ಬ್ರೇಕಿಂಗ್ ನ್ಯೂಸ್
28-02-22 10:47 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಮೊಬೈಲ್ ತಯಾರಿಕಾ ಕಂಪೆನಿ ಆಪಲ್ ತನ್ನ ಹೊಸ 'ಕೈಗೆಟುಕುವ' ಐಫೋನ್ SE 2022 ಅಥವಾ iPhone SE 3 ಸ್ಮಾರ್ಟ್‌ಫೋನನ್ನು ಇದೇ ಮಾರ್ಚ್ 8 ರಂದು ಬಿಡುಗಡೆ ಮಾಡಲು ತಯಾರಾಗಿದೆ ಹಾಗೂ ಆ ಹೊಸ iPhone SE 3 ಫೋನಿನ ಬೆಲೆಯು ಸರಿ ಸುಮಾರು $300 (ಸರಿಸುಮಾರು 22,500 ರೂ.) ಡಾಲರ್ ಬೆಲೆಯನ್ನು ಹೊಂದಿರಲಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಟೆಕ್ ವಿಶ್ಲೇಷಕ ಜಾನ್ ಡೊನೊವನ್ ಅವರ ಖಚಿತ ಮಾಹಿತಿ ಮೂಲವನ್ನು ಒದಗಿಸಿ ಪ್ರಮುಖ ಟೆಕ್ ಮಾಧ್ಯಮಗಳೆಲ್ಲವೂ ಈ ಬಗ್ಗೆ ವರದಿ ಮಾಡಿದ್ದು, iPhone 12 ನ ಮೂಲ ಮಾದರಿಗಿಂತ ಗಮನಾರ್ಹವಾಗಿ ಹೆಚ್ಚು ಕೈಗೆಟುಕುವಂಹ ಬೆಲೆಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಹೇಳಲಾಗಿದೆ. ಇದು ಇತ್ತೀಚಿನ ವರದಿಯಾಗಿದೆ. ಇದಕ್ಕೂ ಮೊದಲು ಜಾಗತಿಕ ಹಣಕಾಸು ವಿಶ್ಲೇಷಕ ಸಂಸ್ಥೆಯಾದ JP ಮೋರ್ಗಾನ್ ಚೇಸ್ ಕೂಡ ಇದೇ ರೀತಿಯಲ್ಲಿ 20 ಸಾವಿರದ ಆಸುಪಾಸಿನಲ್ಲಿ ಆಪಲ್ ಐಫೋನ್ ಸಿಹಿಸುದ್ದಿಯೊಂದನ್ನು ನೀಡಿತ್ತು.
ಹೌದು, ಪ್ರಸ್ತುತ ಭಾರತದಲ್ಲಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. Samsung, xiaomi, Oppo, Realme ಮತ್ತು Motorola ನಂತಹ ಕಂಪೆನಿಗಳು ಬಜೆಟ್ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಪ್ರಭುತ್ವವನ್ನು ಸ್ಥಾಪಿಸಿವೆ. ಆದ್ದರಿಂದ, ಆಪಲ್ ಭಾರತೀಯ ಮಧ್ಯ-ವಿಭಾಗದ ಮಾರುಕಟ್ಟೆಯಲ್ಲಿ ಮಧ್ಯಮ ಶ್ರೇಣಿಯ ಬೆಲೆಗಳಲ್ಲಿ 5G ಸಾಮರ್ಥ್ಯಗಳೊಂದಿಗೆ ಐಫೋನ್ SE 2022 ಅಥವಾ iPhone SE 3 ಸ್ಮಾರ್ಟ್‌ಫೋನನ್ನು ಅನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಈ iPhone SE 5G ಮಾದರಿಯ ಸರಾಸರಿ ಆರಂಭಿಕ ಬೆಲೆಯು $269 (ಅಂದಾಜು 20 ಸಾವಿರ ರೂ.) ರಿಂದ $399 ಅಂದಾಜು 30 ಸಾವಿರ ರೂ.) ವರೆಗೆ ಇರುತ್ತದೆ ಅಥವಾ ಆ ಪೋನಿನ ಬೆಲೆ ಇನ್ನೂ ಸ್ಪರ್ಧಾತ್ಮಕವಾಗಿರಬಹುದು ಎಂದು ಹಣಕಾಸು ವಿಶ್ಲೇಷಕ ಸಂಸ್ಥೆಯಾದ JP ಮೋರ್ಗಾನ್ ಚೇಸ್ ವರದಿಯಲ್ಲಿ ತಿಳಿಸಲಾಗಿತ್ತು. ಇದೀಗ ವಿಶ್ಲೇಷಕ ಜಾನ್ ಡೊನೊವನ್ ಅವರು ಕೂಡ ಈ ಬಗ್ಗೆ ಖಚಿತಪಡಿಸಿದ್ದಾರೆ.
ಆಪಲ್ ಕಂಪೆನಿ ತನ್ನ ಮುಂಬರುವ iPhone SE 5G ಸ್ಮಾರ್ಟ್‌ಫೋನ್ ಮೂಲಕ 1.4 ಶತಕೋಟಿ ಕಡಿಮೆ-ಮಧ್ಯ-ಮಧ್ಯದ ಆಂಡ್ರಾಯ್ಡ್ ಖರೀದಿದಾರರನ್ನು ಮತ್ತು ಸುಮಾರು 300 ಮಿಲಿಯನ್ ಹಳೆಯ ಐಫೋನ್ ಬಳಕೆದಾರರನ್ನು ಆಕರ್ಷಿಸುತ್ತದೆ ಎಂದು ಹೇಳಲಾಗಿದೆ. ಒಂದು ವೇಳೆ ಆಪಲ್ ಇಂತಹದೊಂದು ನಿರ್ಧಾರ ಕೈಗೊಂಡಿದ್ದರೆ, ಮೊಬೈಲ್ ಮಾರುಕಟ್ಟೆಯಲ್ಲಿ ಹೊಸದೊಂದು ಸಂಚಲನ ಮೂಡಲಿದೆ. ಈಗ ಅಸ್ತಿತ್ವದಲ್ಲಿರುವ iPhone SE ನ ಬೆಲೆ $399 ರಿಂದ ಪ್ರಾರಂಭವಾಗುತ್ತದೆ, iPhone 13 ಗೆ $799 ಮತ್ತು iPhone 13 Pro ಗೆ $999 ಗೆ ಹೋಲಿಸಿದರೆ ಇದು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಫೋನ್ ಆಗಿದೆ. ಇದೇ ವೇಳೆಯಲ್ಲಿ iPhone SE 5G ಮಾದರಿಯ ಸರಾಸರಿ ಆರಂಭಿಕ ಬೆಲೆಯು $269 (ಅಂದಾಜು 20 ಸಾವಿರ ರೂ.) ಗಳಿಂದ ಆರಂಂಭವಾದರೆ, ಭಾರತೀಯ ಮಧ್ಯ-ವಿಭಾಗದ ಮಾರುಕಟ್ಟೆಯನ್ನು ಭೇದಿಸಲು ಆಪಲ್‌ಗೆ ಕಷ್ಟವಾಗುವುದಿಲ್ಲ. 5G ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಗ್ರೇಡ್ ಮಾಡಲು ಕಾಯುತ್ತಿರುವ ಗ್ರಾಹಕರ ಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ ಆಪಲ್ ಇಂತಹ ಮಾರುಕಟ್ಟೆಯನ್ನು ಸದುಪಯೋಗಪಡಿಸಿಕೊಳ್ಳಲು ತಯಾರಿಯನ್ನು ನಡೆಸಿಕೊಂಡಿದೆ ಎಂದು JP ಮೋರ್ಗಾನ್ ವರದಿಯು ತಿಳಿಸಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ, Apple iPhone SE 3 5G ಪೋನಿನ ಹಲವು ವೈಶಿಷ್ಟ್ಯಗಳು ಲೀಕ್ ಆಗಿವೆ. Apple iPhone SE 3 5G ಪ್ರಸ್ತುತ iPhone SE ಯಂತೆಯೇ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿರುತ್ತದೆ ಮತ್ತು 4.7-ಇಂಚಿನ LCD ಡಿಸ್ಪ್ಲೇಯನ್ನು ಪ್ರದರ್ಶಿಸುತ್ತದೆ. ಈ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಪ್ರೊಸೆಸರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಆದರೂ ಪ್ರೊಸೆಸರ್ iPhone 12 A14 ಬಯೋನಿಕ್ ಚಿಪ್ ಅಥವಾ iPhone 13 A15 ಬಯೋನಿಕ್ ಚಿಪ್ ಆಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ವರೆಗೂ ನಂಬಲರ್ಹ ಮೂಲಗಳಿಂದ ಇಷ್ಟು ಮಾಹಿತಿಗಳು ಮಾಧ್ಯಮಗಳಿಗೆ ದೊರೆತಿದ್ದರೂ ಸಹ, ಈ ಬಗ್ಗೆ ಆಪಲ್ ಕಂಪೆನಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ ಎಂಬುದನ್ನು ಗಮನಿಸಬೇಕು.
ಮತ್ತೊಂದು ಸಂಬಂಧಿತ ವರದಿಯಲ್ಲಿ, 2022 ರಲ್ಲಿ iPhone SE ಘಟಕಗಳಿಗೆ 30 ಮಿಲಿಯನ್ ಮಾರಾಟವನ್ನು ಅಂದಾಜಿಸಿರುವ ಬಗ್ಗೆ ತಿಳಿಸಿತ್ತು. ಇದು ಹಿಂದಿನ ವರ್ಷಕ್ಕಿಂತ 10 ಮಿಲಿಯನ್ ಹೆಚ್ಚು ಎಂದು ಹೆಚ್ಚು ಎಂಬುದನ್ನು ನಾವು ನೋಡಬಹುದು. ಭಾರತ ಸೇರಿದಂತೆ ಪಂಚದಾದ್ಯಂತ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಖರೀದಿದಾರರನ್ನು ಗುರಿಯಾಗಿಸಿಕೊಂಡು 2022 ರ ಆರಂಭದಲ್ಲಿ 5G ಸಾಮರ್ಥ್ಯದ iPhone SE ಫೋನನ್ನು ಬಿಡುಗಡೆ ಮಾಡಲು ಟೆಕ್-ದೈತ್ಯ Apple ಕಂಪೆನಿ ಮುಂದಾಗಿರುವುದು ಇಂತಹ ಗುರಿಯನ್ನು ಹೊಂದಲು ಕಾರಣವಾಗಿರಬಹುದು. ಅಂದರೆ, ಭಾರತ ಸೇರಿದಂತೆ ಪಂಚದಾದ್ಯಂತ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಖರೀದಿದಾರರ ಮೇಲೆ ಆಪಲ್ ಕಣ್ಣು ಬಿದ್ದಿರಬಹುದು.
ಆಪಲ್ ಐಫೋನ್SE 3 ಸ್ಪೆಸಿಫಿಕೇಶನ್ಸ್
ಪರ್ಫಾಮೆನ್ಸ್ | Apple A14 Bionic |
ಡಿಸ್‌ಪ್ಲೇ | 6.0 inches (15.24 cm) |
ಸ್ಟೋರೇಜ್ | 64 GB |
ಕ್ಯಾಮರಾ | 12 MP + 12 MP |
ಬ್ಯಾಟರಿ | 2821 mAh |
ಭಾರತದಲ್ಲಿ ಬೆಲೆ | 45990 |
ರ‍್ಯಾಮ್ | 3 GB |
Apple Iphone Se 3 Price Tipped Ahead Of Expected March 8 Launch, All Details
23-01-25 09:38 pm
Bangalore Correspondent
Mangalore Saloon Attack, Dinesh Gundu Rao: ದೇ...
23-01-25 05:15 pm
Lokayukta, MUDA Case, CM Siddaramaiah; ಸಿಎಂ ಕ...
23-01-25 12:57 pm
C T Ravi, Mallikarjun Kharge: ಪ್ರಿಯಾಂಕಾ ಗಾಂಧಿ...
22-01-25 10:38 pm
Janardhana Reddy, Sreeramulu: ಜನಾರ್ದನ ರೆಡ್ಡಿ...
22-01-25 06:29 pm
21-01-25 11:02 pm
HK News Desk
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
23-01-25 11:03 pm
Mangalore Correspondent
Kotekar Bank Robbery, Update, Arrest: ಕೋಟೆಕಾರ...
23-01-25 10:35 pm
Mangalore Singari Beedi, Crime, Arrest: ಸಿಂಗಾ...
23-01-25 08:58 pm
Saloon Attack, 14 Arrested, Mangalore Crime:...
23-01-25 08:25 pm
Attack on saloon, Ram Sena, Prasad Attavar Ar...
23-01-25 05:43 pm
22-01-25 09:50 pm
HK News Desk
Mangalore Kotekar Robbery, Murugan D Devar: ಮ...
22-01-25 01:18 pm
Mangalore cyber fraud: ಹಣ ಡಬಲ್ ಮಾಡಿಕೊಡುವ ಆಮಿಷ...
22-01-25 11:04 am
Kotekar Bank Robbery, Police Shoot: ಬ್ಯಾಂಕ್ ದ...
21-01-25 06:00 pm
Hubballi Bank Robbery, Kotekar, Bidar: ಬೀದರ್...
20-01-25 10:18 pm