ಆಪಲ್ iPhone 14 ಫೋನ್‌ಗಳ 48MP ಲೆನ್ಸ್ ಕ್ಯಾಮೆರಾ ಬಂಪ್ ಬದಲಾಗಲಿದೆ!

29-03-22 08:12 pm       Source: Vijayakarnataka   ಡಿಜಿಟಲ್ ಟೆಕ್

ಆಪಲ್‌ನ ಮುಂದಿನ ಮಾದರಿ ಸ್ಮಾರ್ಟ್‌ಫೋನ್ iPhone 14 Pro ಮತ್ತು Pro Max ಸ್ಮಾರ್ಟ್‌ಫೋನ್‌ಗಳ ಪ್ರಾಥಮಿಕ ಕ್ಯಾಮೆರಾವು 48MP ಸಂವೇದಕವನ್ನು ಹೊಂದಿರಬಹುದು ಎಂಬ ವದಂತಿಗಳು ಇತ್ತೀಚಿಗಷ್ಟೇ ಹರಿದಾಡಿದ್ದವು, ಇದೀಗ iPhone 14 ಮಾದರಿ ಫೋನ್‌ಗಳ ಕ್ಯಾಮೆರಾ ವಿಷಯಗಳ ಬಗ್ಗೆ ಮತ್ತೊಂದು ಸುದ್ದಿ ಹೊರಬಿದಿದ್ದು...

ಜನಪ್ರಿಯ ಟೆಕ್ ಕಂಪೆನಿ ಆಪಲ್‌ನ ಮುಂದಿನ ಮಾದರಿ ಸ್ಮಾರ್ಟ್‌ಫೋನ್ iPhone 14 Pro ಮತ್ತು Pro Max ಸ್ಮಾರ್ಟ್‌ಫೋನ್‌ಗಳ ಪ್ರಾಥಮಿಕ ಕ್ಯಾಮೆರಾವು 48MP ಸಂವೇದಕವನ್ನು ಹೊಂದಿರಬಹುದು ಎಂಬ ವದಂತಿಗಳು ಇತ್ತೀಚಿಗಷ್ಟೇ ಹರಿದಾಡಿದ್ದವು, ಇದೀಗ iPhone 14 ಮಾದರಿ ಫೋನ್‌ಗಳ ಕ್ಯಾಮೆರಾ ವಿಷಯಗಳ ಬಗ್ಗೆ ಮತ್ತೊಂದು ಸುದ್ದಿ ಹೊರಬಿದಿದ್ದು, iPhone 14 ಮಾದರಿ ಸ್ಮಾರ್ಟ್‌ಫೋನ್‌ಗಳ ಕ್ಯಾಮರಾ ಬಂಪ್ iPhone 13 pro ಗಿಂತ ದೊಡ್ಡದಾಗಿರಲಿದೆ ಎಂದು ಹೇಳಲಾಗಿದೆ. ಪ್ರಸಿದ್ಧ ಆಪಲ್ ವಿಶ್ಲೇಷಕ ಮಿಂಗ್-ಚಿ ಕುವೊ ಅವರು ತನ್ನ Twitter ಪೋಸ್ಟ್‌ನಲ್ಲಿ iPhone 14 ಮಾದರಿಗಳ ಸ್ಕೀಮ್ಯಾಟಿಕ್‌ಗಳನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಮ್ಯಾಕ್ಸ್ ಕ್ಯಾಮೆರಾ ಬಂಪ್‌ನ ಎತ್ತರ ಮತ್ತು ಅಗಲವನ್ನು ಸಹ ಉಲ್ಲೇಖಿಸಿದ್ದಾರೆ.

ಆಪಲ್ ವಿಶ್ಲೇಷಕ ಮಿಂಗ್-ಚಿ ಕುವೊ ಅವರು ಹೇಳಿರುವಂತೆ, ಪ್ರಸ್ತುತ iPhone 13 Pro ಮತ್ತು 13 Pro Max ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಬಂಪ್‌ನ ಎತ್ತರವು 3.60mm ಎತ್ತರವಾಗಿದೆ. ಆದರೆ, ಇತ್ತೀಚಿನ ಸ್ಕೀಮ್ಯಾಟಿಕ್ಸ್ ಪ್ರಕಾರ, iPhone 14 Pro ಮತ್ತು 14 Pro Max ನ ಹಿಂಭಾಗದ ಕ್ಯಾಮೆರಾ ಬಂಪ್ 4.17mm ಎತ್ತರವಾಗಿರುತ್ತದೆ. 14 ಪ್ರೊ/ಪ್ರೊ ಮ್ಯಾಕ್ಸ್‌ನ ದೊಡ್ಡದಾದ ಮತ್ತು ಹೆಚ್ಚು ಪ್ರಮುಖವಾದ ಹಿಂಬದಿ-ಕ್ಯಾಮೆರಾ ಬಂಪ್‌ಗೆ ಮುಖ್ಯ ಕಾರಣವೆಂದರೆ, ವೈಡ್ ಕ್ಯಾಮೆರಾವನ್ನು 48MP ಗೆ ಅಪ್‌ಗ್ರೇಡ್ ಮಾಡುವುದು (vs. 13 Pro/Pro Max ನ 12MP). ಇದರಿಂದ 48MP CIS ನ ಕರ್ಣೀಯ ಉದ್ದವು 25-35% ರಷ್ಟು ಹೆಚ್ಚಾಗುತ್ತದೆ ಮತ್ತು 48MP ಯ 7P ಲೆನ್ಸ್‌ನ ಎತ್ತರವು 5-10% ರಷ್ಟು ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

iPhone 14 Pro And iPhone 14 Pro Max To Feature a Bigger Camera Bump Due TO  Upgraded 48 Megapixel Sensor: kuo - The News

ಪ್ರೊ ಮಾದರಿಗಳ ದೊಡ್ಡ ಕ್ಯಾಮೆರಾ ಬಂಪ್ ಹಿಂಭಾಗದಲ್ಲಿ 48MP ಸಂವೇದಕವನ್ನು ಹೊಂದಿದೆ ಎಂದು ಮಿಂಗ್-ಚಿ ಕುವೊ ಅವರು ಇತ್ತೀಚಿಗಷ್ಟೇ ಹೇಳಿದ್ದರು. ಐಫೋನ್ 14 ಪ್ರೊ ಮಾದರಿಗಳ ಕ್ಯಾಮೆರಾ "ಮೊಬೈಲ್ ಫೋನ್ ಕ್ಯಾಮೆರಾ ಛಾಯಾಗ್ರಹಣವನ್ನು ಹೊಸ ಮಟ್ಟಕ್ಕೆ ಏರಿಸುತ್ತದೆ" ಎಂದು ಕುವೊ ಈ ಹಿಂದೆ ಹೇಳಿದರು. ಇತ್ತೀಚೆಗಷ್ಟೇ, iPhone 14 ಮಾದರಿ ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ಪಂಚ್-ಹೋಲ್ ವಿನ್ಯಾಸ ಪಡೆಯುವ ಬಗ್ಗೆ ವಿವರಗಳು ಸೋರಿಕೆಯಾಗಿದ್ದವು. ಜೆಫ್ ಗ್ರಾಸ್‌ಮನ್ ಎಂಬ ಡೆವಲಪರ್ ಮಾತ್ರೆ-ಆಕಾರದ ಹೋಲ್-ಪಂಚ್ ಕಟೌಟ್‌ನೊಂದಿಗೆ ಐಫೋನ್ 14 ಪ್ರೊ ಮೋಕ್‌ಅಪ್‌ನ ಚಿತ್ರವನ್ನು ಟ್ವೀಟ್ ಮಾಡಿದ್ದರು. ಹಾಗೆಯೇ LeaksApplePro ಟಿಪ್‌ಸ್ಟರ್ iPhone 14 Pro ಬೆಲೆಗಳ ಬಗ್ಗೆ ಮಾಹಿತಿ ನೀಡಿತ್ತು.

LeaksApplePro ಟಿಪ್‌ಸ್ಟರ್ ಪ್ರಕಾರ, iPhone 14 Pro ಬೆಲೆಗಳು iPhone 13 Pro ಗಿಂತ $100 (ಸುಮಾರು ರೂ. 7,400) ಹೆಚ್ಚಾಗಬಹುದು. ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳದಿಂದಾಗಿ ಹೊಸ iPhone 14 Max ಮಾದರಿ ಮತ್ತು iPhone 13 Pro ನಡುವೆ $100 ಕ್ಕಿಂತ ಹೆಚ್ಚು ವ್ಯತ್ಯಾಸವಿರಬಹುದು ಎಂದು ಹೇಳಲಾಗಿದೆ. LeaksApplePro ಟ್ವೀಟ್ ಪ್ರಕಾರ, iPhone 14 $ 799 (ಸುಮಾರು ರೂ. 59,000), iPhone 14 Max ಆರಂಭಿಕ ಬೆಲೆ $ 899 (ಸರಿಸುಮಾರು ರೂ. 66,400), iPhone 14 Pro $ 1,099 ರ(ಸುಮಾರು ರೂ. 81,200)ಆರಂಭಿಕ ಬೆಲೆಗೆ ಮಾರಾಟವಾಗಲಿದೆ. ಮತ್ತು ಟಾಪ್-ಎಂಡ್ iPhone 14 Pro Max ಗ್ರಾಹಕರಿಗೆ $1,199 (ಸುಮಾರು ರೂ. 88,600) ವೆಚ್ಚವಾಗಲಿದೆ ಎಂದು ಟ್ವೀಟ್ ಮಾಡಿರುವುದು ಭವಿಷ್ಯದ ಐಫೋನ್ 14 ಬೆಲೆಗಳನ್ನು ಸಹ ಬಹಿರಂಗಪಡಿಸಿದೆ.

Iphone 14 Pro/ Pro Maxs Larger Camera Bump For New 48mp Lens.