ಭಾರತದಲ್ಲಿ Samsung ಪರಿಚಯಿಸಿರುವ 5 ಹೊಸ 'ಗ್ಯಾಲಕ್ಸಿ A ಸೀರೀಸ್' ಫೋನ್‌ಗಳು ಹೇಗಿವೆ?

31-03-22 11:10 pm       Source: Vijayakarnataka   ಡಿಜಿಟಲ್ ಟೆಕ್

ಗ್ಯಾಲಕ್ಸಿ ಎ73 5ಜಿ ಸ್ಮಾರ್ಟ್‌ಫೋನ್ ಈ ವರ್ಗದ ಫೋನ್‌ಗಳಲ್ಲೇ ಅತ್ಯುತ್ತಮ 108ಎಂಪಿ ಒಐಎಸ್ ಕ್ಯಾಮರಾ, ಆಬ್ಜೆಕ್ಟ್ ಎರೇಸರ್ ಮತ್ತು ಎಐ ಫೋಟೋ ರಿಮಾಸ್ಟರ್, ಫ್ಲೂಯಿಡ್ 120ಹಟ್ರ್ಸ್ ಸೂಪರ್ ಅಮೋಲ್ಡ್+ ಡಿಸ್‌ಪ್ಲೇ ಮತ್ತು ನೀರು ಮತ್ತು ಧೂಳು ನಿರೋಧಕದಂತಹ ಸರಿಸಾಟಿ ಇರದ ಅಸಂಖ್ಯ ಅರ್ಥಪೂರ್ಣ ಆವಿಷ್ಕಾರಗಳ ಅನುಭವವನ್ನು ನಿಡಲಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥರಾದ ಶ್ರೀ ಆದಿತ್ಯ ಬಬ್ಬರ್ ಅವರು ಹೇಳಿದ್ದಾರೆ...

ಭಾರತದ ಅತ್ಯಂತ ವಿಶ್ವಾಸಾರ್ಹ ಸ್ಮಾರ್ಟ್‌ಫೋನ್ ಬ್ರಾಂಡ್ ಎಂದು ಹೆಸರುಗಳಿಸಿರುವ Samsung ತನ್ನ ಜನಪ್ರಿಯ Galaxy A series ನಲ್ಲಿ ಐದು ಹೊಸ ಮಾದರಿ (ಗ್ಯಾಲಕ್ಸಿ ಎ13/ಎ23/ಎ33/5ಜಿ/ಎ53/ಎ73 5ಜಿ) ಸ್ಮಾರ್ಟ್‌ಪೋನ್‌ಗಳನ್ನು ದೇಶದಲ್ಲಿ ಪರಿಚಯಿಸಿದೆ. ಅತ್ಯಾಧುನಿಕ ಗ್ಯಾಲಕ್ಸಿ ಆವಿಷ್ಕಾರಗಳನ್ನು ಕೈಗೆಟುಕುವ ಬೆಲೆಯಲ್ಲಿ ಹಾಗೂ ಸಂಪೂರ್ಣ ಪ್ಯಾಕೇಜ್ ಮೂಲಕ ಅದ್ಭುತ ತಂತ್ರಜ್ಞಾನ ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ಮಾಡುವುದು ತನ್ನ ಉದ್ದೇಶ ಎಂದು Samsung ಕಂಪೆನಿ ಹೇಳಿಕೊಂಡಿದ್ದು, Galaxy A ಸರಣಿಯು ಪ್ರಮುಖ ರೀತಿಯ ವೈಶಿಷ್ಟ್ಯಗಳನ್ನು ಕೈಗೆಟುಕುವ ಬೆಲೆಯಲ್ಲಿ ಪ್ರವೇಶಿಸುವಂತೆ ಮಾಡುವ ಮೂಲಕ ಆ ನಂಬಿಕೆಯನ್ನು ಸಾರುತ್ತದೆ. ನಾವು ಪ್ರಾರಂಭಿಸುತ್ತಿರುವ ಐದು ಹೊಸ ಮಾದರಿಗಳ ಫೋನ್‌ಗಳನ್ನು ಗ್ರಾಹಕರನ್ನು ಪ್ರೇರೇಪಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ಬ್ಯುಸಿನೆಸ್‌ನ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಟೈಲಿಷ್ ಮತ್ತು ಬಾಳಿಕೆಯ ವಿನ್ಯಾಸಗಳೊಂದಿಗೆ ಪರಿಷ್ಕರಣೆಯಾಗಿರುವ ಗ್ಯಾಲಕ್ಸಿ ಎ ಸೀರೀಸ್ ಸ್ಮಾರ್ಟ್‌ಪೋನ್‌ಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಫ್ಲಾಗ್‌ಶಿಪ್ ರೀತಿಯ ಫೀಚರ್‍ಗಳನ್ನು ತರಲಾಗಿದೆ. ಗ್ಯಾಲಕ್ಸಿ ಎ73 5ಜಿ ಸ್ಮಾರ್ಟ್‌ಫೋನ್ ಈ ವರ್ಗದ ಫೋನ್‌ಗಳಲ್ಲೇ ಅತ್ಯುತ್ತಮ 108ಎಂಪಿ ಒಐಎಸ್ ಕ್ಯಾಮರಾ, ಆಬ್ಜೆಕ್ಟ್ ಎರೇಸರ್ ಮತ್ತು ಎಐ ಫೋಟೋ ರಿಮಾಸ್ಟರ್, ಫ್ಲೂಯಿಡ್ 120ಹಟ್ರ್ಸ್ ಸೂಪರ್ ಅಮೋಲ್ಡ್+ ಡಿಸ್‌ಪ್ಲೇ ಮತ್ತು ನೀರು ಮತ್ತು ಧೂಳು ನಿರೋಧಕದಂತಹ ಸರಿಸಾಟಿ ಇರದ ಅಸಂಖ್ಯ ಅರ್ಥಪೂರ್ಣ ಆವಿಷ್ಕಾರಗಳ ಅನುಭವವನ್ನು ನಿಡಲಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥರಾದ ಶ್ರೀ ಆದಿತ್ಯ ಬಬ್ಬರ್ ಅವರು ಹೇಳಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ Samsung ಕಂಪೆನಿ ತನ್ನ ಜನಪ್ರಿಯ Galaxy A series ನಲ್ಲಿ ಪರಿಚಯಿಸಿರುವ ಐದು ಹೊಸ ಮಾದರಿಗಳಾದ ಗ್ಯಾಲಕ್ಸಿ ಎ13/ಎ23/ಎ33/5ಜಿ/ಎ53/ಎ73 5ಜಿ ಸ್ಮಾರ್ಟ್‌ಪೋನ್‌ಗಳು ಹೇಗಿವೆ ಮತ್ತು ಬೆಲೆಗಳು ಎಷ್ಟು ಎಂಬ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ ಬನ್ನಿ.

ಗ್ಯಾಲಕ್ಸಿ A73 5ಜಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ53 5ಜಿ ಸ್ಮಾರ್ಟ್‌ ತನ್ನ ಗ್ಯಾಲಕ್ಸಿ ಎ ಸರಣಿಯಲ್ಲಿ ಪರಿಚಯಿಸಿರುವ ಐದು ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ Galaxy A73 5G ಸ್ಮಾರ್ಟ್‌ಫೋನ್ ಬಗ್ಗೆ ಕಂಪೆನಿ ಹೆಚ್ಚು ಒಲವನ್ನು ಹೊಂದಿದೆ. ಗ್ಯಾಲಕ್ಸಿ ಎ73 5ಜಿ ತೆಳುವಾದ ಬಾಡಿ ಹಾಗೂ ತೆಳು(7.6ಎಂಎಂ ತೆಳು) ಹಾಗೂ ನಯವಾದ ವಿನ್ಯಾಸದಲ್ಲಿ 6.7-ಇಂಚು ಎಫ್‍ಎಚ್‌ಡಿ+ ಇನ್ಫಿನಿಟಿ-ಒ-ಸೂಪರ್ ಅಮೋಲ್ಡ್+ ಡಿಸ್ಪ್ಲೇಯನ್ನು ಹೊಂದಿದ್ದು, ಫೋನನ್ನು ಐಪಿ67 ಪ್ರಮಾಣೀಕೃತ ಸ್ಪಿಲ್, ಸ್ಪ್ಲಾಶ್ ಮತ್ತು ಧೂಳು ನಿರೋಧಕ ವೈಶಿಷ್ಟ್ಯದ ಜೊತೆಗೆ ಡಿಸ್ಪ್ಲೇ ಮೇಲೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಜೋಡಿಸಲಾಗಿದೆ. ಈ ಫೋನ್ ಔಟ್-ಆಫ್-ದಿ ಬಾಕ್ಸ್ ಆಂಡ್ರಾಯಿಡ್ 12 ಮತ್ತು 4 ವರ್ಷಗಳವರೆಗೆ ಸಾಫ್ಟ್‍ವೇರ್ ಅಪ್‌ಡೇಟ್‌ಗಳು ಹಾಗೂ 5 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಳನ್ನು ನೀಡುತ್ತದೆ. ಗ್ಯಾಲಕ್ಸಿ ಎ73 5ಜಿ ಫೋನ್ 108ಎಂಪಿ ಮುಖ್ಯ ಕ್ಯಾಮರಾ, 12 MP ಅಲ್ಟ್ರಾವೈಡ್, 5 MP ಮ್ಯಾಕ್ರೋ ಮತ್ತು 5 MP ಡೀಪ್ ಕ್ಯಾಮೆರಾಗಳನ್ನು ಹೊಂದಿದೆ. ಗ್ಯಾಲಕ್ಸಿ ಎ73 5ಜಿ ಸ್ನಾಪ್‍ಡ್ರಾಗನ್ 778ಜಿ 5ಜಿ ಪ್ರೊಸೆಸರ್‍ನಿಂದ ಸನ್ನದ್ಧವಾಗಿದ್ದು ಮಲ್ಟಿಟಾಸ್ಕಿಂಗ್ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.8ಜಿಬಿ+ 128ಜಿಬಿ ಮತ್ತು 8ಜಿಬಿ+256ಜಿಬಿ ಸಾಮರ್ಥ್ಯದ ಫೋನ್‌ಗಳು 1 ಟಿಬಿವರೆಗೆ ವಿಸ್ತರಿಸಬಲ್ಲ ಸ್ಟೋರೇಜ್‌ ಬೆಂಬಲವನ್ನು ಪಡೆದಿವೆ.

Samsung Galaxy A73 5G And Galaxy A33 5G Launched In India: Price,  Specifications

ಗ್ಯಾಲಕ್ಸಿ ಎ53 5ಜಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ53 5ಜಿ ಸ್ಮಾರ್ಟ್‌ಪೋನಿನಲ್ಲಿ ಅದ್ಭುತ 64ಎಂಪಿ ಕ್ಯಾಮೆರಾ, ಬ್ಲರ್-ಮುಕ್ತ ಛಾಯಾಗ್ರಹಣ, 6.5-ಇಂಚು ಸೂಪರ್ ಅಮೋಲ್ಡ್ ಡಿಸ್‌ಪ್ಲೇ, 120ಹಟ್ರ್ಸ್ ರಿಫ್ರೆಶ್ ರೇಟ್ ಮತ್ತು ಐಪಿ67 ರೇಟಿಂಗ್ ಸ್ಪಿಲ್, ಸ್ಪ್ಲಾಶ್ ಮತ್ತು ಧೂಳು ನಿರೋಧ ಹಾಗೂ ಹೆಚ್ಚುವರಿಯಾಗಿ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5ನಿಂದ ರಕ್ಷಣೆಯಂತಹ ವೈಶಿಷ್ಟ್ಯಗಳನ್ನು ತಂದಿರುವುದಾಗಿ ಸ್ಯಾಮ್‌ಸಂಗ್ ಕಂಪೆನಿ ತಿಳಿಸಿದೆ. ಇದೇ ಮೊಟ್ಟಮೊದಲ ಬಾರಿಗೆ ಎ-ಸೀರೀಸ್‍ನಲ್ಲಿ ಗ್ಯಾಲಕ್ಸಿ ಎ53 5ಜಿ ಸ್ಮಾರ್ಟ್‌ಫೋನ್ 5nm ಎಕ್ಸಿನೊಸ್ 1280 ಪ್ರೊಸೆಸರ್ ಹೊಂದಿದ್ದು, ಇದು ಶಕ್ತಿಯುತ ಕಾರ್ಯಕ್ಷಮತೆ ಮತ್ತು ಸುಧಾರಿತ ದಕ್ಷತೆ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇಷ್ಟೇ ಅಲ್ಲದೇ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ53 5ಜಿ ಸ್ಮಾರ್ಟ್‌ ಸ್ಯಾಮ್‍ಸಂಗ್‌ ರಕ್ಷಣಾ ಗುಣಮಟ್ಟದ ಸೆಕ್ಯುರಿಟಿ ನಾಕ್ಸ್ ಹೊಂದಿದೆ. ಇದು 4 ವರ್ಷಗಳವರೆಗೆ ಸಾಫ್ಟ್‌ವೇರ್ ಅಪ್‌ಡೇಟ್ ಹಾಗೂ 5 ವರ್ಷಗಳವರೆಗೆ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.

ಗ್ಯಾಲಕ್ಸಿ ಎ33 5ಜಿ
ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ33 5ಜಿ ಸ್ಮಾರ್ಟ್‌ಫೋನಿನಲ್ಲಿ 48ಎಂಪಿ ಮುಖ್ಯ ಸಂವೇದಕದೊಂದಿಗೆ ಕ್ವಾಡ್ ರಿಯರ್ ಕ್ಯಾಮರಾ, ಶಕ್ತಿಯುತ 5nm ಎಕ್ಸಿನೊಸ್ 1280 ಪ್ರೊಸೆಸರ್, 90ಹಟ್ರ್ಸ್ ರಿಫ್ರೆಶ್ ರೇಟ್ 6.4-ಇಂಚು ಸೂಪರ್ ಅಮೋಲ್ಡ್ ಡಿಸ್‌ಪ್ಲೇ ಸ್ಟೀರಿಯೊ ಸ್ಪೀಕರ್‌ಗಳು, ಸ್ಪ್ಲಾಶ್ ಮತ್ತು ಧೂಳು ನಿರೋಧಕಕ್ಕೆ ಐಪಿ67 ರೇಟಿಂಗ್ ಮತ್ತು ದೊಡ್ಡ 5000ಎಂಎಎಚ್ ಬ್ಯಾಟರಿಯೊಂದಿಗೆ ಬಂದಿದೆ. ಗ್ಯಾಲಕ್ಸಿ ಎ33 5ಜಿ ಸ್ಮಾರ್ಟ್‌ಫೋ 3 ವರ್ಷಗಳವರೆಗೆ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ನೀಡುತ್ತದೆ ಮತ್ತು 4 ವರ್ಷಗಳವರೆಗೆ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ನೀಡುತ್ತದೆ. ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎ ಸರಣಿಯಲ್ಲಿನ ಎಲ್ಲಾ ಐದು ಹೊಸ ಸ್ಮಾರ್ಟ್‌ಫೋನ್‌ಗಳನ್ನು ರೂ.15,000 ರಿಂದ ರೂ.45,000 ಬೆಲೆಯ ಶ್ರೇಣಿಯಲ್ಲಿ ಬಿಡುಗಡೆ ಮಾಡಿರುವುದಾಗಿ ತಿಳಿಸಿದೆಯಾದರೂ, ಗ್ಯಾಲಕ್ಸಿ ಎ53 5ಜಿ ಸ್ಮಾರ್ಟ್‌ಫೋನ್ 6ಜಿಬಿ+128ಜಿಬಿಗೆ 34499 ರೂ.ಹಾಗೂ 8ಜಿಬಿ+128ಜಿಬಿ ವೇರಿಯೆಂಟ್ ಫೋನ್ 35999 ರೂ.ಗಳ ನಿಖರ ಬೆಲೆಯನ್ನು ಹೊಂದಿರುವ ಬಗ್ಗೆ ಖಚಿತಪಡಿಸಿದೆ.

Samsung Awesome Galaxy A Event on March 17 confirmed; Galaxy A53 5G, Galaxy  A73 5G expected to launch

ಗ್ಯಾಲಕ್ಸಿ ಎ23
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ53 5ಜಿ ಸ್ಮಾರ್ಟ್‌ ತನ್ನ ಗ್ಯಾಲಕ್ಸಿ ಎ ಸರಣಿಯಲ್ಲಿ ಪರಿಚಯಿಸಿರುವ ಐದು ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ23 ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ನಂತರ ಕಾಣುತ್ತಿದ್ದು, ಈ ನೂತನ ಗ್ ಗ್ಯಾಲಕ್ಸಿ ಎ23 ಸ್ಮಾರ್ಟ್‌ಫೋನ್ 90ಹಟ್ರ್ಸ್ ರಿಫ್ರೆಶ್ ರೇಟ್‌ನೊಂದಿಗೆ 6.6-ಇಂಚು ಎಫ್‍ಎಚ್‌ಡಿ+ ಡಿಸ್‌ಪ್ಲೇ, 50 ಎಂಪಿ ಫ್ರಾಥಮಿಕ ಕ್ಯಾಮೆರಾದ ಕ್ವಾಡ್ ರಿಯರ್ ಕ್ಯಾಮರಾ ಸೆಟಪ್, ಶಕ್ತಿಯುತ ಸ್ನಾಪ್‍ಡ್ರಾಗನ್ 680 4ಜಿ ಪ್ರೊಸೆಸರ್ ಮತ್ತು 25ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ಸಪೋರ್ಟ್‍ನೊಂದಿಗೆ 5000ಎಂಎಎಚ್ ದೊಡ್ಡ ಬ್ಯಾಟರಿಯನ್ನು ಸ್ಮಾರ್ಟ್‌ಫೋನಿನಲ್ಲಿ ತರಲಾಗಿದೆ. ಗ್ಯಾಲಕ್ಸಿ ಎ23 ಸ್ಮಾರ್ಟ್‌ಫೋನ್ 6ಜಿಬಿ+128ಜಿಬಿ ಮಾದರಿಗೆ 19499 ರೂ. ಹಾಗೂ 8ಜಿಬಿ+128ಜಿಬಿ ಮಾದರಿಗೆ 20999 ರೂ. ಬೆಲೆಯನ್ನು ಹೊಂದಿದೆ.

ಗ್ಯಾಲಕ್ಸಿ ಎ13
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ53 5ಜಿ ಸ್ಮಾರ್ಟ್‌ ತನ್ನ ಗ್ಯಾಲಕ್ಸಿ ಎ ಸರಣಿಯಲ್ಲಿ ಪರಿಚಯಿಸಿರುವ ಐದು ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಗ್ಯಾಲಕ್ಸಿ ಎ13 ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಆಗಿದ್ದು, ಈ ಸ್ಮಾರ್ಟ್‌ಫೋನ್ 6.6-ಇಂಚು ಎಫ್‍ಎಚ್‌ಡಿ+ ಡಿಸ್‌ಪ್ಲೇ, 50ಎಂಪಿ ಕ್ವಾಡ್ ಕ್ಯಾಮರಾ ಸೆಟಪ್, 8ಎಂಪಿ ಫ್ರಂಟ್ ಕ್ಯಾಮರಾವ, ಎಕ್ಸಿನೊಸ್ 850 ಚಿಪ್‍ಸೆಟ್ ಮತ್ತು 5000ಎಂಎಎಚ್ ಬ್ಯಾಟರಿ ವೈಶಿಷ್ಟಯಗಳಲ್ಲಿ ಬಿಡುಗಡೆಯಾಗಿದೆ. ಗ್ಯಾಲಕ್ಸಿ ಎ13 ಸ್ಮಾರ್ಟ್‌ಫೋನ್ 4ಜಿಬಿ+64ಜಿಬಿಗೆ ರೂ.14999, 4ಜಿಬಿ+128ಜಿಬಿಗೆ ರೂ.15999 ಹಾಗೂ 6ಜಿಬಿ+64ಜಿಬಿಗೆ ರೂ.17499 ರೂ.ಬೆಲೆಯನ್ನು ಹೊಂದಿದೆ. ಹೊಸ ಗ್ಯಾಲಕ್ಸಿ ಎ53 5ಜಿ, ಗ್ಯಾಲಕ್ಸಿ ಎ33 5ಜಿ, ಗ್ಯಾಲಕ್ಸಿ ಎ23 ಮತ್ತು ಗ್ಯಾಲಕ್ಸಿ ಎ13 ಎಲ್ಲಾ ನಾಲ್ಕು ಫೋನ್‌ಗಳು ಪೀಚ್, ನೀಲಿ, ಕಪ್ಪು ಹಾಗೂ ಬಿಳಿ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿವೆ.

Samsung Launches 5 New Smartphones In India: Galaxy A73 5g, A53 5g, A33 5g, A23 And A13.