ಬ್ರೇಕಿಂಗ್ ನ್ಯೂಸ್
03-03-22 10:05 pm Source: Vijayakarnataka ಡಿಜಿಟಲ್ ಟೆಕ್
ವಿಶ್ವ ಟೆಕ್ ಲೋಕದ ನಿರೀಕ್ಷೆಯಂತೆಯೇ Apple ತನ್ನ 2022 ಸ್ಪ್ರಿಂಗ್ ಈವೆಂಟ್ ಅನ್ನು ಇದೇ ಮಾರ್ಚ್ 8 ರಂದು ಆಯೋಜಿಸುವುದಾಗಿ ದೃಢಪಡಿಸಿದೆ. ಈ ಈವೆಂಟ್‌ನಲ್ಲಿ ಆಪಲ್‌ನ ಬಹುನಿರೀಕ್ಷಿತ ಮೂರನೇ ತಲೆಮಾರಿನ ಆಪಲ್ Apple iPhone SE 5G ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಬಾರಿಯ ಆಪಲ್ ಈವೆಂಟ್ ವಿಶೇಷವೆಂದರೆ, ಸಾಮಾನ್ಯವಾಗಿ ಆಪಲ್ ಕಂಪನಿಯ ಐಫೋನ್‌ಗಳು ದುಬಾರಿಯಾಗಿರುತ್ತವೆ. ಆದರೆ, ಆಪಲ್ ಕಂಪನಿಯ ಇತರ ಸಾಧನಗಳಿಗೆ ಹೋಲಿಸಿದರೆ ಮಾರ್ಚ್ 8ರಂದು ಬಿಡುಗಡೆಯಾಗಲಿರುವ 5G ಸಾಮರ್ಥ್ಯದ Apple iPhone SE ಮೂರನೇ ತಲೆಮಾರಿನ ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ವೆಚ್ಚದ ಐಫೋನ್ ಆಗಿರಲಿದೆ ಎನ್ನಲಾಗಿರುವುದು. ಏಕೆಂದರೆ, ಈ ಪೋನ್ ಬೆಲೆಯ 23 ಸಾವಿರ ರೂ.ಗಳಿಂದ ಆರಂಭವಾಗುವ ನಿರೀಕ್ಷೆಯಿದೆ.
ಅಧಿಕೃತ ಅನಾವರಣಕ್ಕೆ ಕೆಲವೇ ದಿನಗಳ ಮೊದಲುApple iPhone SE 5G ಸಾಧನದ ಟೆಂಪರ್ಡ್ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಬೆಲ್ಕಿನ್ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಗುರುತಿಸಲಾಗಿದೆ ಎಂದು ವರದಿಯಾಗಿದೆ, ಮುಂಬರುವ Apple ಈವೆಂಟ್‌ನಲ್ಲಿ ಬ್ರಾಂಡ್ ಐಫೋನ್ SE ಯ ಹೊಸ ಆವೃತ್ತಿಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಸೂಚಿಸುತ್ತದೆ. iMore "ಬೆಲ್ಕಿನ್ iPhone SE (3 ನೇ ತಲೆಮಾರಿನ) ಗಾಗಿ ರಕ್ಷಣಾತ್ಮಕ ಗ್ಲಾಸ್ ಫಿಲ್ಮ್" ಮಾರಾಟದಲ್ಲಿದೆ ಎಂದು ಹೇಳುವ ಪಟ್ಟಿಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ.ಬಿಡುಗಡೆ ಕಾರ್ಯಕ್ರಮದ ಕೇವಲ ಒಂದು ದಿನದ ನಂತರ ಮಾರ್ಚ್ 10 ರಂದು ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂದು ಪಟ್ಟಿ ಹೇಳುತ್ತದೆ. ಈ ದಿನಾಂಕವು ಪೂರ್ವ-ಆದೇಶಕ್ಕಾಗಿ ಆಗಿರಬಹುದು ಮತ್ತು ಮಾರಾಟವು ತಿಂಗಳ ನಂತರ ನಡೆಯಬಹುದು.
ಆಪಲ್ ತನ್ನ ಹೊಸ 'ಕೈಗೆಟುಕುವ' ಐಫೋನ್ SE 2022 ಅಥವಾ iPhone SE 3 ಸ್ಮಾರ್ಟ್‌ಫೋನನ್ನು ಇದೇ ಮಾರ್ಚ್ 8 ರಂದು ಬಿಡುಗಡೆ ಮಾಡಲು ತಯಾರಾಗಿದೆ ಹಾಗೂ ಆ ಹೊಸ iPhone SE 3 ಫೋನಿನ ಬೆಲೆಯು ಸರಿ ಸುಮಾರು $300 (ಸರಿಸುಮಾರು 22,500 ರೂ.) ಡಾಲರ್ ಬೆಲೆಯನ್ನು ಹೊಂದಿರಲಿದೆ ಎಂಬ ಹಲವು ಸುದ್ದಿಗಳು ಇತ್ತಿಚಿಗಷ್ಟೇ ಹೊರಬಿದ್ದಿದ್ದವು. ಟೆಕ್ ವಿಶ್ಲೇಷಕ ಜಾನ್ ಡೊನೊವನ್ ಅವರ ಖಚಿತ ಮಾಹಿತಿ ಮೂಲವನ್ನು ಒದಗಿಸಿ ಪ್ರಮುಖ ಟೆಕ್ ಮಾಧ್ಯಮಗಳೆಲ್ಲವೂ ಈ ಬಗ್ಗೆ ವರದಿ ಮಾಡಿದ್ದು, iPhone 12 ನ ಮೂಲ ಮಾದರಿಗಿಂತ ಗಮನಾರ್ಹವಾಗಿ ಹೆಚ್ಚು ಕೈಗೆಟುಕುವಂಹ ಬೆಲೆಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೂ ಮೊದಲು ಜಾಗತಿಕ ಹಣಕಾಸು ವಿಶ್ಲೇಷಕ ಸಂಸ್ಥೆಯಾದ JP ಮೋರ್ಗಾನ್ ಚೇಸ್ ಕೂಡ ಇದೇ ರೀತಿಯಲ್ಲಿ 20 ಸಾವಿರದ ಆಸುಪಾಸಿನಲ್ಲಿ ಆಪಲ್ ಐಫೋನ್ ಸಿಹಿಸುದ್ದಿಯೊಂದನ್ನು ನೀಡಿತ್ತು.
ಹೌದು, ಪ್ರಸ್ತುತ ಭಾರತದಲ್ಲಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. Samsung, xiaomi, Oppo, Realme ಮತ್ತು Motorola ನಂತಹ ಕಂಪೆನಿಗಳು ಬಜೆಟ್ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಪ್ರಭುತ್ವವನ್ನು ಸ್ಥಾಪಿಸಿವೆ. ಆದ್ದರಿಂದ, ಆಪಲ್ ಭಾರತೀಯ ಮಧ್ಯ-ವಿಭಾಗದ ಮಾರುಕಟ್ಟೆಯಲ್ಲಿ ಮಧ್ಯಮ ಶ್ರೇಣಿಯ ಬೆಲೆಗಳಲ್ಲಿ 5G ಸಾಮರ್ಥ್ಯಗಳೊಂದಿಗೆ ಐಫೋನ್ SE 2022 ಅಥವಾ iPhone SE 3 ಸ್ಮಾರ್ಟ್‌ಫೋನನ್ನು ಅನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಈ iPhone SE 5G ಮಾದರಿಯ ಸರಾಸರಿ ಆರಂಭಿಕ ಬೆಲೆಯು $269 (ಅಂದಾಜು 20 ಸಾವಿರ ರೂ.) ರಿಂದ $399 ಅಂದಾಜು 30 ಸಾವಿರ ರೂ.) ವರೆಗೆ ಇರುತ್ತದೆ ಅಥವಾ ಆ ಪೋನಿನ ಬೆಲೆ ಇನ್ನೂ ಸ್ಪರ್ಧಾತ್ಮಕವಾಗಿರಬಹುದು ಎಂದು ಹಣಕಾಸು ವಿಶ್ಲೇಷಕ ಸಂಸ್ಥೆಯಾದ JP ಮೋರ್ಗಾನ್ ಚೇಸ್ ವರದಿಯಲ್ಲಿ ತಿಳಿಸಲಾಗಿತ್ತು. ಇದೀಗ ವಿಶ್ಲೇಷಕ ಜಾನ್ ಡೊನೊವನ್ ಅವರು ಕೂಡ ಈ ಬಗ್ಗೆ ಖಚಿತಪಡಿಸಿದ್ದಾರೆ.
ಆಪಲ್ ಕಂಪೆನಿ ತನ್ನ ಮುಂಬರುವ iPhone SE 5G ಸ್ಮಾರ್ಟ್‌ಫೋನ್ ಮೂಲಕ 1.4 ಶತಕೋಟಿ ಕಡಿಮೆ-ಮಧ್ಯ-ಮಧ್ಯದ ಆಂಡ್ರಾಯ್ಡ್ ಖರೀದಿದಾರರನ್ನು ಮತ್ತು ಸುಮಾರು 300 ಮಿಲಿಯನ್ ಹಳೆಯ ಐಫೋನ್ ಬಳಕೆದಾರರನ್ನು ಆಕರ್ಷಿಸುತ್ತದೆ ಎಂದು ಹೇಳಲಾಗಿದೆ. ಒಂದು ವೇಳೆ ಆಪಲ್ ಇಂತಹದೊಂದು ನಿರ್ಧಾರ ಕೈಗೊಂಡಿದ್ದರೆ, ಮೊಬೈಲ್ ಮಾರುಕಟ್ಟೆಯಲ್ಲಿ ಹೊಸದೊಂದು ಸಂಚಲನ ಮೂಡಲಿದೆ. ಈಗ ಅಸ್ತಿತ್ವದಲ್ಲಿರುವ iPhone SE ನ ಬೆಲೆ $399 ರಿಂದ ಪ್ರಾರಂಭವಾಗುತ್ತದೆ, iPhone 13 ಗೆ $799 ಮತ್ತು iPhone 13 Pro ಗೆ $999 ಗೆ ಹೋಲಿಸಿದರೆ ಇದು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಫೋನ್ ಆಗಿದೆ. ಇದೇ ವೇಳೆಯಲ್ಲಿ iPhone SE 5G ಮಾದರಿಯ ಸರಾಸರಿ ಆರಂಭಿಕ ಬೆಲೆಯು $269 (ಅಂದಾಜು 20 ಸಾವಿರ ರೂ.) ಗಳಿಂದ ಆರಂಂಭವಾದರೆ, ಭಾರತೀಯ ಮಧ್ಯ-ವಿಭಾಗದ ಮಾರುಕಟ್ಟೆಯನ್ನು ಭೇದಿಸಲು ಆಪಲ್‌ಗೆ ಕಷ್ಟವಾಗುವುದಿಲ್ಲ. 5G ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಗ್ರೇಡ್ ಮಾಡಲು ಕಾಯುತ್ತಿರುವ ಗ್ರಾಹಕರ ಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ ಆಪಲ್ ಇಂತಹ ಮಾರುಕಟ್ಟೆಯನ್ನು ಸದುಪಯೋಗಪಡಿಸಿಕೊಳ್ಳಲು ತಯಾರಿಯನ್ನು ನಡೆಸಿಕೊಂಡಿದೆ ಎಂದು JP ಮೋರ್ಗಾನ್ ವರದಿಯು ತಿಳಿಸಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ, Apple iPhone SE 3 5G ಪೋನಿನ ಹಲವು ವೈಶಿಷ್ಟ್ಯಗಳು ಲೀಕ್ ಆಗಿವೆ. Apple iPhone SE 3 5G ಪ್ರಸ್ತುತ iPhone SE ಯಂತೆಯೇ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿರುತ್ತದೆ ಮತ್ತು 4.7-ಇಂಚಿನ LCD ಡಿಸ್ಪ್ಲೇಯನ್ನು ಪ್ರದರ್ಶಿಸುತ್ತದೆ. ಈ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಪ್ರೊಸೆಸರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಆದರೂ ಪ್ರೊಸೆಸರ್ iPhone 12 A14 ಬಯೋನಿಕ್ ಚಿಪ್ ಅಥವಾ iPhone 13 A15 ಬಯೋನಿಕ್ ಚಿಪ್ ಆಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ವರೆಗೂ ನಂಬಲರ್ಹ ಮೂಲಗಳಿಂದ ಇಷ್ಟು ಮಾಹಿತಿಗಳು ಮಾಧ್ಯಮಗಳಿಗೆ ದೊರೆತಿದ್ದರೂ ಸಹ, ಈ ಬಗ್ಗೆ ಆಪಲ್ ಕಂಪೆನಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ ಎಂಬುದನ್ನು ಗಮನಿಸಬೇಕು.
ಮತ್ತೊಂದು ಸಂಬಂಧಿತ ವರದಿಯಲ್ಲಿ, 2022 ರಲ್ಲಿ iPhone SE ಘಟಕಗಳಿಗೆ 30 ಮಿಲಿಯನ್ ಮಾರಾಟವನ್ನು ಅಂದಾಜಿಸಿರುವ ಬಗ್ಗೆ ತಿಳಿಸಿತ್ತು. ಇದು ಹಿಂದಿನ ವರ್ಷಕ್ಕಿಂತ 10 ಮಿಲಿಯನ್ ಹೆಚ್ಚು ಎಂದು ಹೆಚ್ಚು ಎಂಬುದನ್ನು ನಾವು ನೋಡಬಹುದು. ಭಾರತ ಸೇರಿದಂತೆ ಪಂಚದಾದ್ಯಂತ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಖರೀದಿದಾರರನ್ನು ಗುರಿಯಾಗಿಸಿಕೊಂಡು 2022 ರ ಆರಂಭದಲ್ಲಿ 5G ಸಾಮರ್ಥ್ಯದ iPhone SE ಫೋನನ್ನು ಬಿಡುಗಡೆ ಮಾಡಲು ಟೆಕ್-ದೈತ್ಯ Apple ಕಂಪೆನಿ ಮುಂದಾಗಿರುವುದು ಇಂತಹ ಗುರಿಯನ್ನು ಹೊಂದಲು ಕಾರಣವಾಗಿರಬಹುದು. ಅಂದರೆ, ಭಾರತ ಸೇರಿದಂತೆ ಪಂಚದಾದ್ಯಂತ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಖರೀದಿದಾರರ ಮೇಲೆ ಆಪಲ್ ಕಣ್ಣು ಬಿದ್ದಿರಬಹುದು.
Iphone Se 3 Or Iphone Se 5g Release Date Tipped Ahead Of Apple’s March 8 Event
23-11-24 07:43 pm
Bangalore Correspondent
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
24-11-24 05:16 pm
Mangalore Correspondent
Naxal Vikram Gowda, Murdeshwar, Mangalore: ಪೊ...
24-11-24 03:21 pm
Mangalore, Someshwara Suicide; ಸೋಮೇಶ್ವರ ರುದ್ರ...
24-11-24 01:18 pm
MP Captian Brijesh Chowta, Mangalore: ಐಬಿಆರ್...
23-11-24 10:37 pm
Mangalore, Shiradi Ghat Accident: ಬೆಂಗಳೂರಿನ ಕ...
23-11-24 12:20 pm
24-11-24 04:33 pm
Bangalore Correspondent
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm