HP ಕಂಪೆನಿಯಿಂದ ಉದ್ಯಮದಲ್ಲೇ ಪ್ರಥಮ 'LaserJet Tank Printer' ಬಿಡುಗಡೆ!

24-03-22 08:15 pm       Source: Vijayakarnataka   ಡಿಜಿಟಲ್ ಟೆಕ್

HP ಕಂಪೆನಿಯ ನೂತನ LaserJet Tank ಪ್ರಿಂಟರ್‌ಗಳನ್ನು ನಿರ್ವಹಿಸುವುದು ಮತ್ತು ಅವುಗಳಲ್ಲಿ ಕೆಲಸ ಮಾಡುವುದು ಬಹಳ ಸುಲಭವಾಗಿದ್ದು, ಹೊಸ ಪ್ರಿಂಟರ್‌ಗಳು 5,000 ಪುಟಗಳನ್ನು...

ಜನಪ್ರಿಯ ಟೆಕ್ ದೈತ್ಯ ಸಂಸ್ಥೆ HP ಸಂಸ್ಥೆಯು ಅತ್ಯಾಧುನಿಕ ಮುದ್ರಣ ತಂತ್ರಜ್ಞಾನದೊಂದಿಗೆ ಉದ್ಯಮದಲ್ಲೇ ಪ್ರಥಮವೆನಿಸಿದ "LaserJet Tank Printer" ಶ್ರೇಣಿಯ ಸಾಧನಗಳನ್ನು ದೇಶದಲ್ಲಿಂದು ಬಿಡುಗಡೆಗೊಳಿಸಿದೆ. ಅತ್ಯಾಧುನಿಕ ಮುದ್ರಣ ತಂತ್ರಜ್ಞಾನದೊಂದಿಗೆ ಸಣ್ಣ-ಮಧ್ಯಮ ಗಾತ್ರದ ವ್ಯವಹಾರಗಳನ್ನು ಸಜ್ಜುಗೊಳಿಸುವ ತನ್ನ ಬದ್ಧತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳ ಗಮನಾರ್ಹ ಬೆಳವಣಿಗೆಯನ್ನು ಗಮನದಲ್ಲಿ ಇರಿಸಿಕೊಂಡು LaserJet Tank Printer ಶ್ರೇಣಿಯನ್ನು ಬಿಡುಗಡೆ ಮಾಡಿರುವುದಾಗಿ HP ಸಂಸ್ಥೆ ತಿಳಿಸಿದ್ದು, ಈ ನೂತನ HP LaserJet ಶ್ರೇಣಿಯಲ್ಲಿನ HP LaserJet Tank 1005w, HP LaserJet Tank 1020 ಮತ್ತು HP LaserJet Tank 2606 ಹೊಸ ಆವಿಷ್ಕಾರಗಳು ಮತ್ತು ಅರ್ಥಗರ್ಭಿತ ವೈಶಿಷ್ಟ್ಯಗಳು ಮುಂದಿನ ಪೀಳಿಗೆಯ ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ತಮ್ಮ ಮುದ್ರಣದ ಆವಶ್ಯಕತೆಗಳನ್ನು ಸುಗಮವಾಗಿ ನಿರ್ವಹಿಸಲು ನೆರವಾಗಲಿದೆ ಎಂದು ಹೇಳಿದೆ.

HP ಕಂಪೆನಿಯ ನೂತನ LaserJet Tank ಪ್ರಿಂಟರ್‌ಗಳನ್ನು ನಿರ್ವಹಿಸುವುದು ಮತ್ತು ಅವುಗಳಲ್ಲಿ ಕೆಲಸ ಮಾಡುವುದು ಬಹಳ ಸುಲಭವಾಗಿದ್ದು, ಹೊಸ ಪ್ರಿಂಟರ್‌ಗಳು 5,000 ಪುಟಗಳನ್ನು ಸುಲಲಿತವಾಗಿ ಮುದ್ರಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಪ್ರಮಾಣಿತ ಇತರ ಕಾರ್ಟ್ರಿಜ್‌ಗಳಿಗೆ ಹೋಲಿಸಿದರೆ ಟೋನರ್‌ಗಳು 5 ಪಟ್ಟು ಹೆಚ್ಚು ಪುಟಗಳನ್ನುಮುದ್ರಿಸುವ ಸಾಮರ್ಥ್ಯವನ್ನು ಹೊಂದಿವೆ. ಹಾಗಾಗಿ, LaserJet Tank Printer ಅಧಿಕ ಪ್ರಮಾಣದ ಮುದ್ರಣ ಅಗತ್ಯಗಳಿಗೆ ಸೂಕ್ತವಾಗಿದೆ ಎಂದು HP ಸಂಸ್ಥೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಈ ಹೊಸ LaserJet Tank ಸಾಧನವು 40-ಹಾಳೆಗಳ ದಾಖಲೆಯನ್ನು ತಾನಾಗಿ ಫೀಡ್ ಮಾಡಿಕೊಳ್ಳುವ ಬೆಂಬಲದೊಂದಿಗೆ ಮುದ್ರಿಸಬಲ್ಲದು ಮತ್ತು 50,000 ಪುಟಗಳ ದೀರ್ಘಾವಧಿಯ ಇಮೇಜಿಂಗ್ ಡ್ರಮ್‌ನೊಂದಿಗೆ ಸ್ಥಿರ ಮತ್ತು ಅಸಾಧಾರಣ ಮುದ್ರಣ ಖಚಿತವಾಗಿರುವುದರಿಂದ ಇದು ದೈನಂದಿನ ಬಳಕೆಗೂ ಸೂಕ್ತವಾಗಿದೆ ಕಂಪೆನಿ ತಿಳಿಸಿದೆ.

HP Launches 'World's First Laser Tank' Printers in India Starting Rs.  15,846 | Technology News

HP LaserJet Tank 1005 ಮತ್ತು 1020 ಸರಣಿ ಸಾಧನಗಳ ವೈಶಿಷ್ಟ್ಯಗಳು:

  • ಪ್ರತಿ ಪುಟದಲ್ಲೂ ಅತ್ಯುತ್ತಮ ಗುಣಮಟ್ಟದ ಮುದ್ರಣ, ಅದೂ ಕಡಿಮೆ ಖರ್ಚಿನಲ್ಲಿ.
  • ಅಧಿಕ ಪ್ರಮಾಣದ ಮುದ್ರಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ - ಮೊದಲೇ ಭರ್ತಿ ಮಾಡಲಾದ ಟೋನರ್ 5,000 ಪುಟಗಳನ್ನು ಮುದ್ರಿಸಬಲ್ಲದು.
  • ರಿ-ಫಿಲ್‌ಗಳಲ್ಲಿ ಹೆಚ್ಚು ಉಳಿತಾಯ ನೀಡುವ ಗರಿಷ್ಠ ಇಳುವರಿಯ HP ಟೋನರ್ ರೀಲೋಡ್ ಕಿಟ್‌
  • ಸುಂದರವಾದ ಮತ್ತು ಸ್ಪಷ್ಟವಾದ ಮುದ್ರಣ, ಪ್ರತಿ ಪುಟದಲ್ಲೂ ಅಸಾಧಾರಣ ಗುಣಮಟ್ಟ.
  • ಮೂಲ HP ಟೋನರ್ ಅನ್ನು ಕೇವಲ 15 ಸೆಕೆಂಡುಗಳಲ್ಲಿ ಸುಲಭವಾಗಿ ರೀಫಿಲ್ ಮಾಡಬಹುದು
  • 2,500 ಮತ್ತು 5,000 ಪುಟಗಳ HP ಟೋನರ್ ರೀಫಿಲ್ ಆಯ್ಕೆ, ಮುದ್ರಣವು ಸ್ಥಗಿತಗೊಳ್ಳುವ ಸಮಯವೂ ಕಡಿಮೆ.
  • ಮೂಲ HP ಟೋನರ್ ರೀಲೋಡ್ ಕಿಟ್ 90% ದಷ್ಟು ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ
  • ಸ್ವಯಂಚಾಲಿತ ಎರಡು-ಬದಿಯ ಮುದ್ರಣ ಮತ್ತು ಜೀವಿತಾವಧಿಯೊಂದಿಗೆ ಬಹುಪುಟಗಳ ದಾಖಲೆಯ ತ್ವರಿತ ಮುದ್ರಣ
  • HP Smart ಅಪ್ಲಿಕೇಶನ್‌ ಮೂಲಕ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮುದ್ರಿಸಿ, ಸ್ಕ್ಯಾನ್ ಮಾಡಿ ಮತ್ತು ಹಂಚಿಕೊಳ್ಳಿ
  • ದೀರ್ಘಾವಧಿಯ 50,000-ಪುಟಗಳ ಇಮೇಜಿಂಗ್ ಡ್ರಮ್‌, ನಿರ್ವಹಣೆ ವೆಚ್ಚವೂ ಕಡಿಮೆ

HP LaserJet Tank 2606 ಪ್ರಿಂಟರ್ ಹೊಂದಿರುವ ವೈಶಿಷ್ಟ್ಯಗಳು:

  • ಡ್ಯುಪ್ಲೆಕ್ಸ್ ಹೈ-ಸ್ಪೀಡ್ ಪ್ರಿಂಟಿಂಗ್ (ಸ್ವಯಂಚಾಲಿತ ಎರಡು-ಬದಿಯ ಮುದ್ರಣ ಮತ್ತು ಜೀವಿತಾವಧಿಗೆ ಬಹುಪುಟಗಳ ದಾಖಲೆಯ ತ್ವರಿತ ಮುದ್ರಣ)
  • SDW ರೂಪಾಂತರದಲ್ಲಿ 40 ಪುಟ ADF (ಸ್ವಯಂಚಾಲಿತ ಡಾಕ್ಯುಮೆಂಟ್ ಫೀಡರ್).
  • 250 ಹಾಳೆಗಳ ದೊಡ್ಡ ಇನ್‌ಪುಟ್ ಟ್ರೇ
  • ಅತ್ಯಂತ ಕಡಿಮೆ ಖರ್ಚಿನಲ್ಲಿ ಪ್ರತಿ ಪುಟದಲ್ಲೂ ಅತ್ಯುತ್ತಮ ಗುಣಮಟ್ಟದ ಮುದ್ರಣವನ್ನು ಪಡೆಯಬಹುದು.

ಪ್ರಮುಖ ವೈಶಿಷ್ಟ್ಯಗಳು ಇಂತಿವೆ:

  • ಕಾರ್ಟ್ರಿಜ್ ಇಲ್ಲದ ಏಕೈಕ ಲೇಸರ್ ಪ್ರಿಂಟರ್
  • ಗೊಂದಲರಹಿತ ಟೋನರ್ ರಿ-ಫಿಲ್ ಪರಿಹಾರ, ಕೇವಲ 15 ಸೆಕೆಂಡ್‌ಗಳ[1] ಗಮನ ಸಾಕಾಗುತ್ತದೆ
  • ಮೊದಲೇ ಭರ್ತಿ ಮಾಡಿರುವ ಮೂಲ HP ಟೋನರ್‌ನಿಂದ ಸುಮಾರು 5000 ಪುಟಗಳ ಮುದ್ರಣ, ಹಾಗೂ ಹೆಚ್ಚು ಉತ್ಪಾದಕವಾದ HP ಟೋನರ್ ರಿಲೋಡ್ ಕಿಟ್‌ಗಳ ಮೇಲೆ ಭಾರೀ ಉಳಿತಾಯ

HP Announces Industry First Laser Tank Printer to Enable High-Quality,  Low-Cost Printing for Small Businesses
ಸುಸ್ಥಿರತೆ, ಬಾಳಿಕೆ

  •  HP LaserJet Tank MFP 2606 ಇಪೀಟ್ ಸಿಲ್ವರ್ ಡೆಸಿಗ್ನೇಶನ್‌ದಿಂದ ಎನರ್ಜಿ ಸ್ಟಾರ್ ಪ್ರಮಾಣೀಕರಣವನ್ನು ಗಳಿಸಿದೆ.
  •  HP ಟೋನರ್ ರಿಲೋಡ್ ಕಿಟ್ಪೋಲಾಗುವುದನ್ನು 90% ತನಕ ಉಳಿಸುತ್ತದೆ
  •  ಸ್ವಯಂಚಾಲಿತ ಎರಡು-ಬದಿಗಳ ಮುದ್ರಣ ಹಾಗೂ ಆಜೀವ ಇಮೇಜಿಂಗ್ ಡ್ರಮ್ ಜತೆಗೆ ಅತ್ಯುತ್ತಮಗೊಳಿಸಿದ ಟ್ಯಾಂಕ್ ವಿನ್ಯಾಸವು ಗಾತ್ರದಲ್ಲಿ 17% ನಷ್ಟು ಚಿಕ್ಕದಾಗಿದೆ
  •  ಶಕ್ತಿಯುತ ಉತ್ಪಾದಕ ಅಗತ್ಯಗಳಿಗಾಗಿ ತಡೆರಹಿತ ಅನುಭವ
  •  ತ್ವರಿತವಾಗಿ ಎರಡು-ಬದಿಗಳ ಮುದ್ರಣ, 40-ಹಾಳೆಗಳ ಸ್ವಯಂಚಾಲಿತ ಡಾಕ್ಯುಮೆಂಟ್ ಫೀಡರ್ ಬೆಂಬಲದೊಂದಿಗೆ.
  •  ನಂಬಲರ್ಹವಾದ ವೈರ್‌ಲೆಸ್ ಕನೆಕ್ಟಿವಿಟಿ
  •  HP Wolf Essential ಭದ್ರತೆ
  •  ವರ್ಗದಲ್ಲೇ ಅತ್ಯುತ್ತಮವಾದ HP Smart App, Smart Advance ಸ್ಕ್ಯಾನಿಂಗ್ ವೈಶಿಷ್ಟ್ಯಗಳು


ಬೆಲೆ ಮತ್ತು ಲಭ್ಯತೆ:

  • HP LaserJet Tank 1005w ಸಾಧನ ರೂ. 23,695ಕ್ಕೆ ಲಭ್ಯ
  • HP LaserJet Tank 1020 ಸಾಧನ ರೂ. 15,963ಕ್ಕೆ ಲಭ್ಯ
  • HP LaserJet Tank 2606 ಸಾಧನ ರೂ, 29,558ಕ್ಕೆ ಲಭ್ಯ

LaserJet Tank Printer ಕುರಿತಂತೆ HP ಇಂಡಿಯಾ ಪ್ರಿಂಟಿಂಗ್ ಸಿಸ್ಟಮ್ಸ್ ವಿಭಾಗದ ಹಿರಿಯ ನಿರ್ದೇಶಕ ಸುನೀಶ್ ರಾಘವನ್ ಅವರು ಹೇಳುವಂತೆ, "ಹೊಸತನವನ್ನು ಪಡೆಯಲು ಮತ್ತು ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಉದ್ಭವಿಸಿದ ಸವಾಲುಗಳನ್ನು ಗೆಲ್ಲಲು ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ಸಹಾಯ ಮಾಡಲು HP ಬದ್ಧವಾಗಿದೆ. ವ್ಯಾಪಾರದ ನಿರಂತರತೆಯೊಂದಿಗೆ SMB ಗಳು ಮತ್ತು SOHO ಗಳಿಗೆ ಪ್ರಯೋಜನವನ್ನು ನೀಡುವ ನಾವೀನ್ಯಗಳಲ್ಲಿ ನಾವು ಸದಾ ಮುಂಚೂಣಿಯಲ್ಲಿದ್ದೇವೆ. ತಂತ್ರಜ್ಞಾನವನ್ನು ಬಳಕೆದಾರರು ತಡೆರಹಿತವಾಗಿ ಅನುಭವಿಸುವಂತಾಗಲು ಹೊಸ LaserJet ಟ್ಯಾಂಕ್ ವಿನ್ಯಾಸಗೊಳಿಸಲಾಗಿದೆ. HP Smart App ಮೂಲಕ ಸುಧಾರಿತ ಸ್ಕ್ಯಾನಿಂಗ್ ವೈಶಿಷ್ಟ್ಯಗಳು, 15-ಸೆಕೆಂಡ್‌ಗಳಷ್ಟು ಕಡಿಮೆ ಸಮಯದಲ್ಲಿ ಟೋನರ್ ರೀಫಿಲ್ ಮತ್ತು ಗರಿಷ್ಠ ಇಳುವರಿ ಹಾಗೂ ಮೂಲ HP ಟೋನರ್ ಕಿಟ್‌ನಂತಹ ನವೀನ ಸಾಮರ್ಥ್ಯಗಳನ್ನು ಹೊಂದಿದೆ. ಇವೆಲ್ಲವೂ ಸಮರ್ಥ ಮುದ್ರಣ ಅನುಭವಕ್ಕೆ ಕೊಡುಗೆ ನೀಡುತ್ತವೆ." ಎಂದು ತಿಳಿಸಿದ್ದಾರೆ.

Hp Announces Industry First Laser Tank Printer For Small Businesses.