ಫ್ಲಿಪ್​ಕಾರ್ಟ್​ನಲ್ಲಿ ಕೇವಲ 18 ಸಾವಿರಕ್ಕೆ ಸಿಗುತ್ತಿದೆ ಐಫೋನ್​ SE 2020 !

30-09-21 11:48 am       Source: News 18 Kannada   ಡಿಜಿಟಲ್ ಟೆಕ್

ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇಸ್​ ಸೇಲ್​ನಲ್ಲಿ ಐಫೋನ್ ಎಸ್‌ಇ ಮೇಲೆ 25,999 ರೂ ಡಿಸ್ಕೌಂಟ್​ ನೀಡಿದೆ.

Flipkart Big Billion Days 2021: ಆ್ಯಪಲ್‌ ಕಂಪನಿಯ ಐಫೋನ್​ಗಳು ಕೈಗೆಟುಕುವ ಬೆಲೆಗೆ ಯಾವಾಗ ಸಿಗುತ್ತದೆ ಎಂದು ಅನೇಕರು ಕಾಯುತ್ತಿದ್ದಾರೆ. ಅದರಲ್ಲೂ ಆನ್​ಲೈನ್​ ಇ- ಕಾಮರ್ಸ್​ ಮಳಿಗೆಗಳ ಮೂಲಕ ಏರ್ಪಡಿಸುವ ಹಬ್ಬದ ಸೇಲ್​ನಲ್ಲಿ ಕಡಿಮೆ ಬೆಲೆಗೆ ಸಿಗಲಿದೆಯಾ? ಎಂದು ಕಾದು ಕುಳಿತಿರುತ್ತಾರೆ. ಅದರಂತೆ ಇದೀಗ ಫ್ಲಿಪ್​ಕಾರ್ಟ್​ ತನ್ನ ಬಿಗ್​ ಬಿಲಿಯನ್​ ಡೇಸ್​ನಲ್ಲಿ  ಐಫೊನ್​ ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಕಡಿಮೆ ಬೆಲೆಗೆ ನಿಮ್ಮಿಷ್ಟದ ಐಫೊನ್​ ಖರೀದಿಸುವ ಅವಕಾಶ ಒದಗಿಸುತ್ತಿದೆ.

ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇಸ್​ ಸೇಲ್​ನಲ್ಲಿ ಐಫೋನ್ ಎಸ್‌ಇ ಮೇಲೆ 25,999 ರೂ ಡಿಸ್ಕೌಂಟ್​ ನೀಡಿದೆ. 64 GB ಸ್ಟೋರೇಜ್ ಮಾದರಿದ ನೈಜ್ಯ ಬೆಲೆ 39,900 ರೂ ಆಗಿದ್ದು, ಡಿಸ್ಕೌಂಟ್​ ಬೆಲೆಗೆ ಸೇಲ್​ ಮಾಡುತ್ತಿದೆ.

ಕಳೆದ ವರ್ಷ  128GB ಸ್ಟೋರೇಜ್ ಆಯ್ಕೆಗೆ ಐಫೋನ್​ ಎಸ್​ಇ ರೂ. 30,999 ಕ್ಕೆ ಮಾರಾಟ ಮಾಡಿತ್ತು. ಅಂತೆಯೇ 256GB ಆಯ್ಕೆಯ ಬೆಲೆ  40,999 ಆಗಿತ್ತು. ಇದೀಗ ಫ್ಲಿಪ್‌ಕಾರ್ಟ್ ಕಡಿಮೆ ಬೆಲೆ ಸೇಲ್​ ಮಾಡುತ್ತಿದೆ. ಅದರ ಜೊತೆಗೆ ಕರ್ಟೈನ್ ರೈಸರ್‌ನ ಒಂದು ಭಾಗವಾಗಿ ಆಯ್ದ ಸ್ಮಾರ್ಟ್‌ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳ ಮೇಲೂ ಕೊಡುಗೆಗಳನ್ನು ನೀಡಿದೆ. ಗಮನಾರ್ಹವಾಗಿ, ಗ್ರಾಹಕರು ಕೆಲವು ಮಾರಾಟದ ಕೊಡುಗೆಗಳನ್ನು ಪಡೆಯುವ ಮೂಲಕ ಐಫೋನ್ ಎಸ್‌ಇ ಅನ್ನು ಕಡಿಮೆ ಬೆಲೆಗೆ ಕೊಂಡೊಯ್ಯಬಹುದಾಗಿದೆ.

ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 5,000 ರೂ.ಗಿಂತ ಹೆಚ್ಚಿನ ಆರ್ಡರ್‌ಗಳ ಮೇಲೆ 1,500 ರೂಗಳವರೆಗೆ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಮತ್ತೊಂದೆಡೆ, ಅದೇ ಬ್ಯಾಂಕುಗಳ ಡೆಬಿಟ್ ಕಾರ್ಡ್ ಬಳಕೆದಾರರು 1,000 ರೂಪಾಯಿಗಳವರೆಗೆ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಒಂದು ವೇಳೆ ಬಳಕೆದಾರರು ತಮ್ಮ ಹಳೆಯ ಫೋನ್‌ಗಳನ್ನು ಟ್ರೇಡ್ ಮಾಡಲು ಬಯಸಿದರೆ, ಫ್ಲಿಪ್‌ಕಾರ್ಟ್ ರೂ 15,000 ವರೆಗಿನ ವಿನಿಮಯ ಕೊಡುಗೆಯನ್ನು ನೀಡುತ್ತದೆ.



ಸರಿಯಾಗಿ ಕಾರ್ಯನಿರ್ವಹಿಸುವ ಐಫೋನ್ 7 ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸರಿಸುಮಾರು 6,000 ರೂಪಾಯಿಗಳನ್ನು ನೀಡಲಿದೆ. ಇದು ಐಫೋನ್ ಎಸ್‌ಇ ಬೆಲೆಯನ್ನು ಹೆಚ್ಚುವರಿ ಬ್ಯಾಂಕ್ ಆಫರ್‌ನೊಂದಿಗೆ ರೂ 18,499 ಕ್ಕೆ ಇಳಿಸುತ್ತದೆ. ವಿನಿಮಯ ಕೊಡುಗೆಗಳಲ್ಲಿ ವಿಭಿನ್ನ ಫೋನ್‌ಗಳು ವಿಭಿನ್ನ ಮೌಲ್ಯಗಳನ್ನು ಹೊಂದಿರುತ್ತವೆ ಮತ್ತು ಐಒಎಸ್ ಚಾಲನೆಯಲ್ಲಿರುವ ಸಾಧನಗಳು ಸಾಮಾನ್ಯವಾಗಿ ಮಾರಾಟದ ನಂತರ ಹೆಚ್ಚಿನ ಮೌಲ್ಯವನ್ನು ಪಡೆಯುತ್ತವೆ ಎಂಬುದನ್ನು ತಿಳಿಸಿದೆ.

ಐಫೋನ್ 7 ಕ್ಕಿಂತ ನಂತರದ ಫೋನ್​ಗಳ(ವಿಶೇಷತೆ, ಲಾಂಚ್ ಡೇಟ್ ಇತ್ಯಾದಿ)ಗಳನ್ನು ಒಳಗೊಂಡು ಎಕ್ಸ್ ಚೇಂಜ್ ಆಫರ್ ನಲ್ಲಿ ಹೆಚ್ಚು ಮೌಲ್ಯ ಪಡೆಯಬಹುದಾದ ಅವಕಾಶ ನೀಡುತ್ತಿದೆ.



ಆ್ಯಪಲ್ ಐಫೋನ್ ಎಸ್‌ಇ 4.7 ಇಂಚಿನ ರೆಟಿನಾ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಜೊತೆಗೆ ಡಾಲ್ಬಿ ವಿಷನ್ ಮತ್ತು HDR10ನೊಂದಿಗೆ ಬರುತ್ತದೆ.  ಆ್ಯಪಲ್ A13 ಬಯೋನಿಕ್ ಚಿಪ್ ಅನ್ನು ಅಳವಡಿತ್ತಾ ಬಂದಿದೆ. ಇದು ಆ್ಯಪಲ್ ಐಫೋನ್ 11 ಲೈನ್‌ಅಪ್‌ಗೆ ಶಕ್ತಿಯನ್ನು ನೀಡುತ್ತದೆ.


ಬಿಗ್​ ಬಿಲಿಯನ್​ ಡೇಸ್​ ಸೇಲ್​ ದಿನಾಂಕ ಬದಲಾಯಿಸಿದ ಫ್ಲಿಪ್​ಕಾರ್ಟ್​

Flipkart Big Billion Days ಸೇಲ್ ದಿನಾಂಕವನ್ನ ಬದಲಾಯಿಸಿಕೊಂಡಿದೆ. ಆ  ಮೂಲಕ ಅಮೆಜಾನ್​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ಗೆ ಪೈಪೋಟಿ ನೀಡಲು ಮುಂದಾಗಿದೆ. ಗ್ರಾಹಕರು ಎದುರು ನೋಡುತ್ತಿದ್ದ ಫ್ಲಿಪ್​ಕಾರ್ಟ್​ ಇ -ಕಾಮರ್ಸ್​ ಮಳಿಗೆಯ ಆಕರ್ಷಕ ಸೇಲ್​ ಅಕ್ಟೋಬರ್​ 7 ರಿಂದ 12ರವರೆಗೆ ನಡೆಸುವ ಪ್ಲಾನ್​ ಹಾಕಿಕೊಂಡಿತ್ತು . 6 ದಿನಗಳ ಕಾಲ ಈ ಸೇಲ್​ ನಡೆಸುವ ಯೋಜನೆಯಿತ್ತು. ಆದರೆ ಅಮೆಜಾನ್​ ತನ್ನ ಗ್ರೇಟ್ ಇಂಡಿಯನ್​ ಫೆಸ್ಟಿವಲ್​ ಸೇಲ್​ ದಿನಾಂಕವನ್ನ ಅಕ್ಟೋಬರ್​  4ರ ಬದಲು 3ರಂದು ನಡೆಸಲು ಮುಂದಾಗಿದೆ. ಇದನ್ನು ಗಮನಿಸಿದ ಪ್ಲಿಪ್​ಕಾರ್ಟ್​ ಕೂಡ ಸೇಲ್​ ದಿನಾಂಕ ಬದಲಾಯಿಸಿಕೊಂಡಿದ್ದು, ಅಕ್ಟೋಬರ್​ 3 ರಿಂದ ಪ್ರಾರಂಭವಾಗಿ 10ರವರೆಗೆ ನಡೆಸಲಿದೆ