ಬ್ರೇಕಿಂಗ್ ನ್ಯೂಸ್
13-02-22 11:00 pm Source: Vijayakarnataka ಡಿಜಿಟಲ್ ಟೆಕ್
ಸ್ಯಾಮಸಂಗ್ ಹಾಗೂ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಸಿಗುತ್ತಿರುವ ಕಾಲದಲ್ಲೇ ರೆಡ್ಮಿ ಕೂಡ ಅಖಾಡಕ್ಕೆ ಇಳಿದಿತ್ತು. ಗುಣಮಟ್ಟದೊಂದಿಗೆ ಕಡಿಮೆ ದರ ಇದರ ವಿಶೇಷತೆಯಾಗಿದೆ. 2014ರಲ್ಲಿ ರೆಡ್ಮಿ ನೋಟ್ ಸಿರೀಸ್ ಮೊದಲ ಮಾಡೆಲ್ ಅನ್ನು ಪರಿಚಯಿಸಿತು. ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ಡಿವೈಸ್ ಅನ್ನು ಶವೋಮಿ ಆಫರ್ ರೂಪದಲ್ಲಿ ನೀಡಿದೆ. ಇದನ್ನು ಗ್ರಾಹಕರು ಕೂಡ ಎರಡೂ ಕೈಗಳಿಂದ ಬಿಗಿದಪ್ಪಿಕೊಂಡರು. ಈಗ ಕ್ಷಿಯೋಮಿ ತನ್ನ ಹೊಸ ಮಾಡೆಲ್ ಅನ್ನು ಪರಿಚಯಿಸಿದೆ. ಅದು ರೆಡ್ಮಿ ನೋಟ್ 9 ಪ್ರೊ. ಹೊಸ ಡಿಸೈನ್ ಮತ್ತು ಸೂಪರ್ ಹಾರ್ಡ್‌ವೇರ್‌ನಲ್ಲಿ ಲಭ್ಯ. ಬೆಲೆ ಕೂಡ 12999 ರೂ.ನಿಂದ ಆರಂಭವಾಗುವುದು.
ಗುಣಮಟ್ಟದಲ್ಲಿ ಈ ಮಾಡೆಲ್ ಉತ್ತಮ. ಕಾಣಲು ಕೂಡ ಸುಂದರ. ಇದರ ಸ್ಕೇರ್ ಕ್ಯಾಮೆರಾ ಮಾಡ್ಯೂಲ್, ‘ಡಿಸ್ನಿ-ಪಿಕ್ಸರ್ ರೊಬಾಟ್ ವಾಲ್ ಇ’ ಯನ್ನು ಹೋಲುತ್ತದೆ. ಈ ಸೆಟ್‌ನ ರೀರ್ ಸೈಡ್ ಗ್ಲಾಸ್ ಸ್ಮೂಥ್ ಮತ್ತು ಪ್ಲೇನ್ ಆಗಿದ್ದು, ಪ್ರೀಮಿಯಮ್ ಹ್ಯಾಂಡ್ ಸೆಟ್‌ನ ಅನುಭವ ನೀಡುವುದು. ಸಾಫ್ಟ್ ಸಿಲಿಕಾನ್ ಶೆಲ್ ಕವರ್ ಮತ್ತು ಹೊರಚಾಚುವಿಕೆ ಆಕಾರದಲ್ಲಿದೆ. ಆಕಸ್ಮಾತ್ ಸಂಭವಿಸುವ ಘಟನೆಗಳಿಂದ ಡಿವೈಸನ್ನು ಭದ್ರಗೊಳಿಸಲು, ಫಿಂಗರ್ ಪ್ರಿಂಟ್ ಸೌಲಭ್ಯ ನೀಡಿದೆ. ಈ ಮಾಡೆಲ್‌ನಲ್ಲಿ ಪಿ2ಐ ಕೋಟ್ ನೀಡಲಾಗಿದೆ. ಇದು ನೀರಿನಲ್ಲಿ ಬಿದ್ದು ಆಗುವ ಹಾನಿಗಳಿಂದ ಹಾಗೂ ಮಳೆಯಿಂದಲೂ ಕಾಪಾಡುವುದು.
ವಿನ್ಯಾಸ
ಈ ಮಾಡೆಲ್‌ನ ಎದುರು ಭಾಗ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ಕವರ್ ಆಗಿದೆ ಮತ್ತು ಇದು ಕವಚದಂತೆ ಕಾರ್ಯ ನಿರ್ವಹಿಸುವುದು. ಮೊಬೈಲಿಗೆ (ಕೀಗಳು ಮತ್ತು ಪೆನ್ನುಗಳಿಂದ) ಸ್ಕ್ರಾಚ್ ಆಗದಂತೆ ತಡೆಗಟ್ಟುವುದು. ತನ್ನ ಹಿಂದಿನ ಸೆಟ್’ಗೆ ಹೋಲಿಸಿದರೆ, 9 ಪ್ರೊ ಮಾಡೆಲ್ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ. ಇದು ಪವರ್ ಬಟನ್’ಗಿಂತಲೂ ಎರಡು ಪಟ್ಟು ಹೆಚ್ಚು ಗಾತ್ರದ್ದು. ಬಲಬದಿಯ ಚಾಸಿಸ್ ()ನ ನಡುಭಾಗದಿಂದ ಸ್ವಲ್ಪ ಮೇಲಕ್ಕಿದೆ. ಕೈಬೆರಳಿನಿಂದ ಇದನ್ನು ತಲುಪಲು ಸುಲಭ ಮತ್ತು ಮುಖ್ಯವಾಗಿ, ಪೋನನ್ನು ಅನ್’ಲಾಕ್ ಮಾಡಲು ಮತ್ತು ಮಾಡೆಲ್ ಅನ್ನು ಗುರುತಿಸಲು ಇದರ ಬಯೋಮ್ಯಾಟ್ರಿಕ್ ಸೆನ್ಸಾರ್ ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ.
ಮೊಬೈಲ್ ಆಫ್/ಆನ್ ಮಾಡುವ ಫಿಂಗರ್ ಪ್ರಿಂಟ್ ಸೆನ್ಸಾರ್‌ನ ಮೇಲ್ಭಾಗದಲ್ಲಿ ವಾಲ್ಯೂಮ್ ರಾಕ್ಕರ್ ಇದೆ. ಹೀಗಾಗಿ, ಇದಕ್ಕೆ ಉತ್ತಮ ಸ್ಪರ್ಶ ಜ್ಞಾನವಿದೆ. ಮೊಬೈಲಿನ ಎಡಭಾಗದಲ್ಲಿ ಎರಡು ನ್ಯಾನೋ ಸಿಮ್ ಹಾಕುವ 2+1 ಸ್ಲಾಟ್ ಇದೆ. ಹಾಗಾಗಿ, ಇಲ್ಲೇ ಮೈಕ್ರೋ ಎಸ್‌ಡಿ ಕಾರ್ಡ್ ವ್ಯವಸ್ಥೆ ಮಾಡಲಾಗಿದೆ. ಇದು ಗ್ರಾಹಕರು ಎರಡನೇ ಸಿಮ್ ಮತ್ತು ಹೆಚ್ಚಿನ ಸ್ಟೋರೇಜ್’ಗಾಗಿ ಕಾಂಪ್ರೋಮೈಜ್ ಆಗುವುದನ್ನು ತಪ್ಪಿಸುವುದು. ಮೇಲ್ಭಾಗದಲ್ಲಿ ಟ್ರೇಡ್’ಮಾರ್ಕ್ ಐಆರ್ ಬ್ಲಾಸ್ಟರ್ ಹಾಗೂ ಮೈಕ್ ಪಕ್ಕದಲ್ಲಿದೆ. ಬೇಸ್ ಭಾಗದಲ್ಲಿ ‘ಟೈಪ್ ಸಿ’ ಪೋರ್ಟ್, ಒಂದು ಮೈಕ್, ಸಿಂಗಲ್ ಗ್ರಿಲ್ ಸ್ಪೀಕರ್ ಮತ್ತು 3.5 ಮಿಮೀ ಆಡಿಯೋ ಜ್ಯಾಕ್ ವ್ಯವಸ್ಥೆ ಇದೆ.
ಡಿಸ್‌ಪ್ಲೇ ಸೈಜ್
6.67 ಇಂಚು, 2400*1080 ಪಿಕ್ಸೆಲ್ ಎಲ್’ಸಿಡಿ ಡಿಸ್’ಪ್ಲೇ. 20:9 ಅಸ್ಪೆಕ್ಟ್ ರೇಶಿಯೋ ತುಂಬಾನೇ ಬ್ರೈಟ್‌ನೆಸ್ ನೀಡುವ ಮತ್ತು ಮಲ್ಟಿಮೀಡಿಯಾ ಕಂಟೆಂಟಿನ ನೈಸರ್ಗಿಕ ಬಣ್ಣವನ್ನು ಹೊಂದಿದೆ. ನೇರ ಸೂರ್ಯನ ಬೆಳಕಿನಲ್ಲಿ ಮೊಬೈಲ್ ವೀಕ್ಷಿಸುವಾಗ ಯಾವುದೇ ಮೇಲೆ ಓದಲು ಅಥವಾ ಗೇಮ್ ಆಡಲು ಯಾವುದೇ ಅಡ್ಡಿ-ಆತಂಕ ಕಂಡಿಲ್ಲ.
ಕಾರ್ಯನಿರ್ವಹಣೆ
8nm ಕ್ಲಾಸ್ -64 ಬಿಟ್ 2.3 ಜಿಹೆಚ್’ಜೆಡ್ ಕ್ವಾಲ್ಕಮ್ ಸ್ನ್ಯಾಪ್ ಡ್ರ್ಯಾಗನ್ 720ಜಿ ಓಕ್ಟಾ ಕೋರ್ ಸಿಪಿಯು ಸ್ನ್ಯಾಪ್ ಡ್ರ್ಯಾಗನ್ ಎಲೈಟ್ ಗೇಮಿಂಗ್ ಆ್ಯಂಡ್ರೋ 618 ಗ್ರಾಫಿಕ್ಸ್ ಎಂಜಿನ್ ಅಳವಡಿಸಲಾಗಿದೆ. 4ಜಿಬಿ/6 ಜಿಬಿ ರಾಮ್, 64ಜಿಬಿ/128 ಜಿಬಿ ಸ್ಟೋರೇಜ್ ಮತ್ತು ಅಂಡ್ರಾಯ್ಡ್ 10 ಆಧಾರಿತ ಎಂಐಯುಐ11 ಇದೆ. ಕರೆ ಮಾಡುವಾಗ/ಸ್ವೀಕರಿಸುವಾಗ ಉತ್ತಮ ನಿರ್ವಹಣೆ ನೀಡುವುದು. ಒಂದಕ್ಕಿಂತ ಹೆಚ್ಚು ಆ್ಯಪ್ಸ್ ಬಳಸುವುದು. ಗೇಮ್ ಆಡುವಾಗ, ವೇಗ ನಿಧಾನವಾಗುವುದಿಲ್ಲ. ಆದರೆ ತುಸು ಬಿಸಿಯಾಗುವುದು.
5020mAh ನಾನ್ ರಿಮೂವೇಬಲ್ ಲಿಥಿಯಂ ಪಾಲಿಮರ್ ಬ್ಯಾಟರಿ ಅಳವಡಿಸಲಾಗಿದೆ. ಹೆಚ್ಚ ಬಳಸಿದರೂ, ಒಂದಕ್ಕಿಂತ ಹೆಚ್ಚು ದಿನ ಬಾಳಿಕೆ ಬರುವುದು. 18 ವ್ಯಾಟ್’ನ ಚಾರ್ಜರ್ ಕೂಡ ಲಭ್ಯವಿದೆ. ಇದರಲ್ಲಿ ನಾವಿಕ್ ಚಿಪ್‌ಸೆಟ್ ಅಳವಡಿಸಲಾಗಿದೆ. ಇದು ಅಮೆರಿಕದ ಜಿಪಿಎಸ್ ಗಿಂತಲೂ ಉತ್ತಮ ನಿರ್ವಹಣೆ ನೀಡುತ್ತದೆ. ಜಿಪಿಎಸ್ ಗಿಂತಲೂ 5 ರಿಂದ 10 ಮೀಟರಿನಷ್ಟು, ಹತ್ತಿರದ ದೃಶ್ಯಗಳನ್ನು ಸ್ಪಷ್ಟವಾಗಿ ಕಾಣಬಹುದು. ಅಂದರೆ, 20 ಮೀಟರ್ ದೂರದ್ದು. ನಿರಂತರ ಪ್ರಯಾಣದಲ್ಲಿ ಇರುವವರಿಗೆ ಮೆಚ್ಚಿನ ಸೆಟ್ ಇದು.
ಕ್ಯಾಮರಾ
ಫೋಟೋಗ್ರಫಿಗೆ ಗುಣಮಟ್ಟದ ಹಾರ್ಡ್‌ವೇರ್ ಸಾಧನ ಅಳವಡಿಸಲಾಗಿದೆ. 48 ಎಂಪಿ + 8 ಎಂಪಿ + 5 ಎಂಪಿ, 2 ಸೆ.ಮೀ ಮ್ಯಾಕ್ರೋ ಲೆನ್ಸ್ + 2 ಎಂಪಿ ಡೆಪ್ತ್ ಸೆನ್ಸಾರ್, 4ಕೆ ವೀಡಿಯೋ ರೆಕಾರ್ಡಿಂಗ್ (30 ಎಫ್‌ಪಿಎಸ್). ವೈಡ್ ಆ್ಯಂಗಲ್ ಫೋಟೋ ಶೂಟ್ ಉತ್ತಮವಾಗಿದೆ. ಹಳೆಯ ಸ್ಮಾರಕ ಕಟ್ಟಡಗಳ ಫೋಟೋಗ್ರಫಿ ಮಾಡಿದರೆ, ಹೆಚ್ಚಿನ ಮಾಹಿತಿ ಕಲೆ ಹಾಕಲು ಅನುಕೂಲವಾಗುವುದು.
ಕ್ಯಾಮರಾದ ಸಾಫ್ಟ್‌ವೇರ್ ಮತ್ತು ಹಾರ್ಟ್‌ವೇರ್ ವೈಶಿಷ್ಟ್ಯತೆ ಏನೆಂದರೆ, ಕ್ಯಾಮೆರಾದ ಸೆನ್ಸಾರ್, ಫೊರೆಗ್ರೌಂಡ್ ಹಾಗೂ ಬ್ಯಾಕ್‌ಗ್ರೌಂಡ್ ಅನ್ನು ವಿಭಜಿಸುವುದು. ರಾತ್ರಿ ವೇಳೆಯಲ್ಲಿ ಉತ್ತಮ ಫೋಟೋ ಶೂಟ್ ಮಾಡಬಹುದು. 25 ಸಾವಿರ ರೂಪಾಯಿಗೆ ಖರೀದಿಸಲಾಗುವ ಮೊಬೈಲ್ ಕ್ಯಾಮೆರಾದ ಗುಣಮಟ್ಟವನ್ನು ಸಮೀಕರಿಸುವುದು.
ಸ್ಲೋ ಮೋಷನ್ ವಿಡಿಯೋವನ್ನು ತೆಗೆಯುವುದು. ಅದು 960 ಎಫ್‌ಪಿಎಸ್, 240 ಎಫ್‌ಪಿಎಸ್ ಹಾಗೂ 120 ಎಫ್‌ಪಿಎಸ್. 16 ಎಂಪಿ ಕ್ಯಾಮೆರಾವು ಸೆಲ್ಫಿಗೆ ಹೇಳಿ ಮಾಡಿಸಿದಂತಿದೆ. ಎಡಿಟಿಂಗ್ ಸಾಧನಗಳನ್ನು ನೀಡಲಾಗಿದೆ. ಫೊಟೋಗಳ ಬ್ಯಾಕ್‌ಗ್ರೌಂಡನ್ನು ಬದಲಾಯಿಸಬಹುದು. ಕೇವಲ ಫೋಟೋ ತೆಗೆದು, ಗ್ಯಾಲರಿಗೆ ಹೋದಾಗ, ಅಲ್ಲಿ ವಿಭಿನ್ನ ಶೈಲಿಗಳನ್ನು ಕಾಣುವಿರಿ. ಅಂದರೆ, ಲ್ಯಾಂಡ್‌ಸ್ಕೇಪ್, ಪೋರ್ಟ್‌ರೇಟ್ ಮುಂತಾದವು.
ಬೆಲೆ ಎಷ್ಟಿದೆ?
15 ಸಾವಿರ ರೂಪಾಯಿಗೆ ಈ ಫೋನ್ ಖರೀದಿಗೆ ಲಭ್ಯವಿದೆ. ಈ ಫೋನ್ ಎರಡು ಮಾಡೆಲ್‌ನಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ. 4 ಜಿಬಿ RAM ಹಾಗೂ 64 ಜಿಬಿ ಸ್ಟೋರೇಜ್ ಸಾಮರ್ಥ್ಯವುಳ್ಳ ಮತ್ತು 6 ಜಿಬಿ ರಾಮ್ ಹಾಗೂ 128 ಜಿಬಿ ಸ್ಟೋರೇಜ್ ಸಾಮರ್ಥ್ಯವುಳ್ಳದ್ದು. ಎರಡರ ದರ ಕ್ರಮವಾಗಿ 12,999 ರೂಪಾಯಿ ಮತ್ತು 14,999 ರೂಪಾಯಿ ಇದೆ.
ಶಿವೋಮಿ ರೆಡ್ಮಿ ನೋಟ್ 9 ಪ್ರೊ ಸ್ಪೆಸಿಫಿಕೇಶನ್ಸ್
ಪರ್ಫಾಮೆನ್ಸ್ | Snapdragon 720G |
ಸ್ಟೋರೇಜ್ | 64 GB |
ಕ್ಯಾಮರಾ | 48+8+5+2 MP |
ಬ್ಯಾಟರಿ | 5020 mAh |
ಡಿಸ್‌ಪ್ಲೇ | 6.67" (16.94 cm) |
ರ‍್ಯಾಮ್ | 4 GB |
Xiaomi New Redmi Note 9 Pro Smartphone Gadget Review And India Price Detail With Specifications.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am