OnePlus Nord CE 2 Lite 5G ಫೋನ್ ಬೆಲೆ 20 ಸಾವಿರಕ್ಕಿಂತ ಕಡಿಮೆ ಇರುವುದು ಪಕ್ಕಾ!..ಏಕೆ ಗೊತ್ತಾ?

14-04-22 10:21 pm       Source: Vijayakarnataka   ಡಿಜಿಟಲ್ ಟೆಕ್

OnePlus Nord CE 2 Lite 5G ಸ್ಮಾರ್ಟ್‌ಪೋನಿನಲ್ಲಿ ಇತ್ತೀಚಿಗೆ ಬಜೆಟ್ ಬೆಲೆಯ ಸ್ಮಾರ್ಟ್‌ಪೋನ್‌ಗಳಲ್ಲಿ ಕಾಣಿಸುವ 33W ವೇಗದ ಚಾರ್ಜಿಂಗ್‌ಗೆ ಬೆಂಬಲವಿರಲಿದೆ ಎಂದು...

ಭಾರತದಲ್ಲಿ ಇದೇ ಏಪ್ರಿಲ್ 28 ರಂದು ಬಿಡುಗಡೆಯಾಗಲಿರುವ 20 ಸಾವಿರ ಬೆಲೆಯ OnePlus Nord CE 2 Lite 5G ಸ್ಮಾರ್ಟ್‌ಪೋನ್ 33W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರಲಿದೆ ಎಂಬುದನ್ನು OnePlus ಕಂಪೆನಿ ಅಧಿಕೃತವಾಗಿ ದೃಢಪಡಿಸಿದೆ. OnePlus ಕಂಪೆನಿಯ ಅತ್ಯಂತ ಕೈಗೆಟುಕುವ 5G ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ಹೇಳಲಾಗುತ್ತಿರುವ OnePlus Nord CE 2 Lite 5G ಸ್ಮಾರ್ಟ್‌ಫೋನಿನ ಕುರಿತಂತೆ ಹಲವು ಫೀಚರ್ಸ್ ಮಾಹಿತಿಗಳು ಇತ್ತೀಚಿಗಷ್ಟೇ ಲೀಕ್ ಆಗಿದ್ದವು. OnePlus Nord CE 2 Lite 5G ಸ್ಮಾರ್ಟ್‌ಪೋನಿನಲ್ಲಿ ಇತ್ತೀಚಿಗೆ ಬಜೆಟ್ ಬೆಲೆಯ ಸ್ಮಾರ್ಟ್‌ಪೋನ್‌ಗಳಲ್ಲಿ ಕಾಣಿಸುವ 33W ವೇಗದ ಚಾರ್ಜಿಂಗ್‌ಗೆ ಬೆಂಬಲವಿರಲಿದೆ ಎಂದು ಜನಪ್ರಿಯ ಟಿಪ್‌ಸ್ಟಾರ್‌ಗಳು ತಿಳಿಸಿದ್ದು. ಇದೀಗ ಟಿಪ್‌ಸ್ಟಾರ್‌ಗಳು ತಿಳಿಸಿದ ವದಂತಿಯ ಮಾಹಿತಿ ಅಧಿಕೃತವಾಗಿ ನಿಜವಾಗಿದೆ.!

ಹೌದು, OnePlus ಕಂಪೆನಿ ಬಿಡುಗಡೆ ಮಾಡಿರುವ ಅಧಿಕೃತ ಹೊ ಟೀಸರ್ ಪ್ರಕಾರ, OnePlus Nord CE 2 Lite 5G 33W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000 mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ. ಈ ಚಾರ್ಜಿಂಗ್ ವೇಗವನ್ನು ಪರಿಗಣಿಸಿದರೆ, OnePlus Nord CE 2 Lite 5G ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿರಬಹುದು ಮತ್ತು ಭಾರತದಲ್ಲಿ 20,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಬರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಇಷ್ಟೇ ಅಲ್ಲದೇ, ಈ ಸ್ಮಾರ್ಟ್‌ಫೋನ್ ಪ್ಲಾಸ್ಟಿಕ್ ಫ್ರೇಮ್ ಮತ್ತು ಪ್ಲಾಸ್ಟಿಕ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದುವ ಸಾಧ್ಯತೆಯ ಬಗ್ಗೆ ಹೇಳಲಾಗಿದೆ. ಇದರಿಂದ ಈ ಸಾಧನವು ಮತ್ತಷ್ಟು ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂಬ ವಿಷಯಗಳು ಇದೀಗ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಚರ್ಚೆಯನ್ನು ಹುಟ್ಟಿಹಾಕಿವೆ.

OnePlus Nord CE 2 Lite with Snapdragon 695 5G, 33W Fast Charging, 64MP  Camera Listed on Multiple Certifications - MySmartPrice

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಎರಡು Nord CE ಸ್ಮಾರ್ಟ್‌ಫೋನ್‌ಗಳಿದ್ದು, ಶೀಘ್ರದಲ್ಲೇ OnePlus Nord CE 5G ಮತ್ತು OnePlus Nord CE 2 5G ಸ್ಮಾರ್ಟ್‌ಪೋನ್‌ಗಳ ಜೊತೆಗೆ ನೂತನ OnePlus Nord CE 2 Lite ಸ್ಮಾರ್ಟ್‌ಫೋನನ್ನು ಇದೇ ತಿಂಗಳ ಕೊನೆಯಲ್ಲಿ ನಾವು ನೋಡಬಹುದು ಎಂದು ಮೊನ್ನೆಮೊನ್ನೆಯಷ್ಟೇ ಯೋಗೇಶ್ ಬ್ರಾರ್ ಅವರು ತಿಳಿಸಿದ್ದರು. ಈ ನೂತನ OnePlus Nord CE 2 Lite ಸ್ಮಾರ್ಟ್‌ಫೋನ್ 6.58-ಇಂಚಿನ ಪೂರ್ಣ-HD LCD ಡಿಸ್‌ಪ್ಲೇ, Qualcomm Snapdragon 695 SoC ಪ್ರೊಸೆಸರ್, 5G, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್, 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು 5,000mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದರು. ಇಷ್ಟೇ ಅಲ್ಲದೇ, ಈ ಫೋನಿನ ಆರಂಭಿಕ ಬೆಲೆಗಳು ಭಾರತದಲ್ಲಿ ಕೇವಲ 20,000 ರೂಪಾಯಿಗಳಿಂದ ಆರಂಭವಾಗಲಿವೆ ಎಂದು ಅವರು ಖಚಿತಪಡಿಸಿದ್ದರು.

OnePlus Nord CE 2 Lite 5G To Launch In India On April 28; Check Expected  Specs Here

ಯೋಗೇಶ್ ಬ್ರಾರ್ ಅವರು ಬಹಿರಂಗಪಡಿಸಿರುವ ಮಾಹಿತಿಗಳ ಪ್ರಕಾರ, ನೂತನ OnePlus Nord CE 2 Lite ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ 6.58-ಇಂಚಿನ FHD + IPS LCD ಡಿಸ್ಪ್ಲೇಯೊಂದಿಗೆ ಬರಲಿದೆ. ಈ ಫೋನಿನಲ್ಲಿ Qualcomm Snapdragon 695 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, ಸಾಧನದ ಚಿಪ್‌ಸೆಟ್ ಅನ್ನು 8GB RAM ಮತ್ತು 128GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. Android 11 ಆಧಾರಿತ OyxgenOS 11 ನಲ್ಲಿ ಸ್ಮಾರ್ಟ್‌ಫೋನ್ ರನ್ ಆಗಬಹುದು ಎಂದು ಯೋಗೇಶ್ ಬ್ರಾರ್ ಅವರು ತಿಳಿಸಿದ್ದಾರೆ. ಛಾಯಾಗ್ರಹಣಕ್ಕಾಗಿ, 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದಿಂದ ಟ್ರಿಪಲ್ ರಿಯರ್ ಕ್ಯಾಮೆರಾವಿರುವ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಫೋನ್ ಬರುತ್ತದೆ ಎಂದು ಯೋಗೇಶ್ ಬ್ರಾರ್ ಅವರು ತಿಳಿಸಿದ್ದು, ಕ್ಯಾಮೆರಾವು 2-ಮೆಗಾಪಿಕ್ಸೆಲ್ ಮೊನೊ ಮತ್ತು ಇನ್ನೊಂದು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಹೊಂದಿರಲಿದೆ ಎಂದು ತಿಳಿಸಿದ್ದಾರೆ.

OnePlus Nord CE 2 Lite ಸ್ಮಾರ್ಟ್‌ಫೋನಿನ ಕುರಿತಂತೆ ಯೋಗೇಶ್ ಬ್ರಾರ್ ಹಂಚಿಕೊಂಡ ಕೆಲವು ವಿಶೇಷಣಗಳು ಈ ಹಿಂದೆಯೇ ಸೋರಿಕೆಯಾಗಿದ್ದವು. ಬ್ಲೂಟೂತ್ SIG, ಟೆಲಿಕಮ್ಯುನಿಕೇಷನ್ಸ್ ಮತ್ತು ಡಿಜಿಟಲ್ ಗವರ್ನಮೆಂಟ್ ರೆಗ್ಯುಲೇಟರಿ ಅಥಾರಿಟಿ (TDRA), ಭಾರತೀಯ ಗುಣಮಟ್ಟಗಳ ಬ್ಯೂರೋ (BIS), Geekbench, US ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (FCC), ಪ್ರಮಾಣೀಕರಣದಲ್ಲಿ OnePlus Nord CE 2 Lite ಫೋನ್ 6GB RAM ಜೊತೆಗೆ Qualcomm Snapdragon 695 SoC, 64-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 33W SuperVOOC ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಬ್ಯಾಟರಿ ಮತ್ತು ಬ್ಲೂಟೂತ್ v5.1 ಅನ್ನು ಪಡೆಯುತ್ತದೆ ಎಂದು ಹೇಳಲಾಗಿತ್ತು. ಇದೀಗ OnePlus Nord CE 2 Lite ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು ಮತ್ತು ವಿನ್ಯಾಸವು ಲೀಕ್ ಆಗಿರುವುದರಿಂದ ಬಜೆಟ್ ಬೆಲೆಯಲ್ಲಿನ ಈ ಫೋನ್ ಸುದ್ದಿ ಕೇಳಿ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಒಮ್ಮೆ ನಡುಗಿದೆ.

Oneplus Nord Ce 2 Lite 5g Confirmed To Support 33w Fast Charging.