ಅಮೆಜಾನ್ ಸೇಲ್‌: ಕಡಿಮೆ ಬೆಲೆಯಲ್ಲಿ ಬೆಸ್ಟ್ ಸ್ಮಾರ್ಟ್‌ವಾಚ್‌ ಖರೀದಿಗೆ ಸುಸಮಯ!

04-10-21 02:41 pm       Gizbot, Mantesh   ಡಿಜಿಟಲ್ ಟೆಕ್

ಅಮೆಜಾನ್ ತಾಣವು ಇದೇ ಅಕ್ಟೋಬರ್ 3ರಂದು ಪ್ರಾರಂಭ ಮಾಡಿರುವ 'ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2021' ಭರ್ಜರಿ ರಿಯಾಯಿತಿಗಳಿಂದ ಗಮನ ಸೆಳೆದಿದೆ. ಸ್ಮಾರ್ಟ್‌ ಡಿವೈಸ್‌ಗಳಿಗೂ ಆಕರ್ಷಕ ಆಫರ್ ನೀಡಲಾಗಿದೆ. ಮುಖ್ಯವಾಗಿ ಸ್ಮಾರ್ಟ್‌ವಾಚ್ ಡಿವೈಸ್‌ಗಳು ದೊಡ್ಡ ರಿಯಾಯಿತಿ ಪಡೆದಿದ್ದು, ಗ್ರಾಹಕರನ್ನು ಅಟ್ರ್ಯಾಕ್ಟ್‌ ಮಾಡಿವೆ.

ಪ್ರಸ್ತುತ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಇ-ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್‌ಫಾರ್ಮ್ ಆನ್‌ಲೈನ್ ಶಾಪಿಂಗ್ ಗ್ರಾಹಕರನ್ನು ಸೆಳೆಯಲು ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತದೆ. ಮುಖ್ಯವಾಗಿ ಹಬ್ಬದ ದಿನಗಳು ಹಾಗೂ ವಿಶೇಷ ದಿನಗಳ ಸಂದರ್ಭಗಳಲ್ಲಿ ಹೆಚ್ಚಿನ ಡಿಸ್ಕೌಂಟ್‌ನ ಸೇಲ್ ಮೇಳಗಳನ್ನು ಪ್ರಾರಂಭಿಸುತ್ತದೆ. ಅದೇ ರೀತಿ ಈಗ ಸಾಲು ಸಾಲು ಹಬ್ಬದ ಪ್ರಯುಕ್ತ ಅಮೆಜಾನ್ ಇ ಕಾಮರ್ಸ್‌ ತಾಣವು ಗ್ರೇಟ್ ಇಂಡಿಯನ್ ಸೇಲ್ 2021 ಶುರು ಮಾಡಿದೆ.

ಹೌದು, ಅಮೆಜಾನ್ ತಾಣವು ಇದೇ ಅಕ್ಟೋಬರ್ 3ರಂದು ಪ್ರಾರಂಭ ಮಾಡಿರುವ 'ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2021' ಭರ್ಜರಿ ರಿಯಾಯಿತಿಗಳಿಂದ ಗಮನ ಸೆಳೆದಿದೆ. ಈ ಸೇಲ್‌ನಲ್ಲಿ ಗ್ಯಾಡ್ಜೆಟ್‌ ಉತ್ಪ್ನಗಳಿಗೆ ಸ್ಪೆಷಲ್ ಕೊಡುಗೆಗಳು, ರಿಯಾಯಿತಿಗಳು ಲಭ್ಯ ಇವೆ. ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು ಹಾಗೂ ಸ್ಮಾರ್ಟ್‌ವಾಚ್‌ಗಳು ಸೇರಿದಂತೆ ಇತರೆ ಕೆಲವು ಸ್ಮಾರ್ಟ್‌ ಡಿವೈಸ್‌ಗಳಿಗೂ ಆಕರ್ಷಕ ಆಫರ್ ನೀಡಲಾಗಿದೆ. ಮುಖ್ಯವಾಗಿ ಸ್ಮಾರ್ಟ್‌ವಾಚ್ ಡಿವೈಸ್‌ಗಳು ದೊಡ್ಡ ರಿಯಾಯಿತಿ ಪಡೆದಿದ್ದು, ಗ್ರಾಹಕರನ್ನು ಅಟ್ರ್ಯಾಕ್ಟ್‌ ಮಾಡಿವೆ.

ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಸ್ಮಾರ್ಟ್‌ವಾಚ್‌ಗಳಿಗೆ ಸುಮಾರು 60% ವರೆಗೂ ರಿಯಾಯಿತಿ ತಿಳಿಸಲಾಗಿದೆ. ನಾಯಿಸ್, ಬೋಟ್, ರಿಯಲ್‌ಮಿ, ಮಿ ಕಂಪನಿಯ ಸ್ಮಾರ್ಟ್‌ವಾಚ್‌ಗಳು ಆಕರ್ಷಕ ರಿಯಾಯಿತಿ ದರದಲ್ಲಿ ಸಿಗಲಿವೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದಲೂ ಇನ್‌ಸ್ಟಂಟ್ ರಿಯಾಯಿತಿ ಸಿಗಲಿದೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಬೆಸ್ಟ್‌ ಡಿಸ್ಕೌಂಟ್‌ ಪಡೆದ ಸ್ಮಾರ್ಟ್‌ವಾಚ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನಾಯಿಸ್‌ ಕಲರ್‌ಫಿಟ್‌ ಪ್ರೊ 3

ನಾಯಿಸ್‌ ಕಲರ್‌ಫಿಟ್‌ ಪ್ರೊ 3 ಈ ಸ್ಮಾರ್ಟ್‌ ವಾಚ್ ಹೃದಯ ಬಡಿತ ಮತ್ತು ಎಸ್‌ಪಿಒ 2 ಮಾನಿಟರ್ ಮತ್ತು 1.55 ಇಂಚಿನ (320 x 360 ಪಿಕ್ಸೆಲ್‌ಗಳು) ಎಲ್‌ಸಿಡಿ ಪರದೆಯನ್ನು ಹೊಂದಿದೆ. ನೀರು-ನಿರೋಧಕ ಸ್ಮಾರ್ಟ್ ವಾಚ್ 14 ವಿಭಿನ್ನ ಕ್ರೀಡಾ ವಿಧಾನಗಳನ್ನು ನೀಡುತ್ತದೆ ಮತ್ತು ಇದು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ಹೊಂದಿಕೊಳ್ಳುತ್ತದೆ. ಶಬ್ದ ಕಲರ್ ಫಿಟ್ ಪ್ರೊ 3 ಕಸ್ಟಮೈಸ್ ಮಾಡಬಹುದಾದ ಮತ್ತು ಕ್ಲೌಡ್-ಆಧಾರಿತ ವಾಚ್ ಮುಖಗಳನ್ನು ನೀಡುತ್ತದೆ ಮತ್ತು ಸ್ಲೀಪ್ ಟ್ರ್ಯಾಕಿಂಗ್ ಮತ್ತು ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಧರಿಸಬಹುದಾದ ಮನೆಗಳು 210 mAh ಬ್ಯಾಟರಿಯನ್ನು ಒಂದೇ ಚಾರ್ಜ್‌ನಲ್ಲಿ 10 ದಿನಗಳ ಬ್ಯಾಟರಿ ಬ್ಯಾಕಪ್ ನೀಡುವ ಭರವಸೆ ನೀಡಿದೆ. ಬೆಲೆ 3,499ರೂ. ಆಗಿದೆ.ಅಮಾಜ್‌ಫಿಟ್ ಬಿಪ್ ಯು ಪ್ರೊ

ಈ ಸ್ಮಾರ್ಟ್‌ವಾಚ್ 1.43 ಇಂಚಿನ ಲಾರ್ಜ್ ಹೆಚ್‌ಡಿ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಈ ಸ್ಕ್ರೀನ್ 320x302 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹೃದಯ ಬಡಿತ ಮಾನಿಟರ್, ಜಿಪಿಎಸ್‌ ಟ್ರಾಕಿಂಗ್, ಸ್ಲಿಪ್ ಮಾನಿಟರ್, ಫಿಟ್ನೆಸ್‌ ಟ್ರ್ಯಾಕರ್ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಅಲೆಕ್ಸ್‌ ವಾಯಿಸ್‌ ಅಸಿಸ್ಟಂಟ್‌ ಆಯ್ಕೆಯನ್ನು ಹೊಂದಿದ್ದು, 9 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಪಡೆದಿದೆ. ಇದರ ಬೆಲೆಯು 3,999ರೂ. ಆಗಿದೆ.ಬೋಟ್‌ ಎಕ್ಸ್‌ಟೆಂಡ್‌ ಸ್ಮಾರ್ಟ್‌ವಾಚ್

ಜನಪ್ರಿಯ ಬೋಟ್ ಕಂಪನಿಯ ಈ ಸ್ಮಾರ್ಟ್‌ವಾಚ್‌ ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. 1.69 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 14 ವಿಭಿನ್ನ ಸ್ಪೋರ್ಟ್ಸ್ ಮೋಡ್‌ಗಳ ಆಯ್ಕೆ ಪಡೆದಿದೆ. ಹಾರ್ಟ್‌ ಮಾನಿಟರ್, ಎಸ್‌ಪಿಒ 2 ಮಾನಿಟರಿಂಗ್ , ಸ್ಲಿಪ್ ಮಾನಿಟರಿಂಗ್ ಸೌಲಭ್ಯಗಳನ್ನು ಒಳಗೊಂಡಿದೆ. ಹಾಗೆಯೇ ಅಲೆಕ್ಸಾ ವಾಯಿಸ್‌ ಅಸಿಸ್ಟಂಟ್ ಆಯ್ಕೆಯನ್ನು ಪಡೆದಿದ್ದು, ವಾಟರ್ ರೆಸಿಸ್ಟನ್ಸ್‌ ಸೌಲಭ್ಯವನ್ನು ಇದು ಹೊಂದಿದೆ. ಇದರ ಬೆಲೆಯು 2,199ರೂ. ಆಗಿದೆ.ಫೈರ್ ಬೋಲ್ಟ್ ಸ್ಮಾರ್ಟ್‌ ವಾಚ್

ಈ ಸ್ಮಾರ್ಟ್‌ ವಾಚ್ ಬಜೆಟ್ ದರದಲ್ಲಿ ಗ್ರಾಹಕರನ್ನು ಸೆಳೆದಿದೆ. ಇದು 1.4 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯು 400nits ಬ್ರೈಟ್ನೆಸ್‌ ಸಾಮರ್ಥ್ಯವನ್ನು ಪಡೆದಿದೆ. 240*240 ಸಾಮರ್ಥ್ಯ ಪಿಕ್ಸಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದರೊಂದಿಗೆ 8 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಪವರ್‌ ಅನ್ನು ಪಡೆದಿದೆ. ಹಾಗೆಯೇ ಎಸ್‌ಪಿಓ2 ಟ್ರ್ಯಾಕಿಂಗ್, ಹಾರ್ಟ್‌ ರೇಟ್ ಟ್ರ್ಯಾಕಿಂಗ್ ಆಯ್ಕೆಗಳು ಇವೆ. ಇನ್ನು ಈ ವಾಚ್ 7 ವರ್ಕ್‌ಔಟ್‌ ಮೋಡ್‌ಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ ವಾಕಿಂಗ್, ರನ್ನಿಂಗ್, ಸ್ಕಿಪಿಂಗ್, ಸೈಕ್ಲಿಂಗ್, ಬಾಸ್ಕೆಟ್ ಬಾಲ್, ಫುಟ್ಬಾಲ್ ಮತ್ತು ಬ್ಯಾಡ್ಮಿಂಟನ್ ಆಗಿವೆ.