ಬ್ರೇಕಿಂಗ್ ನ್ಯೂಸ್
13-03-22 10:48 pm Source: Vijayakarnataka ಡಿಜಿಟಲ್ ಟೆಕ್
ಕೆಲವೊಂದು ಸಣ್ಣ ಸಣ್ಣ ವಿಷಯಗಳು ನಮ್ಮ ಮೆದುಳಿಗೆ ಎಷ್ಟೊಂದು ಕೆಲಸಕೊಡುತ್ತವೆ ಎಂದರೆ, ಆ ವಿಷಯದ ಬಗ್ಗೆ ಎಷ್ಟೇ ಯೋಚಿಸಿದರೂ ಸರಿಯಾದ ಉತ್ತರ ಸಿಗದೆ ನಾವು ಪರದಾಡಿರುತ್ತೇವೆ. ಆದರೆ, ಆ ಪ್ರಶ್ನೆಗೆ ಸರಿಯಾದ ಉತ್ತರ ದೊರೆತ ನಂತರ, ಅಯ್ಯೋ ಇದು ಇಷ್ಟೇನಾ ಎಂದು ಎನಿಸಿಬಿಡುತ್ತದೆ. ಇಂತಹದೊಂದು ಸಿಂಪಲ್ ವಿಷಯದ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ.! ನೀವು ಎಂದಾದರೂ ಮೊಬೈಲ್ ಸಿಮ್ ಕಾರ್ಡ್‌ಗಳು (SIM) ವಿಶಿಷ್ಟವಾದ ಕಟ್ ಆಕಾರವನ್ನು (ಒಂದು ಬದಿ ಸಣ್ಣದಾಗಿ ಕತ್ತರಿಸಿರುವ ರೀತಿ) ಏಕೆ ಹೊಂದಿವೆ ಎಂಬ ಬಗ್ಗೆ ಯೋಚಿಸಿದ್ದೀರಾ? ಹೌದು, ಇಂತಹದೊಂದು ಪ್ರಶ್ನೆ ನಿಮಗೆ ಮೂಡಿರಬಹುದು ಅಥವಾ ಈ ಕ್ಷಣದಲ್ಲಿ ನಿಮಗೆ ಇದು ಏಕೆ ಹೀಗೆ ಎಂದು ಅನಿಸಬಹುದು. ಇದಕ್ಕೆ ಸರಿಯಾದ ಉತ್ತರವನ್ನು ಇಂದಿನ ಲೇಖನದಲ್ಲಿ ನಾವೆಲ್ಲರೂ ತಿಳಿಯೋಣ.
ನಾವೆಲ್ಲರೂ ನಮ್ಮ ಮೊಬೈಲ್ ಅಥವಾ ಸ್ಮಾರ್ಟ್‌ಫೋನಿನಲ್ಲಿ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಬಳಸಿಯೇ ಇರುತ್ತೇವೆ. ನೀವು ಬಳಸಿರುವ ಈ ಸಿಮ್ (SIM) ಎಂಬುದು subscriber identity modul (ಚಂದಾದಾರರ ಗುರುತಿನ ಮಾಡ್ಯೂಲ್) ಎಂಬ ಪದದ ಶಾರ್ಟ್ ಫಾರ್ಮ್ ಅರ್ಥವಾಗಿದೆ. ಮೊಬೈಲ್ ಮತ್ತು ನೆಟ್‌ವರ್ಕ್ ಅನ್ನು ಸಂಪರ್ಕಿಸುವ ಈ ಚಿಕ್ಕ ಬಿಲ್ಲೆಯು ಒಂದು ಎಲೆಕ್ಟ್ರಾನಿಕ್ ಚಿಪ್ ಆಗಿದ್ದು, ಮೊಬೈಲ್ ಟೆಲಿಫೋನಿಕ್ ನೆಟ್‌ವರ್ಕ್‌ನಲ್ಲಿ ಸ್ಪಷ್ಟ ಚಂದಾದಾರರನ್ನು ಗುರುತಿಸಲು ಬಳಸಲಾಗುತ್ತದೆ. ಈ ಸಿಮ್ ಕಾರ್ಡ್ ಮೂಲಭೂತವಾಗಿ ಮೆಮೊರಿಯೊಂದಿಗೆ ಎಂಬೆಡೆಡ್ ಮೈಕ್ರೋ ಕಂಟ್ರೋಲರ್ ಅನ್ನು ಹೊಂದಿದೆ ಮತ್ತು ಮೊಬೈಲ್ ಫೋನ್‌ನಲ್ಲಿ ಬಳಸಲಾಗುವ ಸಿಮ್ ಕಾರ್ಡ್ 25 ಎಂಎಂ ಅಗಲ, 15 ಎಂಎಂ ಉದ್ದ ಮತ್ತು 0.76 ಎಂಎಂ ದಪ್ಪವನ್ನು ಹೊಂದಿರುತ್ತದೆ.
ಈಗ ಈ ಸಿಮ್ ಕಾರ್ಡ್‌ಗಳು ವಿಶಿಷ್ಟವಾದ ಕಟ್ ಆಕಾರವನ್ನು ಏಕೆ ಹೊಂದಿವೆ ಎಂಬುದನ್ನು ತಿಳಿಯೋಣ. ಮೊಬೈಲ್ ಬಳಕೆಗೆ ಬಂದ ಪ್ರಾರಂಭದ ಕೆಲವು ವರ್ಷಗಳವರೆಗೂ ಸಿಮ್ ಇಲ್ಲದ ಸಿಡಿಎಂಎ ತಂತ್ರಜ್ಞಾನದ ಫೋನ್‌ಗಳಿದ್ದವು. ತಂತ್ರಜ್ಞಾನ ಬೆಳೆದಂತೆ ಸ್ಪಷ್ಟ ಚಂದಾದಾರರನ್ನು ಗುರುತಿಸಲು ಸಾಧ್ಯವಾಗುವಂತಹ GSM ತಂತ್ರಜ್ಞಾನವವನ್ನು ಕಂಡುಹಿಡಿಯಲಾಯಿತು. ವಿಶೇಷ ಆವಿಷ್ಕಾರವಾದ ಈ GSM ತಂತ್ರಜ್ಞಾನವನ್ನು ಬಳಸುವ ಸಮಯದಲ್ಲಿ ಸಿಮ್‌ಗಳ ವಿನ್ಯಾಸಗೊಳಿಸಲಾಯಿತು. ಸಿಮ್ ಅನ್ನು ಸೇರಿಸುವ ಮತ್ತು ಅಗತ್ಯಗಳಿಗಾಗಿ ತಕ್ಕಂತೆ ತೆಗೆಯುವ ಆಯ್ಕೆಯೂ ಇದರಲ್ಲಿದ್ದುದರಿಂದ ಇದರ ಜನಪ್ರಿಯತೆ ಹೆಚ್ಚಿತು. ಆದರೆ, ಇಲ್ಲೊಂದು ಸಮಸ್ಯೆಯೂ ಸಹ ಕಾಣಿಸಿಕೊಂಡು, ಮೊಬೈಲ್ ಫೋನ್ ಕಾರ್ಡ್ ಹೋಲ್ಡರ್ ಮತ್ತು ಸಿಮ್ ನಡುವಿನ ಸಂಪರ್ಕ ಜೋಡಣೆ ಗುರುತಿಸದಂತಾಯಿತು.
ಸಿಮ್ ಕಾರ್ಡ್ ಆಯತಕಾರದಲ್ಲಿ ಸಮತಟ್ಟಾಗಿ ಇದ್ದುದರಿಂದ ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್ ಕಾರ್ಡ್ ಹೋಲ್ಡರ್ ಪಿನ್‌ಗಳ ಸಂಪರ್ಕಗಳ ತಪ್ಪು ಜೋಡಣೆಯಾಗುತ್ತಿತ್ತು. ಸಿಮ್ ಕಾರ್ಡ್‌ನ ಸರಿಯಾಗಿ ಹಾಕುವ ಭಾಗವನ್ನು ಗುರುತಿಸುವುದು ಕಷ್ಟಕರವಾಗಿದ್ದರಿಂದ ಸಿಮ್ ಕಾರ್ಡ್ ಅನ್ನು ಒಂದು ಬದಿಯಲ್ಲಿ ಕತ್ತರಿಸಿ ಸರಿಯಾದ ಜೋಡಣೆಗೆ ಸಹಾಯವಾಗುವಂತೆ ಮಾಡಲಾಯಿತು. ಹಾಗಾಗಿ, ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್ ಕಾರ್ಡ್ ಹೋಲ್ಡರ್ ಪಿನ್‌ಗಳ ಸಂಪರ್ಕಗಳ ತಪ್ಪು ಜೋಡಣೆಯನ್ನು ತಪ್ಪಿಸುವುದು ಸಿಮ್ ಮೂಲೆಯಲ್ಲಿ ಕಟ್ ಆಗಿರಲು ಮುಖ್ಯ ಕಾರಣವಾಗಿದೆ. ಕಟ್ ಮಾರ್ಕ್ ಮೊಬೈಲ್ ಫೋನ್‌ಗಳಲ್ಲಿ ಕಾರ್ಡ್ ಅನ್ನು ಸರಿಯಾಗಿ ಇರಿಸಲು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ISO ನಿಂದ ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟಿದೆ,
ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್ (ISO) ಮತ್ತು ಇಂಟರ್ನ್ಯಾಷನಲ್ ಎಲೆಕ್ಟ್ರೋಟೆಕ್ನಿಕಲ್ ಕಮಿಷನ್ ಸಿಮ್ ಕಾರ್ಡ್‌ಗಳನ್ನು ಪ್ರಮಾಣೀಕರಿಸುವ ಏಜೆನ್ಸಿಗಳು. ISO 7816-1 ಪ್ರಕಾರ ಸಿಮ್ ಕಾರ್ಡ್‌ಗಳನ್ನು ಪ್ರಮಾಣೀಕರಿಸಲಾಗಿದೆ ಮತ್ತು ಕಾರ್ಡ್‌ಗಳ ಭೌತಿಕ ಗುಣಲಕ್ಷಣಗಳನ್ನು ವಿವರಿಸುತ್ತದೆ. ISO 7816 ಭಾಗ 2 ಸಂಪರ್ಕಗಳ ಆಯಾಮಗಳು ಮತ್ತು ಸ್ಥಳವನ್ನು ವಿವರಿಸುತ್ತದೆ. ಎಲ್ಲಾ ಮೊಬೈಲ್ ಫೋನ್ ತಯಾರಕರು ISO ನಿಂದ ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಮಾರ್ಗದರ್ಶಿಯನ್ನು ಅನುಸರಿಸುತ್ತಿದ್ದಾರೆ. ಒಂದು ಸಣ್ಣ ಸಿಮ್ ವಿಷಯದಲ್ಲಿ ಈ ಜಗತ್ತು ಸಾಕಷ್ಟು ಯೋಚಿಸಿ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ ಎಂಬುದನ್ನು ನಮಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.
Why Do Sim Cards Have A Cut Shape At One End.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm