ಭಾರತದಲ್ಲಿ Poco M4 Pro 4G ಫೋನ್ ಬಿಡುಗಡೆ ದಿನಾಂಕ ಖಚಿತ!..ಬೆಲೆ ಎಷ್ಟು ನೋಡಿ?

24-02-22 10:57 pm       Source: Vijayakarnataka   ಡಿಜಿಟಲ್ ಟೆಕ್

ದೇಶದಲ್ಲಿ ಈಗಷ್ಟೇ 5G ಸಾಮರ್ಥ್ಯದ Poco M4 Pro 5G ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿರುವ ಕಂಪೆನಿಯು ಇದೀಗ 4G ಸಾಮರ್ಥ್ಯದ Poco M4 Pro 4G ಸ್ಮಾರ್ಟ್‌ಫೋನ್ ಆಗಮನವನ್ನು ಖಚಿತಪಡಿಸಿದೆ.

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಬ್ರ್ಯಾಂಡ್ Poco ಭಾರತದಲ್ಲಿ Poco M4 Pro 5G ಅನ್ನು ಬಿಡುಗಡೆ ಮಾಡಿದ ಕೇವಲ ಒಂದು ವಾರದ ನಂತರ ಮತ್ತೊಂದು ಬಿಡುಗಡೆ ಪ್ರಕಟಣೆಯನ್ನು ಹೊರಡಿಸಿದೆ. ದೇಶದಲ್ಲಿ ಈಗಷ್ಟೇ 5G ಸಾಮರ್ಥ್ಯದ Poco M4 Pro 5G ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿರುವ ಕಂಪೆನಿಯು ಇದೀಗ 4G ಸಾಮರ್ಥ್ಯದ Poco M4 Pro 4G ಸ್ಮಾರ್ಟ್‌ಫೋನ್ ಆಗಮನವನ್ನು ಖಚಿತಪಡಿಸಿದೆ. ನೂತನ Poco M4 Pro 4G ಸ್ಮಾರ್ಟ್‌ಫೋನನ್ನು ಇದೇ ಫೆಬ್ರವರಿ 28 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಬುಧವಾರ ಪ್ರಕಟಿಸಿದ್ದು, ಭಾರತದಲ್ಲಿ Poco M4 Pro 4G ಫೆಬ್ರವರಿ 28 ರಂದು ಸಂಜೆ 7 ಗಂಟೆಗೆ IST ಬಿಡುಗಡೆಯಾಗಲಿದೆ.

ಇನ್ನು ಈ ಬಿಡುಗಡೆ ಪ್ರಕಟಣೆಯ ಜೊತೆಯಲ್ಲಿ Poco M4 Pro 4G ವಿಶೇಷಣಗಳ ಕುರಿತು ವದಂತಿಗಳು ಸಹ ಹರಿದಾಡಿವೆ. ಹ್ಯಾಂಡ್‌ಸೆಟ್‌ನ ವಿವರಗಳಿಗೆ ಸಂಬಂಧಿಸಿದಂತೆ ಕೆಲವು ವಿಶೇಷಣಗಳ ಮಾಹಿತಿ ಲಭ್ಯವಿದ್ದು, ಖ್ಯಾತ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಮುಂಬರುವ Poco M4 Pro 4G ಯ ಜಾಗತಿಕ ರೂಪಾಂತರಕ್ಕಾಗಿ ಕೆಲವು ಪ್ರಮುಖ ವಿಶೇಷಣಗಳ ಈಗಾಗಲೇ ನ್ನು ಬಹಿರಂಗಪಡಿಸಿದ್ದಾರೆ. Poco M4 Pro 4G ಸಾಧನವು Android 11 ಆಧಾರಿತ MIUI 12.5 ಅಥವಾ MIUI 13 ಬಾಕ್ಸ್‌ನ ಹೊರಗೆ ಕಾರ್ಯನಿರ್ವಹಿಸಬಹುದೆಂದು ಅವರು ಸೂಚಿಸಿದ್ದಾರೆ. ಹಾಗೂ Poco M4 Pro 4G ಫೋನ್ 90Hz ರಿಫ್ರೆಶ್ ದರದೊಂದಿಗೆ 6.4-ಇಂಚಿನ ಪೂರ್ಣ-HD+ AMOLED ಡಿಸ್ಪ್ಲೇ ಹೊತ್ತು ಬರುವ ಬಗ್ಗೆ ನಿರೀಕ್ಷೆಯನ್ನು ಹೊಂದಿದ್ದಾರೆ.

Xiaomi Poco M4 Pro Specifications, price and features - Specs Tech

ಇನ್ನು ಈ ಬಿಡುಗಡೆ ಪ್ರಕಟಣೆಯ ಜೊತೆಯಲ್ಲಿ Poco M4 Pro 4G ವಿಶೇಷಣಗಳ ಕುರಿತು ವದಂತಿಗಳು ಸಹ ಹರಿದಾಡಿವೆ. ಹ್ಯಾಂಡ್‌ಸೆಟ್‌ನ ವಿವರಗಳಿಗೆ ಸಂಬಂಧಿಸಿದಂತೆ ಕೆಲವು ವಿಶೇಷಣಗಳ ಮಾಹಿತಿ ಲಭ್ಯವಿದ್ದು, ಖ್ಯಾತ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಮುಂಬರುವ Poco M4 Pro 4G ಯ ಜಾಗತಿಕ ರೂಪಾಂತರಕ್ಕಾಗಿ ಕೆಲವು ಪ್ರಮುಖ ವಿಶೇಷಣಗಳ ಈಗಾಗಲೇ ನ್ನು ಬಹಿರಂಗಪಡಿಸಿದ್ದಾರೆ. Poco M4 Pro 4G ಸಾಧನವು Android 11 ಆಧಾರಿತ MIUI 12.5 ಅಥವಾ MIUI 13 ಬಾಕ್ಸ್‌ನ ಹೊರಗೆ ಕಾರ್ಯನಿರ್ವಹಿಸಬಹುದೆಂದು ಅವರು ಸೂಚಿಸಿದ್ದಾರೆ. ಹಾಗೂ Poco M4 Pro 4G ಫೋನ್ 90Hz ರಿಫ್ರೆಶ್ ದರದೊಂದಿಗೆ 6.4-ಇಂಚಿನ ಪೂರ್ಣ-HD+ AMOLED ಡಿಸ್ಪ್ಲೇ ಹೊತ್ತು ಬರುವ ಬಗ್ಗೆ ನಿರೀಕ್ಷೆಯನ್ನು ಹೊಂದಿದ್ದಾರೆ.

ಇನ್ನು ಸಾಧನದ ಕ್ಯಾಮರಾ ಸ್ಪೆಕ್ಸ್ ಅನ್ನು ಪರಿಗಣಿಸಿದಂತೆ, Poco M4 Pro 4G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ 64MP ಪ್ರಾಥಮಿಕ ಲೆನ್ಸ್ ಜೊತೆಗೆ 8MP ಅಲ್ಟ್ರಾ-ವೈಡ್ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಶೂಟರ್‌ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಮುಂಬರುವ Poco M4 Pro 4G 16MP ಸೆಲ್ಫಿ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಆದಾಗ್ಯೂ, ಕಂಪನಿಯು ಸಾಧನಗಳ ಬೆಲೆಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂಬುದನ್ನು ನಾವು ಇಲ್ಲಿ ಗಮನಿಸಬಹುದು.ಇನ್ನು ಬೆಲೆಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಳಿಲ್ಲ, Poco M4 Pro 5G ಫೋನ್ ಬೆಲೆ 15 ಸಾವಿರಗಳಿಂದ ಆರಂಭವಾಗಿರುವುದರಿಂದ ಈ ಪೋನಿನ ಬೆಲೆಯಲ್ಲಿ ಮತ್ತಷ್ಟು ಕಡಿಮೆ ಬೆಲೆಯಲ್ಲಿ ನಿರೀಕ್ಷಿಸಬಹುದು.

Poco M4 Pro 4g All Set To Launch On February 28, Specifications Tipped.