ಬ್ರೇಕಿಂಗ್ ನ್ಯೂಸ್
15-03-22 10:28 pm Source: Vijayakarnataka ಡಿಜಿಟಲ್ ಟೆಕ್
ದೇಶದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಯಾಗಿರುವ ವೊಡಾಫೋನ್ ಐಡಿಯಾ ಲಿಮಿಟೆಡ್ ಕಂಪೆನಿ ಇಂದು ಭಾರತದಲ್ಲಿನ ಗೇಮಿಂಗ್ ಉತ್ಸಾಹಿಗಳಿಗೆ 'VI ಗೇಮ್' ವೈಶಿಷ್ಟ್ಯದ ಸೌಲಭ್ಯಗಳನ್ನು ಪರಿಚಯಿಸಿದೆ. ಆಂಡ್ರಾಯ್ಡ್ ಮತ್ತು ಎಚ್‍ಟಿಎಂಎಲ್5 ಆಧರಿತ ಮೊಬೈಲ್ ಗೇಮ್‌ಗಳ ಗುಚ್ಚ ಇದಾಗಿದ್ದು, ಭಾರತ ಮೂಲದ ವೈವಿಧ್ಯಮಯ ಗೇಮಿಂಗ್ ಮತ್ತು ಕ್ರೀಡೆಗಳ ಸಹಭಾಗಿತ್ವದಲ್ಲಿ ಮಾಧ್ಯಮ ಕಂಪನಿ ನಜಾರಾ ಟೆಕ್ನಾಲಜೀಸ್ ಲಿಮಿಟೆಡ್ ಸಹಯೋಗದಲ್ಲಿ ಇದನ್ನು ಆರಂಭಿಸಲಾಗಿದೆ. ಈ ಸಂಯೋಜಿತ ಸಹಯೋಗದ ಮೂಲಕ, ವೊಡಾಫೋನ್ ಐಡಿಯಾ ಗ್ರಾಹಕರು ಕಂಪೆನಿಯ ಗೇಮಿಂಗ್ ಪ್ಲಾಟ್‌ಫಾರ್ಮ್ VI ಆಪ್ ನಲ್ಲಿ ಭಾರತದ ವಿವಿಧ ಫ್ರಾಂಚೈಸಿಗಳಿಂದ ಜನಪ್ರಿಯ ಆಟಗಳನ್ನು ಒಳಗೊಂಡಂತೆ, ವ್ಯಾಪಕ ಶ್ರೇಣಿಯ ಗೇಮಿಂಗ್ ವಿಷಯಕ್ಕೆ ಪ್ರವೇಶವನ್ನು ಪಡೆಯಬಹುದಾಗಿದೆ.
ಆಕ್ಷನ್, ಸಾಹಸ, ಆರ್ಕೇಡ್, ಕ್ಯಾಶುಯಲ್, ಶಿಕ್ಷಣ, ವಿನೋದ, ಒಗಟು, ರೇಸಿಂಗ್, ಕ್ರೀಡೆ ಮತ್ತು ತಂತ್ರಗಾರಿಕೆಗಳಂತಹ 10 ಜನಪ್ರಿಯ ಪ್ರಕಾರಗಳಲ್ಲಿ, 1200+ ಆಂಡ್ರಾಯ್ಡ್ ಮತ್ತು ಎಚ್‍ಟಿಎಂಎಲ್5 ಆಧಾರಿತ ಮೊಬೈಲ್ ಗೇಮ್‍ಗಳೊಂದಿಗೆ VI ಆಪ್‌ನಲ್ಲಿನ VI ಗೇಮ್ಸ್ ತಲ್ಲೀನಗೊಳಿಸುವ ಗೇಮಿಂಗ್ ಅನುಭವವನ್ನು ನೀಡುತ್ತದೆ ಎಂದು ವೊಡಾಫೋನ್ ಐಡಿಯಾ ಕಂಪೆನಿ ತಿಳಿಸಿದೆ. VI ಆಪ್‌ನಲ್ಲಿನ VI ಗೇಮ್‌ನಲ್ಲಿ ಗೇಮಿಂಗ್ ವಿಷಯವನ್ನು VI ಪ್ಲಾಟಿನಂ ಆಟಗಳು, ಗೋಲ್ಡ್ ಆಟಗಳು ಮತ್ತು ಉಚಿತ ಆಟಗಳು ಎಂದು 3 ವಿಭಾಗಗಳಾಗಿ ವಿಂಗಡಿಸಲಾಗಿದೆ. VI ಬಳಕೆದಾರರು ಈ ಗೇಮ್‍ಗಳನ್ನು ಗೋಲ್ಡ್ ಪಾಸ್ ಮೂಲಕ ಪ್ರವೇಶಿಸಬಹುದು, ಪೋಸ್ಟ್‍ಪೇಯ್ಡ್‍ಗೆ ಕೇವಲ 50 ರೂಪಾಯಿಗಳಿಗೆ ಮತ್ತು ಪ್ರಿಪೇಯ್ಡ್‍ಗೆ 56 ರೂಪಾಯಿ ದರದಲ್ಲಿ 30 ದಿನಗಳ ವ್ಯಾಲಿಡಿಟಿಯೊಂದಿಗೆ 30 ಗೇಮ್‌ಗಳನ್ನು ನೀಡುತ್ತದೆ.
ಭಾರತದಲ್ಲಿ ಗೇಮಿಂಗ್ ಬಳಕೆಯಲ್ಲಿ ಗಮನಾರ್ಹವಾದ ಏರಿಕೆಯನ್ನು ನಾವು ನೋಡುತ್ತಿದ್ದೇವೆ, ಶೇಕಡ 95 ಕ್ಕಿಂತ ಹೆಚ್ಚು ಗೇಮಿಂಗ್ ಉತ್ಸಾಹಿಗಳು ವೈವಿಧ್ಯಮಯ ವಿಷಯಗಳ ಮೂಲಕ ವ್ಯಾಪಕವಾಗಿ ಆನಂದಿಸಲು ಈಗ ಮೊಬೈಲ್ ಅನ್ನು ಬಳಸುತ್ತಿದ್ದಾರೆ. ನಮ್ಮ ಬಳಕೆದಾರರಿಗೆ VI ಅಪ್ಲಿಕೇಶನ್‍ನಲ್ಲಿ ಲಭ್ಯವಿರುವ ವಿಶೇಷವಾದ ಆಟಗಳ ವ್ಯಾಪಕ ವೈವಿಧ್ಯಮಯ ಶ್ರೇಣಿಯ ಮೂಲಕ ನಮ್ಮ ಗ್ರಾಹಕರಿಗೆ ನಾವು ನೀಡುವ ಗೇಮಿಂಗ್ ಅನುಭವವನ್ನು ಉನ್ನತೀಕರಿಸುತ್ತದೆ" ಎಂದು ಕಂಪೆನಿಯ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಅವನೀಶ್ ಖೋಸ್ಲಾ ಹೇಳಿದ್ದಾರೆ. VI ಗೇಮ್ಸ್ ಪ್ರಸ್ತಾವ ಆರಂಭದಲ್ಲಿ ಕ್ಯಾಶುಯಲ್ ಗೇಮಿಂಗ್ ವಿಷಯವನ್ನು ಹೊಂದಿರುತ್ತದೆ ಮತ್ತು ಭವಿಷ್ಯದಲ್ಲಿ ಸಾಮಾಜಿಕ ಗೇಮಿಂಗ್ ಮತ್ತು ಇ- ಸ್ಪೋರ್ಟ್‍ಗಳನ್ನು ಹೋಸ್ಟ್ ಮಾಡಲು ಕ್ರಮೇಣ ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಗೇಮಿಂಗ್ ಭಾರತದಲ್ಲಿ ಮನರಂಜನೆಯ ಭವಿಷ್ಯ ಮಾತ್ರವಲ್ಲ, ನೂರಾರು ಮಿಲಿಯನ್ ಭಾರತೀಯರಿಗೆ ಪ್ರತಿದಿನ ತಮ್ಮ ಮೊಬೈಲ್ ಫೋನ್‍ಗಳಲ್ಲಿ ಆಟಗಳನ್ನು ಆಡುವ ಪ್ರಮುಖ ಮನರಂಜನೆಯ ವಿಧಾನವಾಗಿದೆ. ನಮ್ಮ ಸಂಪೂರ್ಣ ಗೇಮಿಂಗ್ ಕಂಟೆಂಟ್, ಎಸ್‍ಪೋರ್ಟ್‍ಗಳು ಮತ್ತು ಮನರಂಜನೆಯ ಪೋರ್ಟ್‍ಫೋಲಿಯೊವನ್ನು ವೊಡಾಫೋನ್ ಐಡಿಯಾದೊಂದಿಗೆ ತರಲಾಗಿದೆ. ಮತ್ತು ವೊಡಾಫೋನ್ ಐಡಿಯಾ ಕೆಲಸ ಮಾಡಲು ನಝಾರಾ ಸಂತೋಷಪಡುತ್ತದೆ" ಎಂದು ನಜಾರಾ ಟೆಕ್ನಾಲಜೀಸ್ ಲಿಮಿಟೆಡ್‍ನ ಸಂಸ್ಥಾಪಕ ಮತ್ತು ಗ್ರೂಪ್ ಎಂಡಿ ನಿತೀಶ್ ಮಿಟ್ಟರ್‍ಸೇನ್ ಹೇಳಿದ್ದಾರೆ. 'ಡಿಜಿಟಲ್ ರೀಸೆಟ್: ಟಚಿಂಗ್ ಎ ಬಿಲಿಯನ್ ಇಂಡಿಯನ್ಸ್' ವರದಿಯು ಭಾರತೀಯ ಗ್ರಾಹಕರು ಆನ್‍ಲೈನ್ ಗೇಮಿಂಗ್‍ನಲ್ಲಿ ಕಳೆದ ರಾಷ್ಟ್ರೀಯ ಸರಾಸರಿ ಸಮಯ 4 ಗಂಟೆಗಳಿಗಿಂತ ಹೆಚ್ಚು ಎಂದು ಸೂಚಿಸಿದೆ.
Vi Brings Gaming For Its Customers, In Association With Nazara Technologies.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm