iPhone ಬ್ಯಾಟರಿ ಆರೋಗ್ಯವು 100% ಇರುವಂತೆ ನೋಡಿಕೊಳ್ಳುವುದು ಹೇಗೆ?

12-03-22 10:33 pm       Source: Vijayakarnataka   ಡಿಜಿಟಲ್ ಟೆಕ್

ನಿಮ್ಮ ಐಫೋನ್ ಬ್ಯಾಟರಿಯ ಆರೋಗ್ಯವನ್ನು ಮತ್ತೆ 100 ಪ್ರತಿಶತಕ್ಕೆ ಹೆಚ್ಚಿಸಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಿ. ನಿಮ್ಮ ಫೋನ್ ಈಗಾಗಲೇ ಬ್ಯಾಟರಿಯ ಆರೋಗ್ಯವನ್ನು ಕಳೆದುಕೊಂಡಿದ್ದರೆ, ಬ್ಯಾಟರಿಯನ್ನು ಬದಲಾಯಿಸುವುದನ್ನು ಬಿಟ್ಟು ಬೇರೆ ಏನೂ ಮಾಡಲು ಸಾಧ್ಯವಿಲ್ಲ.

ವಿಶ್ವದ ಜನಪ್ರಿಯ ಟೆಕ್ ಕಂಪೆನಿ Apple ಯಾವಾಗಲೂ ತನ್ನ ಸಾಧನಗಳಲ್ಲಿ ಉತ್ತಮ ಬ್ಯಾಟರಿ ಅವಧಿಯನ್ನು ಒದಗಿಸಲು ಪ್ರಯತ್ನಿಸುತ್ತದೆ. ಆದರೆ, ನಿರ್ದಿಷ್ಟ ತಂತ್ರಜ್ಞಾನ ಹಾಗೂ ಬ್ಯಾಟರಿ ಸಂಯೋಜನೆಯ ಕಾರಣದಿಂದಾಗಿ ಆಪಲ್‌ ತನ್ನ ಸಾಧನಗಳಲ್ಲಿ ಹೆಚ್ಚು ಸಾಮರ್ಥ್ಯದ ಬ್ಯಾಟರಿಗಳನ್ನು ಅಳವಡಿಸಲು ಮುಂದಾಗುವುದಿಲ್ಲ ಎನ್ನುತ್ತವೆ ಹಲವು ವರದಿಗಳು. ಇದರಿಂದಾಗಿಯೇ ಆಪಲ್ ಐಫೋನ್‌ಗಳಲ್ಲಿ ಹೆಚ್ಚು ಕಾಲ ಬ್ಯಾಟರಿ ಸಾಮರ್ಥ್ಯ ನಿಲ್ಲುವುದಿಲ್ಲ ಎಂಬ ಕಾರಣವೂ ಇದೆ. ಈ ವಿಚಾರಗಳೆಲ್ಲವನ್ನು ತಿಳಿಯುವುದು ಉತ್ತಮ. ಆದರೆ, ಈ ಎಲ್ಲಾ ಕಾರಣಗಳನ್ನು ತಿಳಿಯುವುದಕ್ಕಿಂತ ಹೆಚ್ಚಾಗಿ ಇಂದಿನ ಲೇಖನದಲ್ಲಿ ನಿಮ್ಮ ಐಫೋನ್ ಬ್ಯಾಟರಿಯ ಆರೋಗ್ಯವನ್ನು 100 ಪ್ರತಿಶತ ಇಟ್ಟುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೊಣ ಬನ್ನಿ.

ಆಪಲ್ ತನ್ನ ಐಫೋನ್‌ಗಳ ಬ್ಯಾಟರಿಗಳಿಗಾಗಿ ಆಪಲ್ ಲಿಥಿಯಂ-ಐಯಾನ್ ತಂತ್ರಜ್ಞಾನವನ್ನು ಬಳಸುತ್ತದೆ. ಈ ಲಿಥಿಯಂ-ಐಯಾನ್ ಬ್ಯಾಟರಿಗಳು ವೇಗವಾಗಿ ಚಾರ್ಜ್ ಆಗುತ್ತವೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ಹೆಚ್ಚಿನ ಬ್ಯಾಟರಿ ಬಾಳಿಕೆಗಾಗಿ ಹೆಚ್ಚಿನ ಶಕ್ತಿಯ ಸಾಂದ್ರತೆಯನ್ನು ಹೊಂದಿರುತ್ತವೆ. ಆದಾಗ್ಯೂ, ನಿಮ್ಮ ಆಪಲ್ ಸಾಧನದ ಅದರಲ್ಲೂ ಐಪೋನ್‌ಗಳ ಬ್ಯಾಟರಿ ಆರೋಗ್ಯವು ಒಂದು ನಿರ್ದಿಷ್ಟ ಅವಧಿಯ ನಂತರ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದನ್ನು ನೀವು ನಿಮ್ಮ ಐಫೋನ್ ಬ್ಯಾಟರಿ ಆರೋಗ್ಯವನ್ನು ಫೋನಿನ `ಸೆಟ್ಟಿಂಗ್ಸ್ > ಬ್ಯಾಟರಿ > ಬ್ಯಾಟರಿ ಹೆಲ್ತ್ ಕ್ಲಿಕ್ ಮಾಡುವ ಮೂಲಕ ಪರಿಶೀಲಿಸಬಹುದು ಮತ್ತು ಈ ಬಗ್ಗೆ ಸ್ವಲ್ಪ ಎಚ್ಚರಿಕೆಯನ್ನು ವಹಿಸಿದರೆ ನಿಮ್ಮ ಐಫೋನ್ ಬ್ಯಾಟರಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಈ ಬಗ್ಗೆ ತಿಳಿಯುವ ಮೊದಲು ನೀವು ಮತ್ತೊಂದು ಪ್ರಮುಖ ವಿಷಯವನ್ನು ನೀವು ತಿಳಿದಿರಬೇಕು. ಅದೇನೆಂದರೆ, ನಿಮ್ಮ ಐಫೋನ್ ಬ್ಯಾಟರಿಯ ಆರೋಗ್ಯವನ್ನು ಮತ್ತೆ 100 ಪ್ರತಿಶತಕ್ಕೆ ಹೆಚ್ಚಿಸಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಿ. ನಿಮ್ಮ ಫೋನ್ ಈಗಾಗಲೇ ಬ್ಯಾಟರಿಯ ಆರೋಗ್ಯವನ್ನು ಕಳೆದುಕೊಂಡಿದ್ದರೆ, ಬ್ಯಾಟರಿಯನ್ನು ಬದಲಾಯಿಸುವುದನ್ನು ಬಿಟ್ಟು ಬೇರೆ ಏನೂ ಮಾಡಲು ಸಾಧ್ಯವಿಲ್ಲ. ಬ್ಯಾಟರಿಯ ಸಾಮರ್ಥ್ಯದ ಇಳಿಕೆಯು ಆ ಬ್ಯಾಟರಿಯ ರಾಸಾಯನಿಕ ಸಂಯೋಜನೆಗೆ ನೇರವಾಗಿ ಅನುಪಾತದಲ್ಲಿರುತ್ತದೆ ಮತ್ತು ಒಮ್ಮೆ ಅದು ಕೆಳಗೆ ಬಂದರೆ ಅದನ್ನು 100 ಪ್ರತಿಶತಕ್ಕೆ ಹೆಚ್ಚಿಸಲು ಯಾವುದೇ ಮಾರ್ಗವಿಲ್ಲ. ಹಾಗಾಗಿ, ನಿಮ್ಮ ಐಫೋನಿನ ಬ್ಯಾಟರಿ ಹಾಳಾಗದಂತೆ ಬ್ಯಾಟರಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಚ್ಚರಿಕೆ ವಹಿಸಿ.

iphone battery health how to: How to check iPhone battery health and if you  need to replace it

ನಿಮ್ಮ ಐಫೋನಿನ ಬ್ಯಾಟರಿ ಆರೋಗ್ಯವು ಶೇಕಡಾ 80 ಕ್ಕಿಂತ ಕಡಿಮೆಯಿದ್ದರೆ, ಆ ಬ್ಯಾಟರಿಯನ್ನು ಬದಲಾಯಿಸುವುದು ಉತ್ತಮ ಎಂದು ಆಪಲ್ ಹೇಳುತ್ತದೆ. ಬ್ಯಾಟರಿ ಆರೋಗ್ಯವು ಶೇಕಡಾ 80 ಕ್ಕಿಂತ ಕಡಿಮೆಯಿದ್ದಾರೆ ನಿಮ್ಮ ಐಫೋನಿನಲ್ಲಿ ಹೆಚ್ಚು ಸಮಯ ಬ್ಯಾಟರಿ ಶಕ್ತಿ ಉಳಿಯುವುದಿಲ್ಲ. ಆದರೆ, ನೀವು 100 ಪ್ರತಿಶತ ಬ್ಯಾಟರಿ ಬಾಳಿಕೆಯೊಂದಿಗೆ ಹೊಸ ಐಫೋನ್ ಹೊಂದಿದ್ದರೆ, ನೀವು ಸರಿಯಾದ ಚಾರ್ಜಿಂಗ್ ತಂತ್ರಗಳನ್ನು ಬಳಸುವ ಮೂಲಕ ನಿಮ್ಮ ಫೋನಿನ ಬ್ಯಾಟರಿ ಆರೋಗ್ಯವನ್ನು 100 ಪ್ರತಿಶತದಲ್ಲಿ ಕಾಪಾಡಿಕೊಳ್ಳಬಹುದು. ಇದರಲ್ಲಿ ಆದ್ಯತೆಯ ಕಾರ್ಯವಾಗಿ, ಇಮ್ಮ ಫೋನಿನ ಜೊತೆಗೆ ಕಂಪನಿಯು ಒದಗಿಸಿದ ಮೂಲ ಕೇಬಲ್ ಮೂಲಕ ನಿಮ್ಮ ಸಾಧನವನ್ನು ಚಾರ್ಜ್ ಮಾಡಿ. ಕಳಪೆ ಚಾರ್ಜರ್ ಬಳಕೆಯೇ ಬ್ಯಾಟರಿ ಆರೋಗ್ಯವನ್ನು ಹಾಳು ಮಾಡುವ ಪ್ರಮುಖ ಅಂಶ ಎನ್ನುತ್ತವೆ ಹಲವು ವರದಿಗಳು.

ನಿಮ್ಮ ಐಫೋನನ್ನು 85% ಕ್ಕಿಂತ ಹೆಚ್ಚು ಚಾರ್ಜ್ ಮಾಡಬೇಡಿ ಮತ್ತು ಶೇಕಡಾ 20 ರಷ್ಟು ಬ್ಯಾಟರಿಯನ್ನು ತಲುಪಿದಾಗ ಚಾರ್ಜ್ ಮಾಡಿ. 85% ಕ್ಕಿಂತ ಹೆಚ್ಚು ಚಾರ್ಜ್ ಚಾರ್ಜಿಂಗ್ ಮಟ್ಟದೊಂದಿಗೆ ಬ್ಯಾಟರಿಯ ವೋಲ್ಟೇಜ್ ಮಟ್ಟವು ಹೆಚ್ಚಾಗುತ್ತದೆ ಮತ್ತು ಇದು ನಿಮ್ಮ ಬ್ಯಾಟರಿ ಅವಧಿಯನ್ನು ಕಡಿಮೆ ಮಾಡುತ್ತದೆ. ಇನ್ನು ನಿಮ್ಮ ಸಾಧನದ ಬ್ಯಾಟರಿ ಸಂಪೂರ್ಣವಾಗಿ ಡೆಡ್ ಆದರೆ ಅದಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿದ್ದು, ಬ್ಯಾಟರಿಯ ಆರೋಗ್ಯವನ್ನು ಹಾಳುಮಾಡಬಹುದು. ಹಾಗೆಯೇ, ನಿಮ್ಮ ಐಫೋನ್ ಅನ್ನು ಬಿಸಿ ಮಾಡುವಂತಹ ಕಾರ್ ಡ್ಯಾಶ್‌ಬೋರ್ಡ್, ನೇರವಾಗಿ ಸೂರ್ಯನ ಕಿರಣ ಅಥವಾ ಬೆಂಕಿಯ ಶಾಖಕ್ಕೆ ನೇರವಾಗಿ ಸಂಪರ್ಕಿಸುವ ಉಪಕ್ರಮಗಳು ಫೋನ್ ಬ್ಯಾಟರಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಿ.

How To Keep Your Iphone Battery Health At 100 Percent.