ಬ್ರೇಕಿಂಗ್ ನ್ಯೂಸ್
19-03-22 10:07 pm Source: Vijayakarnataka ಡಿಜಿಟಲ್ ಟೆಕ್
ಕಳೆದ ನವೆಂಬರ್ 2021 ರಲ್ಲಿ ಬಿಡಗುಗಡೆಗೊಂಡಿದ್ದ ಜಿಯೋವಿನ ಮೊಟ್ಟಮೊದಲ 4G ಸ್ಮಾರ್ಟ್‌ಫೋನ್ 'JioPhone Next' ಇದೀಗ ಸುಲಭ ಇಎಂಐ ಆಯ್ಕೆಗಳ ಮೂಲಕ ಖರೀದಿಗೆ ಲಭ್ಯವಿದೆ. ಜಿಯೋವಿನ ಅಧಿಕೃತ ಜಾಲತಾಣ jio.com ಮೂಲಕ JioPhone Next ಸ್ಮಾರ್ಟ್‌ಫೋನನ್ನು ಬುಕ್ ಮಾಡಬಹುದಾಗಿದ್ದು, 1,999 ರೂ.ಗಳ ಡೌನ್‌ಪೇಮೆಂಟ್ ಮಾಡಿದ ನಂತರ ಇಎಂಐ ಆಯ್ಕೆಗಳ ಮೂಲಕ ಸ್ಮಾರ್ಟ್‌ಫೋನನ್ನು ಹೋಮ್ ಡೆಲಿವರಿ ಪಡೆಯಲು ಜಿಯೋ ಅವಕಾಶವನ್ನು ಕಲ್ಪಿಸಿದೆ. JioPhone Next ಸ್ಮಾರ್ಟ್‌ಫೋನ್ ಖರೀದಿಸಲು ಇಚ್ಚಿಸುವ ಗ್ರಾಹಕರು ತಮ್ಮ ಪ್ರಸ್ತುತ ಬಳಕೆಯ ಮೊಬೈಲ್ ನಂಬರ್ ಹಾಗೂ ವಿಳಾಸವನ್ನು ಸಮೂದಿಸುವ ಸುಲಭ ಹಂತಗಳನ್ನು ಸ್ಮಾರ್ಟ್‌ಫೋನನ್ನು ಖರೀದಿಸಬಹುದು. ನಂತರ ಜಿಯೋವಿನ ಸಹಾಯಕರು ನಿಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ಜಿಯೋ ತಿಳಿಸಿದೆ.
JioPhone Next ಸ್ಮಾರ್ಟ್‌ಫೋನ್ ಬೆಲೆಯನ್ನು 6,499 ರೂ.ಗಳಿಗೆ ನಿಗದಿಪಡಿಸಲಾಗಿದ್ದು, ಕೇವಲ 1,999 ರೂ.ಗಳ ಡೌನ್‌ಪೇಮೆಂಟ್ ಮಾಡುವ ಮೂಲಕ ಸ್ಮಾರ್ಟ್‌ಫೋನನ್ನು ಖರೀದಿಸಬಹುದಾಗಿದೆ. ನಂತರ ಉಳಿದ ಹಣವನ್ನು ಮೊಬೈಲ್ ರೀಚಾರ್ಜ್ ಯೋಜನೆಗಳನ್ನು ಕೂಡ ಹೊಂದಿರುವ EMIಗಳ ಮೂಲಕವೇ ಪಾವತಿಸಬಹುದಾಗಿದೆ. ಆದರೆ, ಇಎಂಐ ಆಯ್ಕೆಗಳ ಮೂಲಕ ಸ್ಮಾರ್ಟ್‌ಫೋನನ್ನು ಖರೀದಿಸುವುದು ಗ್ರಾಹಕರಿಗೆ ದುಪ್ಪಟ್ಟು ವೆಚ್ಚವನ್ನು ತರುತ್ತಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಹಾಗಾದರೆ, JioPhone Next ಸ್ಮಾರ್ಟ್‌ಫೋನನ್ನು ಖರೀದಿಸಲು ಲಭ್ಯವಿರುವ ಎಲ್ಲಾ ಯೋಜನೆಗಳು ಮತ್ತು EMI ಆಯ್ಕೆಗಳು ಯಾವುವು ಎಂಬುದನ್ನು ತಿಳಿಯೋಣ. ಇಎಂಐ ಆಯ್ಕೆಗಳಲ್ಲಿಯೇ ಜಿಯೋವಿನ ರೀಚಾರ್ಜ್ ಯೋಜನೆಗಳು ಸೇರಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕಿದೆ.
ತಿಂಗಳಿಗೆ 5GB ಡೇಟಾ ಮತ್ತು ಅನಿಯಮಿತ ಕರೆಗಳ 18 ತಿಂಗಳ ಯೋಜನೆ!
2,850 ರೂ. ಪಾವತಿಸಿ (1,999 ರೂ. ಡೌನ್‌ಪೇಮೆಂಟ್ + 501 ರೂ. ಪ್ರೊಸೆಸಿಂಗ್ ಶುಲ್ಕ + ಯೋಜನೆಗೆ 350 ರೂ.) ನೀವು 18 ತಿಂಗಳ ಅಥವಾ 24 ತಿಂಗಳ EMI ಯೋಜನೆಗಳ ಮೂಲಕ JioPhone Next ಅನ್ನು ಸಹ ಖರೀದಿಸಬಹುದಾಗಿದ್ದು, ಈ ಮೂಲ ಯೋಜನೆಯ ಮೂಲಕ ಫೋನನ್ನು ಖರೀದಿಸಿದರೆ ನೀವು 18 ತಿಂಗಳುಗಳ ಕಾಲ ತಿಂಗಳಿಗೆ 350 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ಯೋಜನೆಯೊಂದಿಗೆ, ಬಳಕೆದಾರರು ತಿಂಗಳಿಗೆ 5GB ಡೇಟಾವನ್ನು ಮತ್ತು 100 ನಿಮಿಷಗಳ ಉಚಿತ ಟಾಕ್ಟೈಮ್ ಅನ್ನು ಪಡೆಯುತ್ತಾರೆ. ಇಲ್ಲಿ ಒಟ್ಟು 8,800 ರೂ. ಹಣವನ್ನು ಪಾವತಿಸಿ JioPhone Next ಸ್ಮಾರ್ಟ್‌ಫೋನನ್ನು ಖರೀದಿಸಿದಂತಾಗುತ್ತದೆ.
ತಿಂಗಳಿಗೆ 5GB ಡೇಟಾ ಮತ್ತು 24-ತಿಂಗಳ ಯೋಜನೆ ಯೋಜನೆ!
ಜಿಯೋವಿನ ಮೂಲ ಯೋಜನೆಯು 24 ತಿಂಗಳ EMI ಜೊತೆಗೆ ಕೂಡ ಲಭ್ಯವಿದೆ. ಈ ಯೋಜನೆಯಲ್ಲಿ JioPhone Next ಸ್ಮಾರ್ಟ್‌ಫೋನ್ ಖರೀದಿಸಿದರೆ ವೆಚ್ಚ 9,700 ರೂ.ಆಗಲಿದೆ. 24-ತಿಂಗಳ EMI ಯೋಜನೆಗಾಗಿ, ಖರೀದಿದಾರರು ರೂ 2,500 (ರೂ. 1,999 ಡೌನ್‌ಪೇಮೆಂಟ್ + ರೂ. 501 ಪ್ರೊಸೆಸಿಂಗ್ ಶುಲ್ಕ) ಪಾವತಿಸಬೇಕಾಗುತ್ತದೆ ಮತ್ತು 24 ತಿಂಗಳವರೆಗೆ ತಿಂಗಳಿಗೆ ರೂ. 300 ಪ್ಲಾನ್‌ಗೆ ಚಂದಾದಾರರಾಗಬೇಕು. ಈ ಯೋಜನೆಯೊಂದಿಗೆ, ಬಳಕೆದಾರರು ತಿಂಗಳಿಗೆ 5GB ಡೇಟಾವನ್ನು ಮತ್ತು 100 ನಿಮಿಷಗಳ ಉಚಿತ ಟಾಕ್ಟೈಮ್ ಅನ್ನು ಪಡೆಯುತ್ತಾರೆ.
ದಿನಕ್ಕೆ 1.5GB ಡೇಟಾ ಮತ್ತು ಅನಿಯಮಿತ ಕರೆಗಳ 18 ತಿಂಗಳ ಯೋಜನೆ!
ದಿನಕ್ಕೆ 1.5GB ಡೇಟಾ ಮತ್ತು ಅನಿಯಮಿತ ಕರೆಗಳೊಂದಿಗೆ JioPhone Next ಸ್ಮಾರ್ಟ್‌ಫೋನ್ ಖರೀದಿಸುವ ಆಯ್ಕೆ ಕೂಡ ಇದೆ. ಈ ಯೋಜನೆಯಲ್ಲಿ ಗ್ರಾಹಕರು 18 ತಿಂಗಳವರೆಗೆ ತಿಂಗಳಿಗೆ ರೂ. 500 ಯೋಜನೆಗೆ ಚಂದಾದಾರರಾಗಬೇಕು. ಮೊದಲು 3000 ರೂ. (ರೂ. 1,999 ಡೌನ್‌ಪೇಮೆಂಟ್ + ರೂ. 501 ಪ್ರೊಸೆಸಿಂಗ್ ಶುಲ್ಕ ಮತ್ತು ರೂ. 500 ಯೋಜನೆಗೆ ) ಪಾವತಿಸಿದ ನಂತರ JioPhone Next ಸ್ಮಾರ್ಟ್‌ಫೋನ್ ನಿಮ್ಮ ಕೈಸೇರಲಿದೆ. ಈ ಯೋಜನೆಯೊಂದಿಗೆ, ಬಳಕೆದಾರರು ದಿನಕ್ಕೆ 1.5GB ಡೇಟಾವನ್ನು ಮತ್ತು ಅನಿಯಮಿತ ಉಚಿತ ಟಾಕ್ಟೈಮ್ ಅನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ JioPhone Next ಸ್ಮಾರ್ಟ್‌ಫೋನ್ ಖರೀದಿಸಿದರೆ ವೆಚ್ಚ 18 ತಿಂಗಳ ವೆಚ್ಚ 11,500 ರೂ. ಆಗಲಿದೆ.
ದಿನಕ್ಕೆ 1.5GB ಡೇಟಾ ಮತ್ತು ಅನಿಯಮಿತ ಕರೆಗಳ 24-ತಿಂಗಳ ಯೋಜನೆ ಯೋಜನೆ!
JioPhone Next ಸ್ಮಾರ್ಟ್‌ಫೋನ್ ಖರೀದಿದಾರರು 2,950 (ರೂ. 1,999 ಡೌನ್‌ಪೇಮೆಂಟ್ + ರೂ. 501 ಪ್ರೊಸೆಸಿಂಗ್ ಶುಲ್ಕ ಮತ್ತು 450 ರೂ. ಪ್ಲಾನ್) ಪಾವತಿಸುವ ಮೂಲಕ 24-ತಿಂಗಳ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ 24 ತಿಂಗಳವರೆಗೆ ತಿಂಗಳಿಗೆ ರೂ.450 ಪ್ಲಾನ್‌ಗೆ ಚಂದಾದಾರರಾಗಬೇಕಾಗುತ್ತದೆ. ಈ ಯೋಜನೆಯಲ್ಲಿ JioPhone Next ಸ್ಮಾರ್ಟ್‌ಫೋನ್ ಖರೀದಿಸಿದರೆ 2 ವರ್ಷಗಳಲ್ಲಿ ಒಟ್ಟು ವೆಚ್ಚ 13,300 ರೂ.ಗಳಾಗುತ್ತವೆ. ಈ ಯೋಜನೆಯೊಂದಿಗೆ, ಬಳಕೆದಾರರು ದಿನಕ್ಕೆ 1.5GB ಡೇಟಾವನ್ನು ಮತ್ತು ಅನಿಯಮಿತ ಉಚಿತ ಟಾಕ್ಟೈಮ್ ಅನ್ನು ಪಡೆಯುತ್ತಾರೆ.
ದಿನಕ್ಕೆ 2GB ಡೇಟಾ ಅನಿಯಮಿತ ಕರೆಗಳ 18 ತಿಂಗಳ ಯೋಜನೆ!
ದಿನಕ್ಕೆ 2GB ಡೇಟಾ ಮತ್ತು ಅನಿಯಮಿತ ಕರೆಗಳೊಂದಿಗೆ JioPhone Next ಸ್ಮಾರ್ಟ್‌ಫೋನ್ ಖರೀದಿಸುವ 18 ತಿಂಗಳ EMI ಯೋಜನೆಯಲ್ಲಿ ಪ್ರತಿ ತಿಂಗಳಿಗೆ 550 ರೂ. ಇಎಂಐ ಹಣವನ್ನು ಪಾವತಿಸಬೇಕಾಗುತ್ತದೆ. ಮೊದಲು 3050 ರೂ. (ರೂ. 1,999 ಡೌನ್‌ಪೇಮೆಂಟ್ + ರೂ. 501 ಪ್ರೊಸೆಸಿಂಗ್ ಶುಲ್ಕ ಮತ್ತು ರೂ. 500 ಯೋಜನೆಗೆ ) ಪಾವತಿಸಿದ ನಂತರ JioPhone Next ಸ್ಮಾರ್ಟ್‌ಫೋನ್ ನಿಮ್ಮ ಕೈಸೇರಲಿದೆ. ಈ ಯೋಜನೆಯೊಂದಿಗೆ, ಬಳಕೆದಾರರು ದಿನಕ್ಕೆ 2GB ಡೇಟಾವನ್ನು ಮತ್ತು ಅನಿಯಮಿತ ಉಚಿತ ಟಾಕ್ಟೈಮ್ ಅನ್ನು ಪಡೆಯುತ್ತಾರೆ. 18 ತಿಂಗಳ ಒಟ್ಟು ವೆಚ್ಚವು 12,400 ರೂ.ಗಳಾಗುತ್ತದೆ.
ದಿನಕ್ಕೆ 2GB ಡೇಟಾ ಅನಿಯಮಿತ ಕರೆಗಳ 24-ತಿಂಗಳ ಯೋಜನೆ ಯೋಜನೆ!
2GB ದೈನಂದಿನ ಡೇಟಾದೊಂದಿಗೆ 24-ತಿಂಗಳ ಯೋಜನೆಯಲ್ಲಿ JioPhone Next ಸ್ಮಾರ್ಟ್‌ಫೋನ್ ಖರೀದಿಸಲು ಮೊದಲು 3000 ರೂ.(ರೂ. 1,999 ಡೌನ್‌ಪೇಮೆಂಟ್ + ರೂ. 501 ಪ್ರೊಸೆಸಿಂಗ್ ಶುಲ್ಕ ಮತ್ತು ರೂ. 500 ಯೋಜನೆಗೆ ) ಪಾವತಿಸಬೇಕಾಗುತ್ತದೆ. ಈ ಯೋಜನೆಗೆ ಚಂದಾದಾರರಾದವರು 24 ತಿಂಗಳವರೆಗೆ ತಿಂಗಳಿಗೆ 500 ರೂ.ಪಾವತಿಸಬೇಕು. 24-ತಿಂಗಳ ಈ ಯೋಜನೆಯಲ್ಲಿ JioPhone Next ಸ್ಮಾರ್ಟ್‌ಫೋನ್ ಖರೀದಿಸಿದರೆ 2 ವರ್ಷಗಳಲ್ಲಿ ಒಟ್ಟು ವೆಚ್ಚ 14,500 ರೂ. ಗಳಾಗುತ್ತವೆ. ಈ ಯೋಜನೆಯೊಂದಿಗೆ, ಬಳಕೆದಾರರು ದಿನಕ್ಕೆ 2GB ಡೇಟಾವನ್ನು ಮತ್ತು ಅನಿಯಮಿತ ಉಚಿತ ಟಾಕ್ಟೈಮ್ ಅನ್ನು ಪಡೆಯುತ್ತಾರೆ.
ದಿನಕ್ಕೆ 2.5GB ಡೇಟಾ ಅನಿಯಮಿತ ಕರೆಗಳ 18 ತಿಂಗಳ ಯೋಜನೆ!
ದಿನಕ್ಕೆ 2.5GB ಡೇಟಾ ಮತ್ತು ಅನಿಯಮಿತ ಕರೆಗಳೊಂದಿಗೆ JioPhone Next ಸ್ಮಾರ್ಟ್‌ಫೋನ್ ಖರೀದಿಸುವ 18 ತಿಂಗಳ EMI ಯೋಜನೆಯಲ್ಲಿ ಪ್ರತಿ ತಿಂಗಳಿಗೆ 600 ರೂ. ಇಎಂಐ ಹಣವನ್ನು ಪಾವತಿಸಬೇಕಾಗುತ್ತದೆ. ಮೊದಲು 1000 ರೂ. (ರೂ. 1,999 ಡೌನ್‌ಪೇಮೆಂಟ್ + ರೂ. 501 ಪ್ರೊಸೆಸಿಂಗ್ ಶುಲ್ಕ ಮತ್ತು ರೂ. 600 ಯೋಜನೆಗೆ ) ಪಾವತಿಸಿದ ನಂತರ JioPhone Next ಸ್ಮಾರ್ಟ್‌ಫೋನ್ ನಿಮ್ಮ ಕೈಸೇರಲಿದೆ. ಈ ಯೋಜನೆಯೊಂದಿಗೆ, ಬಳಕೆದಾರರು ದಿನಕ್ಕೆ 2.5GB ಡೇಟಾವನ್ನು ಮತ್ತು ಅನಿಯಮಿತ ಉಚಿತ ಟಾಕ್ಟೈಮ್ ಅನ್ನು ಪಡೆಯುತ್ತಾರೆ. 18 ತಿಂಗಳ ಒಟ್ಟು ವೆಚ್ಚವು 13,300 ರೂ. ಗಳಾಗುತ್ತದೆ.
ದಿನಕ್ಕೆ 2.5GB ಡೇಟಾ ಅನಿಯಮಿತ ಕರೆಗಳ 24-ತಿಂಗಳ ಯೋಜನೆ !
2.5GB ದೈನಂದಿನ ಡೇಟಾದೊಂದಿಗೆ 24-ತಿಂಗಳ ಯೋಜನೆಯಲ್ಲಿ JioPhone Next ಸ್ಮಾರ್ಟ್‌ಫೋನ್ ಖರೀದಿಸಲು ಮೊದಲು 3050 ರೂ. (ರೂ. 1,999 ಡೌನ್‌ಪೇಮೆಂಟ್ + ರೂ. 501 ಪ್ರೊಸೆಸಿಂಗ್ ಶುಲ್ಕ ಮತ್ತು ರೂ. 500 ಯೋಜನೆಗೆ ) ಪಾವತಿಸಬೇಕಾಗುತ್ತದೆ. ಈ ಯೋಜನೆಗೆ ಚಂದಾದಾರರಾದವರು 24 ತಿಂಗಳವರೆಗೆ ತಿಂಗಳಿಗೆ 500 ರೂ.ಪಾವತಿಸಬೇಕು. 24-ತಿಂಗಳ ಈ ಯೋಜನೆಯಲ್ಲಿ JioPhone Next ಸ್ಮಾರ್ಟ್‌ಫೋನ್ ಖರೀದಿಸಿದರೆ 2 ವರ್ಷಗಳಲ್ಲಿ ಒಟ್ಟು ವೆಚ್ಚ 15,700 ರೂ. ಗಳಾಗುತ್ತವೆ. ಈ ಯೋಜನೆಯೊಂದಿಗೆ, ಬಳಕೆದಾರರು ದಿನಕ್ಕೆ 2.5GB ಡೇಟಾವನ್ನು ಮತ್ತು ಅನಿಯಮಿತ ಉಚಿತ ಟಾಕ್ಟೈಮ್ ಅನ್ನು ಪಡೆಯುತ್ತಾರೆ.
Jiophone Next At Rs 1999: Revisiting Emi Plans Of The Affordable 4g Device.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm