ಜಿಯೋವಿನ ಎಲ್ಲಾ 1.5 GB ಡೇಟಾ ಪ್ರಿಪೇಯ್ಡ್ ಯೋಜನೆಗಳ ಪಟ್ಟಿ ಇಲ್ಲಿದೆ!

10-05-22 07:12 pm       Source: Vijayakarnataka   ಡಿಜಿಟಲ್ ಟೆಕ್

1.5GB ದೈನಂದಿನ ಡೇಟಾ ಹೊಂದಿರುವ ಜಿಯೋವಿನ ಅತ್ಯಂತ ಕಡಿಮೆ ಬೆಲೆಯ ಪ್ರೀಪೇಡ್ ಯೋಜನೆಯು 119 ರೂ .ಗಳ ಬೆಲೆಯಲ್ಲಿ ಲಭ್ಯವಿದೆ. ಈ ಯೋಜನೆಯು ಪ್ರತಿದಿನ 1.5GB...

ಭಾರತದ ನಂ 1 ಟೆಲಿಕಾಂ ಕಂಪೆನಿ ರಿಲಾಯನ್ಸ್ ಜಿಯೋ ಇತ್ತೀಚೆಗೆ ಕೆಲವು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಸಿದ್ದು, ಹೊಸದಾಗಿ ಸೇರಿಸಲಾದ ಕೆಲವು ಯೋಜನೆಗಳು 1.5GB ದೈನಂದಿನ ಡೇಟಾ ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಗಳೊಂದಿಗೆ ಬಿಡುಗಡೆಗೊಂಡಿವೆ. ಜಿಯೋದಲ್ಲಿ ಇದೀಗ ದೇಶದ ಅತ್ಯಧಿಕ ಜನರು ರೀಚಾರ್ಜ್ ಮಾಡಿಸಿಕೊಳ್ಳುವ ಜನಪ್ರಿಯ 1.5GB ದೈನಂದಿನ ಡೇಟಾ ಯೋಜನೆಗಳು ವಿಸ್ತರಣೆಯಾಗಿರುವುದರಿಂದ, ಇಂದಿನ ಲೇಖನದಲ್ಲಿ ರಿಲಯನ್ಸ್ ಜಿಯೋ ಒದಗಿಸುತ್ತಿರುವ ಎಲ್ಲಾ 1.5GB ದೈನಂದಿನ ಡೇಟಾ ರಿಚಾರ್ಜ್ ಪ್ಯಾಕ್‌ಗಳ ಪಟ್ಟಿಯನ್ನು ನಾವು ತಯಾರಿಸಿದ್ದೇವೆ. ಈ ಕೆಳಗೆ ಬಜೆಟ್ ಬಳಕೆದಾರರು ಹುಡುಕುತ್ತಿರುವ ಜಿಯೋವಿನ ಎಲ್ಲಾ 1.5GB ದೈನಂದಿನ ಡೇಟಾ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ.

1.5GB ದೈನಂದಿನ ಡೇಟಾ ಹೊಂದಿರುವ ಜಿಯೋವಿನ ಅತ್ಯಂತ ಕಡಿಮೆ ಬೆಲೆಯ ಪ್ರೀಪೇಡ್ ಯೋಜನೆಯು 119 ರೂ .ಗಳ ಬೆಲೆಯಲ್ಲಿ ಲಭ್ಯವಿದೆ. ಈ ಯೋಜನೆಯು ಪ್ರತಿದಿನ 1.5GB ಡೇಟಾವನ್ನು 14 ದಿನಗಳ ಅತ್ಯಂತ ಕಡಿಮೆ ಮಾನ್ಯತೆ ಅವಧಿಯವರೆಗೂ ನೀಡುತ್ತದೆ. ಇದರ ನಂತರ ಬರುವ ಮತ್ತೊಂದು 1.5GB/ದಿನದ ಯೋಜನೆಯು 23-ದಿನಗಳ ಮಾನ್ಯತೆಯ ಅವಧಿವರೆಗೂ ಲಭ್ಯವಿದ್ದು, ಈ ಪ್ರೀಪೇಡ್ ಯೋಜನೆಯ ಬೆಲೆ 199 ರೂ.ಗಳಾಗಿವೆ. ಇನ್ನು 28 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಪ್ರತಿದಿನ 1.5GB ಡೇಟಾವನ್ನು ಒದಗಿಸುವ ಜಿಯೋ ಯೋಜನೆಯು 239 ರೂ.ಗೆ ಹಾಗೂ ಸಂಪೂರ್ಣ ಒಂದು ತಿಂಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಯು 259 ರೂ.ಗೆ ಲಭ್ಯವಿದೆ. ಈ ಎಲ್ಲಾ ಕಡಿಮೆ ವ್ಯಾಲಿಡಿಟಿ ಹೊಂದಿರುವ ಯೋಜನೆಗಳು ಅನಿಯಮಿತ ಕರೆ ಮತ್ತು ಪ್ರತಿದಿನ 100 SMS ಗಳನ್ನು ಒದಗಿಸಲಿವೆ.

Recharge plan of Reliance Jio also became expensive rates increased from Rs  31 to Rs 480

ಪಟ್ಟಿಯಲ್ಲಿರುವ ಮುಂದಿನ ಯೋಜನೆಗಳು ಜಿಯೋ ಒದಗಿಸುತ್ತಿರುವ ಮಧ್ಯಾವಧಿಯ ಯೋಜನೆಗಳಾಗಿವೆ. ಜಿಯೋವಿನ ಜನಪ್ರಿಯ ಮಧ್ಯಾವಧಿಯ ಯೋಜನೆಯು 479 ರೂ.ಗಳಿಗೆ ಲಭ್ಯವಿದೆ. 479 ರೂ.ಗಳ ಈ ಯೋಜನೆಯು ದಿನಕ್ಕೆ 1.5GB ಡೇಟಾವನ್ನು ಒದಗಿಸುತ್ತದೆ. ಇದೇ ರೀತಿಯಲ್ಲಿ ಪ್ರತಿದಿನ 1.5GB ಡೇಟಾವನ್ನು ಒದಗಿಸುವ ಹಾಗೂ 56 ದಿನಗಳ ಮಾನ್ಯತೆಯೊಂದಿಗೆ ಜಿಯೀ ಮತ್ತೊಂದು ಪ್ರೀಪೇಡ್ ಯೋಜನೆಯನ್ನು 583 ರೂ.ಗಳಿಗೆ ಒದಗಿಸುತ್ತಿದೆ. ಈ ಯೋಜನೆಯು ಜಿಯೋ ಡಿಸ್ನಿ+ ಹಾಟ್‌ಸ್ಟಾರ್ OTT ಪ್ಲಾಟ್‌ಫಾರ್ಮ್‌ಗೆ ಹೆಚ್ಚುವರಿ ಚಂದಾದಾರಿಕೆಯೊಂದಿಗೆ ಲಭ್ಯವಿರುವುದರಿಂದ ಈ ಯೋಜನೆಯ ಬೆಲೆ ಸ್ವಲ್ಪ ಹೆಚ್ಚಿದೆ. ಇನ್ನುಳಿದಂತೆ ಈ ಎರಡೂ ಯೋಜನೆಗಳು ಅನಿಯಮಿತ ಕರೆಗಳು ಮತ್ತು ಪ್ರತಿದಿನ 100 SMS ಗಳು ಹಾಗೂ ಜಿಯೋ ಸೂಟ್ ಅಪ್ಲಿಕೇಷನ್‌ಗಳ ಪ್ರಯೋಜನಗಳನ್ನು ಒದಗಿಸಲಿವೆ.

Jio Recharge Plan Offer Jio 1 Rupees Plan Validity And Data Benefits Change  After One Day, Check Details Here | Jio Offer: एक दिन बाद बदल गए जियो के 1  रुपये वाले

ನೀವು ದೀರ್ಘಾವಧಿಯಲ್ಲಿ ಜಿಯೋವಿನ 1.5GB ದೈನಂದಿನ ಡೇಟಾ ಪ್ರೀಪೇಡ್ ಯೋಜನೆಗಳನ್ನು ನೋಡುತ್ತಿದ್ದರೆ, 666 ರೂ. ಬೆಲೆಯಲ್ಲಿ ಲಭ್ಯವಿರುವ ಜಿಯೋ ಯೋಜನೆಯು 84 ದಿನಗಳ ಮಾನ್ಯತೆಯ ಅವಧಿಯವರೆಗೂ ದಿನಕ್ಕೆ 1.5GB ಡೇಟಾವನ್ನು ಒದಗಿಸುತ್ತದೆ. ಇದೇ ಪ್ರಯೋಜನಗಳನ್ನು ಒದಗಿಸುವ ಹಾಗೂ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಹೊಂದಿರುವ ಜಿಯೋವಿನ ಮತ್ತೊಂದು ಯೋಜನೆಯು 783 ರೂ.ಗಳಲ್ಲಿ ಲಭ್ಯವಿದೆ. ಇನ್ನು ನೀವು ವಾರ್ಷಿಕ ರೀಚಾರ್ಜ್ ಯೋಜನೆಯನ್ನು ನೋಡುತ್ತಿದ್ದರೆ, ಕೊನೆಯದಾಗಿ 1.5GB ಡೇಟಾವನ್ನು ಹೊಂದಿರುವ ಜಿಯೋವಿನ ವಾರ್ಷಿಕ ಯೋಜನೆಯು 2,545 ರೂ ಬೆಲೆಯಲ್ಲಿ ಲಭಯವಿದೆ. ಈ ಯೋಜನೆಯು 336 ದಿನಗಳವರೆಗೆ ಪ್ರತಿದಿನ 1.5GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿದಿನ 100 SMS ಗಳನ್ನು ಒದಗಿಸುತ್ತದೆ.

Reliance Jio All 1.5gb Day Prepaid Plans  Check Details.