ಮೊಬೈಲ್‌ನಲ್ಲಿ ಉಚಿತವಾಗಿ IPL ಕ್ರಿಕೆಟ್ ಮ್ಯಾಚ್ ವೀಕ್ಷಣೆ ಮಾಡುವುದು ಹೇಗೆ?

22-09-21 01:28 pm       Gizbot, Mantesh   ಡಿಜಿಟಲ್ ಟೆಕ್

ಐಪಿಎಲ್‌ ಮ್ಯಾಚ್‌ಗಳು ಎಂದರೇ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ದೊಡ್ಡ ಹಬ್ಬವೇ ಸರಿ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ 2021 ಯುಎಇ ನಲ್ಲಿ ನಡೆಯುತ್ತಿದೆ.

ಐಪಿಎಲ್‌ ಮ್ಯಾಚ್‌ಗಳು ಎಂದರೇ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ದೊಡ್ಡ ಹಬ್ಬವೇ ಸರಿ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ 2021 (ಐಪಿಎಲ್ 2021) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯುತ್ತಿದೆ. ಎಲ್ಲ ಕ್ರಿಕೆಟ್ ಅಭಿಮಾನಿಗಳು ಪಂದ್ಯಗಳನ್ನು ಟಿವಿಯಲ್ಲಿ ಲೈವ್ ಆಗಿ ವೀಕ್ಷಿಸಲಾಗದು. ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್‌ನಲ್ಲಿಯೂ ಮ್ಯಾಚ್ ಗಳನ್ನು ವೀಕ್ಷಿಸಲು ಹಲವು ಅನುಕೂಲಗಳಿವೆ. ಮೊಬೈಲ್‌ನಲ್ಲಿ ಐಪಿಎಲ್‌ ಮ್ಯಾಚ್‌ ವೀಕ್ಷಿಸುವುದು ಎಂದಾಗ ಥಟ್ ಅಂತಾ ನೆನಪಾಗುವುದೇ 'ಡಿಸ್ನಿ+ ಹಾಟ್‌ಸ್ಟಾರ್'.

ಹೌದು, ಜನಪ್ರಿಯ ಓಟಿಟಿ ತಾಣಗಳ ಪೈಕಿ ಒಂದಾಗಿರುವ ಡಿಸ್ನಿ+ ಹಾಟ್‌ಸ್ಟಾರ್ ಭಾರತದಲ್ಲಿ ಐಪಿಎಲ್ 2021 ಟೂರ್ನಮೆಂಟ್‌ಗೆ ಅಧಿಕೃತ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರರಾಗಿದ್ದಾರೆ. ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಪಡೆಯುವ ಮೂಲಕ ಐಪಿಎಲ್‌ ಮ್ಯಾಚ್‌ಗಳನ್ನು ಯಾವುದೇ ಅಡೆ ತಡೆ ಇಲ್ಲದೇ ನೋಡಬಹುದಾಗಿದೆ. ಇನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಬಳಕೆದಾರರ ಅನುಕೂಲಕ್ಕಾಗಿ ಭಿನ್ನ ಪ್ರೈಸ್‌ ಟ್ಯಾಗ್‌ನಲ್ಲಿ ಚಂದಾದಾರಿಕೆಯ ಯೋಜನೆಗಳ ಆಯ್ಕೆಯನ್ನು ಹೊಂದಿದೆ.

ಐಪಿಎಲ್ ಲೈವ್‌ ಮ್ಯಾಚ್‌ ನೋಡಲು ಡಿಸ್ನಿ+ ಹಾಟ್‌ಸ್ಟಾರ್‌ ಆಪ್‌ ಅತ್ಯುತ್ತಮವಾಗಿದ್ದು, ಆದರೆ ಐಪಿಎಲ್‌ ಉಚಿತವಾಗಿ ವೀಕ್ಷಿಸಲು ಸಾಧ್ಯವಿಲ್ಲ. ಕೆಲವು ಉಚಿತ ನಿಮಿಷದ ವೀಕ್ಷಣೆಯ ನಂತರ ಚಂದಾದಾರರಾಗಿರಿ ಎಂಬ ಮಾಹಿತಿ ಕಾಣಿಸುತ್ತದೆ. ಚಂದಾದಾರರಾಗಲು ಮೂರು ಪ್ಲಾನ್‌ಗಳ ಆಯ್ಕೆಯನ್ನು ನೀಡಿದೆ. ಇನ್ನು ಡಿಸ್ನಿ+ ಹಾಟ್‌ಸ್ಟಾರ್‌ ಆಪ್‌ನ ಚಂದಾದಾರಿಕೆಯ ಶುಲ್ಕ ನೋಡುವುದಾದರೇ, ಡಿಸ್ನಿ+ ಹಾಟ್‌ಸ್ಟಾರ್ ಸೂಪರ್‌ ಪ್ಯಾಕ್‌ನ ವಾರ್ಷಿಕ ಚಂದಾದಾರಿಕೆಗೆ 899ರೂ. ಆಗಿದೆ. ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಪ್ಯಾಕ್‌ನ ವಾರ್ಷಿಕ ಚಂದಾದಾರಿಕೆಗೆ 1499ರೂ. ಆಗಿದೆ. ಇನ್ನು ಮೊಬೈಲ್ ಪ್ಯಾಕ್ ಚಂದಾದಾರಿಕೆ ವಾರ್ಷಿಕ ಶುಲ್ಕವು 499ರೂ. ಆಗಿದೆ.



ಉಚಿತ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ

ಜಿಯೋ, ಏರ್‌ಟೆಲ್‌, ವಿ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಕೆಲವು ಯೋಜನೆಗಳಲ್ಲಿ ಡೇಟಾ ಜೊತೆಗೆ ಹೆಚ್ಚುವರಿಯಾಗಿ ಉಚಿತ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ನೀಡುತ್ತಿವೆ. ಅಂತಹ ಪ್ಲ್ಯಾನ್ ರೀಚಾರ್ಜ್ ಮಾಡುವ ಮೂಲಕವೂ ನೀವು ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಪಡೆದು ಐಪಿಎಲ್ ಮ್ಯಾಚ್ ನೋಡಬಹುದು. ಹಾಗಾದರೇ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆಯನ್ನು ಒಳಗೊಂಡ ಬಜೆಟ್ ದರದಲ್ಲಿರುವ ಕೆಲವು ರೀಚಾರ್ಜ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.



ಜಿಯೋ 499ರೂ. ಪ್ಲ್ಯಾನ್

ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 3 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್‌ ಕಳುಹಿಸುವ ಅವಕಾಶವು ದೊರೆಯಲಿದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 499 ಪಾವತಿ ಮಾಡಬೇಕಾಗಿದೆ.



ಜಿಯೋ 666ರೂ. ಪ್ಲ್ಯಾನ್

ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್‌ ಕಳುಹಿಸುವ ಅವಕಾಶವು ದೊರೆಯಲಿದೆ. 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 666 ಪಾವತಿ ಮಾಡಬೇಕಾಗಿದೆ.



ಏರ್‌ಟೆಲ್‌ 499ರೂ ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ನ ಈ ಪ್ಲಾನ್‌ ಅನಿಯಮಿತ ಕರೆಗಳು, ದಿನಕ್ಕೆ 100 SMS ಮತ್ತು ಡೈಲಿ 3GB ಡೇಟಾ ಜೊತೆಗೆ 28 ​​ದಿನಗಳ ಮಾನ್ಯತೆಯನ್ನು ಹೊಂದಿದೆ. ಅಲ್ಲದೆ ಒಂದು ವರ್ಷದ ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತದೆ. ಇದಲ್ಲದೆ ಏರ್‌ಟೆಲ್‌ ಚಂದಾದಾರರು ಫ್ರೀ ಹೆಲೋಟ್ಯೂನ್ಸ್, ಅಮೆಜಾನ್ ಪ್ರೈಮ್ ಮೊಬೈಲ್ ಎಡಿಷನ್ ಟ್ರಯಲ್ ಅನ್ನು 30 ದಿನಗಳವರೆಗೆ ಮತ್ತು ಇತರ ಪ್ರಯೋಜನಗಳನ್ನು ಸಹ ಪಡೆಯಬಹುದು.

ಏರ್‌ಟೆಲ್‌ 699ರೂ ಪ್ರಿಪೇಯ್ಡ್‌ ಪ್ಲಾನ್

ಏರ್‌ಟೆಲ್‌ನ ಈ ಪ್ಲಾನ್‌ ಡೈಲಿ 2GB ಡೇಟಾ, ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ಪ್ರತಿನಿತ್ಯ ನೂರು ಎಸ್‌ಎಂಎಸ್‌ ಅನ್ನು ನೀಡಲಿದೆ. ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ ಮೂಲಕ ನೀವು ಒಂದು ವರ್ಷದವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಪ್ಲಾನ್‌ ಅನ್ನು ಪಡೆದುಕೊಳ್ಳಬಹುದು. ಅಲ್ಲದೆ 30 ದಿನಗಳ ಟ್ರಯಲ್‌ ಪ್ರೈಮ್ ವಿಡಿಯೋ ಚಂದಾದಾರಿಕೆಯ ಮೊಬೈಲ್ ಆವೃತ್ತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ.



ವಿ ಟೆಲಿಕಾಂ 501ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ 501ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಯು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ 16 GB ಡೇಟಾ ಲಭ್ಯವಾಗಲಿದೆ. ವಿಕೇಂಡ್‌ ಡೇಟಾ ರೋಲ್‌ ಓವರ್‌, ವಿ ಆಪ್ಸ್‌ಗಳ ಪ್ರಯೋಜನವು ಪಡೆದಿದೆ.

ವಿ ಟೆಲಿಕಾಂ 601ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ ಸಂಸ್ಥೆಯ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ 399ರೂ. ಶುಲ್ಕದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವವು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ 32GB ಡೇಟಾ ಲಭ್ಯವಾಗಲಿದೆ. ವಿಕೇಂಡ್‌ ಡೇಟಾ ರೋಲ್‌ಓವರ್‌, ಪ್ರಯೋಜನವು ಪಡೆದಿದೆ.