ನಮ್ಮ ಕನ್ನಡ ಭಾಷೆಯಲ್ಲಿ ಫೇಸ್‌ಬುಕ್‌ ಅನ್ನು ಬಳಸುವುದು ಹೇಗೆ?

01-03-22 09:07 pm       Source: Vijayakarnataka   ಡಿಜಿಟಲ್ ಟೆಕ್

ನಮ್ಮಲ್ಲಿ ಅನೇಕರು ನಮ್ಮ ಪ್ರಾದೇಶಿಕ ಭಾಷೆಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಕೆಲವರಿಗೆ 'ಇಂಗ್ಲಿಷ್' ಭಾಷೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು ಅಥವಾ ನಮ್ಮ ಹುಟ್ಟು ಬಾಷೆಯ ಮೇಲಿನ ಅಭಿಮಾನವಿರಬಹುದು. ನೀವು ಕೂಡ ಇವುಗಳಲ್ಲಿ ಯಾವುದಾದರೂ ಆಶಯವನ್ನು ಹೊಂದಿದ್ದರೆ.

ಭಾರತೀಯರು ಅತ್ಯಂತ ಹೆಚ್ಚು ಬಳಸುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ 'ಫೇಸ್‌ಬುಕ್' ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ನೆಚ್ಚಿನ ಜನರೊಂದಿಗೆ ಸಂಪರ್ಕ ಸಾಧಿಸುವುದರ ಜೊತೆಗೆ ಇಂದು ಫೇಸ್‌ಬುಕ್ ಮೂಲಕ ಜನರು ತಮ್ಮ ವ್ಯವಹಾರಗಳನ್ನು ಸಹ ಕೈಗೊಳ್ಳಲು ಸಹಾಯಕಾರಿಯಾಗಿದೆ. ನಮ್ಮಲ್ಲಿ ಅನೇಕರು ನಮ್ಮ ಪ್ರಾದೇಶಿಕ ಭಾಷೆಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಕೆಲವರಿಗೆ 'ಇಂಗ್ಲಿಷ್' ಭಾಷೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು ಅಥವಾ ನಮ್ಮ ಹುಟ್ಟು ಬಾಷೆಯ ಮೇಲಿನ ಅಭಿಮಾನವಿರಬಹುದು. ನೀವು ಕೂಡ ಇವುಗಳಲ್ಲಿ ಯಾವುದಾದರೂ ಆಶಯವನ್ನು ಹೊಂದಿದ್ದರೆ, ಫೇಸ್‌ಬುಕ್ ಆಪ್ ಅನ್ನು ಬಳಸುವಾಗ ನಿಮ್ಮದೇ ಬಾಷೆಯಲ್ಲಿ ಬಳಸಿ. ಫೇಸ್‌ಬುಕ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಫೇಸ್‌ಬುಕ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

Facebook plans to remove thousands of sensitive ad-targeting options |  Reuters

ಫೇಸ್‌ಬುಕ್‌ನಲ್ಲಿ ನೀವು ಇಂಗ್ಲಿಷ್ ಜೊತೆಗೆ ಹಲವಾರು ಭಾಷಾ ಆಯ್ಕೆಗಳನ್ನು ಪಡೆಯುತ್ತೀರಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್ ಭಾಷೆಯನ್ನು ನಮ್ಮ ಕನ್ನಡ ಭಾಷೆ ಸೇರಿದಂತೆ ಇತರೆ ಭಾಷೆಗಳಿಗೆ ಹೇಗೆ ಬದಲಾಯಿಸುವುದು ಎಂಬುದು ಇಲ್ಲಿದೆ.

  1. Facebook ಅಪ್ಲಿಕೇಶನ್ ತೆರೆಯಿರಿ ಮತ್ತು ಮೇಲಿನ ಬಲ ಮೂಲೆಯಲ್ಲಿ ಇರಿಸಲಾಗಿರುವ ಮೂರು ಸಾಲುಗಳ ಮೇಲೆ ಟ್ಯಾಪ್ ಮಾಡಿ.
  2. ಈಗ, ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಆಯ್ಕೆಯನ್ನು ಪ್ರವೇಶಿಸಲು ಕೆಳಗೆ ಸ್ಕ್ರಾಲ್ ಮಾಡಿ.
  3. ಸೆಟ್ಟಿಂಗ್ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಂತರ 'ಪ್ರಾಶಸ್ತ್ಯ' ವಿಭಾಗದ ಅಡಿಯಲ್ಲಿ ಇರಿಸಲಾದ 'ಭಾಷೆ ಮತ್ತು ಪ್ರದೇಶ' ಆಯ್ಕೆಯನ್ನು ಟ್ಯಾಪ್ ಮಾಡಿ.
  4. ಫೇಸ್‌ಬುಕ್‌ನಿಂದ ಬಟನ್‌ಗಳ ಶೀರ್ಷಿಕೆಗಳು ಮತ್ತು ಇತರ ಪಠ್ಯಗಳ ಭಾಷೆ ಎಂದು ನಮೂದಿಸಲಾದ ಮೊದಲ ಆಯ್ಕೆಯನ್ನು ಕ್ಲಿಕ್ ಮಾಡಿ.
  5. ಈಗ, ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ. ನಿಮ್ಮ ಪೋಸ್ಟ್ ಅನ್ನು ನೀವು ಯಾವ ಭಾಷೆಯಲ್ಲಿ ಭಾಷಾಂತರಿಸಲು ಬಯಸುತ್ತೀರಿ ಎಂಬುದನ್ನು ಹೊಂದಿಸಲು ಫೇಸ್‌ಬುಕ್ ನಿಮಗೆ ಅನುಮತಿಸುತ್ತದೆ.

Instagram ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

What Is Instagram and How It Works: a Beginner's Guide

ಫೇಸ್‌ಬುಕ್ (ಮೆಟಾ) ಒಡೆತನದ ಮತ್ತೊಂದು ಜನಪ್ರಿಯ ಸಾಮಾಜಿಕ ಜಾಲತಾಣ Instagram ಆಪ್‌ನಲ್ಲೂ ಕೂಡ ನಾವು ಭಾಷೆಯನ್ನು ಬದಲಾಯಿಸಬಹುದಾಗಿದೆ. ಆದರೆ, ನೀವು Instagram ನಲ್ಲಿ ಹಿಂದಿ ಭಾಷೆಗೆ ಮಾತ್ರ ಬದಲಾಯಿಸಬಹುದು.ನೀವು Instagram ನಲ್ಲಿ ಇಂಗ್ಲಿಷ್ ಭಾಷೆಗಳಿಂದ ಹಿಂದಿಗೆ ಬದಲಾಯಿಸಲು ಬಯಸಿದರೆ, ಈ ಹಂತಗಳನ್ನು ಅನುಸರಿಸಿ:

  1. ಮೊದಲು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು Instagram ಅಪ್ಲಿಕೇಶನ್ ಅನ್ನು ತೆರೆಯಬೇಕು.
  2. ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಮೇಲಿನ ಬಲ ಮೂಲೆಯಲ್ಲಿ ಪ್ರದರ್ಶಿಸಲಾದ ಮೂರು ಸಾಲುಗಳನ್ನು ಟ್ಯಾಪ್ ಮಾಡಿ.
  3. ಈಗ, ಸೆಟ್ಟಿಂಗ್‌ಗಳು > ಖಾತೆ > ಭಾಷೆಯ ಮೇಲೆ ಕ್ಲಿಕ್ ಮಾಡಿ.
  4. ನಂತರ ಬದಲಾಯಿಸಲು ಹಿಂದಿ ಭಾಷೆಯ ಮೇಲೆ ಕ್ಲಿಕ್ ಮಾಡಿ. ಅಂತೆಯೇ, ನೀವು ಮತ್ತೆ ಇಂಗ್ಲಿಷ್ ಭಾಷೆಗೆ ಬದಲಾಯಿಸಬಹುದು.

How To Change Language On Facebook, Step By Step Guide.