ಬ್ರೇಕಿಂಗ್ ನ್ಯೂಸ್
05-04-22 09:12 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ OnePlus ಕಂಪೆನಿಯ ನೂತನ ಫ್ಲಾಗ್‌ಶಿಪ್ ಸ್ಮಾರ್ಟ್‌ಪೋನ್ oneplus 10 pro ಬಿಡುಗಡೆಯಾಗಿ ಒಂದು ವಾರ ಕೂಡ ಕಳೆದಿಲ್ಲ. ಅದಾಗಲೇ OnePlus ಕಂಪೆನಿಯ ಬಜೆಟ್ ಬೆಲೆಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ OnePlus Nord CE 2 Lite ಕುರಿತಂತೆ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಇದೇ ತಿಂಗಳ ಕೊನೆಯಲ್ಲಿ ಭಾರತ ಮೊಬೈಲ್ ಮಾರುಕಟ್ಟೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ OnePlus Nord CE 2 Lite ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದು, OnePlus Nord CE 2 Lite ಸ್ಮಾರ್ಟ್‌ಫೋನಿನ ಹಲವು ವೈಶಿಷ್ಟ್ಯಗಳು ಮತ್ತು ಅದರ ವಿನ್ಯಾಸವು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ನೂತನ OnePlus Nord CE 2 Lite ಸ್ಮಾರ್ಟ್‌ಫೋನ್ ಕುರಿತಂತೆ ಖ್ಯಾತ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರು ಬಹಿರಂಗಪಡಿಸಿರುವ ಮಾಹಿತಿಗಳು ಮತ್ತು ವದಂತಿಯ ಬೆಲೆಗಳ ವಿಷಯಗಳಿಂದಾಗಿ ದೇಶದ ಮೊಬೈಲ್ ಮಾರುಕಟ್ಟೆಯು ನಡುಗಿದೆ.!
ಹೌದು, ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಎರಡು Nord CE ಸ್ಮಾರ್ಟ್‌ಫೋನ್‌ಗಳಿದ್ದು, ಶೀಘ್ರದಲ್ಲೇ OnePlus Nord CE 5G ಮತ್ತು OnePlus Nord CE 2 5G ಸ್ಮಾರ್ಟ್‌ಪೋನ್‌ಗಳ ಜೊತೆಗೆ ನೂತನ OnePlus Nord CE 2 Lite ಸ್ಮಾರ್ಟ್‌ಫೋನನ್ನು ಇದೇ ತಿಂಗಳ ಕೊನೆಯಲ್ಲಿ ನಾವು ನೋಡಬಹುದು ಎಂದು ಯೋಗೇಶ್ ಬ್ರಾರ್ ಅವರು ತಿಳಿಸಿದ್ದಾರೆ. ಈ ನೂತನ OnePlus Nord CE 2 Lite ಸ್ಮಾರ್ಟ್‌ಫೋನ್ 6.58-ಇಂಚಿನ ಪೂರ್ಣ-HD LCD ಡಿಸ್‌ಪ್ಲೇ, Qualcomm Snapdragon 695 SoC ಪ್ರೊಸೆಸರ್, 5G, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್, 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು 5,000mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ, ಈ ಫೋನಿನ ಆರಂಭಿಕ ಬೆಲೆಗಳು ಭಾರತದಲ್ಲಿ ಕೇವಲ 20,000 ರೂಪಾಯಿಗಳಿಂದ ಆರಂಭವಾಗಲಿವೆ ಎಂದು ಹೇಳಲಾಗಿರುವ ಸುದ್ದಿಯು ವೈರಲ್ ಆಗಿದೆ.
ಯೋಗೇಶ್ ಬ್ರಾರ್ ಅವರು ಬಹಿರಂಗಪಡಿಸಿರುವ ಮಾಹಿತಿಗಳ ಪ್ರಕಾರ, ನೂತನ OnePlus Nord CE 2 Lite ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ 6.58-ಇಂಚಿನ FHD + IPS LCD ಡಿಸ್ಪ್ಲೇಯೊಂದಿಗೆ ಬರಲಿದೆ. ಈ ಫೋನಿನಲ್ಲಿ Qualcomm Snapdragon 695 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, ಸಾಧನದ ಚಿಪ್‌ಸೆಟ್ ಅನ್ನು 8GB RAM ಮತ್ತು 128GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. Android 11 ಆಧಾರಿತ OyxgenOS 11 ನಲ್ಲಿ ಸ್ಮಾರ್ಟ್‌ಫೋನ್ ರನ್ ಆಗಬಹುದು ಎಂದು ಯೋಗೇಶ್ ಬ್ರಾರ್ ಅವರು ತಿಳಿಸಿದ್ದಾರೆ. ಛಾಯಾಗ್ರಹಣಕ್ಕಾಗಿ, 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದಿಂದ ಟ್ರಿಪಲ್ ರಿಯರ್ ಕ್ಯಾಮೆರಾವಿರುವ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಫೋನ್ ಬರುತ್ತದೆ ಎಂದು ಯೋಗೇಶ್ ಬ್ರಾರ್ ಅವರು ತಿಳಿಸಿದ್ದು, ಕ್ಯಾಮೆರಾವು 2-ಮೆಗಾಪಿಕ್ಸೆಲ್ ಮೊನೊ ಮತ್ತು ಇನ್ನೊಂದು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಹೊಂದಿರಲಿದೆ ಎಂದು ತಿಳಿಸಿದ್ದಾರೆ.
OnePlus Nord CE 2 Lite ಸ್ಮಾರ್ಟ್‌ಫೋನಿನ ಕುರಿತಂತೆ ಯೋಗೇಶ್ ಬ್ರಾರ್ ಹಂಚಿಕೊಂಡ ಕೆಲವು ವಿಶೇಷಣಗಳು ಈ ಹಿಂದೆಯೇ ಸೋರಿಕೆಯಾಗಿದ್ದವು. ಬ್ಲೂಟೂತ್ SIG, ಟೆಲಿಕಮ್ಯುನಿಕೇಷನ್ಸ್ ಮತ್ತು ಡಿಜಿಟಲ್ ಗವರ್ನಮೆಂಟ್ ರೆಗ್ಯುಲೇಟರಿ ಅಥಾರಿಟಿ (TDRA), ಭಾರತೀಯ ಗುಣಮಟ್ಟಗಳ ಬ್ಯೂರೋ (BIS), Geekbench, US ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (FCC), ಪ್ರಮಾಣೀಕರಣದಲ್ಲಿ OnePlus Nord CE 2 Lite ಫೋನ್ 6GB RAM ಜೊತೆಗೆ Qualcomm Snapdragon 695 SoC, 64-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 33W SuperVOOC ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಬ್ಯಾಟರಿ ಮತ್ತು ಬ್ಲೂಟೂತ್ v5.1 ಅನ್ನು ಪಡೆಯುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದೀಗ OnePlus Nord CE 2 Lite ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು ಮತ್ತು ವಿನ್ಯಾಸವು ಲೀಕ್ ಆಗಿರುವುದರಿಂದ ಬಜೆಟ್ ಬೆಲೆಯಲ್ಲಿ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಒಮ್ಮೆ ನಡುಗಿದೆ.
ಒನ್‌ಪ್ಲಸ್ ಕಂಪೆನಿಯ ಫೋನ್‌ಗಳಲ್ಲೇ ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ ಎಂದು ಹೇಳಲಾಗಿರುವ OnePlus Nord CE 2 Lite ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೇ ತಿಂಗಳು ಬಿಡುಗಡೆಯಾಗಲಿದೆ ಎಂದು ಯೋಗೇಶ್ ಬ್ರಾರ್ ಅವರು ಹೇಳಿದ್ದಾರೆ. ಆದರೆ, OnePlus Nord CE 2 Lite ಸ್ಮಾರ್ಟ್‌ಫೋನಿನ ನಿಖರವಾದ ಉಡಾವಣಾ ದಿನಾಂಕವು ಅಸ್ಪಷ್ಟವಾಗಿದೆ. ಮತ್ತೊಂದು ವರದಿಯಲ್ಲಿ ಭಾರತದಲ್ಲಿ 20,000 ರೂ. ಆರಂಭಿಕ ಬೆಲೆಯೊಂದಿಗೆ ನೂತನ OnePlus Nord CE 2 Lite ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಈ ಎಲ್ಲಾ ಮಾಹಿತಿಗಳು ನಂಬಲರ್ಹ ಮೂಲಗಳಾಗಿದ್ದು, OnePlus ಕಂಪೆನಿಯ ಅಧಿಕೃತ ಮಾಹಿತಿಗಾಗಿ ಭಾರತೀಯ ಮೊಬೈಲ್ ಮಾರುಕಟ್ಟೆ ಕಾದುಕುಳಿತಿದೆ. ಒಟ್ಟಿನಲ್ಲಿ ಬಿಡುಗಡೆಗೂ ಮುನ್ನವೇ OnePlus Nord CE 2 Lite ಸ್ಮಾರ್ಟ್‌ಪೋನ್ ಭಾರೀ ಸದ್ದು ಮಾಡುತ್ತಿದ್ದು, ದೇಶದ ಮೊಬೈಲ್ ಮಾರುಕಟ್ಟೆಯ ಗಮನವನ್ನು ಬಹುವಾಗಿ ಸೆಳೆಯುತ್ತಿದೆ.
Oneplus Nord Ce 2 Lite Specifications And Design Tipped.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm