ಭಾರತದಲ್ಲಿ Realme GT 2 Pro ಸ್ಮಾರ್ಟ್‌ಫೋನ್ ಮಾರಾಟ ಆರಂಭ!..ಇಲ್ಲಿದೆ ಫುಲ್ ಡೀಟೇಲ್ಸ್!

15-04-22 10:24 pm       Source: Vijayakarnataka   ಡಿಜಿಟಲ್ ಟೆಕ್

ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಮತ್ತು LTPO 2.0-ಬೆಂಬಲಿತ 'ಸೂಪರ್ ರಿಯಾಲಿಟಿ' ಡಿಸ್‌ಪ್ಲೇಯಂತಹ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತು ಕೇವಲ 44,999 ರೂ.ಗಳ ಆರಂಭಕ..

ಇದೇ ಏಪ್ರಿಲ್ 7 ರಂದು ಭಾರತದ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಬಹುನಿರೀಕ್ಷಿತ Realme GT 2 Pro ಫ್ರೀಮಿಯಂ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ದೇಶದಲ್ಲಿಂದು ಮಾರಾಟಕ್ಕೆ ಬಂದಿದೆ. ಇಂದು ಮಧ್ಯಾಹ್ನ (ಏಪ್ರಿಲ್ 14 ) 12 ಗಂಟೆಗೆ Realme.com, Flipkart ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ Realme GT 2 Pro ಸ್ಮಾರ್ಟ್‌ಫೋನನ್ನು ಮಾರಾಟ ಮಾಡಲಾಗುತ್ತಿದ್ದು, HDFC ಬ್ಯಾಂಕ್ ಮತ್ತು SBI ಬ್ಯಾಂಕ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳ ಮೇಲೆ 5,000 ತ್ವರಿತ ರಿಯಾಯಿತಿಯ ಜೊತೆಗೆ, Realme GT 2 Pro ಫೋನ್ ಖರೀದಿದಾರರಿಗೆ 4,999.ರೂ ಮೌಲ್ಯದ ರಿಯಲ್‌ಮಿ ವಾಚ್ ಎಸ್ ಸ್ಮಾರ್ಟ್‌ವಾಚ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಕಂಪೆನಿ ತಿಳಿಸಿದೆ. ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಮತ್ತು LTPO 2.0-ಬೆಂಬಲಿತ 'ಸೂಪರ್ ರಿಯಾಲಿಟಿ' ಡಿಸ್‌ಪ್ಲೇಯಂತಹ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತು ಕೇವಲ 44,999 ರೂ.ಗಳ ಆರಂಭಕ ಬೆಲೆಯಲ್ಲಿ ದೇಶದ ಮಾರುಕಟ್ಟೆಗೆ ಆಗಮಿಸಿರುವ ನೂತನ Realme GT 2 Pro ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ನೂತನ Realme GT 2 Pro ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳನ್ನು ನೋಡುವುದಾದರೆ, ಡ್ಯುಯಲ್-ಸಿಮ್ ಸಾಮರ್ಥ್ಯದ Realme GT 2 Pro ಸ್ಮಾರ್ಟ್‌ಫೋನ್ Android 12-ಆಧಾರಿತ Realme UI 3.0 ನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ರಿಯಲ್‌ಮಿ ಕಂಪೆನಿ ತಿಳಿಸಿದೆ. 6.7-ಇಂಚಿನ 2K (1,440x3,216 ಪಿಕ್ಸೆಲ್‌ಗಳು) LTPO 2.0 AMOLED ಡಿಸ್‌ಪ್ಲೇಯು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಸ್ಕ್ರೀನ್ ರಕ್ಷಣೆಯನ್ನು ಹೊಂದಿದೆ. ಇತ್ತೀಚಿನ ಸ್ನಾಪ್‌ಡ್ರಾಗನ್ 8 Gen 1 SoC ನಿಂದ ಚಾಲಿತವಾಗಿರುವ Realme GT 2 Pro ಸ್ಮಾರ್ಟ್‌ಫೋನನ್ನು 12GB ಯ RAM ನೊಂದಿಗೆ ಜೋಡಿಸಲಾಗಿದ್ದು, ಈ ಫೋನ್ 512GB ವರೆಗೆ ಅಂತರ್ಗತ ಸಂಗ್ರಹಣೆಯನ್ನು ಸಹ ಹೊಂದಿದೆ. ಇನ್ನು Realme GT 2 Pro ಸ್ಮಾರ್ಟ್‌ಫೋನಿನಲ್ಲಿ 5,000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು 65W ಸೂಪರ್‌ಡಾರ್ಟ್ ಚಾರ್ಜ್ ವರ್ಧಿತ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ.

realme: Realme GT2 Pro to go on sale for the first time today: Price,  offers and other details - Times of India

ನೂತನ Realme GT 2 Pro ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಸಾಮರ್ಥ್ಯದಲ್ಲಿ, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದ ಜೊತೆಗೆ 50-ಮೆಗಾಪಿಕ್ಸೆಲ್ ಸೋನಿ IMX766 ಪ್ರಾಥಮಿಕ ಸಂವೇದಕ ಹಾಗೂ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾಗಳನ್ನು ಸ್ಮಾರ್ಟ್‌ಪೋನ್ ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಫೋನಿನ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿರುವುದನ್ನು ನಾವು ನೋಡಬಹುದು. Realme GT 2 Pro ಸ್ಮಾರ್ಟ್‌ಫೋನಿನ ಸಂಪರ್ಕ ಆಯ್ಕೆಗಳಲ್ಲಿ 5G (10-ಗಿಗಾಬಿಟ್), 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿರುವ ಈ ಸ್ಮಾರ್ಟ್‌ಫೋನಿನಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಆವಿ ಕೂಲಿಂಗ್ ಮ್ಯಾಕ್ಸ್ ವೈಶಿಷ್ಟ್ಯವನ್ನು ಕೂಲಿಂಗ್‌ಗಾಗಿ ತರಲಾಗಿದೆ.

Premiera realme GT 2 Pro – specyfikacja, design, cena – Geex

ಭಾರತದಲ್ಲಿ Realme GT 2 Pro ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಗಳು 49,999 ರೂ.ಗಳಿಂದ ಆರಂಭವಾಗಿದೆ. 8GB + 128GB ಸ್ಟೋರೇಜ್ ಮಾದರಿ ಫೋನ್ ಬೆಲೆ 49,999 ರೂ.ಗಳಾದರೆ, 12GB + 256GB ಸ್ಟೋರೇಜ್ ಆಯ್ಕೆಯ ಫೋನ್ ಬೆಲೆಯು 57,999 ರೂ.ಗಲಾಗಿವೆ. ಆದರೆ, ಪರಿಚಯಾತ್ಮಕ ಕೊಡುಗೆಯಾಗಿ ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಕ್ರಮವಾಗಿ 44,999 ಮತ್ತು 52,999 ರೂ.ಗಳಿಗೆ ಮಾರಾಟ ಮಾಡುವುದಾಗಿ ಕಂಪೆನಿ ಹೇಳಿದೆ. ಪೇಪರ್ ಗ್ರೀನ್, ಪೇಪರ್ ವೈಟ್ ಮತ್ತು ಸ್ಟೀಲ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿರುವ ಈ ಸ್ಮಾರ್ಟ್‌ಫೋನನ್ನು HDFC ಬ್ಯಾಂಕ್ ಮತ್ತು SBI ಬ್ಯಾಂಕ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳ ಮೇಲೆ 5,000 ತ್ವರಿತ ರಿಯಾಯಿತಿಯ ಜೊತೆಗೆ ಖರೀದಿಸಬಹುದು, Realme GT 2 Pro ಫೋನ್ ಖರೀದಿದಾರರಿಗೆ ವಿಶೇಷವಾಗಿ 4,999.ರೂ ಮೌಲ್ಯದ ರಿಯಲ್‌ಮಿ ವಾಚ್ ಎಸ್ ಸ್ಮಾರ್ಟ್‌ವಾಚ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಕಂಪೆನಿ ತಿಳಿಸಿದೆ.

Realme Gt 2 Pro Goes On Sale For The First Time In India Today.