ಬ್ರೇಕಿಂಗ್ ನ್ಯೂಸ್
21-09-21 06:00 pm Source: One India kannada ಡಿಜಿಟಲ್ ಟೆಕ್
ಬೆಂಗಳೂರು, ಸೆ.21: ದೇಶೀಯವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್‌ಕಾರ್ಟ್ ಇಂದು ದೇಶದ ಹಬ್ಬದ ಸೀಸನ್ ಆಗಿರುವ 8 ನೇ ದಿ ಬಿಗ್ ಬಿಲಿಯನ್ ಡೇಸ್(ಟಿಬಿಬಿಡಿ)ಯನ್ನು ಅಕ್ಟೋಬರ್ 7, ರಿಂದ ಅಕ್ಟೋಬರ್ 12, 2021 ರವರೆಗೆ ನಡೆಯಲಿದೆ ಎಂದು ಪ್ರಕಟಿಸಿದೆ. ಈ ವರ್ಷ, ಫ್ಲಿಪ್‌ಕಾರ್ಟ್ ಭಾರತದ ಅಚ್ಚುಮೆಚ್ಚಿನ ಸೆಲೆಬ್ರಿಟಿಗಳಾದ ಅಮಿತಾಬ್ ಬಚ್ಚನ್, ವಿರಾಟ್ ಕೊಹ್ಲಿ, ಆಲಿಯಾ ಭಟ್, ರಣಬೀರ್ ಕಪೂರ್, ಕಿಚ್ಚ ಸುದೀಪ್, ಮತ್ತು ಮಹೇಶ್ ಬಾಬು ಮುಂತಾದವರ ಜತೆ ಸಹಯೋಗ ಹೊಂದಿದ್ದು, 'ಬಿಗ್ ಬಿಲಿಯನ್ ಡೇಸ್' ಆಚರಿಸುವಾಗ ಇವರೆಲ್ಲರೂ ಸೃಜನಾತ್ಮಕ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
6 ದಿನಗಳವರೆಗೆ ನಡೆಯಲಿರುವ ಈ ಬಿಗ್ ಬಿಲಿಯನ್ ಡೇಸ್‌ನಲ್ಲಿ ಮಿಲಿಯನ್ ಗಟ್ಟಲೆ ಗ್ರಾಹಕರು, ಮಾರಾಟಗಾರರು, ಸಣ್ಣ ವ್ಯಾಪಾರಿಗಳು, ಕುಶಲಕರ್ಮಿಗಳು, ಕಿರಾಣಗಳು, ಬ್ರ್ಯಾಂಡ್‌ಗಳು ಮತ್ತು ಇ-ಕಾಮರ್ಸ್ ಪರಿಸರ ವ್ಯವಸ್ಥೆಯ ಪಾಲುದಾರರು ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ನಾನ್-ಪ್ಲಸ್ ಗ್ರಾಹಕರು ಫ್ಲಿಪ್‌ಕಾರ್ಟ್ ಆ್ಯಪ್ ಮೂಲಕ ಮುಂಚಿತವಾಗಿಯೇ ಉತ್ಪನ್ನಗಳನ್ನು ಬುಕ್ ಮಾಡುವುದರೊಂದಿಗೆ ಗಳಿಸಿದ 50 ಸೂಪರ್ ಕಾಯಿನ್ ಗಳನ್ನು ರಿಡೀಮ್ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.
ಈ ವರ್ಷದ ಬಿಗ್ ಬಿಲಿಯನ್ ಡೇಸ್ ಸ್ವದೇಶಿ ಬ್ರ್ಯಾಂಡ್‌ಗಳು ಮತ್ತು ಮಾರಾಟಗಾರರಿಗೆ ಹಲವಾರು ಹೊಸ ಅವಕಾಶಗಳನ್ನು ಕಲ್ಪಿಸುತ್ತಿದೆ. ಇದರ ಮೂಲಕ 2 ಮತ್ತು ನಂತರದ ಶ್ರೇಣಿಯ ನಗರಗಳ ಮಾರಾಟಗಾರರು ಮತ್ತು ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದರೊಂದಿಗೆ ಗ್ರಾಹಕರೊಂದಿಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಬಹುದಾಗಿದೆ.
ಆಕರ್ಷಕವಾದ ಶಾಪಿಂಗ್ ಅನುಭವ
ಕಳೆದ ಒಂದೂವರೆ ವರ್ಷದಲ್ಲಿ ಫ್ಲಿಪ್‌ಕಾರ್ಟ್ ಎಂಎಸ್ಎಂಇಗಳ ವ್ಯವಹಾರವನ್ನು ಉತ್ತಮಗೊಳಿಸುವ ಮೂಲಕ ಅವುಗಳನ್ನು ಪುನಶ್ಚೇತನಗೊಳಿಸುವತ್ತ ಗಮನ ಹರಿಸಿದೆ. ಫ್ಲಿಪ್‌ಕಾರ್ಟ್ ತನ್ನ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ದೇಶದ ಪ್ರತಿಯೊಂದು ಮೂಲೆಗೂ ಉತ್ಪನ್ನಗಳನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿದೆ. ಈ ವರ್ಷದ ಟಿಬಿಬಿಡಿ ಸಂದರ್ಭದಲ್ಲಿ ಹೊಸ ಹೊಸ ಉತ್ಪನ್ನಗಳು, ಗೇಮ್ಸ್, ಇಂಟರ್ಯಾಕ್ಟಿವ್ ವಿಡಿಯೋಗಳು, ಲೈವ್ ಸ್ಟ್ರೀಮ್ಸ್ ಮತ್ತು ಕೊಡುಗೆಗಳನ್ನು ಕಾಣಬಹುದಾಗಿದೆ. ಗ್ರಾಹಕರು ಈ ಹಿಂದೆಂದೂ ಕಾಣದಂತಹ ವಿಶೇಷ ಮತ್ತು ಆಕರ್ಷಕವಾದ ಶಾಪಿಂಗ್ ಅನುಭವಗಳನ್ನು ಹೊಂದಬಹುದಾಗಿದೆ.
ಕೈಗೆಟಗುವ ಸೌಲಭ್ಯಗಳು
ಆಕ್ಸಿಸ್ ಬ್ಯಾಂಕ್ ಮತ್ತು ICICI ಬ್ಯಾಂಕ್ ಸಹಯೋಗದಲ್ಲಿ ಕ್ರೆಡಿಟ್ & ಡೆಬಿಟ್ ಕಾರ್ಡ್‌ಗಳ ಮೇಲೆ 10% ತಕ್ಷಣದ ರಿಯಾಯಿತಿಗಳನ್ನು Flipkart ನೀಡುತ್ತದೆ. ಜತೆಗೆ, ಪೇಟಿಎಂ ಮೂಲಕ ನಡೆಸುವ UPI ವಹಿವಾಟುಗಳಿಗೆ ವ್ಯಾಲೆಟ್‌ನಲ್ಲಿ ಖಚಿತವಾದ ಕ್ಯಾಶ್‌ಬ್ಯಾಕ್ ಸೌಲಭ್ಯವಿದ್ದು, ಭಾರತದಾದ್ಯಂತ ಇರುವ ಗ್ರಾಹಕರಿಗೆ ಸುಲಭವಾಗಿ ಕೈಗೆಟಕುವಂತೆ ಮಾಡಿದೆ. Flipkart ಗ್ರಾಹಕರು ಈ ವರ್ಷ ಒಳಗೊಳ್ಳುವಿಕೆಯ ಹಾಗೂ ಗ್ರಾಹಕ ಕೇಂದ್ರಿತ ಶಾಪಿಂಗ್ ಅನುಭವವನ್ನು ಹೊಂದಲಿದ್ದಾರೆ. ಅರ್ಹ ಗ್ರಾಹಕರಿಗೆ ‘Flipkart Pay Later' (Flipkart ಪೇ ಲೇಟರ್) ಮೇಲೆ EMI ಸೌಲಭ್ಯವಿರುವ 70,000 ರೂ.ವರೆಗಿನ ಕ್ರೆಡಿಟ್ ಲೈನ್ ತೆರೆದಿದೆ. ಈ ಮೊತ್ತವನ್ನು ಗ್ರಾಹಕರು ಅನುಕೂಲಕರವಾದ 3, 6, 9 ಹಾಗೂ 12 ತಿಂಗಳ ಮಾಸಿಕ ಕಂತುಗಳಲ್ಲಿ ಪಾವತಿಸಬಹುದು. ಈ ಮೂಲಕ ಹಬ್ಬದ ಋತುವಿಗೆ ಹೆಚ್ಚಿನ ಮೊತ್ತದ ಖರೀದಿ ಸಾಧ್ಯವಾಗುತ್ತದೆ.
18 ಸಂಸ್ಥೆಗಳ ಮೂಲಕ EMI ಆಯ್ಕೆ
Flipkart ಬ್ರ್ಯಾಂಡ್ ಮಾರಾಟಗಾರರು ಮತ್ತು ಮಾರಾಟ ಪಾಲುದಾರರಿಂದ ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, HDFC ಬ್ಯಾಂಕ್, ICICI ಬ್ಯಾಂಕ್, SBI ಸೇರಿದಂತೆ 18 ಸಂಸ್ಥೆಗಳ ಮೂಲಕ EMI ಆಯ್ಕೆಗಳನ್ನು ನೀಡುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಇದೇ ಮೊದಲ ಬಾರಿಗೆ 'ಜೀವಮಾನ ಪರ್ಯಂತ ಉಚಿತವಾಗಿ' ನೀಡುತ್ತಿದೆ. ಇದರಲ್ಲಿ ಗ್ರಾಹಕರು 5 % ಅನಿಯಮಿತ ಕ್ಯಾಶ್‌ಬ್ಯಾಕ್ ಮತ್ತು ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯಬಹುದು. ಇದಲ್ಲದೆ, ಫ್ಲಿಪ್‌ಕಾರ್ಟ್ ಮಲ್ಟಿ ಲಾಯಲ್ಟಿ ಪಾಯಿಂಟ್ ಕ್ಯಾಟಲಾಗ್‌ಗಳ ಜತೆಗೆ ಪಾಲುದಾರಿಕೆ ಹೊಂದಿದ್ದು, ಹಬ್ಬದ ಋತುವಿಗೆ ಮುಂಚಿತವಾಗಿ ತನ್ನ ಗ್ರಾಹಕರಿಗೆ ಉತ್ತಮ ಮೌಲ್ಯದಲ್ಲಿ ಗಿಫ್ಟ್ ಕಾರ್ಡ್‌ಗಳನ್ನು ನೀಡುತ್ತದೆ. ಬಿಗ್ ಬಿಲಿಯನ್ ಡೇ ಥೀಮ್ ಗಿಫ್ಟ್ ಕಾರ್ಡ್ ಇಂತಹ ಉತ್ಪನ್ನಗಳಲ್ಲೇ ಮೊದಲಿನದು. ಮಾರಾಟ ಆರಂಭವಾಗುವ ಮೊದಲೇ ಲೈವ್ ಆಗುತ್ತಿದ್ದು, ಗ್ರಾಹಕರು ಉತ್ಪನ್ನಗಳನ್ನು ಖರೀದಿಸಿ, ತಮ್ಮ ವ್ಯಾಲೆಟ್‌ಗೆ ಸೇರಿಸಬಹುದು.
ಪ್ರತಿ ಗಂಟೆಗೂ ಅತ್ಯಾಕರ್ಷಕ ಕೊಡುಗೆ
ಈ ವರ್ಷ ಬಿಗ್ ಬಿಲಿಯನ್ ಡೇಸ್ ಪ್ರತಿ ಗಂಟೆಗೂ ಅತ್ಯಾಕರ್ಷಕ ಮತ್ತು ನಾಕ್ಷತ್ರಿಕ ಕೊಡುಗೆಗಳನ್ನು ಲಕ್ಷಾಂತರ ಮಾರಾಟಗಾರರು ಮತ್ತು ಸಾವಿರಾರು ಬ್ರ್ಯಾಂಡ್‌ಗಳಲ್ಲಿ ತರುತ್ತಿದೆ. ಪ್ರತಿಯೊಬ್ಬ ಸಂದರ್ಶಕರು ಫ್ಲಿಪ್‌ಕಾರ್ಟ್‌ನಲ್ಲಿ ಈ ವರ್ಷ 'TBBD ಶಗುನ್' - ಹಬ್ಬದ ಋತುವನ್ನು ವಿಶೇಷವಾಗಿಸುವ ಬಹುಮಾನಗಳನ್ನು- ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ. ಗ್ರಾಹಕರು ತಮ್ಮ 'ಸೂಪರ್‌ಕಾಯಿನ್ಸ್' ಬಳಸುವ ಅವಕಾಶ ಪಡೆಯುತ್ತಾರೆ. ಇಲ್ಲಿ ಶಾಪಿಂಗ್ ಮಾಡುವುದರಿಂದ ಅಭೂತಪೂರ್ವ ಡೀಲ್‌ಗಳಿಗಾಗಿ 'ರಿವಾರ್ಡ್ ಪಾಸ್' ಮತ್ತು ಹೆಚ್ಚುವರಿ ಶಾಪಿಂಗ್‌ಗಾಗಿ 2,000 ಬೋನಸ್ ನಾಣ್ಯಗಳನ್ನು ಪಡೆಯಬಹುದು. 'ಬಿಗ್ ಬಿಲಿಯನ್ ಡೇಸ್ ಧಮಾಲ್ ' ಲೈವ್ ಸ್ಟ್ರೀಮ್ ಆಗಿದ್ದು, ಫ್ಲಿಪ್‌ಕಾರ್ಟ್ ಆಪ್‌ನಲ್ಲಿ ಪ್ರತಿ ರಾತ್ರಿ 8 ಗಂಟೆಗೆ ಆರಂಭವಾಗಿ, 1 ಗಂಟೆ ಕಾಲ ಪ್ರಸಾರವಾಗುತ್ತದೆ. ಇದು ಬಿಗ್ ಬಿಲಿಯನ್ ಡೇಸ್‌ಗೆ 1 ವಾರ ಮುಂಚಿತವಾಗಿ ಆರಂಭವಾಗುತ್ತದೆ. ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳೊಂದಿಗೆ ಬಳಕೆದಾರರಿಗೆ ಸಂವಾದಾತ್ಮಕ ಅನುಭವವನ್ನು ನೀಡುತ್ತದೆ. ಪ್ರದರ್ಶನದ ಭಾಗವಾಗಿ ಶಾಪಿಂಗ್ ಮಾಡಲು ಹಾಗೂ ಬಹುಮಾನಗಳನ್ನು ಗೆಲ್ಲಲು ಅವಕಾಶವಿರುತ್ತದೆ. ಈ TBBD ಯನ್ನು ಇದೇ ಮೊದಲ ಬಾರಿಗೆ ಪ್ರಾರಂಭಿಸುತ್ತಿದ್ದು, ಗ್ರಾಹಕರು ಫ್ಲಿಪ್‌ಕಾರ್ಟ್ ಆಪ್‌ನಲ್ಲಿ ಆಟಗಳ ಮೂಲಕ ವಿವಿಧ ಕಾರ್ಯಗಳನ್ನು ಪೂರೈಸಿ, ತಮ್ಮ 'ಸೆಲೆಬ್ರೇಷನ್ ಟ್ರೀ' ಬೆಳೆಸಲು ಅವಕಾಶವನ್ನು ಹೊಂದಿರುತ್ತಾರೆ. ಪ್ರತಿ ವರ್ಚುವಲ್ ಟ್ರೀ ಪೂರ್ಣಗೊಂಡಾಗ, ಗಿವ್ ಇಂಡಿಯಾ (GiveIndia) ಸಹಯೋಗದಲ್ಲಿ ಫ್ಲಿಪ್‌ಕಾರ್ಟ್ ನಿಜವಾಗಿಯೂ ಒಂದು ಗಿಡವನ್ನು ನೆಡುತ್ತದೆ.
2 ಮತ್ತು 3 ನಗರಗಳಲ್ಲಿ ಹೊಸ ಮಾರಾಟಗಾರರು
ಡಿಸೆಂಬರ್ 2021 ರ ವೇಳೆಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ 4.2 ಲಕ್ಷ ಮಾರಾಟಗಾರರನ್ನು ಹೊಂದುವ ಗುರಿಯನ್ನು ಫ್ಲಿಪ್ ಕಾರ್ಟ್ ಹಾಕಿಕೊಂಡಿದೆ ಮತ್ತು ಈ ನಿಟ್ಟಿನಲ್ಲಿ ತನ್ನ ಮಾರಾಟಗಾರರ ಜಾಲವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಪ್ರಸ್ತುತ ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ 3.75 ಲಕ್ಷಕ್ಕೂ ಅಧಿಕ ಮಾರಾಟಗಾರರಿಗೆ ಡಿಜಿಟಲ್ ಕಾಮರ್ಸ್ ಬೆಂಬಲವನ್ನು ನೀಡುತ್ತಿದೆ. ಈಗಾಗಲೇ ಫ್ಲಿಪ್ ಕಾರ್ಟ್ ಕಳೆದ ಕೆಲವು ತಿಂಗಳುಗಳಿಂದ 75,000 ಹೊಸ ಮಾರಾಟಗಾರರನ್ನು ಎಂಎಸ್ಎಂಇಗಳಾಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸೇರಿಸಿಕೊಂಡಿದೆ ಹಾಗೂ ಸಣ್ಣ ವ್ಯಾಪಾರ ಉದ್ಯಮಿಗಳು ಹಬ್ಬದ ಸೀಸನ್ ಗೆ ಮುಂಚಿತವಾಗಿ ಇ-ಕಾಮರ್ಸ್ ಸಾಮರ್ಥ್ಯದಿಂದ ಉತ್ಸುಕರಾಗಿದ್ದಾರೆ.
ಆರ್ಥಿಕ ಬೆಳವಣಿಗೆಗೆ ಕೊಡುಗೆ
ಆಗ್ರಾ, ಇಂದೋರ್, ಜೈಪುರ, ಪಾಣಿಪತ್, ರಾಜಕೋಟ್, ಸೂರತ್ ಮತ್ತು ಇತರೆ ಇನ್ನೂ ಹಲವಾರು 2 ಮತ್ತು 3 ನೇ ಶ್ರೇಣಿಯ ಮಾರುಕಟ್ಟೆಗಳಿಂದ ಹೊಸ ಮಾರಾಟಗಾರರು ಮತ್ತು ಎಂಎಸ್ಎಂಇಗಳು ಸೇರ್ಪಡೆಗೊಳ್ಳುತ್ತಿವೆ. ಫ್ಲಿಪ್‌ಕಾರ್ಟ್ ಮಾರ್ಕೆಟ್ ಪ್ಲೇಸ್ ಪ್ಲಾಟ್ ಫಾರ್ಮ್ ಜನರಲ್ ಮರ್ಚಂಡೈಸ್, ಹೋಂ, ಕಿಚನ್ ಮತ್ತು ಪರ್ಸನಲ್ ಕೇರ್ ನಂತಹ ವಿಭಾಗಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಈ ಹೊಸ ಮಾರಾಟಗಾರರು ಪ್ರತಿಯೊಬ್ಬರೂ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚುವರಿ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಲ್ಲದೇ, ಇವರು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ವಲಯವಾಗಿ ಇ-ಕಾಮರ್ಸ್ ಸಾಮರ್ಥ್ಯವನ್ನು ತೆರೆಯುವಲ್ಲಿ ಸಮರ್ಥರಾಗಿದ್ದಾರೆ.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm