ಭಾರತದಲ್ಲಿ Boult AirBass ProBuds ಸಾಧನ ಲಾಂಚ್!..ಬೆಲೆ ಮತ್ತು ವೈಶಿಷ್ಟ್ಯಗಳ ಮಾಹಿತಿ ನೋಡಿ!

23-04-22 11:37 pm       Source: Vijayakarnataka   ಡಿಜಿಟಲ್ ಟೆಕ್

ಸಂಗೀತ ಮತ್ತು ಫೋನ್ ಕರೆಗಳ ಸುಲಭ ನಿಯಂತ್ರಣಕ್ಕಾಗಿ AirBass ProBuds ಸಾಧನವು ಸ್ಪರ್ಶ ಸಂವೇದಕವನ್ನು ಹೊಂದಿದ್ದು, ಇದರಿಂದ ಬಳಕೆದಾರರು ಸಂಗೀತವನ್ನು ಪ್ಲೇ/ವಿರಾಮ...

ಭಾರತದ ಜನಪ್ರಿಯ ಆಡಿಯೋ ಉತ್ಪನ್ನಗಳ ತಯಾರಕ ಕಂಪೆನಿ Boult ತನ್ನ ವಿನೂತನ AirBass ProBuds ಸಾಧನವನ್ನು ದೇಶದಲ್ಲಿಂದು ಪರಿಚಯಿಸಿದೆ. ಟ್ರೂ ವೈರ್‌ಲೆಸ್ ಇಯರ್ ಫೋನ್‌ಗಳ ಪಟ್ಟಿಗೆ ಸೇರಿರುವ ಬಜೆಟ್ ಬೆಲೆಯ ಇಯರ್ ಬಡ್ಸ್ ಸಾಧನ ಇದಾಗಿದ್ದು, ಪರಿಸರದ ಶಬ್ದ ರದ್ದತಿ (ENC) ವೈಶಿಷ್ಟ್ಯ, ಸ್ಪರ್ಶ ಸಂವೇದಕ, 24 ಗಂಟೆಗಳ ಪ್ಲೇಬ್ಯಾಕ್ ಸಮಯ ಮತ್ತು 10 ನಿಮಿಷಗಳ ತ್ವರಿತ ಚಾರ್ಜ್‌ನೊಂದಿಗೆ 100 ನಿಮಿಷಗಳ ಪ್ಲೇಬ್ಯಾಕ್ ಸಾಮರ್ಥ್ಯ ಹೊಂದಿರುವಂತಹ ವೈಶಿಷ್ಟ್ಯಗಳಲ್ಲಿ ನೂತನ Boult AirBass ProBuds ಸಾಧನವನ್ನು ಬಿಡುಗಡೆಗೊಳಿಸಲಾಗಿದೆ. ಹಾಗಾದರೆ, ಹೊಸ AirBass ProBuds ಸಾಧನವು ಹೊಂದಿರುವ ಎಲ್ಲಾ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ನೂತನ  Boult AirBass ProBuds ಸಾಧನವನ್ನು Apple ಕಂಪೆನಿಯ AirPods Gen 2 ಗೆ ಹೋಲುವ ವಿನ್ಯಾಸದೊಂದಿಗೆ ತಯಾರಿಸಿದಂತೆ ಕಾಣುತ್ತಿದೆ. ಗುಣಮಟ್ಟದ ಎಬಿಎಸ್ ಪ್ಲಾಸ್ಟಿಕ್ ದೇಶವನ್ನನು ಹೊಂದಿರುವ ಈ ಸಾಧನವು ನೀರು ಮತ್ತು ಬೆವರಿನಿಂದ ರಕ್ಷಿಸುವ ಶೆಲ್ ಅನ್ನು ಸಹ ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಸಂಗೀತ ಮತ್ತು ಫೋನ್ ಕರೆಗಳ ಸುಲಭ ನಿಯಂತ್ರಣಕ್ಕಾಗಿ AirBass ProBuds ಸಾಧನವು ಸ್ಪರ್ಶ ಸಂವೇದಕವನ್ನು ಹೊಂದಿದ್ದು, ಇದರಿಂದ ಬಳಕೆದಾರರು ಸಂಗೀತವನ್ನು ಪ್ಲೇ/ವಿರಾಮ ಗೊಳಿಸುವುದು ಮಾತ್ರವಲ್ಲದೆ ಮುಂದಿನ ಅಥವಾ ಹಿಂದಿನ ಟ್ರ್ಯಾಕ್‌ಗೆ ಸ್ಕಿಪ್ ಮಾಡಬಹುದು ಹಾಗೂ ಸುಲಭವಾಗಿ ಕರೆಗಳಿಗೆ ಉತ್ತರಿಸಬಹುದು ಮತ್ತು ಸ್ಪರ್ಶ ನಿಯಂತ್ರಣಗಳೊಂದಿಗೆ Google ಅಸಿಸ್ಟೆಂಟ್ ಅನ್ನು ಬಳಸಬಹುದಾಗಿದೆ.

Boult Audio AirBass ProBuds Officially Launched in India at Rs 1,499

ನೂತನ Boult Audio AirBass ProBuds ಸಾಧನವು ಕ್ವಾಡ್ ಮೈಕ್ರೊಫೋನ್ ಸೆಟಪ್‌ನೊಂದಿಗೆ ಬಂದಿದ್ದು, ಇದು ಪರಿಸರದ ಶಬ್ದ ರದ್ದತಿ (ENC) ವೈಶಿಷ್ಟ್ಯವನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಉತ್ತಮ ಆಡಿಯೊ ಅನುಭವವನ್ನು ಒದಗಿಸಲು ENC ಯಾವುದೇ ಬಾಹ್ಯ ಶಬ್ದವನ್ನು ನಿರ್ಬಂಧಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು AirBass ProBuds ಸಾಧನವನ್ನು 10 ನಿಮಿಷಗಳ ತ್ವರಿತ ಚಾರ್ಜ್‌ನೊಂದಿಗೆ 100 ನಿಮಿಷಗಳ ಪ್ಲೇಬ್ಯಾಕ್ ಸಾಮರ್ಥ್ಯದಲ್ಲಿ ನಿರ್ಮಿಸಲಾಗಿದ್ದು, 24 ಗಂಟೆಗಳ ಪ್ಲೇಬ್ಯಾಕ್ ಸಮಯ ಹಾಗೂ ಒಂದೇ ಚಾರ್ಜ್‌ನಲ್ಲಿ ಆರು ಗಂಟೆಗಳ ಪ್ಲೇಬ್ಯಾಕ್ ಅನ್ನು ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ. ಹಾಗೆಯೇ,ಬ್ಲೂಟೂತ್ 5.1 ಮತ್ತು USB ಟೈಪ್-ಸಿ ಪೋರ್ಟ್ ಮಾದರಿ ಚಾರ್ಜಿಂಗ್ ಕೇಸ್ ಅನ್ನು ಸಾಧನದಲ್ಲಿ ಗಮನಿಸಬಹುದು.

Boult Audio AirBass ProBuds announced with Environmental Noise Cancellation  and Quad-mic setup - Gizmochina

Boult Audio AirBass ProBuds ಬೆಲೆ
ಭಾರತದಲ್ಲಿ ನೂತನ Boult Audio AirBass ProBuds ಸಾಧನವನ್ನು ಕೇವಲ 1,499 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿರುವ ಈ ಸಾಧನವನ್ನು Amazon India ಮತ್ತು Boult Audio ನ ಅಧಿಕೃತ ವೆಬ್‌ಸೈಟ್‌ನಿಂದ ಇಂದಿನಿಂದಲೇ ಖರೀದಿಸಬಹುದು ಎಂದು Boult ಕಂಪೆನಿ ತಿಳಿಸಿದೆ. 1,499 ರೂ.ಗಳ ಅತ್ಯಂತ ಬಜೆಟ್ ಬೆಲೆಯಲ್ಲಿ ಬಿಡುಗಡೆಗೊಂಡಿರುವ Boult Audio AirBass ProBuds ಸಾಧನದ ಮೇಲೆ ಯಾವುದೇ ಬಿಡುಗಡೆ ಕೊಡುಗೆಯನ್ನು ನೀಡಿಲ್ಲದಿರುವುದನ್ನು ನಾವು ಗಮನಿಸಬಹುದು.ನೂತನ Boult Audio AirBass ProBuds ಸಾಧನವು ಕ್ವಾಡ್ ಮೈಕ್ರೊಫೋನ್ ಸೆಟಪ್‌ನೊಂದಿಗೆ ಬಂದಿದ್ದು, ಇದು ಪರಿಸರದ ಶಬ್ದ ರದ್ದತಿ (ENC) ವೈಶಿಷ್ಟ್ಯವನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಉತ್ತಮ ಆಡಿಯೊ ಅನುಭವವನ್ನು ಒದಗಿಸಲು ENC ಯಾವುದೇ ಬಾಹ್ಯ ಶಬ್ದವನ್ನು ನಿರ್ಬಂಧಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು AirBass ProBuds ಸಾಧನವನ್ನು 10 ನಿಮಿಷಗಳ ತ್ವರಿತ ಚಾರ್ಜ್‌ನೊಂದಿಗೆ 100 ನಿಮಿಷಗಳ ಪ್ಲೇಬ್ಯಾಕ್ ಸಾಮರ್ಥ್ಯದಲ್ಲಿ ನಿರ್ಮಿಸಲಾಗಿದ್ದು, 24 ಗಂಟೆಗಳ ಪ್ಲೇಬ್ಯಾಕ್ ಸಮಯ ಹಾಗೂ ಒಂದೇ ಚಾರ್ಜ್‌ನಲ್ಲಿ ಆರು ಗಂಟೆಗಳ ಪ್ಲೇಬ್ಯಾಕ್ ಅನ್ನು ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ. ಹಾಗೆಯೇ,ಬ್ಲೂಟೂತ್ 5.1 ಮತ್ತು USB ಟೈಪ್-ಸಿ ಪೋರ್ಟ್ ಮಾದರಿ ಚಾರ್ಜಿಂಗ್ ಕೇಸ್ ಅನ್ನು ಸಾಧನದಲ್ಲಿ ಗಮನಿಸಬಹುದು.

Boult Audio AirBass ProBuds ಬೆಲೆ
ಭಾರತದಲ್ಲಿ ನೂತನ Boult Audio AirBass ProBuds ಸಾಧನವನ್ನು ಕೇವಲ 1,499 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿರುವ ಈ ಸಾಧನವನ್ನು Amazon India ಮತ್ತು Boult Audio ನ ಅಧಿಕೃತ ವೆಬ್‌ಸೈಟ್‌ನಿಂದ ಇಂದಿನಿಂದಲೇ ಖರೀದಿಸಬಹುದು ಎಂದು Boult ಕಂಪೆನಿ ತಿಳಿಸಿದೆ. 1,499 ರೂ.ಗಳ ಅತ್ಯಂತ ಬಜೆಟ್ ಬೆಲೆಯಲ್ಲಿ ಬಿಡುಗಡೆಗೊಂಡಿರುವ Boult Audio AirBass ProBuds ಸಾಧನದ ಮೇಲೆ ಯಾವುದೇ ಬಿಡುಗಡೆ ಕೊಡುಗೆಯನ್ನು ನೀಡಿಲ್ಲದಿರುವುದನ್ನು ನಾವು ಗಮನಿಸಬಹುದು.

Boult Audio Airbass Probuds Officially Launched In India.