ಭಾರತದಲ್ಲಿ 'Samsung Galaxy M33 5G' ಫೋನ್ ಬಿಡುಗಡೆ ದಿನಾಂಕ ಅಧಿಕೃತ!

27-03-22 10:38 pm       Source: Vijayakarnataka   ಡಿಜಿಟಲ್ ಟೆಕ್

Samsung Galaxy M33 5G ಸ್ಮಾರ್ಟ್‌ಫೋನಿನ ಬಗ್ಗೆ ತೆರೆಯಲಾಗಿರುವ ಅಮೆಜಾನ್ ಮೈಕ್ರೋಸೈಟ್ ಪ್ರಕಾರ, ನೂತನ Samsung Galaxy M33 5G ಸ್ಮಾರ್ಟ್‌ಫೋನ್ 5nm ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿರಲಿದೆ.

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪೆನಿಯ ಮಿಡ್‌ರೇಂಜ್ ಪ್ರೀಮಿಯಂ 'Samsung Galaxy M33 5G' ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೇ ಏಪ್ರಿಲ್ 2 ರಂದು ಬಿಡುಗಡೆಯಾಗಲಿದೆ. ದೇಶದ ಜನಪ್ರಿಯ ಇ-ಕಾಮರ್ಸ್ ಜಾಲತಾಣ ಅಮೆಜಾನ್ ನಲ್ಲಿ ಹೊಸದಾಗಿ ಆರಂಭಿಸಿರುವ ಮೈಕ್ರೋಸೈಟ್ ಮೂಲಕ Samsung Galaxy M33 5G ಫೋನ್ ಬಿಡುಗಡೆ ದಿನಾಂಕವನ್ನು ದೃಢೀಕರಿಸಲಾಗಿದ್ದು, ಏಪ್ರಿಲ್ 2 ರಂದು ಈ ನೂತನ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಬಂದಾಗ ಅಲರ್ಟ್ ಪಡೆಯಲು ಅಮೆಜಾನ್‌ನಲ್ಲಿ 'ನೋಟಿಫೈ ಮಿ' ಬಟನ್ ಕ್ಲಿಕ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಅಮೆಜಾನ್ ಜೊತೆಗಿನ ಸ್ಯಾಮ್‌ಸಂಗ್ ಕಂಪೆನಿಯ ಈ ಸಹಯೋಗದಲ್ಲಿ 'Samsung Galaxy M33 5G' ಸ್ಮಾರ್ಟ್‌ಫೋನ್ ಹೊಂದಿರಲಿರುವ ಕೆಲ ವೈಶಿಷ್ಟ್ಯಗಳ ಬಗ್ಗೆಯೂ ಸಹ ಕೆಲವು ಮಾಹಿತಿಗಳು ದೊರೆತಿದೆ.

Samsung Galaxy M33 5G ಸ್ಮಾರ್ಟ್‌ಫೋನಿನ ಬಗ್ಗೆ ತೆರೆಯಲಾಗಿರುವ ಅಮೆಜಾನ್ ಮೈಕ್ರೋಸೈಟ್ ಪ್ರಕಾರ, ನೂತನ Samsung Galaxy M33 5G ಸ್ಮಾರ್ಟ್‌ಫೋನ್ 5nm ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿರಲಿದೆ ಮತ್ತು ಇದು 6GB + 128GB ಮತ್ತು 8GB + 128GBಯ ಎರಡು RAM ಮತ್ತು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ ಎಂಬುದು ಖಚಿತವಾಗಿದೆ. ಇನ್ನು ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, Samsung Galaxy M33 5G ಯ ಭಾರತೀಯ ಮಾದರಿಯು Android 12 ಆಧಾರಿತ One UI 4.1 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಈ ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ರೇಟ್‌ನೊಂದಿಗೆ 6.6-ಇಂಚಿನ ಪೂರ್ಣ-HD+ (1,080x2,408 ಪಿಕ್ಸೆಲ್‌ಗಳು) LCD ಡಿಸ್‌ಪ್ಲೇಯನ್ನು ಹೊಂದಿರುವ ಬಗ್ಗೆ ಸೂಚಿಸಲಾಗಿದೆ.

Samsung Galaxy M33 makes its official appearance with a 5G chipset, a huge  battery and up to 8 GB of RAM - NotebookCheck.net News

ನಮಗೆ ಅಮೆಜಾನ್ ಮೈಕ್ರೋಸೈಟ್ ಪಟ್ಟಿಯಲ್ಲಿ ಕಂಡುಬರುವಂತೆ, ನೂತನ Galaxy M33 5G ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು ಎರಡು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು ಡೆಪ್ತ್ ಕ್ಯಾಮೆರಾಗಳನ್ನು ನೀಡಲಾಗಿರುವ ಬಗ್ಗೆ ವದಂತಿಗಳಿಂದ ತಿಳಿದು ಬಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಈ ಸ್ಮಾರ್ಟ್‌ಫೋನಿನಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡುವ ಬಗ್ಗೆ ನಿರೀಕ್ಷೆ ಇದೆ. ಸ್ಯಾಮ್‌ಸಂಗ್ ಈ ಸ್ಮಾರ್ಟ್‌ಫೋನಿನಲ್ಲಿ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಅಳವಡಿಸಿರಲಿದೆ ಎಂದು ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ.

ಈ ತಿಂಗಳ ಆರಂಭದಲ್ಲಷ್ಟೇ 'Samsung Galaxy M33 5G' ಸ್ಮಾರ್ಟ್‌ಫೋನಿನ ಕೆಲವು ವೈಶಿಷ್ಟ್ಯಗಳ ಬಗ್ಗೆ ಮಾಹಿತಿಗಳು ಸೋರಿಕೆಯಾಗಿದ್ದವು. Samsung Galaxy M33 5G ಫೋನಿನಲ್ಲಿ 5nm ಆಕ್ಟಾ-ಕೋರ್ ಪ್ರೊಸೆಸರ್ ಹಾಗೂ 120Hz ರಿಫ್ರೆಶ್ ರೇಟ್‌ ಡಿಸ್‌ಪ್ಲೇ ಇರುವ ಬಗ್ಗೆ ವದಂತಿಗಳು ಹರಿದಾಡಿದ್ದವು. ಈಗ ಆ ವದಂತಿಯ ಮಾಹಿತಿಗಳೆಲ್ಲವೂ ಬಹುತೇಕ ನಿಜವಾಗಿವೆ. ಏಪ್ರಿಲ್ 2 ರಂದು 'Samsung Galaxy M33 5G' ಸ್ಮಾರ್ಟ್‌ಫೋನ್ ಮಾತ್ರವಲ್ಲದೇ ನೂತನ Samsung Galaxy A13 ಮತ್ತು Samsung Galaxy A23, ಸ್ಮಾರ್ಟ್‌ಫೋನ್‌ಗಳು ಸಹ ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ನಿರೀಕ್ಷೆಯನ್ನು ಹೊಂದಲಾಗಿದೆ. ಆದರೆ, ಈ ವರೆಗೂ Samsung Galaxy A13 ಮತ್ತು Samsung Galaxy A23 ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.

Samsung Galaxy M33 5g India Launch Date Confirmed For April 2.