ನೀವು ಜಿಯೋಫೋನ್‌ ನೆಕ್ಸ್ಟ್‌ ಖರೀದಿಸಬೇಕೆ?..ಹಾಗಿದ್ರೆ ಇಲ್ಲಿ ಗಮನಿಸಿ!

25-11-21 03:29 pm       Source: Gizbot Kannada   ಡಿಜಿಟಲ್ ಟೆಕ್

ರಿಲಯನ್ಸ್ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಜಿಯೋಫೋನ್‌ ನೆಕ್ಸ್ಟ್‌ ಈಗಾಗಲೇ ಗ್ರಾಹಕರಿಗೆ ಗಮನ ಸೆಳೆದಿದೆ.

ರಿಲಯನ್ಸ್ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಜಿಯೋಫೋನ್‌ ನೆಕ್ಸ್ಟ್‌ ಈಗಾಗಲೇ ಗ್ರಾಹಕರಿಗೆ ಗಮನ ಸೆಳೆದಿದೆ. ರಿಲಯನ್ಸ್ ಟೆಲಿಕಾಂ ಟೆಕ್ ದಿಗ್ಗಜ ಗೂಗಲ್ ಸಹಯೋಗದೊಂದಿಗೆ ಜಿಯೋಫೋನ್‌ ನೆಕ್ಸ್ಟ್ ಸ್ಮಾರ್ಟ್‌ಫೋನ್‌ ಅನ್ನು ಅಭಿವೃದ್ಧಿಪಡಿಸಿರುವುದು ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. ಎಂಟ್ರಿ ಲೆವೆಲ್ ಮಾದರಿಯಲ್ಲಿರುವ ಈ ಫೋನ್ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ನೀವೇನಾದರೂ ಜಿಯೋಫೋನ್‌ ನೆಕ್ಸ್ಟ್‌ ಖರೀದಿಸುವ ಯೋಚನೆ ಮಾಡಿದ್ದೀರಾ?..ಹಾಗಾದರೇ ಇಲ್ಲದೆ ಮಾಹಿತಿ.


ಇದೀಗ ರಿಲಯನ್ಸ್ ಡಿಜಿಟಲ್ ವೆಬ್‌ಸೈಟ್ ಮೂಲಕ ಜಿಯೋಫೋನ್‌ ನೆಕ್ಸ್ಟ್‌ ಅನ್ನು ಖರೀದಿಸಬಹುದಾಗಿದೆ. ಜಿಯೋಫೋನ್‌ ನೆಕ್ಸ್ಟ್‌ ಖರೀದಿಸಲು ಖರೀದಿದಾರರಿಗೆ ಇನ್ನು ಮುಂದೆ ಪೂರ್ವ-ನೋಂದಣಿ ಅಗತ್ಯವಿಲ್ಲ. ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆರ್ಡರ್‌ಗಳನ್ನು ಬುಕ್ ಮಾಡಬಹುದು. 2 GB RAM ಮತ್ತು 32 GB ಸ್ಟೋರೇಜ್ ಮಾದರಿಯ ಬೆಲೆ 6499ರೂ. ಆಗಿದೆ. ಹಾಗೆಯೇ ಈ ಫೋನ್ ನೀಲಿ ಮತ್ತು ಕಪ್ಪು ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ.
ಹಾಗೆಯೇ ಬ್ಯಾಂಕ್ ಕೊಡುಗೆಗಳ ಮೂಲಕ ಕೆಲವು ರಿಯಾಯಿತಿಗಳನ್ನು ಪಡೆಯಬಹುದು. ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಗ್ರಾಹಕರು ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿಯನ್ನು ಮತ್ತು ಅಮೇರಿಕನ್ ಎಕ್ಸ್‌ಪ್ರೆಸ್ ಕಾರ್ಡ್‌ಗಳಲ್ಲಿ ಶೇಕಡಾ 7.5 ರವರೆಗೆ ಪಡೆಯಬಹುದು. ಈ ಮೊದಲು ಜಿಯೋಫೋನ್‌ ನೆಕ್ಸ್ಟ್‌ ಖರೀದಿಸಲು ಗ್ರಾಹಕರು ಮುಂಗಡ ಬುಕಿಂಗ್ ಮಾಡಬೇಕಿತ್ತು. ಹಾಗಾದರೇ ಜಿಯೋಫೋನ್‌ ನೆಕ್ಸ್ಟ್‌ ಫೋನಿನ ಆಕರ್ಷಕ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.


1.ಜಿಯೋಫೋನ್‌ ನೆಕ್ಸ್ಟ್‌ ಫೀಚರ್ಸ್‌

ಜಿಯೋಫೋನ್‌ ನೆಕ್ಸ್ಟ್‌ 720×1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.45 ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಆಂಡ್ರಾಯ್ಡ್ 11 ಓಎಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಹಿಂಬದಿ ಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅದು 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ನಲ್ಲಿದೆ. ಅದೇ ರೀತಿ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. ಇದರೊಂದಿಗೆ ಈ ಫೋನ್ 3500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.

2. ವಾಯ್ಸ್ ಫಸ್ಟ್

ಸಾಮರ್ಥ್ಯಗಳು ಬಳಕೆದಾರರು ಸಾಧನದೊಂದಿಗೆ ಮಾತನಾಡುವ ಮೂಲಕ (ಆಪ್ ತೆರೆಯಿರಿ, ಸೆಟ್ಟಿಂಗ್‌ಗಳನ್ನು ನಿರ್ವಹಿಸಿ ಇತ್ಯಾದಿ) ಅದನ್ನು ನಿರ್ವಹಿಸಲು ಗೂಗಲ್ ಅಸಿಸ್ಟೆಂಟ್ ಸಹಾಯ ಮಾಡುತ್ತದೆ. ಬಳಕೆದಾರರು ತಮಗೆ ತಿಳಿದಿರುವ ಭಾಷೆಯಲ್ಲಿ ಮಾಹಿತಿ/ಕಂಟೆಂಟ್ ಅನ್ನು ಇಂಟರ್‌ನೆಟ್‌ನಿಂದ ಸುಲಭವಾಗಿ ಪಡೆಯಬಹುದು.

3. ಟ್ರಾನ್ಸ್‌ಲೇಟ್ ನೌ

ಟ್ರಾನ್ಸ್‌ಲೇಟ್ ನೌ ಸೌಲಭ್ಯವು ಯಾವುದೇ ಪರದೆಯನ್ನು ಭಾರತದ 10 ಜನಪ್ರಿಯ ಭಾಷೆಗಳ ಪೈಕಿ ತಮ್ಮ ಆಯ್ಕೆಯ ಭಾಷೆಗೆ ಅನುವಾದಿಸಿಕೊಳ್ಳಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಯಾವುದೇ ವಿಷಯವನ್ನು ಓದುವುದು ಸಾಧ್ಯವಾಗುತ್ತದೆ.

4. ಸುಲಭ ಮತ್ತು ಸ್ಮಾರ್ಟ್ ಕ್ಯಾಮೆರಾ

ಜಿಯೋಫೋನ್ ನೆಕ್ಸ್ಟ್‌ನಲ್ಲಿರುವ ಸ್ಮಾರ್ಟ್ ಮತ್ತು ಶಕ್ತಿಯುತ ಕ್ಯಾಮೆರಾ ಪೋರ್ಟ್ರೇಟ್ ಮೋಡ್‌ನಂತಹ ವಿವಿಧ ಫೋಟೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ, ಹಾಗೂ ಇದು ಮಸುಕಾದ ಹಿನ್ನೆಲೆಯಿರುವ ಉತ್ತಮ ಫೋಟೋಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ನೈಟ್ ಮೋಡ್ ನೆರವಾಗುತ್ತದೆ. ಭಾವನೆಗಳು ಮತ್ತು ಸಂಭ್ರಮಾಚರಣೆ ಯೊಂದಿಗೆ ತಮ್ಮ ಸೆಲ್ಫಿಗಳನ್ನು ಉತ್ತಮಗೊಳಿಸಲು ವಿಶಿಷ್ಟವಾದ ಭಾರತ-ಕೇಂದ್ರಿತ ಲೆನ್ಸ್‌ಗಳನ್ನೂ ಕ್ಯಾಮೆರಾ ಒಳಗೊಂಡಿದೆ.

5. ಲಕ್ಷಾಂತರ ಆಪ್‌ಗಳನ್ನು ಬಳಸುವ ಅವಕಾಶ

ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಎಲ್ಲ ಆಂಡ್ರಾಯ್ಡ್ ಆಪ್‌ಗಳನ್ನೂ ಈ ಸಾಧನವು ಬೆಂಬಲಿಸುತ್ತದೆ ಮತ್ತು ಆ ಮೂಲಕ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಲಕ್ಷಾಂತರ ಆಪ್‌ಗಳ ಪೈಕಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. ಅನೇಕ ಜಿಯೋ ಮತ್ತು ಗೂಗಲ್ ಆಪ್‌ಗಳ‌ನ್ನು ಈ ಸಾಧನದಲ್ಲಿ ಮುಂಚಿತವಾಗಿ ಲೋಡ್ ಮಾಡಲಾಗಿದೆ.


6. ಸ್ವಯಂಚಾಲಿತ ಫೀಚರ್ ಅಪ್‌ಡೇಟ್‌ಗಳು

ಹೊಸ ವೈಶಿಷ್ಟ್ಯಗಳು, ಕಸ್ಟಮೈಸೇಶನ್, ಭದ್ರತಾ ಅಪ್‌ಡೇಟ್‌ಗಳು ಹಾಗೂ ಇನ್ನೂ ಹೆಚ್ಚಿನದಕ್ಕಾಗಿ ಜಿಯೋಫೋನ್ ನೆಕ್ಸ್ಟ್‌ನಲ್ಲಿ ಓವರ್ ದಿ ಏರ್ ಅಪ್‌ಡೇಟ್ಸ್ ಬೆಂಬಲವಿದ್ದು, ಇದು ಕಾಲಕ್ರಮೇಣ ಫೋನ್ ಅನುಭವವನ್ನು ವರ್ಧಿಸುತ್ತಲೇ ಹೋಗುತ್ತದೆ.

7. ಸ್ನೇಹಿತರೊಂದಿಗೆ ಸುಲಭವಾಗಿ ಹಂಚಿಕೊಳ್ಳಿ

ಆಪ್‌ಗಳು, ಫೈಲ್‌ಗಳು, ಫೋಟೋಗಳು, ವೀಡಿಯೊಗಳು, ಹಾಡುಗಳು ಮತ್ತು ಇನ್ನೂ ಹೆಚ್ಚಿನದನ್ನು ಕುಟುಂಬದವರು ಮತ್ತು ಸ್ನೇಹಿತರೊಂದಿಗೆ, ಇಂಟರ್‌ನೆಟ್ ಇಲ್ಲದಿದ್ದರೂ ಸಹ, ನಿಯರ್‌ಬೈ ಶೇರ್ ವೈಶಿಷ್ಟ್ಯವನ್ನು ಬಳಸಿ ತ್ವರಿತವಾಗಿ ಹಂಚಿಕೊಳ್ಳಿ.

ವಿಶೇಷ ಲಾಕ್ ಫೀಚರ್ ಜಿಯೋಫೋನ್‌ ಡಿವೈಸ್‌ ಲಾಕ್ ಫೀಚರ್ ಆಯ್ಕೆ ಹೊಂದಿಗೆ. EMI ಆಯ್ಕೆ ಮೂಲಕ ಫೋನ್‌ ಖರೀದಿಸಿದ ಬಳಕೆದಾರ ಒಂದು ವೇಳೆ ಇಎಮ್‌ಐ ಪಾವತಿ ಮಾಡಲು ವಿಫಲವಾದರೆ ಕಂಪನಿಯು ಸ್ಮಾರ್ಟ್‌ಫೋನ್ ಅನ್ನು ಲಾಕ್ ಮಾಡಬಹುದು ಎಂದು ಹೇಳಲಾಗುತ್ತಿದೆ.

ಜಿಯೋಫೋನ್‌ ನೆಕ್ಸ್ಟ್‌ ನಲ್ಲಿ ನೀಡಲಾದ ಮಾಹಿತಿ ಪ್ರಕಾರ, ನಿರ್ವಾಹಕರು ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಲಾದ ಅಪ್ಲಿಕೇಶನ್‌ಗಳ ಲಿಸ್ಟ್‌ ನೋಡಬಹುದು. ಅಂತೆಯೇ, ಅವರು ಇನ್‌ಸ್ಟಾಲ್ ಮಾಡಿದ ಅಪ್ಲಿಕೇಶನ್‌ಗಳು, ಸ್ಥಳ ಅನುಮತಿಗಳು, ಮೈಕ್ರೊಫೋನ್ ಅನುಮತಿಗಳು ಮತ್ತು ಕ್ಯಾಮರಾ ಅನುಮತಿಗಳಂತಹ ಅಂಶಗಳನ್ನು ಸಹ ನಿಯಂತ್ರಿಸಬಹುದು ಎನ್ನಲಾಗಿದೆ.

ಈ ರೀತಿಯ ತಂತ್ರಜ್ಞಾನ ಗಳನ್ನು ಕೆಲವು ಸ್ಮಾರ್ಟ್‌ಫೋನ್‌ ಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದನ್ನು ನೋಡಿದ್ದೇವೆ, ಅಲ್ಲಿ, ಸಾಧನವನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ನಿರ್ದಿಷ್ಟ ಮೊತ್ತವನ್ನು ಪಾವತಿಸ ಬೇಕಾಗುತ್ತದೆ. ಬಳಕೆದಾರರು ಪಾವತಿ ಮಾಡದಿದ್ದರೆ, ಸ್ಮಾರ್ಟ್‌ಫೋನ್‌ ಅನ್ನು ಲಾಕ್ ಮಾಡಲಾಗುತ್ತದೆ.

ಆಗ ಬಳಕೆದಾರರು ಬಳಿ ಇರುವ ಫೋನ್ ಕಾರ್ಯ ನಿರ್ವಹಿಸಲಾರದ ಸ್ಥಿತಿ ಹೊಂದಿತ್ತದೆ. ಏಕೆಂದರೆ ಹೆಚ್ಚಿನ ವೈಶಿಷ್ಟ್ಯ ಗಳನ್ನು ಲಾಕ್ ಮಾಡಲಾಗುತ್ತದೆ. ಮತ್ತೆ, ಯಾರಾದರೂ ಮಾಸಿಕ ಪಾವತಿಗಳನ್ನು ಮಾಡಲು ವಿಫಲವಾದರೆ ಮಾತ್ರ ಕಂಪನಿಯು ಇದನ್ನು ಮಾಡುತ್ತದೆ. ಒಮ್ಮೆ, ಬಳಕೆದಾರ ಬಾಕಿಯಿರುವ ಪಾವತಿ ಯನ್ನು ಮಾಡಿದರೆ, ಕಂಪನಿಯು ಯಾವುದೇ ಸಮಯದಲ್ಲಿ ಫೋನ್‌ ಅನ್ನು ಅನ್‌ಲಾಕ್ ಮಾಡುತ್ತದೆ ಎನ್ನಲಾಗಿದೆ.

jiophone next, recently launched by reliance, has already attracted attention to customers. one of the major highlights is the development of jiophone next smartphone in collaboration with reliance telecom tech giant google. modelled on entry level, the phone features many attractive features. have you thought of buying jiophone next?.. without that, information.