ಅಧಿಕಾರದ ಆಸೆಯಿಂದ ಹೊರಟ್ಟಿ ಬಿಜೆಪಿ ಸೇರಿದ್ದಾರೆ, ರಾಜಕೀಯದ ಕೊನೆ ದಿನಗಳಲ್ಲಿ ಸಿದ್ಧಾಂತ ಬಲಿ‌ ಕೊಟ್ಟಿದ್ದಾರೆ ; ಸಲೀಂ ಅಹ್ಮದ್ 

29-05-22 08:23 pm       HK News Desk   ಕರ್ನಾಟಕ

ಬಸವರಾಜ ಹೊರಟ್ಟಿ ಸೋಲಿನ ಭೀತಿ ಹಾಗೂ ಅಧಿಕಾರದ ಆಸೆಯಿಂದ ಬಿಜೆಪಿ ಸೇರಿದ್ದಾರೆ. ತಮ್ಮ ರಾಜಕೀಯದ ಕೊನೆಯ‌ ದಿನಗಳಲ್ಲಿ ನಂಬಿದ ಸಿದ್ಧಾಂತ ಬಲಿ‌ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. 

ಹಾವೇರಿ, ಮೇ 29: ಬಸವರಾಜ ಹೊರಟ್ಟಿ ಸೋಲಿನ ಭೀತಿ ಹಾಗೂ ಅಧಿಕಾರದ ಆಸೆಯಿಂದ ಬಿಜೆಪಿ ಸೇರಿದ್ದಾರೆ. ತಮ್ಮ ರಾಜಕೀಯದ ಕೊನೆಯ‌ ದಿನಗಳಲ್ಲಿ ನಂಬಿದ ಸಿದ್ಧಾಂತ ಬಲಿ‌ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. 

ಹಾವೇರಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಲೀಂ ಅಹ್ಮದ್, ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವರಾಜ ಗುರಿಕಾರ್ ಸ್ಪರ್ಧಿಸಿದ್ದಾರೆ. ಬಸವರಾಜ ಗುರಿಕಾರ್ 40 ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದಾರೆ. ಅವರ ಕೆಲಸ ಪ್ರಾಮಾಣಿಕತೆ, ಹೋರಾಟ ಎಲ್ಲ ಶಿಕ್ಷಕರಿಗೆ ಗೊತ್ತಿದೆ. ಬಸವರಾಜ ಹೊರಟ್ಟಿಯವರು ಈ ಕ್ಷೇತ್ರದಿಂದ ಏಳು ಬಾರಿ ಆಯ್ಕೆಯಾಗಿದ್ದಾರೆ. ಹಾಗಿದ್ದರೂ ಕೊನೆಗಾಲದಲ್ಲಿ ಹೊರಟ್ಟಿಯವರು ಪಕ್ಷ ಬದಲಾವಣೆ ಮಾಡಿದ್ದಾರೆ. ಇದಕ್ಕೆ ಕಾರಣ‌ ಸೋಲಿನ‌ ಭೀತಿ ಇರಬಹುದು. ಇಲ್ಲದಿದ್ದರೆ ಅಧಿಕಾರದ ಆಸೆ‌ಯೂ ಇರಬಹುದು. ಮತ್ತೆ ಚೇರ್ಮನ್ ಆಗಿ ಮುಂದುವರೆಯಬಹುದು ಎಂಬ ದೂರಾಲೋಚನೆ ಇಟ್ಟುಕೊಂಡು ಬಿಜೆಪಿಗೆ ಹೋಗಿದ್ದಾರೆ. 

Congress names Basavaraj Gurikar for West Teachers' Constituency

ಈತನಕ ಜಾತ್ಯಾತೀತ ವಿಚಾರ ಇಟ್ಟುಕೊಂಡು ಚುನಾವಣೆ ಗೆದ್ದು ಅವರು ಈಗ ಕೋಮುವಾದಿ ಪಕ್ಷಕ್ಕೆ ಸೇರಿದ್ದಾರೆ. ಹೊರಟ್ಟಿ ತಮ್ಮ ರಾಜಕೀಯದ ಕೊನೆಯ‌ ದಿನಗಳಲ್ಲಿ ಸಿದ್ಧಾಂತ ಬಲಿ‌ ಕೊಟ್ಟಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿದ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಹಾಗಾಗಿ ಶಿಕ್ಷಕರು ಈ ಬಾರಿ ಬಸವರಾಜ ಗುರಿಕಾರ್ ಅವರಿಗೆ ಆಶೀರ್ವಾದ ‌ಮಾಡಬೇಕು. ಜಾತ್ಯತೀತ ಸಿದ್ಧಾಂತಕ್ಕೆ ಜಯ ದೊರಕಿಸಬೇಕು ಎಂದು ಹೇಳಿದರು. 

PM Narendra Modi welcomes Donald Trump's 'special gesture'

ಇತ್ತೀಚೆಗೆ ಮಾಜಿ ಪ್ರಧಾನಿ ನೆಹರು ಹಾಗೂ ಪ್ರಧಾನಿ ಮೋದಿ ಸಾಧನೆಗಳ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.‌ ಅಧಿಕಾರಕ್ಕೆ ಬಂದು ಎಂಟು ವರ್ಷವಾದರೂ ಒಂದೇ ಒಂದು‌ ಪ್ರೆಸ್ ಕಾನ್ಫರೆನ್ಸ್ ‌ಮಾಡಿಲ್ಲ. ಸುಳ್ಳು ಹೇಳುತ್ತಾ ಮೋದಿ ಅಧಿಕಾರ ನಡೆಸುತ್ತಾ ಬಂದಿದ್ದಾರೆ.‌ ಮೈ‌ ನರೇಂದ್ರ ಮೋದಿ ಹುಂ ಅಂತ ಹೇಳ್ತಾರಲ್ಲಾ ಅದೊಂದೇ ಅವರು ಹೇಳಿದ ಸತ್ಯ.‌ ನೆಹರೂರವರು ತಮ್ಮ ಅಧಿಕಾರಾವಧಿಯಲ್ಲಿ ಕಟ್ಟಿ ಬೆಳೆಸಿದ ಸಂಸ್ಥೆ, ಕಟ್ಟಡಗಳು ಎಲ್ಲವನ್ನೂ ಇವರು ಮಾರಿದರು.‌ ಅವರು ಕಟ್ಟಿದ್ದರು, ಇವರು ಮಾರಿದರು. ಇದೇ ನೆಹರೂ ಹಾಗೂ ಮೋದಿಯವರ ನಡುವೆ ಇರುವ ವ್ಯತ್ಯಾಸ ಎಂದು ಮೋದಿ ವಿರುದ್ದ ಸಲೀಂ ಅಹ್ಮದ್ ವ್ಯಂಗ್ಯವಾಡಿದರು.‌

Desire for position Basavaraj Horatti has joined BJP, slams KPCC secretary Salim Ahmed.