ಬ್ರೇಕಿಂಗ್ ನ್ಯೂಸ್

Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ದೌರ್ಜನ್ಯ ; ಬೇಕಲ ಶಿಕ್ಷಣಾಧಿಕಾರಿ, ರೈಲ್ವೇ ಉದ್ಯೋಗಿ, ಜಮಾತೆ ಇಸ್ಲಾಮಿ, ಲೀಗ್ ಕಾರ್ಯಕರ್ತರು ಸೇರಿ ಹತ್ತು ಮಂದಿ ಪೊಲೀಸ್ ಬಲೆಗೆ, ಕಾಸರಗೋಡಿನಲ್ಲಿ ಸಂಚಲನ ಮೂಡಿಸಿದ ಪ್ರಕರಣ     |    ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆ    |    Mahesh Shetty Timarodi, Arms, FIR: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿಯಲ್ಲಿ ಮತ್ತೊಂದು ಎಫ್ಐಆರ್, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲು    |   

ತಂದೆಯ ಕುಡಿತದ ಚಟ ಬಿಡಿಸಲು ಔಷಧಿ ಬೆರಸಿಟ್ಟಿದ್ದ ಬಜ್ಜಿ ಸೇವಿಸಿ ಬಾಲಕ ದುರಂತ ಸಾವು !  

29-05-22 02:34 pm       HK News Desk   ಕರ್ನಾಟಕ

ತಂದೆಯ ಕುಡಿತದ ಚಟ ಬಿಡಿಸಲು ಬಜ್ಜಿಯೊಂದಿಗೆ ಬೆರೆಸಿಟ್ಟಿದ್ದ ಔಷಧಿಯನ್ನು ಸೇವಿಸಿದ ಬಾಲಕ ದುರಂತ ಸಾವನ್ನಪ್ಪಿದ ಘಟನೆ ಕಲಬುರಗಿಯ ವಾಡಿ ಪಟ್ಟಣದಲ್ಲಿ ನಡೆದಿದೆ.‌

ಕಲಬುರ್ಗಿ, ಮೇ 29 : ತಂದೆಯ ಕುಡಿತದ ಚಟ ಬಿಡಿಸಲು ಬಜ್ಜಿಯೊಂದಿಗೆ ಬೆರೆಸಿಟ್ಟಿದ್ದ ಔಷಧಿಯನ್ನು ಸೇವಿಸಿದ ಬಾಲಕ ದುರಂತ ಸಾವನ್ನಪ್ಪಿದ ಘಟನೆ ಕಲಬುರಗಿಯ ವಾಡಿ ಪಟ್ಟಣದಲ್ಲಿ ನಡೆದಿದೆ.‌

ಬಸವನಕಣಿ ಏರಿಯಾ ನಿವಾಸಿ 8 ವರ್ಷದ ವಿಷ್ಣು ಸಾವನ್ನಪ್ಪಿದ ಬಾಲಕ. ಔಷಧ ಮಿಕ್ಸ್ ಮಾಡಿ ತಂದೆಗೆ ನೀಡಲೆಂದು ಇಟ್ಟಿದ್ದ ಮಿರ್ಚಿ ಬಜ್ಜಿಯನ್ನು ಬಾಲಕ ಅಚಾನಕ್ಕಾಗಿ ಸೇವಿಸಿದ್ದಾನೆ ಎನ್ನಲಾಗುತ್ತಿದ್ದು ದುರಂತ ಸಾವು ಕಂಡಿದ್ದಾನೆ.  

ಬಾಲಕನ ತಂದೆ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದರಿಂದ ಚಟ ಬಿಡಿಸಲು ಔಷಧ ಮಿಶ್ರಿತ ಬಜ್ಜಿಯನ್ನು ತಯಾರಿಸಲಾಗಿತ್ತು.‌ ಔಷಧ ಮಿಕ್ಸ್ ಮಾಡಿ ಇಡಲಾಗಿದ್ದ ಬಜ್ಜಿಯನ್ನು ಬಾಲಕ ತಿಳಿಯದೇ ಸೇವಿಸಿದ್ದ. ಬಜ್ಜಿ ಸೇವಿಸಿದ ನಂತರ ಬಾಲಕನಿಗೆ ತೀವ್ರ ವಾಂತಿ ಬೇಧಿಯಾಗಿತ್ತು.‌ ವಾಂತಿ ಬೇಧಿ ನಂತರ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾನೆ. ವಾಡಿ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Kalaburgi Eight year old boy consumes anti alcohol medicine of father and dies. After severe vomit and lose motion he breathed his last.