಲೂ, ಬ್ಲಾಕ್‌ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ ಮೊದಲು ಮೂರು ಬಣ್ಣದ ಆಯ್ಕೆಯಲ್ಲಿ ಎಂಟ್ರಿ ನೀಡಲಿದ್ದು, ಇನ್ನುಳಿದ ಒದು ಬಣ್ಣದ ಆಯ್ಕೆಯು ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.