WhatsApp ಸ್ಟೇಟಸ್‌ನ ಹೊಸ ಅಪ್‌ಡೇಟ್‌ ಸುದ್ದಿಗೆ ಬಳಕೆದಾರರು ಫುಲ್ ಖುಷ್!

23-02-22 09:07 pm       Source: Vijayakarnataka   ಡಿಜಿಟಲ್ ಟೆಕ್

ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ WhatsApp ತನ್ನ ಬಳಕೆದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ತನ್ನ ಬಳಕೆದಾರರಿಗೆ ಸಾಧ್ಯವಾದಷ್ಟು ಗೌಪ್ಯತೆ ಸ್ನೇಹಿ ಅನುಭವವನ್ನು ನೀಡಲು ಪ್ರಯತ್ನಿಸುತ್ತಿರುವ ವಾಟ್ಸಾಪ್, ಇದೀಗ ತನ್ನ ಸ್ಟೇಟಸ್ ವೈಶಿಷ್ಟ್ಯದಲ್ಲಿ ಮಹತ್ತರವಾದ ಬದಲಾವಣೆಯನ್ನು ತರುತ್ತಿದೆ.

ಜಗತ್ತಿನಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಸಾಮಾಜಿಕ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ WhatsApp ತನ್ನ ಬಳಕೆದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ತನ್ನ ಬಳಕೆದಾರರಿಗೆ ಸಾಧ್ಯವಾದಷ್ಟು ಗೌಪ್ಯತೆ ಸ್ನೇಹಿ ಅನುಭವವನ್ನು ನೀಡಲು ಪ್ರಯತ್ನಿಸುತ್ತಿರುವ ವಾಟ್ಸಾಪ್, ಇದೀಗ ತನ್ನ ಸ್ಟೇಟಸ್ ವೈಶಿಷ್ಟ್ಯದಲ್ಲಿ ಮಹತ್ತರವಾದ ಬದಲಾವಣೆಯನ್ನು ತರುತ್ತಿದೆ. ಈ ಬದಲಾವಣೆಯ ಮೂಲಕ ವಾಟ್ಸಾಪ್ ಬಳಕೆದಾರರು ಶಾರ್ಟ್‌ಕಟ್‌ ಮೂಲಕ ತಮ್ಮ ಸ್ಟೇಟಸ್ ಅನ್ನು ಯಾರು ವೀಕ್ಷಿಸಬಹುದು ಎಂಬ ನಿಯಂತ್ರಣವನ್ನು ಹೇರಬಹುದು ಎಂದು ಹೇಳಲಾಗಿದೆ. ಇದು ವಾಟ್ಸಾಪ್ ಬಳಕೆದಾರರಲ್ಲಿ ಸಂತಸವನ್ನು ತಂದಿದೆ.!

ಹೌದು, WABetaInfo ವರದಿಯ ಪ್ರಕಾರ, WhatsApp ತನ್ನ ಸ್ಟೇಟಸ್ ಗೌಪ್ಯತೆ ಸೆಟ್ಟಿಂಗ್‌ಗಳಿಗಾಗಿ ಹೊಸ ಶಾರ್ಟ್‌ಕಟ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. Google Play ಬೀಟಾ ಪ್ರೋಗ್ರಾಂ ಮೂಲಕ WhatsApp ಈ ಹೊಸ ನವೀಕರಣವನ್ನು ಹೊರತಂದಿದೆ ಮತ್ತು ಈ ಹೊಸ ಅಪ್‌ಡೇಟ್ ಇತ್ತೀಚಿನ ಆವೃತ್ತಿ 2.22.6.2 ಅನ್ನು ಸೇರಲಿದೆ. ಈ ಹೊಸ ಅಪ್‌ಡೇಟ್‌ನಲ್ಲಿ, ವಾಟ್ಸಾಪ್ ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಯಾರು ವೀಕ್ಷಿಸಬಹುದು ಎಂಬುದನ್ನು ನಿರ್ವಹಿಸಲು, WhatsApp ಹೊಸ ಶಾರ್ಟ್‌ಕಟ್‌ನಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದು WABetaInfo ವರದಿ ಹೇಳಿದೆ.

Whatsapp's either-or stand on privacy may add to legal troubles, govt  decision soon | Technology News,The Indian Express

WhatsApp ಬಳಕೆದಾರರು ಈಗಾಗಲೇ ತಮ್ಮ ಸ್ಟೇಟಸ್ ಅನ್ನು ಯಾರು ನೋಡಬಹುದು ಮತ್ತು ಯಾರು ವೀಕ್ಷಿಸಬಹುದು ಎಂಬುದನ್ನು ಹೊಂದಿಸಲು ಸಾಧ್ಯವಿದೆ. ಆದರೆ ಬಳಕೆದಾರರು ಸ್ಟೇಟಸ್ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಈ ರೀತಿ ಬದಲಾವಣೆಯನ್ನು ಮಾಡಲು ಪ್ರತಿ ಬಾರಿಯೂ ಒಂದು ನಿರ್ದಿಷ್ಟ ಕಾರ್ಯವಿಧಾನವಿದೆ. ಇದೀಗ ಹೊಸ ಅಪ್‌ಡೇಟ್‌ನಲ್ಲಿ ಸ್ಟೇಟಸ್ ಅನ್ನು ಪೋಸ್ಟ್ ಮಾಡುವಾಗ ನಿರ್ದಿಷ್ಟ ಸ್ವೀಕೃತದಾರರಿಂದ ತಮ್ಮ ಸ್ಟೇಟಸ್ ಅನ್ನು ಮರೆಮಾಡುವ ಶಾರ್ಟ್‌ಕಟ್ ಆಯ್ಕೆಯನ್ನು ವಾಟ್ಸಾಪ್ ಬಳಕೆದಾರರು ಪಡೆಯುತ್ತಾರೆ. ಹಾಗಾಗಿ, ಇದು ಬಹಳಷ್ಟು ವಾಟ್ಸಾಪ್ ಬಳಕೆದಾರರನ್ನು ಸಂತೋಷಪಡಿಸುತ್ತದೆ ಎಂದು ಹೇಳಬಹುದು.

ಇನ್ನು ಳೆದ ವರ್ಷ ನವೆಂಬರ್‌ನಲ್ಲೇ WhatsApp ನಲ್ಲಿ ಕಣ್ಮರೆಯಾಗುವ ಸಂದೇಶಗಳ ಫೀಚರ್ ಅನ್ನು ಪರಿಚಯಿಸಲಾಗಿತ್ತು. ಇದೀಗ ಕಣ್ಮರೆಯಾಗುವ ಸಂದೇಶಗಳಿಗೆ ಕಂಪನಿಯು 24 ಗಂಟೆಗಳು ಮತ್ತು 90 ದಿನಗಳು ಎಂಬ ಎರಡು ಹೊಸ ಅವಧಿಗಳನ್ನು ಸೇರಿಸಲಾಗಿದೆ. ಹಾಗೆಯೇ, WhatsApp ಗ್ರೂಪ್‌ಗಳಿಗೂ ಕೂಡ ಕಣ್ಮರೆಯಾಗುವ ಸಂದೇಶಗಳನ್ನು ಮಾಡಲು ಅನುಮತಿಸಲಾಗಿದೆ. ಈ ಅಲ್ಪಕಾಲಿಕ ಚಾಟ್‌ಗಳನ್ನು WhatsApp\ ಸರ್ವರ್‌ಗಳಿಂದ ಅಳಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಇನ್ನು ಎಲ್ಲಾ 'ಒನ್ ಟು ಒನ್' ಚಾಟ್‌ಗಳಿಗಾಗಿ ನೀವು ಕಣ್ಮರೆಯಾಗುತ್ತಿರುವ ಮೆಸೇಜ್ ಗಳನ್ನು ಆನ್ ಮಾಡಿದಾಗ ನಿಮ್ಮ ಪ್ರಸ್ತುತ ಮೆಸೇಜ್ ಗಳು ಅಥವಾ ಚಾಟ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿದುಬಂದಿದೆ.

WhatsApp update offers first look at new feature invading your chats |  Express.co.uk

ನಿಮ್ಮ ಎಲ್ಲಾ ಹೊಸ ಚಾಟ್‌ಗಳಿಗೆ ಕಣ್ಮರೆಯಾಗುವ ಫಿಚರ್ ಅನ್ನು ಆನ್ ಮಾಡಿದ ನಂತರ ಈ ಬಗ್ಗೆ ಆನ್ ಮಾಡಲಾಗಿದೆ ಎಂಬ ಅಧಿಸೂಚನೆಯು ಚಾಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಕಣ್ಮರೆಯಾಗುವ ಮೆಸೇಜ್ ಗಳನ್ನು ಪೂರ್ವನಿಯೋಜಿತವಾಗಿ ಆನ್ ಮಾಡಲಾಗಿದೆ ಎಂದು ಅಧಿಸೂಚನೆಯು ತಿಳಿಸುತ್ತದೆ. ಆದ್ದರಿಂದ ನೀವು ನಿರ್ದಿಷ್ಟವಾಗಿ ಆ ಫೀಚರ್ ಅನ್ನು ಬಳಸಿದ್ದೀರಿ ಎಂದು ತಿಳಿಸಲಾಗುತ್ತದೆ. ಹಾಗಾಗಿ, ಇದನ್ನು ನಿಮ್ಮ ವಿಶ್ವಾಸಾರ್ಹ ಸಂಪರ್ಕಗಳೊಂದಿಗೆ ಬಳಸಬೇಕೆಂದು WhatsApp ಎಚ್ಚರಿಸಿದೆ. ಏಕೆಂದರೆ, ಈ ಫೀಚರ್ ಕೆಲವು ಲೋಪದೋಷಗಳನ್ನು ಹೊಂದಿದ್ದು, ನೀವು ಕಣ್ಮರೆಯಾಗುತ್ತಿರುವ ಮೆಸೇಜ್ ಅನ್ನು ಮತ್ತೊಂದು ಚಾಟ್‌ಗೆ ಫಾರ್ವರ್ಡ್ ಮಾಡಿದರೆ ಮೆಸೇಜ್ ಹೋಗುವುದಿಲ್ಲ.

ಡೀಫಾಲ್ಟ್ ಆಗಿ ಕಣ್ಮರೆಯಾಗುವ ಸಂದೇಶಗಳ ಫಿಚರ್ ಆನ್ ಮಾಡಲು ಬಯಸುವ ಜನರಿಗೆ, WhatsApp ಇತರ ವ್ಯಕ್ತಿಯು ಆಯ್ಕೆ ಮಾಡಿದ ಡೀಫಾಲ್ಟ್ ಎಂದು ಜನರಿಗೆ ಹೇಳುವ ಸಂದೇಶವನ್ನು ಅವರ ಚಾಟ್‌ಗಳಲ್ಲಿ ಪ್ರದರ್ಶಿಸುತ್ತದೆ. ಇದು WhatsApp ನಲ್ಲಿ ಪ್ರತಿಯೊಬ್ಬರೊಂದಿಗೂ ನೀವು ಹೇಗೆ ಸಂವಹನ ನಡೆಸಬೇಕು ಎಂಬುದರ ಕುರಿತು ನೀವು ಮಾಡಿದ ಆಯ್ಕೆಯಾಗಿರಲಿದೆ. ಆದಾಗ್ಯೂ, ಶಾಶ್ವತವಾಗಿ ಉಳಿಯಲು ನಿಮಗೆ ನಿರ್ದಿಷ್ಟ ಸಂಭಾಷಣೆಯ ಅಗತ್ಯವಿದ್ದರೆ, ಚಾಟ್ ಅನ್ನು ಹಿಂದಕ್ಕೆ ಬದಲಾಯಿಸುವುದು ಸುಲಭ ಎಂದು ಕಂಪನಿ ಹೇಳಿದೆ. ಈ ಫೀಚರ್ ಅನ್ನು ಬಳಸಲು, WhatsApp ಬಳಕೆದಾರರು ತಮ್ಮ 'ಗೌಪ್ಯತೆ ಸೆಟ್ಟಿಂಗ್‌ಗಳಿಗೆ' ಹೋಗಬಹುದು ಮತ್ತು ಅಲ್ಲಿ 'ಡೀಫಾಲ್ಟ್ ಸಂದೇಶ ಟೈಮರ್' ಅನ್ನು ಆಯ್ಕೆ ಮಾಡಬಹುದು.

Whatsapp Status To Become More Privacy Friendly Soon.