ಕೇವಲ 7499 ರೂ.ಗೆ 6.6 ಎಚ್‌ಡಿ+ ರಿಚ್ ಡಿಸ್‌ಪ್ಲೇ, 5000 mAh ಬ್ಯಾಟರಿ ಫೋನ್ ಲಾಂಚ್!

22-02-22 09:25 am       Source: Vijayakarnataka   ಡಿಜಿಟಲ್ ಟೆಕ್

ಆಕ್ಟಾ-ಕೋರ್ ಪ್ರೊಸೆಸರ್, 90 ಎಚ್‍ಝೆಡ್ ಹೆಚ್ಚಿನ ರಿಫ್ರೆಶ್ ರೇಟ್, 6.6 ಎಚ್‌ಡಿ+ ರಿಚ್ ಡಿಸ್‌ಪ್ಲೇ, ಬೃಹತ್ 5000 ಎಂಎಎಚ್ ಬ್ಯಾಟರಿ ಮತ್ತು 13 ಎಂಪಿ ಎಐ ಡ್ಯುಯಲ್ ರಿಯರ್ ಕ್ಯಾಮೆರಾದಂತ.

ಜಾಗತಿಕವಾಗಿ ಜನಪ್ರಿಯವಾಗಿರುವ ಬಜೆಟ್ ಸ್ಮಾರ್ಟ್‍ಫೋನ್ ತಯಾರಿಕಾ ಬ್ರ್ಯಾಂಡ್ ಟೆಕ್ನೋ ತನ್ನ ಜನಪ್ರಿಯ ಸ್ಪಾರ್ಕ್ 8 ಸರಣಿಯಲ್ಲಿ ಇತ್ತೀಚಿನ 'Tecno Spark 8C' ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುವ ಮೂಲಕ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಿದ್ಧವಾಗಿದೆ. ಆಕ್ಟಾ-ಕೋರ್ ಪ್ರೊಸೆಸರ್, 90 ಎಚ್‍ಝೆಡ್ ಹೆಚ್ಚಿನ ರಿಫ್ರೆಶ್ ರೇಟ್, 6.6 ಎಚ್‌ಡಿ+ ರಿಚ್ ಡಿಸ್‌ಪ್ಲೇ, ಬೃಹತ್ 5000 ಎಂಎಎಚ್ ಬ್ಯಾಟರಿ ಮತ್ತು 13 ಎಂಪಿ ಎಐ ಡ್ಯುಯಲ್ ರಿಯರ್ ಕ್ಯಾಮೆರಾದಂತಹ ಇಡೀ ವಲಯದಲ್ಲೇ ಅತ್ಯುತ್ತಮ ಎನಿಸಿದ ವೈಶಿಷ್ಟ್ಯಗಳನ್ನು ಹೊಂದಿರುವ ಈ Tecno Spark 8C ಅನ್ನು ವಿಶೇಷ ಉದ್ಘಾಟನಾ ಬೆಲೆಯಾಗಿ ಕೇವಲ 7499 ರೂ.ಗಳಿಗೆ ಬಿಡುಗಡೆ ಮಾಡಲಾಗಿದ್ದು, ಉತ್ಪನ್ನಕ್ಕೆ ನಿಜವಾದ ಹಣದ ಮೌಲ್ಯವನ್ನು ಒದಗಿಸಿರುವ ಬಗ್ಗೆ ಟೆಕ್ನೋ ಕಂಪೆನಿ ಸಂತಸ ವ್ಯಕ್ತಪಡಿಸಿದೆ.

ನೂತನ Tecno Spark 8C ಸ್ಮಾರ್ಟ್‌ಫೋನ್ 64ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯದ ಜೊತೆಗೆ ಮೆಮೊರಿ ಫ್ಯೂಷನ್ ತಂತ್ರಜ್ಞಾನದ ಸಹಾಯದಂದ 6ಜಿಬಿ ರ್ಯಾಮ್ ನೀಡುತ್ತದೆ. ಇದರ ಜೊತೆಗೆ, ಈ ಸ್ಮಾರ್ಟ್‌ಫೋನ್ ಐಪಿಎಕ್ಸ್2 ಸ್ಪ್ಲಾಶ್ ರೆಸಿಸ್ಟೆಂಟ್, ಡಿಟಿಎಸ್ ಸೌಂಡ್, ಸೋಪ್ಲೇ 2.0, ಹೈಪಾರ್ಟಿ, ಆಂಟಿ-ಆಯಿಲ್ ಸ್ಮಾರ್ಟ್ ಫಿಂಗರ್‌ಪ್ರಿಂಟ್, ಫೇಸ್ ಅನ್‌ಲ್ಆಕ್, ಡ್ಯುಯಲ್ 4ಜಿ ವೋಲ್ಟ್ ಜೊತೆಗೆ 3- ಇನ್- 1 ಸಿಮ್ ಸ್ಲಾಟ್ ಮತ್ತು ಇನ್ನೂ ಅನೇಕ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಇದು ಒಳಗೊಂಡಿರುತ್ತದೆ. ಎಲ್ಲ ಪ್ರೀಮಿಯಂ ವಿನ್ಯಾಸ ಮತ್ತು ರೋಮಾಂಚಕ ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಆಧಾರಿತ ಎಚ್‍ಐಓಎಸ್ 7.6 ನಿಂದ ಫೋನ್ ಚಾಲಿತವಾಗಿದೆ. ಹಾಗಾದರೆ, ಈ ನೂತನ ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

Tecno Spark 8C ಫೋನಿನ ಪ್ರಮುಖ ವಿಶೇಷತೆ

Tecno Spark 8C: 7,499 रुपये में लॉन्च हुआ 15 हजार रुपये के फीचर वाला  स्मार्टफोन, ये हैं फीचर्स - Tecno Spark 8C Price In India Rs 7499 Launch  With 5000mAh Battery and

Tecno Spark 8C ಸಾಧನದಲ್ಲಿ 3ಜಿಬಿ ರ್ಯಾಮ್ ಅನ್ನು ತ್ವರಿತ ವೇಗ ಮತ್ತು ಲ್ಯಾಗ್ ಫ್ರೀ ಕಾರ್ಯಾಚರಣೆಗಳಿಗಾಗಿ ನೀಡಲಾಗಿದೆ. ಇದು ಮೆಮೊರಿ ಫ್ಯೂಷನ್ ತಂತ್ರಜ್ಞಾನದ ಸಹಾಯದಿಂದ 6ಜಿಬಿ ವರೆಗೆ ರ್ಯಾಮ್ ಹೆಚ್ಚಿಸಬಹುದು. ಇದು 3ಜಿಬಿ ಸ್ಥಾಪಿತ ರ್ಯಾಮ್ ನೊಂದಿಗೆ ಬರುತ್ತದೆ, ಇದನ್ನು ಮೆಮೊರಿ ಸಮ್ಮಿಳನದೊಂದಿಗೆ 3ಜಿಬಿ ವರೆಗೆ ವಿಸ್ತರಿಸಬಹುದು. ಇದಲ್ಲದೇ, ನೀವು ಅಲ್ಟ್ರಾ-ಫಾಸ್ಟ್ ವೇಗವನ್ನು ಪಡೆಯುತ್ತೀರಿ, ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸುವಲ್ಲಿ ಶೇಕಡ 45 ವರೆಗೆ ಸುಧಾರಣೆ ಮತ್ತು 15 ಅಪ್ಲಿಕೇಶನ್‍ಗಳವರೆಗೆ ಹಿನ್ನೆಲೆಯಲ್ಲಿ ಬೆಂಬಲಿಸುತ್ತದೆ, ನಿಮ್ಮ ಬಹುಕಾರ್ಯಕ ಅನುಭವವನ್ನು ಹೆಚ್ಚಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಇನ್ನು ಎಸ್‌ಡಿ ಕಾರ್ಡ್ ಮೂಲಕ 256ಜಿಬಿ ವರೆಗೆ ವಿಸ್ತರಿಸಬಹುದಾದ ಬೆಂಬಲದೊಂದಿಗೆ ಇದು 64ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ.

ಆಕ್ಟಾ ಕೋರ್ ಶಕ್ತಿಯುತ ಪ್ರೊಸೆಸರ್

Tecno Spark 8C Goes Silently Official - Check Details Here | Cashify News

Tecno Spark 8C ಸ್ಮಾರ್ಟ್‌ಫೋನ್ ಅಲ್ಟ್ರಾ-ಪರಿಣಾಮಕಾರಿ ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಈ ಆಕ್ಟಾ- ಕೋರ್ ಪ್ರೊಸೆಸರ್ ಎಂಟು ಪ್ರೊಸೆಸರ್ ಕೋರ್‌ಗಳಿಂದ ಮಾಡಲ್ಪಟ್ಟಿದೆ, ಅದು Tecno Spark 8C ಫೋನಿಗೆ ಶಕ್ತಿಯನ್ನು ನೀಡುತ್ತದೆ. ಪ್ರೊಸೆಸರ್ ಹೆಚ್ಚಿನ ರೆಸಲ್ಯೂಶನ್ ವೀಡಿಯೋಗಳು ಮತ್ತು ಗ್ರಾಫಿಕ್- ಹೆವಿ ಗೇಮ್‍ಗಳಂತಹ ಹೆಚ್ಚು ಸುಧಾರಿತ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ, ಹೆಚ್ಚು ಬ್ಯಾಟರಿಯನ್ನು ಖಾಲಿ ಮಾಡದೆಯೇ ಸಾಧನದಲ್ಲಿ ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ ದೀರ್ಘ ಬಳಕೆಗಾಗಿ ಲ್ಯಾಗ್ ಫ್ರೀ ಅನುಭವವನ್ನು ಆನಂದಿಸಲು ಸಿಸ್ಟಮ್ ಆಪ್ಟಿಮೈಸೇಶನ್‍ಗಾಗಿ ಸ್ಮಾರ್ಟ್‍ಫೋನ್ ಸೂಪರ್‍ಬೂಸ್ಟ್ ಅನ್ನು ಒಳಗೊಂಡಿದೆ. ಇದರಿಂದ ಬಹು ಕಾರ್ಯಗಳ ಸುಗಮ ಅನುಭವವನ್ನು ನೀಡುತ್ತದೆ.

6.6 ಎಚ್‌ಡಿ+ ಡಾಟ್ ನಾಚ್ ಡಿಸ್‌ಪ್ಲೇ ಜೊತೆಗೆ 90hZ ರಿಫ್ರೆಶ್ ದರ

TECNO SPARK 8C - TECNO (TH) | เทคโนมือถือสมาร์ทโฟน

Tecno Spark 8C ಫೋನಿನಲ್ಲಿ ಶೇಕಡ 89.3 ರಷ್ಟು ಸ್ಕ್ರೀನ್ ಟು ಬಾಡಿ ಅನುಪಾತ ಮತ್ತು 269ಪಿಪಿಐ ಪಿಕ್ಸೆಲ್ ಸಾಂದ್ರತೆಯೊಂದಿಗೆ, Tecno Spark 8C ಸ್ಮಾರ್ಟ್‌ಫೋನಿನಲ್ಲಿರುವ 16.66ಸಿಎಂ (6.6) ಎಚ್‌ಡಿ+ ಡಿಸ್‍ಪ್ಲೇಯು ಮಾರುಕಟ್ಟೆಯಲ್ಲಿ ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಬಳಕೆದಾರರಿಗೆ ಪ್ರೀಮಿಯಂ ಡಿಸ್‌ಪ್ಲೇಯ ಅನುಭವವನ್ನು ನೀಡುತ್ತದೆ. ಇದರ 480 ನಿಟ್ಸ್s ಗರಿಷ್ಟ ಪ್ರಕಾಶಮಾನವು ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸಹ ಡಿಸ್‍ಪ್ಲೇಯನ್ನು ನೋಡಲು ಸುಲಭಗೊಳಿಸುತ್ತದೆ. ಸ್ಪಾರ್ಕ್ 8ಸಿ ಯ 90ಎಚ್‍ಝೆಡ್ ಹೆಚ್ಚಿನ ರಿಫ್ರೆಶ್ ದರವು ಬಳಕೆದಾರರಿಗೆ ವರ್ಗದಲ್ಲಿ ಸಾಟಿಯಿಲ್ಲದ ಸ್ಪರ್ಶ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.

ಸ್ಪಷ್ಟ ಚಿತ್ರಗಳಿಗಾಗಿ 13ಎಂಪಿ ಎಐ ಡ್ಯುಯಲ್ ಹಿಂಬದಿಯ ಕ್ಯಾಮೆರಾ

Tecno Spark 8C launched with 90Hz display, 5,000mAh battery - Gizmochina

Tecno Spark 8C ಫೋನಿನಲ್ಲಿ 13 ಎಂಪಿ ಎಐ ಹಿಂಬದಿಯ ಕ್ಯಾಮೆರಾ ಎಫ್ 1.8 ವೈಡ್ ಅಪರ್ಚರ್, ಸ್ಯಾಮ್ಸಂಗ್ ಇಮೇಜ್ ಸೆನ್ಸರ್ ಮತ್ತು ಅದ್ಭುತ ಇಮೇಜ್ ಪ್ರೊಸೆಸಿಂಗ್ ತಂತ್ರಜ್ಞಾನವು ಪ್ರತಿ ಬಾರಿ ಸ್ಪಷ್ಟ ಮತ್ತು ಎದ್ದುಕಾಣುವ ಫೋಟೋಗಳನ್ನು ಕ್ಲಿಕ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಎಐ ಬ್ಯೂಟಿ 3.0, ಪೋಟ್ರ್ರೇಟ್ ಮೋಡ್, ವೈಡ್ ಸೆಲ್ಫಿ, ಎಚ್‍ಡಿಆರ್, ಫಿಲ್ಟರ್‍ಗಳು ಮುಂತಾದ ವಿವಿಧ ಮೋಡ್‍ಗಳು ನಿಮ್ಮ ಫೋಟೋಗಳಿಗೆ ಹೆಚ್ಚಿನ ಅಭಿರುಚಿಯನ್ನು ಸೇರಿಸುತ್ತವೆ. ಮುಂಭಾಗದ ಫ್ಲ್ಯಾಷ್‍ಲೈಟ್‍ನೊಂದಿಗೆ ಅದರ 8ಎಂಪಿ ಸೆಲ್ಫಿ ಕ್ಯಾಮೆರಾದೊಂದಿಗೆ ಬಳಕೆದಾರರು ಹಗಲು ಅಥವಾ ರಾತ್ರಿಯಲ್ಲಿ ಅತ್ಯುತ್ತಮ ಸೆಲ್ಫಿಗಳನ್ನು ಕ್ಲಿಕ್ ಮಾಡಬಹುದು. ಫೋನ್ 1080ಪಿ ಟೈಮ್ ಲ್ಯಾಪ್ಸ್ ವೀಡಿಯೊ ಮತ್ತು ಸ್ಲೋ ಮೋಷನ್ ವೀಡಿಯೋವನ್ನು ಸಹ ಒಳಗೊಂಡಿದೆ.

Tecno Spark 8C ಫೋನ್ 5000ಎಎಂಎಚ್ ಮೆಗಾ ಬ್ಯಾಟರಿಯೊಂದಿಗೆ ಅಂತಿಮ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ. ಬಳಕೆದಾರರು 89 ದಿನಗಳವರೆಗೆ ಸ್ಟ್ಯಾಂಡ್‌ ಬೈ ಸಮಯವನ್ನು ಪಡೆಯುತ್ತಾರೆ ಮತ್ತು 53 ಗಂಟೆಗಳವರೆಗೆ ಮಾತನಾಡಬಹುದು ಅಥವಾ 137 ಗಂಟೆಗಳವರೆಗೆ ಸಂಗೀತವನ್ನು ಆನಂದಿಸಬಹುದು. ಹೆಚ್ಚುವರಿಯಾಗಿ, ಅಲ್ಟ್ರಾ ಪವರ್ ಸೇವಿಂಗ್, ಸ್ಲೀಪ್ ಮೋಡ್ ಆಪ್ಟಿಮೈಸೇಶನ್ ಮುಂತಾದ ಬ್ಯಾಟರಿ ಲ್ಯಾಬ್ ವೈಶಿಷ್ಟ್ಯಗಳು ಅಗತ್ಯ- ಆಧಾರಿತ ಬುದ್ಧಿವಂತ ಆಪ್ಟಿಮೈಸೇಶನ್‍ಗಳೊಂದಿಗೆ ದೀರ್ಘ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ ಎಲ್‌ಟಿಇ ವೈ-ಫೈ ಬ್ಲೂಟೂತ್, ಎಫ್‍ಎಂ ರೇಡಿಯೋ, ಜಿಪಿಎಸ್/ ಎ-ಜಿಪಿಎಸ್ ಮತ್ತು 3.5ಎಂಎಂ ಜ್ಯಾಕ್ ಸೇರಿವೆ. ಬಳಕೆದಾರರಿಗೆ ಬಹು ಸಂಪರ್ಕ ಆಯ್ಕೆಗಳನ್ನು ನೀಡಲು ಡ್ಯುಯಲ್ 4ಜಿ ವೋಲ್ಟ್‍ನೊಂದಿಗೆ 3- ಇನ್- 1 ಸಿಮ್ ಸ್ಲಾಟ್‌ನೊಂದಿ ಬರುತ್ತದೆ.

ಆಕರ್ಷಕ ಬಣ್ಣಗಳೊಂದಿಗೆ ಟ್ರೆಂಡಿ ಮತ್ತು ಸೊಗಸಾದ ವಿನ್ಯಾಸ

Tecno Spark 8C With Dual Rear Cameras And Price And Specifications

Tecno Spark 8C ಯ ಮ್ಯಾಗ್ನೆಟ್ ಬ್ಲಾಕ್, ಐರಿಸ್ ಪರ್ಪಲ್, ಡೈಮಂಡ್ ಗ್ರೇ ಮತ್ತು ಟರ್ಕೋಯಿಸ್ ಸಯಾನ್ ಸೇರಿದಂತೆ ಐಕಾನಿಕ್ ಡಿಸೈನ್ ಮತ್ತು ಪಂಚಿ ಬಣ್ಣಗಳ ಹೊಳಪಿನ್ನು ಹೊಂದಿದೆ. ಬ್ರ್ಯಾಂಡ್ ಲೋಗೋದೊಂದಿಗೆ ವಿವಿಧ ಆಕರ್ಷಕ ಮತ್ತು ಶಕ್ತಿಯುತ ಬಣ್ಣಗಳೊಂದಿಗೆ ಸ್ಮಾರ್ಟ್‍ಫೋನ್‍ನ ಪ್ರೀಮಿಯಂ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. Tecno Spark 8C ಐಪಿಎಕ್ಸ್2 ಸ್ಪ್ಲಾಶ್ ನಿರೋಧಕವಾಗಿದೆ ಮತ್ತು 90ಎಚ್‍ಝೆಡ್ ಹೆಚ್ಚಿನ ರಿಫ್ರೆಶ್ ದರ ಮತ್ತು 180ಎಚ್‍ಝೆಡ್ ಟಚ್ ಸ್ಯಾಂಪ್ಲಿಂಗ್ ದರವನ್ನು ಭರವಸೆ ನೀಡುತ್ತದೆ, ಇದು ಬಳಕೆದಾರರಿಗೆ ವೇಗದ ಸ್ಪರ್ಶ ಇನ್‍ಪುಟ್‍ಗಳನ್ನು ಮತ್ತು ಆಟಗಳನ್ನು ಆಡುವಾಗ ಶೂನ್ಯ ಲ್ಯಾಗ್ ಅನುಭವವನ್ನು ಒದಗಿಸುತ್ತದೆ. ಫೋನ್ ವಾಲ್ಟ್ 2.0, ಸ್ಮಾರ್ಟ್ ಪ್ಯಾನೆಲ್ 2.0, ಕಿಡ್ಸ್ ಮೋಡ್, ಸೋಶಿಯಲ್ ಟರ್ಬೊ, ಆಂಟಿ-ಥೆಫ್ಟ್ ಅಲಾರ್ಮ್, ಫೋನ್ ಕ್ಲೋನರ್, ವಾಯ್ಸ್ ಚೇಂಜರ್, ಪೀಕ್ ಪ್ರೂಫ್, ಗೇಮ್ ಮೋಡ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುತ್ತದೆ.

Tecno Spark 8C ಫೋನಿನ ಬೆಲೆ ಮತ್ತು ಲಭ್ಯತೆ

tecno spark 8c

Tecno Spark 8C ಫೋನ್ ಒಂದೇ ರೂಪಾಂತರದಲ್ಲಿ 3GB RAM ಮತ್ತು 64GB ಆಂತರಿಕ ಸಂಗ್ರಹಣೆಯೊಂದಿಗೆ ರೂ 7499 ಗೆ ಬರುತ್ತದೆ. ಇದು ಅಮೆಜಾನ್ ಭಾರತದಲ್ಲಿ ಫೆಬ್ರವರಿ 24 ರಿಂದ ಐರಿಸ್ ಪರ್ಪಲ್, ಮ್ಯಾಗ್ನೆಟ್ ಬ್ಲಾಕ್, ಟರ್ಕೋಯಿಸ್ ಸಯಾನ್ ಮತ್ತು ಡೈಮನ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇನ್ನು ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ, ಟ್ರಾನ್ಸ್‍ಷನ್ ಇಂಡಿಯಾದ ಸಿಇಒ ಅರಿಜೀತ್ ತಲಪಾತ್ರ, "ನಮ್ಮ ಗುರಿ ಯಾವಾಗಲೂ ನಮ್ಮ ಗ್ರಾಹಕರ ನೆಲೆಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‍ಫೋನ್ ಅನುಭವವನ್ನು ನೀಡುವುದಾಗಿದೆ. Tecno Spark 8C ಯ ಬಿಡುಗಡೆಯು ಈ ಗುರಿಯತ್ತ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ಹೊಚ್ಚ ಹೊಸ Tecno Spark 8C ಮಾರುಕಟ್ಟೆಗೆ ಬರುವುದರೊಂದಿಗೆ, ಪ್ರೀಮಿಯಂ ಸ್ಮಾರ್ಟ್‍ಫೋನ್ ಅನುಭವಗಳು ಈಗ ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುತ್ತವೆ ಎಂದು ನಾವು ಭಾವಿಸುತ್ತೇವೆ" ಎಂದು ಹೇಳಿದ್ದಾರೆ.

Tecno Spark 8c Brings The Cool Factor Along With Affordability.