ಭಾರತಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಶಿಯೋಮಿ 'ಮಿ 11 ಲೈಟ್ 5G NE' ಸ್ಮಾರ್ಟ್‌ಫೋನ್!

29-09-21 02:57 pm       Gizbot, Mantesh   ಡಿಜಿಟಲ್ ಟೆಕ್

ಜನಪ್ರಿಯ ಮೊಬೈಲ್ ತಯಾರಕ ಕಂಪನಿಗಳಲ್ಲಿ ಒಂದಾದ ಶಿಯೋಮಿ ತನ್ನ 'ಮಿ 11 ಲೈಟ್ 5G NE' ಸ್ಮಾರ್ಟ್‌ಫೋನ್‌ ಅನ್ನು ಈಗ ಭಾರತದಲ್ಲಿ ಬಿಡುಗಡೆ ಮಾಡಿದೆ.

ಜನಪ್ರಿಯ ಮೊಬೈಲ್ ತಯಾರಕ ಕಂಪನಿಗಳಲ್ಲಿ ಒಂದಾದ ಶಿಯೋಮಿ ತನ್ನ ಮಿ ಸರಣಿಯಲ್ಲಿ ಹಲವು ಆಕರ್ಷಕ ಫೋನ್‌ಗಳನ್ನು ಲಾಂಚ್ ಮಾಡಿ ಸೈ ಅನಿಸಿಕೊಂಡಿದೆ. ಮಿ 11 ಸರಣಿಯಲ್ಲಿ ಇತ್ತೀಚಿಗಷ್ಟೆ ಪರಿಚಯಿಸಿದ್ದ 'ಮಿ 11 ಲೈಟ್ 5G NE' ಸ್ಮಾರ್ಟ್‌ಫೋನ್‌ ಅನ್ನು ಈಗ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 780G SoC ಪ್ರೊಸೆಸರ್ ಬಲವನ್ನು ಒಳಗೊಂಡಿದ್ದು, ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆಯನ್ನು ಪಡೆದಿದೆ.

ಹೌದು, ಶಿಯೋಮಿ ಕಂಪನಿಯು ದೇಶಿಯ ಮಾರುಕಟ್ಟೆಗೆ ಹೊಸದಾಗಿ 'ಮಿ 11 ಲೈಟ್ 5G NE' ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಪಡೆದಿದ್ದು, ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಹಿಂಬದಿಯ ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇದೆ. ಜೊತೆಗೆ ಸೆಲ್ಫಿ ಪ್ರಿಯರನ್ನು ಸೆಳೆಯಲು ಮುಂಬದಿಯಲ್ಲಿ 20 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಈ ಫೋನ್ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಇನ್ನುಳಿದಂತೆ ಶಿಯೋಮಿಯ ಹೊಸ 'ಮಿ 11 ಲೈಟ್ 5G NE' ಸ್ಮಾರ್ಟ್‌ಫೋನ್‌ ಯಾವೆಲ್ಲ ಫೀಚರ್ಸ್‌ ಹೊಂದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.



ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಶಿಯೋಮಿ ಮಿ 11 ಲೈಟ್ 5G NE ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ + OLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದ್ದು ಜೊತೆಗೆ 90Hz ರಿಫ್ರೆಶ್ ರೇಟ್‌ ಹೊಂದಿದೆ. ಡಿಸ್‌ಪ್ಲೇಯು HDR10+ ಸಪೋರ್ಟ್‌ ಸಹ ಒಳಗೊಂಡಿದೆ.



ಪ್ರೊಸೆಸರ್‌ ಪವರ್ ಯಾವುದು

ಶಿಯೋಮಿ ಮಿ 11 ಲೈಟ್ 5G NE ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 780G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಬೆಂಬಲವನ್ನು ಒಳಗೊಂಡಿದೆ. ಹಾಗೆಯೇ 6GB RAM ಮತ್ತು 128GB ಹಾಗೂ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಾಕಾಶ ನೀಡಿದೆ.



ಟ್ರಿಪಲ್ ಕ್ಯಾಮೆರಾ ಸೆಟಅಪ್ ರಚನೆ

ಶಿಯೋಮಿ ಮಿ 11 ಲೈಟ್ 5G NE ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಇದಲ್ಲದೆ 20 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.



ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಶಿಯೋಮಿ ಮಿ 11 ಲೈಟ್ 5G NE ಸ್ಮಾರ್ಟ್‌ಫೋನ್‌ 4,250mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಈ ಫೋನ್ 33W ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಯುಎಸ್‌ಬಿ ಟೈಪ್‌ ಸಿ 2 ಯನ್ನು ಬೆಂಬಲಿಸುತ್ತದೆ. ಹಾಗೆಯೇ ಡಾಲ್ಬಿ ವಿಜನ್, ಸಪೋರ್ಟ್‌ ಒಳಗೊಂಡಿದೆ. ಈ ಫೋನ್ 160.53x75.73x6.81mm ಸುತ್ತಳತೆ ಪಡೆದಿದ್ದು, 158 ಗ್ರಾಂ ತೂಕವನ್ನು ಪಡೆದಿದೆ.



ಬೆಲೆ ಮತ್ತು ಲಭ್ಯತೆ?

ಶಿಯೋಮಿ ಮಿ 11 ಲೈಟ್ 5G NE ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ವೇರಿಯಂಟ್ ಬೆಲೆಯು 26,999 ರೂ ಆಗಿದೆ. ಅದೇ ರೀತಿ 8GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್ ಬೆಲೆಯು 28,999ರೂ. ಆಗಿದೆ. ಇನ್ನು ಈ ಫೋನ್ ಡೈಮಂಡ್ ಡಾಜಲ್, ಕೋರಲ್, ಬ್ಲ್ಯಾಕ್ ಮತ್ತು ಜಾಜ್ ಬ್ಲೂ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಈ ಫೋನ್ ಇದೇ ಅಕ್ಟೋಬರ್‌ 2ರಂದು ಫಸ್ಟ್‌ ಸೇಲ್ ಕಾಣಲಿದೆ. ಮಿ.ಕಾಮ್, ಅಮೆಜಾನ್ ಹಾಗೂ ಮಿ ಹೋಮ್ ಸೇರಿದಂತೆ ಪ್ರಮುಖ ರೀಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.