ಭಾರತದಲ್ಲಿ ಹೊಸ Dell G15 ಲ್ಯಾಪ್‌ಟಾಪ್‌ಗಳು ಲಾಂಚ್!..ಮಿಸ್ ಮಾಡಲೇಬೇಡಿ!

17-05-22 07:36 pm       Source: Vijayakarnataka   ಡಿಜಿಟಲ್ ಟೆಕ್

ಈ ಬಜೆಟ್ ಗೇಮಿಂಗ್ PC ಗಳು ಕಾರ್ಯಕ್ಷಮತೆ, ವಿನ್ಯಾಸ ಮತ್ತು ಸುಧಾರಿತ ಕೂಲಿಂಗ್ ಸಿಸ್ಟಮ್‌ಗಳ ಅತ್ಯುತ್ತಮ ಸಮತೋಲನವನ್ನು ಒದಗಿಸುತ್ತವೆ ಎಂದು ಕಂಪೆನಿ ತಿಳಿಸಿದೆ. ಹೊಸ G15...

ಗುಣಮಟ್ಟದ ಲ್ಯಾಪ್‌ಟಾಪ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜನಪ್ರಿಯ Dell ಕಂಪೆನಿ ಇಂದು G15 5520 ಮತ್ತು G15 5521 (SE) ವಿಶೇಷ ಆವೃತ್ತಿಯ ಎರಡು ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. 12 ನೇ Gen Intel® Core™ i5 ಮತ್ತು i7 H-Series ಮತ್ತು NVIDIA® GeForce RTX™ 3070 Ti 8GB GDDR6 ಗ್ರಾಫಿಕ್ಸ್ ಪ್ರೊಸೆಸರ್‌ಗಳನ್ನು ಹೊತ್ತು ನೂತನ G15 5520 ಮತ್ತು G15 5521 ಲ್ಯಾಪ್‌ಟಾಪ್‌ಗಳು ಬಿಡುಗಡೆಗೊಂಡಿದ್ದು, ಈ ಬಜೆಟ್ ಗೇಮಿಂಗ್ PC ಗಳು ಕಾರ್ಯಕ್ಷಮತೆ, ವಿನ್ಯಾಸ ಮತ್ತು ಸುಧಾರಿತ ಕೂಲಿಂಗ್ ಸಿಸ್ಟಮ್‌ಗಳ ಅತ್ಯುತ್ತಮ ಸಮತೋಲನವನ್ನು ಒದಗಿಸುತ್ತವೆ ಎಂದು ಕಂಪೆನಿ ತಿಳಿಸಿದೆ. ಹೊಸ G15 ಲ್ಯಾಪ್‌ಟಾಪ್‌ಗಳು ಅತ್ಯುತ್ತಮ-ಇನ್-ಕ್ಲಾಸ್ ನಾವೀನ್ಯತೆ ಮತ್ತು ಉನ್ನತ ಎಂಜಿನಿಯರಿಂಗ್‌ನ ಪರಿಪೂರ್ಣ ಮಿಶ್ರಣವಾಗಿದೆ ಎಂದು ಭಾರತದ ಡೆಲ್ ಟೆಕ್ನಾಲಜೀಸ್‌ನ ಉತ್ಪನ್ನ ಮಾರುಕಟ್ಟೆ ನಿರ್ದೇಶಕರಥಾದ ಆನಂದ್ ಸುಬ್ರಹ್ಮಣ್ಯ ಅವರು ಹೇಳಿದ್ದಾರೆ. ಹಾಗಾದರೆ, ನೂತನ G15 5520 ಮತ್ತು G15 5521 ಗೇಮಿಂಗ್ ಲ್ಯಾಪ್‌ಟಾಪ್‌ಗಳು ಹೇಗಿವೆ ಮತ್ತು ಬೆಲೆಗಳು ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

15.6-ಇಂಚಿನ ಡಿಸ್‌ಪ್ಲೇ: ನೂತನ G15 5520 ಮತ್ತು G15 5521 (SE) ಎರಡೂ ಮಾದರಿಗಳು 15.6-ಇಂಚಿನ ಡಿಸ್‌ಪ್ಲೇಯ ಹೊಂದಿವೆ. ಆದರೆ, ವಿಭಿನ್ನ ಪ್ರದರ್ಶನ ಸಂರಚನೆಗಳೊಂದಿಗೆ, Dell G15  5520 FHD IPS ಡಿಸ್ಪ್ಲೇ ಜೊತೆಗೆ 165Hz ರಿಫ್ರೆಶ್ ದರವನ್ನು ಹೊಂದಿದ್ದರೆ, ಮತ್ತೊಂದೆಡೆ, Dell G15 SE ಲ್ಯಾಪ್‌ಟಾಪ್ 240Hz ರಿಫ್ರೆಶ್ ದರದೊಂದಿಗೆ Quad+HD IPS ಡಿಸ್ಪ್ಲೇ ಹೊಂದಿದೆ.ಇವುಗಳಲ್ಲಿ 5520 ಸಾಧನವು ಡಾರ್ಕ್ ಶ್ಯಾಡೋ ಗ್ರೇ ಬಣ್ಣದಲ್ಲಿ ಬಿಡುಗಡೆಯಾಗಿದೆ. ಆದರೆ 5521 SE ಸಾಧನವು ಅಬ್ಸಿಡಿಯನ್ ಕಪ್ಪು ಬಣ್ಣದಲ್ಲಿ ಲಭ್ಯವಿದೆ.

ಆಕರ್ಷಕ ದೃಶ್ಯ ವೈಭವ : ಗೇಮರುಗಳಿಗಾಗಿ ನೂತನ G15 5520 ಲ್ಯಾಪ್‌ಟಾಪ್‌2-ಬದಿಯ ಕಿರಿದಾದ ಬೆಜೆಲ್‌ಗಳೊಂದಿಗೆ FHD 120Hz ಅಥವಾ 165Hz ಡಿಸ್‌ಪ್ಲೇ ಮತ್ತು DCI-P3 99% ಕಲರ್ ಗ್ಯಾಮೆಟ್ ಜೊತೆಗೆ ಬಿಡುಗಡೆಯಾಗಿದೆ. G15 5521 SE ಸಾಧನವು 3-ಬದಿಯ ಕಿರಿದಾದ ಬೆಜೆಲ್ ಜೊತೆಗೆ QHD 240Hz ಡಿಸ್‌ಪ್ಲೇಯ ಹೆಚ್ಚುವರಿ ಆಯ್ಕೆಯನ್ನು ನೀಡುತ್ತದೆ. ಈ ಎರಡೂ ಗೇಮಿಂಗ್ ಲ್ಯಾಪ್‌ಟಾಪ್‌ಗಳು 16GB/ 512GB ಶೇಖರಣಾ ಕಾನ್ಫಿಗರೇಶನ್ನಲ್ಲಿ ಬಿಡುಗಡೆಗೊಂಡಿವೆ.

G15, G15 SE gaming laptops decoded: Dell on building 'Alienware for the  masses' | Exclusive | The Financial Express

ಗರಿಷ್ಠ ಕಾರ್ಯಕ್ಷಮತೆ: G15 5520 ಮತ್ತು G15 5521 ವಿಶೇಷ ಆವೃತ್ತಿ (SE) ಎರಡೂ ಗೇಮಿಂಗ್ ಲ್ಯಾಪ್‌ಟಾಪ್‌ಗಳು 100/100 ಸಿಪಿಯು-ಜಿಪಿಯು ಟಿಡಿಪಿ ಸ್ಥಿರವಾದ ಉನ್ನತ-ಮಟ್ಟದ ಇನ್-ಗೇಮ್ ಕಾರ್ಯಕ್ಷಮತೆಯನ್ನು ಒದಗಿಸುತ್ತವೆ ಎಂದು ಡೆಲ್ ಕಂಪೆನಿ ತಿಳಿಸಿದೆ. ಡ್ಯುಯಲ್ ಏರ್-ಇಂಟೆಕ್, ಅಲ್ಟ್ರಾ-ತೆಳುವಾದ ಫ್ಯಾನ್ ಬ್ಲೇಡ್‌ಗಳು, ತಾಮ್ರದ ಪೈಪ್‌ಗಳ ಸುಧಾರಿತ ಥರ್ಮಲ್ ವಿನ್ಯಾಸ ಅತ್ಯುತ್ತಮ ಕೂಲಿಂಗ್ ಸಿಸ್ಟಮ್ ಅನ್ನು ಒದಗಿಸುವುದರಿಂದ ಗರಿಷ್ಠ ಕಾರ್ಯಕ್ಷಮತೆ ಇರಲಿದೆ ಎಂದು ಡೆಲ್ ಹೇಳಿಕೊಂಡಿದೆ.

ಗೇಮ್-ಸಿದ್ಧ ಸೆಟ್ಟಿಂಗ್‌ಗಳು: Alienware ಕಮಾಂಡ್ ಸೆಂಟರ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಮೇಲೆ ನಿಯಂತ್ರಣವನ್ನು ಸಕ್ರಿಯಗೊಳಿಸುತ್ತದೆ, ಇದರಿಂದ ಹಾರ್ಡ್‌ವೇರ್ ಕಾರ್ಯಕ್ಷಮತೆ ಮತ್ತು ಸಿಸ್ಟಮ್ ಸೆಟ್ಟಿಂಗ್‌ಗಳನ್ನು ಗೇಮಿಂಗ್ ಪ್ರೊಫೈಲ್‌ಗಳ ಪ್ರಕಾರ ಸುಲಭವಾಗಿ ಬಳಸಲು ಸುಲಭವಾದ ಇಂಟರ್ಫೇಸ್‌ನಲ್ಲಿ ಕಸ್ಟಮೈಸ್ ಮಾಡಬಹುದು. ಎಫ್9 ಸ್ಥಾನದಲ್ಲಿನ "ಗೇಮ್ ಶಿಫ್ಟ್" ಮ್ಯಾಕ್ರೋ ಜಿ ಕೀ ಸುಧಾರಿತ ಕಾರ್ಯಕ್ಷಮತೆಗಾಗಿ ಗೇಮ್-ಸಿದ್ಧ ಸೆಟ್ಟಿಂಗ್‌ಗಳನ್ನು ಪ್ರಾರಂಭಿಸುತ್ತದೆ ಎಂದು ಕಂಪೆನಿ ತಿಳಿಸಿದೆ.

Dell G15 5520, G15 5521 SE Gaming Laptops Launched In India: Specs, Price

ಶಕ್ತಿಯುತ ಗ್ರಾಫಿಕ್ಸ್: ನೈಜ ರೇ-ಟ್ರೇಸ್ಡ್ ಗ್ರಾಫಿಕ್ಸ್ ಮತ್ತು ಅತ್ಯಾಧುನಿಕ AI ವೈಶಿಷ್ಟ್ಯಗಳಿಗಾಗಿ RT ಕೋರ್‌ಗಳು, ಟೆನ್ಸರ್ ಕೋರ್‌ಗಳು ಮತ್ತು ಸ್ಟ್ರೀಮಿಂಗ್ ಮಲ್ಟಿಪ್ರೊಸೆಸರ್‌ಗಳೊಂದಿಗೆ NVIDIA ಆಂಪಿಯರ್ ಆರ್ಕಿಟೆಕ್ಚರ್‌ನಿಂದ ಸುಗಮವಾದ ರೆಂಡರಿಂಗ್‌ನೊಂದಿಗೆ ತಲ್ಲೀನಗೊಳಿಸುವ ಅನುಭವವನ್ನು ಹೆಚ್ಚಿಸುತ್ತದೆ. ಇದು G15 5520 ಮತ್ತು G15 5521 ವಿಶೇಷ ಆವೃತ್ತಿ (SE) ಎರಡು ಗೇಮಿಂಗ್ ಲ್ಯಾಪ್‌ಟಾಪ್‌ಗಳಲ್ಲಿ ನೈಜವಾಗಿರುವ ಹಾಗೂ ಶಕ್ತಿಯುತ ಗ್ರಾಫಿಕ್ಸ್ ಅನ್ನು ಒದಗಿಸುತ್ತದೆ ಎಂದು ಡೆಲ್ ಕಂಪೆನಿ ತಿಳಿಸಿದೆ.

ಡಾಲ್ಬಿ ಆಡಿಯೋ 360°: G15 5520 ಮತ್ತು G15 5521 ವಿಶೇಷ ಆವೃತ್ತಿ (SE) ಎರಡು ಗೇಮಿಂಗ್ ಲ್ಯಾಪ್‌ಟಾಪ್‌ಗಳು ಗೇಮರುಗಳಿಗಾಗಿ ಡಾಲ್ಬಿ ಆಡಿಯೋ 360° ಆಡಿಯೋ ಮತ್ತು ಧ್ವನಿ ಬೂಟಿಂಗ್ ತಂತ್ರಜ್ಞಾನದೊಂದಿಗೆ ಮೂರು ಆಯಾಮದ ಗೇಮ್‌ಪ್ಲೇ ನೀಡುತ್ತದವೆ ಎಂದು ಕಂಪೆನಿ ತಿಳಿಸಿದೆ. ಇದರ ಜೊತೆಗ USB 3.1 Gen 1, Thunderbolt 4, HDMI ಪೋರ್ಟ್, USB-C ಪೋರ್ಟ್ ಮತ್ತು ಈಥರ್ನೆಟ್ ಪೋರ್ಟ್ ವೈಶಿಷ್ಟ್ಯಗಳನ್ನು ಸಹ ನಾವು ನೋಡಬಹುದಾಗಿದೆ.

ಬೆಲೆ ಮತ್ತು ಲಭ್ಯತೆ :ಹೊಸದಾಗಿ ಬಿಡುಗಡೆಯಾಗಿರುವ Dell G15 5520 ಲ್ಯಾಪ್‌ಟಾಪ್ ಬೆಲೆಯು 85,990 ರೂ.ಗಳಾಗಿದ್ದರೆ, G15 5521 (SE) ವಿಶೇಷ ಆವೃತ್ತಿಯು 1,18,990 ರೂ.ಗಳ ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಈ ಎರಡೂ ಲ್ಯಾಪ್‌ಗಳನ್ನು Dell Exclusive Stores (DES), Dell.com ಮತ್ತು ಬಹು-ಬ್ರಾಂಡ್ ಔಟ್‌ಲೆಟ್‌ಗಳಲ್ಲಿ ಮಾರಾಟಕ್ಕಿಡಲಾಗಿದೆ ಎಂದು ಕಂಪೆನಿ ತಿಳಿಸಿದೆ.

Dell Launches The G15 And G15 Se Gaming Laptops For The Indian Market.