ಒಪ್ಪೋ K9 ಪ್ರೊ ಸ್ಮಾರ್ಟ್‌ಫೋನ್ ಲಾಂಚ್!..ಟ್ರಿಪಲ್‌ ಕ್ಯಾಮೆರಾ ಸ್ಪೆಷಲ್!

27-09-21 05:05 pm       Gizbot, Mantesh   ಡಿಜಿಟಲ್ ಟೆಕ್

ಒಪ್ಪೋ ಕಂಪನಿಯು ಹೊಸದಾಗಿ ಒಪ್ಪೋ K9 ಪ್ರೊ ಸ್ಮಾರ್ಟ್‌ಫೋನ್‌ ಸೇರ್ಪಡೆ ಮಾಡಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ಸ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ.

ಜನಪ್ರಿಯ ಮೊಬೈಲ್ ತಯಾರಿಕಾ ಸಂಸ್ಥೆ ಒಪ್ಪೋ ಈಗಾಗಲೇ ಹಲವು ಭಿನ್ನ ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಸಾಲಿಗಿಗ ಒಪ್ಪೋ ಕಂಪನಿಯು ಹೊಸದಾಗಿ ಒಪ್ಪೋ K9 ಪ್ರೊ ಸ್ಮಾರ್ಟ್‌ಫೋನ್‌ ಸೇರ್ಪಡೆ ಮಾಡಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ಸ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ.

ಹೌದು, ಒಪ್ಪೋ ಸಂಸ್ಥೆಯು ನೂತನವಾಗಿ ಒಪ್ಪೋ K9 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಫೋನಗ ಈ ಹಿಂದಿನ ಒಪ್ಪೋ K9 ಅಪ್‌ಡೇಟ್‌ ಆವೃತ್ತಿಯಾಗಿದೆ. ಈ ಫೋನ್ ಮೀಡಿಯಾ ಟೆಕ್ Dimnesity 1200 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 4,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಜೊತೆಗೆ 60W ಫ್ಲ್ಯಾಶ್ ಚಾರ್ಜ್ ಸೌಲಭ್ಯ ಹೊಂದಿದೆ. ಹಾಗಾದರೇ ಒಪ್ಪೋ K9 ಪ್ರೊ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಯಾವುವು ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.



ಡಿಸ್‌ಪ್ಲೇ ರಚನೆ

ಮತ್ತು ವಿನ್ಯಾಸ ಒಪ್ಪೋ K9 ಪ್ರೊ ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸಲ್ ರೆಸಲ್ಯೂಶನ್‌ ಜೊತೆಗೆ 6.43 ಇಂಚಿನ HD + ಗುಣಮಟ್ಟದ ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 120Hz ರೀಫ್ರೇಶ್ ರೇಟ್ ಅನ್ನು ಹೊಂದಿದ್ದು, ಬಾಹ್ಯ ಬಾಡಿಯಿಂದ ಸ್ಕ್ರೀನ್‌ನ ನಡುವಿನ ಅಂತರವು 91.7 ಆಗಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409ppi ಆಗಿದೆ. ಹಾಗೆಯೇ DCI-P3 ಕಲರ್ ಗಾಮಟ್ ಅನ್ನು ಪಡೆದಿದೆ.



ಪ್ರೊಸೆಸರ್ ಪವರ್

ಒಪ್ಪೋ K9 ಪ್ರೊ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ Dimnesity 1200 SoC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ 8GB RAM + 128GB ಮತ್ತು 12GB RAM + 256GB ಸ್ಟೋರೇಜ್‌ನ ವೇರಿಯಂಟ್ ಆಯ್ಕೆ ಅನ್ನು ಒಳಗೊಂಡಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಣೆಗೂ ಅವಕಾಶ ನೀಡಲಾಗಿದೆ.


ಟ್ರಿಪಲ್ ಕ್ಯಾಮೆರಾ ಸೆನ್ಸಾರ್

ಒಪ್ಪೋ K9 ಪ್ರೊ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿದೆ. ಸೆಕೆಂಡರಿ ಕ್ಯಾಮೆರಾ 8 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿದ್ದು, ಇನ್ನು ತೃತೀಯ ಕ್ಯಾಮೆರಾವು ಸಹ ಮೆಗಾ 2 ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಇದರೊಂದಿಗೆ ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ನೀಡಲಾಗಿದೆ.



ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಒಪ್ಪೋ K9 ಪ್ರೊ ಸ್ಮಾರ್ಟ್‌ಫೋನ್‌ 4,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದಕ್ಕೆ ಜೊತೆಯಾಗಿ 60W ಫ್ಲ್ಯಾಶ್ ಚಾರ್ಜ್ ಸೌಲಭ್ಯ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಬ್ಲೂಟೂತ್ v5.2, ವೈ-ಫೈ 802.11 ಎಸಿ, 5 ಜಿ ಬೆಂಬಲ, ಎನ್‌ಎಫ್‌ಸಿ ಸೇರಿದಂತೆ ಇತರೆ ಅಗತ್ಯ ಫೀಚರ್ಸ್‌ಗಳು ಸೇರಿವೆ. ಹಾಗೆಯೇ ಈ ಫೋನ್ 180 ಗ್ರಾಂ ತೂಕ ಹೊಂದಿದ್ದು, 158.7x73.5x8.5mm ಅಳತೆ ಪಡೆದಿದೆ. ಸ್ಟಿರಿಯೊ ಡ್ಯುಯಲ್ ಸ್ಪೀಕರ್‌ಗಳ ಸೌಲಭ್ಯ ಪಡೆದಿದೆ.

ಬೆಲೆ ಎಷ್ಟು?

ಒಪ್ಪೋ K9 ಪ್ರೊ ಸ್ಮಾರ್ಟ್‌ಫೋನ್‌ 8GB RAM + 128GB ಸ್ಟೋರೇಜ್ ವೇರಿಯಂಟ್ ದರವು ಚೀನಾದಲ್ಲಿ CNY 2,199 (ಭಾರತದಲ್ಲಿ ಅಂದಾಜು 25,100ರೂ. ಎನ್ನಲಾಗಿದೆ). ಹಾಗೆಯೇ 12GB RAM + 256GB ಸ್ಟೋರೇಜ್‌ನ ವೇರಿಯಂಟ್ ಬೆಲೆಯು CNY 2,699 (ಭಾರತದಲ್ಲಿ ಅಂದಾಜು 30,800ರೂ. ಆಗಿದೆ).