ರಾಜ್ಯಸಭೆಗೆ ಸಿಗದ ಸ್ಥಾನ ; ಕಾಂಗ್ರೆಸ್ ಪಕ್ಷ ತೊರೆದ ಬೃಜೇಶ್ ಕಾಳಪ್ಪ, ರಾಷ್ಟ್ರ ಮಟ್ಟದಲ್ಲಿ ಮತ್ತೊಂದು ವಿಕೆಟ್‌ ಪತನ 

01-06-22 11:57 am       Bengalore Correspondent   ಕರ್ನಾಟಕ

ಕಾಂಗ್ರೆಸ್ ಹಿರಿಯ ನಾಯಕ, ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು, ಜೂನ್ 1: ಕಾಂಗ್ರೆಸ್ ಹಿರಿಯ ನಾಯಕ, ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಪಕ್ಷ ತೊರೆಯುತ್ತಿರುವ ಪ್ರಮುಖ ನಾಯಕರ ಸಾಲಿಗೆ ಬ್ರಿಜೇಶ್ ಕಾಳಪ್ಪ ಸೇರಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಹಿನ್ನಡೆ ಎನ್ನಲಾಗುತ್ತಿದೆ.  

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ಬ್ರಿಜೇಶ್ ಕಾಳಪ್ಪ ಪತ್ರದ ಯಥಾವತ್ ಪ್ರತಿಯನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ. "ಪಕ್ಷದಲ್ಲಿ ನೀವು ನನಗೆ ಹಲವಾರು ಅವಕಾಶಗಳನ್ನು ಒದಗಿಸಿಕೊಟ್ಟಿರುವುದಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಿದ್ದೇನೆ. ರಾಷ್ಟ್ರದ ಎಲ್ಲಾ ಭಾಗಗಳಲ್ಲಿ ನಾನು ಪರಿಚಿತ ಮುಖವೆಂದು ಗುರುತಿಸಲ್ಪಟ್ಟಿದ್ದರೆ, ಅದು ನಿಮ್ಮ ಪ್ರೋತ್ಸಾಹದಿಂದ. ನಿಮ್ಮ ಆಶೀರ್ವಾದದಿಂದ ನಾನು ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರನಾಗಿ, ಸಚಿವ ಸ್ಥಾನಮಾನಗಳೊಂದಿಗೆ ನೇಮಕಗೊಂಡಿದ್ದೆ. ಅದಕ್ಕಾಗಿ ಧನ್ಯವಾದಗಳು," ಎಂದು ತಿಳಿಸಿದ್ದಾರೆ.

What does Sonia Gandhi's new political panel, 2024 task force mean for  Congress leadership? - News Analysis News

"2013ರಿಂದಲೂ ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಚಾನೆಲ್‌ಗಳಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದೇನೆ. ಸುಮಾರು ಒಂದು ದಶಕದ ಕಾಲ ನಾನು 6,497 ಚರ್ಚೆಗಳನ್ನು ನಡೆಸಿದ್ದೇನೆ. ಇದಲ್ಲದೆ, ಪಕ್ಷವು ನನಗೆ ರಾಜಕೀಯ ಕೆಲಸಗಳನ್ನು ನಿಯಮಿತವಾಗಿ ನಿಯೋಜಿಸುತ್ತಿದ್ದು, ಅದನ್ನು ನಾನು ನನ್ನ ತೃಪ್ತಿಗೆ ತಕ್ಕಂತೆ ನಿರ್ವಹಿಸಿದ್ದೇನೆ. ಟಿವಿ ಚರ್ಚೆಗಳಿಗೆ ಸಂಬಂಧಿಸಿದಂತೆ, ನಾನು ಎಲ್ಲಾ ಸಮಯದಲ್ಲೂ ನನ್ನ ಅತ್ಯುತ್ತಮ ಕೆಲಸವನ್ನು ಮಾಡಿದ್ದೇನೆ. ಅಲ್ಲದೆ, ಯಾವುದೇ ಪೂರ್ವ ತಯಾರಿ ಇಲ್ಲದೆ ಚರ್ಚೆಯಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ ಎಂದು ಬಿಜೇಶ್ ಕಾಳಪ್ಪ ಹೇಳಿದ್ದಾರೆ.

2014 ಮತ್ತು 2019 ರ ಸೋಲುಗಳ ನಂತರ ಪಕ್ಷಕ್ಕೆ ಅತ್ಯಂತ ಕೆಟ್ಟ ಸಮಯದಲ್ಲೂ, ನಾನು ಎಂದಿಗೂ ಉತ್ಸಾಹದ ಕೊರತೆಯನ್ನು ಅನುಭವಿಸಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಏನೋ ಕೊರತೆಯನ್ನು ಎದುರಿಸುತ್ತಿದ್ದೇನೆ. ಈ ಪರಿಸ್ಥಿತಿಯಲ್ಲಿ ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ 1997ರಿಂದ ಅಖಿಲ ಭಾರತ ಕಾಂಗ್ರೆಸ್ ಜೊತೆ ಹೊಂದಿದ್ದ ನಂಟು ಬಿಡಿಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಬ್ರಿಜೇಶ್ ಕಾಳಪ್ಪ ಪತ್ರದಲ್ಲಿ ವಿವರಿಸಿದ್ದಾರೆ.

ಆದರೆ ಪಕ್ಷ ಬಿಡುವ ಬಗ್ಗೆ ಸ್ಪಷ್ಟ ಕಾರಣಗಳನ್ನು ತಿಳಿಸಿಲ್ಲ. ರಾಜ್ಯಸಭೆ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಕಾಳಪ್ಪ ಅವರನ್ನು ಪಕ್ಷ ಪರಿಗಣಿಸಿರಲಿಲ್ಲ. ಮತ್ತೆ ಜೈರಾಮ್ ರಮೇಶ್ ಅವರಿಗೆ ಪಕ್ಷ ಮಣೆ ಹಾಕಿದ್ದರಿಂದ ಬೇಸರಗೊಂಡು ಕಾಂಗ್ರೆಸ್ ಬಿಡುತ್ತಿದ್ದಾರೆ ಎನ್ನಲಾಗುತ್ತಿದೆ.

The Congress party in Karnataka has suffered another setback with senior party worker Brijesh Kalappa resigning to switch over to the Aam Aadmi Party. Mr Kalappa, a Supreme Court advocate, joined the grand old party in 1997. While making the announcement in an emotional note addressed to Congress president Sonia Gandhi, he said he started losing the passion for continuing working for the party's interest as he was not given his due. He confirmed to NDTV that he will join Arvind Kejriwal led AAP.