ಬ್ರೇಕಿಂಗ್ ನ್ಯೂಸ್
31-05-22 08:25 pm Bengalore Correspondent ಕರ್ನಾಟಕ
ಬೆಂಗಳೂರು, ಮೇ 31: 18 ವರ್ಷಗಳಿಂದ ಬೆಂಗಳೂರಿನಲ್ಲಿ ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್ ಮಾಡುತ್ತಿದ್ದ ಮಂಗಳೂರಿನ ಮೂಡುಬಿದ್ರೆ ಮೂಲದ ಉದ್ಯಮಿ ಪ್ರಮೋದ್ ಹೆಗಡೆ (45) ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟ್ರಾವೆಲ್ ಏಜೆನ್ಸಿಯಿಂದ ಹೆಸರು, ಹಣ ಗಳಿಸಿದ್ದ ಹೆಗಡೆ ಕಳೆದ ಕೊರೊನಾ ಸಂದರ್ಭದಲ್ಲಿ ನಷ್ಟಕ್ಕೀಡಾಗಿದ್ದರು.
18 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್ ಆರಂಭಿಸಿದ್ದ ಪ್ರಮೋದ್ ಲಾಭದಾಯಕ ಬ್ಯುಸಿನೆಸ್ ಹೊಂದಿದ್ದರು. ಆದರೆ ಇತ್ತೀಚೆಗೆ ಕ್ರಿಕೆಟ್ ಬೆಟ್ಟಿಂಗ್ ಗೀಳು ಮೈಗತ್ತಿಸಿಕೊಂಡು ಐಪಿಎಲ್ ಬೆಟ್ಟಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.
ಹೆಸರಘಟ್ಟ ರಸ್ತೆಯ ಹಾವನೂರು ಬಡಾವಣೆಯಲ್ಲಿ ತನ್ನದೇ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಬೆಂಗಳೂರಿನ ಉದ್ದಗಲಕ್ಕೂ ತನ್ನ ಟ್ರಾನ್ಸ್‌ಪೋರ್ಟ್ ಬ್ಯುಸಿನೆಸ್ ಹರಡಿಸಿದ್ದ ಪ್ರಮೋದ್ ಇತ್ತೀಚೆಗೆ ವ್ಯಾವಹಾರಿಕವಾಗಿ ನಷ್ಟದಿಂದಾಗಿ ಸಾಲ ಮಾಡಿದ್ದರಂತೆ. ಅಲ್ಲದೆ, ತನ್ನ ಸಂಬಂಧಿಯೊಬ್ಬರ ಬಳಿಯಿಂದ 30 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ. ಆದ್ರೆ ಸಾಲದ ಹಣವನ್ನ ವಾಪಸ್ ತೀರಿಸಲಾಗದೆ ಬೇಸತ್ತಿದ್ದರು.
ಇತ್ತೀಚೆಗೆ ಐಪಿಎಲ್ ಬೆಟ್ಟಿಂಗ್ ಆಡುತ್ತಿರುವ ವಿಚಾರ ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಮೊನ್ನೆ ರಾತ್ರಿ ಐಪಿಎಲ್ ಮ್ಯಾಚ್ ನೋಡುತ್ತಿದ್ದ ವೇಳೆ ತನ್ನ ಸ್ನೇಹಿತನಿಗೆ ಚಿಕನ್ ತೆಗೆದುಕೊಂಡು ಬಾ ಎಂದು ಹೇಳಿ ಹೊರ ಕಳುಹಿಸಿದವರು ಮನೆ ಒಳಗೆ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಂಬಂಧಿಯೊಬ್ಬರ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದ ಪತ್ನಿ ವೀಣಾ ಫೋನ್ ಮಾಡಿದ್ದಾಗ ರಿಸೀವ್ ಮಾಡದಿದ್ದಕ್ಕೆ ಆತನ ಸ್ನೇಹಿತ ಶಶಿ ಗೌಡಗೆ ತಿಳಿಸಿದ್ದರು. ಶಶಿ ಸ್ಥಳಕ್ಕೆ ತೆರಳಿ ನೋಡಿದಾ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿತ್ತು.
ಪ್ರಮೋದ್ ಮನೆಯಲ್ಲಿ ಸಾವಿಗೆ ಶರಣಾಗಿರುವುದರಿಂದ ಡೆತ್ ನೋಟ್ ಬರಿದಿಟ್ಟಿದ್ದಾರಾ ಎಂದು ಪೊಲೀಸರು ಶೋಧ ನಡೆಸಿದ್ದಾರೆ. ಆದರೆ ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿಲ್ಲ. ಬಾಗಲುಗುಂಟೆ ಪೊಲೀಸರು ಪ್ರಮೋದ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಕೋವಿಡ್ ನಿಂದ ವ್ಯವಹಾರದಲ್ಲಿ ನಷ್ಟ
ಕೋವಿಡ್ ನಿಂದ ಸಾಲದ ಕೂಪಕ್ಕೆ ಸಿಲುಕಿದ್ದ ಪ್ರಮೋದ್ ಪೀಣ್ಯದಲ್ಲಿ ಗಮ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದರು. ಆದರೆ ಕೋವಿಡ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದಾಗಿ ಸಾಲ ಮಾಡಿಕೊಂಡಿದ್ದು ಅದೇ ಖಿನ್ನತೆಯಲ್ಲಿ ಪ್ರಮೋದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ವೀಣಾ ಹೆಗಡೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
For the past 18 years, he has been working in Transport in Bengaluru. Pramod Hegde operated the Transport Port Agency of some of Bangalore’s leading companies. Recently he has also developed an obsession with cricket betting. Suddenly something like that, hanging tight and committing suicide. 45-year-old businessman Pramod Hegde, originally from Mudabidare.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm