ಬ್ರೇಕಿಂಗ್ ನ್ಯೂಸ್
28-05-22 04:13 pm HK News Desk ಕರ್ನಾಟಕ
ಮೈಸೂರು, ಮೇ 28 : ಮಳಲಿ ಮಸೀದಿ ಮಾತ್ರ ಅಲ್ಲ, ದೇಶದಾದ್ಯಂತ ಇರುವ ಮಂದಿರ ಒಡೆದು ಕಟ್ಟಿರುವ ಮಸೀದಿಗಳನ್ನು ಮರಳಿ ಪಡೆಯುತ್ತವೆ. ನೀವು ತಾಕತ್ತಿದ್ದರೆ ತಡೀರಿ ನೋಡೋಣ. ಕಾನೂನು ಪ್ರಕಾರವೇ ನಾವು ಮರಳಿ ಪಡೆಯುತ್ತೇವೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಳಲಿ ಮಸೀದಿಯಿಂದ ಒಂದು ತುಂಡು ಇಟ್ಟಿಗೆ ತೆಗೆಯಲು ಬಿಡಲ್ಲ ಎಂಬ ಎಸ್ ಡಿ ಪಿ ಐ ಅಧ್ಯಕ್ಷರ ಮಾತಿಗೆ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದ್ದಾರೆ. ಮಳಲಿಯ ಸಂಪೂರ್ಣ ದೇವಸ್ಥಾನ ಪಡೆದೇ ಪಡೆಯುತ್ತೇವೆ. ಅಲ್ಲಿ ವೀರಶೈವ, ಲಿಂಗಾಯತ ಮಠ ಇತ್ತು ಎನ್ನುವುದು ತಾಂಬೂಲ ಶಾಸ್ತ್ರದ ಪ್ರಕಾರ ತಿಳಿದುಬಂದಿದೆ. ನಾವು ಕಾನೂನು ಅಡಿಯಲ್ಲೇ ಮರಳಿ ಪಡೆಯುತ್ತೇವೆ. ನೀವು ತಾಕತ್ ಇದ್ದರೆ ತಡೆಯಿರಿ. ನಾಚಿಕೆ, ಮಾನ ಮರ್ಯಾದೆ ಇದ್ದರೆ ಸೌಹಾರ್ದವಾಗಿ ಬದುಕುವ ಆಸೆ ಇದ್ದರೆ ಕಬಳಿಸಿರುವ ದೇವಸ್ಥಾನ ವಾಪಸ್ ಕೊಡಿ ಎಂದು ಹೇಳಿದ್ದಾರೆ.
ಇದು ಯಾರ ಅಪ್ಪನ ಸೊತ್ತು ಅಲ್ಲ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಹೇಳಿದ್ದಾರೆ. ಇದು ನಮ್ಮ ಅಪ್ಪನದೇ ಏನೀವಾಗ? ನಿಮ್ಮ ಸೊಕ್ಕಿನ ಮಾತು ಬಿಟ್ಟುಬಿಡಿ. ಮೇಲೆ ನಿಮ್ಮ ಅಪ್ಪ ಕೂತಿದ್ದಾನೆ. ಹಿಂದೆ ಅಯೋಧ್ಯೆಯ ವಿಚಾರದಲ್ಲಿಯೂ ಇದೇ ರೀತಿಯ ಮಾತು ಹೇಳುತ್ತಿದ್ದರು. ಆನಂತರ ಕಾನೂನು ಪ್ರಕಾರವೇ ವಶಕ್ಕೆ ಪಡೆದು ಅಲ್ಲಿ ರಾಮನ ಮಂದಿರ ನಿರ್ಮಾಣ ಮಾಡುತ್ತಿದ್ದೇವೆ. ಆಗಲೂ ರಕ್ತಪಾತ ಆಗುತ್ತೆ ಎಂದು ಹೇಳಿದ್ದಿರಿ. ಒಂದು ತೊಟ್ಟು ಹನಿ ರಕ್ತ ಬೀಳಲಿಲ್ಲ. ನಾವು ಅದೇ ಜಾಗದಲ್ಲಿ ಮಂದಿರ ಕಟ್ತಾ ಇದ್ದೇವೆ.
ಎಸ್ಡಿಪಿಐ ಅಧ್ಯಕ್ಷರ ಮಾತು ಪ್ರಚೋದನೆಗೆ ದಾರಿ ಮಾಡಿಕೊಡುತ್ತಿದೆ. ಅವರ ಉದ್ದೇಶ ಅದೇ ಇರುವಂತಿದೆ. ಆದರೆ ನಮ್ಮ ಧರ್ಮದ ಸಂಪ್ರದಾಯದ ತಾಂಬೂಲ ಪ್ರಶ್ನೆ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ನಾಲಿಗೆ ಸೀಳಿ ಹಾಕುತ್ತೇವೆ. ಇಂತಹ ಮಾತು ಆಡುತ್ತಿರುವ ವ್ಯಕ್ತಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ನಮ್ಮ ಶಾಸ್ತ್ರದ ಬಗ್ಗೆ ಮಾತನಾಡುವವನು ನಾಶವಾಗುತ್ತಾನೆ. ಉಳಿಯೋದಿಲ್ಲ ಎಂದು ಮೈಸೂರಿನಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
Mysuru Pramod Muthalik slams SDPI for controversial statement made during the SDPI rally in Mangalore stating that they can't even touch the soil of Malali mosque. Muthalik claimed that we know how to take the soil of Malali by the support of the government.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm