ಬ್ರೇಕಿಂಗ್ ನ್ಯೂಸ್
20-09-21 09:51 pm Source ; News 18 Kannada ಡಿಜಿಟಲ್ ಟೆಕ್
Genesis Motor : ಚಾಲಕರು ಯಾವಾಗಲೂ ತಮ್ಮೊಂದಿಗೆ ಸ್ಮಾರ್ಟ್ ಕೀಗಳನ್ನು ಒಯ್ಯುವ ಅಗತ್ಯವಿಲ್ಲ ಎಂದು ನೂತನ ತಂತ್ರಜ್ಞಾನವು ಭರವಸೆ ನೀಡುತ್ತದೆ. ಯಾರಾದರೂ ಕಾರಿನಲ್ಲಿ ಸ್ಮಾರ್ಟ್ ಕೀಯನ್ನು ಬಿಟ್ಟರೂ, ಫೇಸ್ ಐಡಿ ತಂತ್ರಜ್ಞಾನ ಬಳಸಿ ವಾಹನವನ್ನು ಅನ್ಲಾಕ್- ಲಾಕ್ ಮಾಡಬಹುದಾಗಿದೆ.
ಹೊಸ ತಂತ್ರಜ್ಞಾನ ತನ್ನ ಗ್ರಾಹಕರಿಗೆ ಉತ್ತಮ ಅನುಭವ ನೀಡುವುದರ ಜೊತೆಗೆ ಹೆಚ್ಚು ತಂತ್ರಜ್ಞಾನದತ್ತ ಮರಳಲು ಸಹಾಯ ಮಾಡುತ್ತದೆ ಎಂದು ಜೆನೆಸಿಸ್ ಹೇಳಿದೆ. ಫೇಸ್ ಕನೆಕ್ಟ್ ತಂತ್ರಜ್ಞಾನವು ಚಾಲಕನನ್ನು ಗುರುತಿಸಿದ ನಂತರ, ಅವರ ಪ್ರೊಫೈಲ್‌ನೊಂದಿಗೆ ಸಿಂಕ್ ಆಗುತ್ತದೆ. ಜೊತೆಗೆ ಚಾಲಕನ ಆಸನ ಮತ್ತು ಸ್ಟೀರಿಂಗ್ ವೀಲ್ ಅನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಹೆಡ್-ಅಪ್-ಡಿಸ್‌ಪ್ಲೇ (HUD), ಸೈಡ್ ಮಿರರ್‌ಗಳು ಮತ್ತು ಇನ್ಫೋಟೈನ್‌ಮೆಂಟ್ ಅನ್ನು ಅವರ ಕಸ್ಟಮ್ ಆದ್ಯತೆಗಳ ಆಧಾರದ ಮೇಲೆ ಹೊಂದಿಸುತ್ತದೆ ಎಂದು ತಿಳಿಸಿದೆ.
ಯಾವುದೇ ಸನ್ನಿವೇಶದಲ್ಲೂ ಫೇಸ್ ಐಡಿ ತಂತ್ರಜ್ಞಾನ ಕಾರ್ಯನಿರ್ವಹಿಸಲಿದೆ. ಕತ್ತಲಿನಲ್ಲಿಯೂ ಮುಖ ಗುರುತಿಸಿ ಡೋರ್ ಅನ್ಲಾಕ್ ಮಾಡಲಿದೆ. ಆದರೆ ಈ ತಂತ್ರಜ್ಞಾನವು ಮೊದಲೇ ನೋಂದಾಯಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಲು ನಿಯರ್ ಇನ್ಫ್ರಾ-ರೆಡ್ (NIR) ಕ್ಯಾಮೆರಾವನ್ನು ಅಳವಡಿಸಿದೆ.
ಮತ್ತೊಂದು ವಿಚಾರವೆಂದರೆ ಚಾಲಕರು ಯಾವಾಗಲೂ ತಮ್ಮೊಂದಿಗೆ ಸ್ಮಾರ್ಟ್ ಕೀಗಳನ್ನು ಒಯ್ಯುವ ಅಗತ್ಯವಿಲ್ಲ ಎಂದು ನೂತನ ತಂತ್ರಜ್ಞಾನವು ಭರವಸೆ ನೀಡುತ್ತದೆ. ಯಾರಾದರೂ ಕಾರಿನಲ್ಲಿ ಸ್ಮಾರ್ಟ್ ಕೀಯನ್ನು ಬಿಟ್ಟರೂ, ಫೇಸ್ ಐಡಿ ತಂತ್ರಜ್ಞಾನ ಬಳಸಿ ವಾಹನವನ್ನು ಅನ್ಲಾಕ್- ಲಾಕ್ ಮಾಡಬಹುದಾಗಿದೆ.
ಜೆನೆಸಿಸ್ ಮೋಟಾರ್ ಸಂಸ್ಥೆ ಹೇಳುವಂತೆ, ಪ್ರತಿ ವಾಹನಕ್ಕೆ ಎರಡು ಫೇಸ್ ಕನೆಕ್ಟ್ ಸಿಸ್ಟಂ ಸಂಗ್ರಹಿಸುವ ಆಯ್ಕೆಯನ್ನು ನೀಡಲಾಗಿದೆ. ಆಪ್ತರ ಮುಖವನ್ನು ಎನ್‌ಕ್ರಿಪ್ಟ್ ಮಾಡಬಹುದಾಗಿದೆ ಎಂದು ಜೆನೆಸಿಸ್ ಹೇಳಿದೆ. ಚಾಲಕರ ಅನುಕೂಲಕ್ಕಾಗಿ ಫೆಸ್ ಕನೆಕ್ಸ್ ಫೀಚರ್ನಲ್ಲಿ ದೃಢವಾದ ಮುಖದ ಛಾಯೆಯನ್ನು ಯಾವುದೇ ಸಮಯದಲ್ಲಿ ಅಳಿಸಬಹುದು ಮತ್ತು ಹೊಸ ಪ್ರೊಫೈಲ್‌ಗಳನ್ನು ಧ್ವನಿ ಸಹಾಯಕ ಬಳಸಿ ನೋಂದಾಯಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ಫೇಸ್ ಐಡಿ ಟೆಕ್ ಜೊತೆಗೆ ಮತ್ತೊಂದು ಸ್ಮಾರ್ಟ್‌ಫೋನ್ ತರಹದ ಫಿಂಗರ್‌ಪ್ರಿಂಟ್ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿದೆ. ಇದು ಚಾಲಕರಿಗೆ ಸ್ಮಾರ್ಟ್ ಫೋನ್ ಅಥವಾ ಸ್ಮಾರ್ಟ್ ಕೀ ಇಲ್ಲದೆ ಬಯೋಮೆಟ್ರಿಕ್ ಮಾಹಿತಿಯ ಆಧಾರದ ಮೇಲೆ ವಾಹನದ ಸಂಪೂರ್ಣ ನಿಯಂತ್ರಣವನ್ನು ಹೊಂದಲು ಸಹಾಯ ಮಾಡುತ್ತದೆ. ಬೆರಳಚ್ಚಿನ ಮೂಲಕ ಕಾರನ್ನು ಚಲಾಯಿಸಬಹುದಾಗಿದೆ.
ಜೆನೆಸಿಸ್ ಈ ಹೊಸ ತಂತ್ರಜ್ಞಾನಗಳನ್ನು ತನ್ನ ಮುಂಬರುವ ಮಾದರಿ ಜಿವಿ60 ವಾಹನಕ್ಕೆ ಅನ್ವಯಿಸಲು ಯೋಜಿಸಿದೆ. ನಂತರ ಇತರ ಜೆನೆಸಿಸ್ ಮಾದರಿಗಳಲ್ಲಿ ಈ ನೂತನ ವೈಶಿಷ್ಟ್ಯಗಳನ್ನು ಪರಿಚಯಿಸಲಿದೆ.
ಒಟ್ಟಿನಲ್ಲಿ ಸ್ಮಾರ್ಟ್ಫೋನ್ನಂತೆಯೇ ಸೂಪರ್ ಫೀಚರ್ಸ್ ಸ್ಮಾರ್ಟ್ಕಾರಿಗೂ ಅನ್ವಯಿಸಲು ಜೆನೆಸಿಸ್ ಮೋಟಾರ್ ಸಂಸ್ಥೆ ಮುಂದಾಗಿದೆ. ಮುಂಬರುವ ಬಹುತೇಕ ಕಾರುಗಳು ಇಂತಹ ತಂತ್ರಜ್ನಾದ ಜೊತೆಗೆ ಮಾರುಕಟ್ಟೆಗೆ ಧಾವಿಸಲಿದೆ.
Face ID and Fingerprint sensor on the Genesis Motor next Gv60 cars. This is smartphone like tech on cars.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm