ಭಾರತದಲ್ಲಿ 10,999 ರೂ.ಬೆಲೆಯಲ್ಲಿ Redmi 10 ಫೋನ್ ಬಿಡುಗಡೆ!..ಇಲ್ಲಿದೆ ಫುಲ್ ಡೀಟೇಲ್ಸ್!

18-03-22 09:13 pm       Source: Vijayakarnataka   ಡಿಜಿಟಲ್ ಟೆಕ್

ಹೊಸ Redmi 10 ಫೋನಿನ ಭಾರತದ ಮಾದರಿಯು ವಾಟರ್‌ಡ್ರಾಪ್-ಶೈಲಿಯ ಡಿಸ್ಪ್ಲೇ ನಾಚ್ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, 10,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಂಡಿದೆ.

 ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದ್ದ 'Redmi 10' ಸ್ಮಾರ್ಟ್‌ಫೋನನ್ನು ದೇಶದಲ್ಲಿಂದು (ಗುರುವಾರ, ಮಾರ್ಚ್ 17) ಬಿಡುಗಡೆ ಮಾಡಲಾಗಿದೆ. ಈ ನೂತನ Redmi 10 ಸ್ಮಾರ್ಟ್‌ಫೋನ್ ಕಳೆದ Redmi 9 ಸ್ಮಾರ್ಟ್‌ಫೋನಿನ ಉತ್ತರಾಧಿಕಾರಿಯಾಗಿ ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ವಾಸ್ತವವಾಗಿ, ಇದು ಈ ವಾರದ ಆರಂಭದಲ್ಲಿ ನೈಜೀರಿಯಾದಲ್ಲಿ ಬಿಡುಗಡೆಯಾಗಿದ್ದ Redmi 10Cನ ಮರುಬ್ರಾಂಡೆಡ್ ಫೋನ್ ಎಂದು ಹೇಳಬಹುದು. ಹೊಸ Redmi 10 ಫೋನಿನ ಭಾರತದ ಮಾದರಿಯು ವಾಟರ್‌ಡ್ರಾಪ್-ಶೈಲಿಯ ಡಿಸ್ಪ್ಲೇ ನಾಚ್ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, 10,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಂಡಿದೆ. Realme C35, Motorola Moto E40, Tecno Spark 8 Pro ಮತ್ತು Samsung Galaxy M21 2021 ಸ್ಮಾರ್ಟ್‌ಫೋನ್‌ಗಳ ವಿರುದ್ಧ ಸ್ಪರ್ಧಿಸುತ್ತಿರುವ ನೂತನ Redmi 10 ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

ನಾವು ನೇರವಾಗಿ Redmi 10 ಸ್ಮಾರ್ಟ್‌ಫೋನಿನ ವೈಶಿಷ್ಟಯಗಳನ್ನು ನೊಡುವುದಾದರೆ, ಡ್ಯುಯಲ್-ಸಿಮ್ (ನ್ಯಾನೋ) ಸಾಮರ್ಥ್ಯದ Redmi 10 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ನಲ್ಲಿ MIUI 13 ನಲ್ಲಿ ಕೆಲಸ ಮಾಡಲಿದೆ. ಈ ಫೋನಿನಲ್ಲಿ 6.7-ಇಂಚಿನ HD+ ಡಿಸ್ಪ್ಲೇ ಜೊತೆಗೆ 20.6:9 ಆಕಾರ ಅನುಪಾತ ಮತ್ತು 400 nits ಗರಿಷ್ಠ ಹೊಳಪನ್ನು ತರಲಾಗಿದ್ದು, ಪ್ರದರ್ಶನವು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ಯಾನೆಲ್‌ನಿಂದ ರಕ್ಷಿಸಲ್ಪಟ್ಟಿದೆ. Redmi 10 ಆಕ್ಟಾ-ಕೋರ್ Qualcomm Snapdragon 680 SoC, ಜೊತೆಗೆ Adreno 610 GPU ಮತ್ತು 6GB ವರೆಗಿನ LPDDR4X RAM ನಿಂದ ಚಾಲಿತವಾಗಿದ್ದು, ಇದು 2GB ವರೆಗೆ ಅಂತರ್ನಿರ್ಮಿತ ಸಂಗ್ರಹಣೆಯನ್ನು ಬಳಸಿಕೊಂಡು ವಾಸ್ತವಿಕವಾಗಿ RAM ಅನ್ನು ವಿಸ್ತರಿಸಬಹುದು. ಇನ್ನು ಈ Redmi 10 128GB ಯ UFS 2.2 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ. ಇದನ್ನು ಮೈಕ್ರೊ SD ಕಾರ್ಡ್ ಮೂಲಕ ಮೀಸಲಾದ ಸ್ಲಾಟ್ ಮೂಲಕ ಮೆಮೊರಿಯನ್ನು ವಿಸ್ತರಿಸಬಹುದು.

See the source image

Redmi 10 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, f/1.8 ಲೆನ್ಸ್ ಸಾಮರ್ಥ್ಯದ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವ ಮತ್ತು 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸಂವೇದಕಗಳ ಕ್ಯಾಮರಾ ಸೆಟಪ್ ಅನ್ನು ಎಲ್ಇಡಿ ಫ್ಲ್ಯಾಷ್ನೊಂದಿಗೆ ಜೋಡಿಸಲಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಂವೇದಕವನ್ನು ನೀಡಲಾಗಿದೆ. Redmi 10 ನಲ್ಲಿನ ಸಂಪರ್ಕ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.0, GPS/ A-GPS, USB ಟೈಪ್-C ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ವೇಗವರ್ಧಕ ಮತ್ತು ಸಾಮೀಪ್ಯ ಸಂವೇದಕಗಳ ಜೊತೆಗೆ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸಂವೇದಕವೂ ಇದೆ. ಈ ಪೋನ್ 6,000mAh ಬ್ಯಾಟರಿಯನ್ನು ಹೊಂದಿದ್ದು, ಅದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಆದರೆ, ಫೋನ್ ಜೊತೆಗಿನ ಚಾರ್ಜರ್ 10W ವರೆಗೆ ಮಾತ್ರ ಚಾರ್ಜ್ ಅನ್ನು ಬೆಂಬಲಿಸುತ್ತದೆ.

ಮೊದಲೇ ಹೇಳಿದಂತೆ, ಭಾರತದಲ್ಲಿ Redmi 10 ಬೆಲೆಯು 4GB RAM + 64GB ಸ್ಟೋರೇಜ್ ರೂಪಾಂತರಕ್ಕಾಗಿ 10,999 ರೂ.ಗಳಿಂದ ಆರಂಭವಾಗಿದೆ. ಇದೇ ಫೋನ್ 6GB + 128GB ಮಾದರಿಯಲ್ಲಿ ಕೂಡ ಲಭ್ಯವಿದ್ದು, ಇದರ ಬೆಲೆ 12,999 ರೂ.ಗಳಾಗಿವೆ. Redmi 10 ಫೋನ್ ಇದೇ ಮಾರ್ಚ್ 24 ರಂದು ಮಧ್ಯಾಹ್ನ 12 ಗಂಟೆಯಿಂದ Flipkart, Mi.com, Mi Home ಮತ್ತು ಆಫ್‌ಲೈನ್ ಮಳಿಗೆಗಳಲ್ಲೂ ಮಾರಾಟವಾಗಲಿದೆ. ಇನ್ನು ಕೆರಿಬಿಯನ್ ಗ್ರೀನ್, ಮಿಡ್‌ನೈಟ್ ಬ್ಲಾಕ್ ಮತ್ತು ಪೆಸಿಫಿಕ್ ಬ್ಲೂ ಬಣ್ಣಗಳಲ್ಲಿ ಬಿಡುಗಡೆಯಾಗಿರುವ Redmi 10 ಫೋನಿನ ಬಿಡುಗಡೆ ಕೊಡುಗೆಗಳಾಗಿ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ EMI ಗಳನ್ನು ಬಳಸುವ ಗ್ರಾಹಕರಿಗೆ 1,000 ತ್ವರಿತ ರಿಯಾಯಿತಿಯನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನನ್ನು ನೈಜೀರಿಯಾದಲ್ಲಿ ಬಿಡುಗಡೆಯಾಗಿದ್ದ Redmi 10Cನ ಮರುಬ್ರಾಂಡೆಡ್ ಫೋನ್ ಎಂದು ನೋಡಿದರೆ, ಅಲ್ಲಿ 4GB + 64GB ಕಾನ್ಫಿಗರೇಶನ್‌ಗಾಗಿ NGN 78,000 (ಸುಮಾರು ರೂ. 14,300) ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿತ್ತು.

Redmi 10 With Snapdragon 680 Soc Launched In India: Price, Specifications