ಬ್ರೇಕಿಂಗ್ ನ್ಯೂಸ್
02-06-22 10:36 am Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 2: ಕುವೆಂಪು ಬಗ್ಗೆ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವಹೇಳನ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ, ಆಕ್ಷೇಪ ಕೇಳಿಬರುತ್ತಿರುವ ನಡುವಲ್ಲೇ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಅವರೂ ಕುವೆಂಪು ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ.
ಕುವೆಂಪು ಒಬ್ಬ ಮುಸ್ಲಿಂ ವಿರೋಧಿ ಆಗಿದ್ದರು. ಈ ಬಗ್ಗೆ ಅವರಲ್ಲೇ ಕೇಳಬೇಕು ಅಂತ ಒಮ್ಮೆ ಅವರ ಮನೆಗೂ ಹೋಗಿದ್ದೆ. ಆದರೆ ಅವರ ವಯಸ್ಸು ನೋಡಿ ಸುಮ್ಮನಾಗಿದ್ದೆ ಎಂದು ಸಾಹಿತಿ ಬೋಳುವಾರು ಮಹಮದ್ ಹೇಳಿಕೆ ನೀಡಿದ್ದಾರೆ.
ಕುವೆಂಪು ವಿಚಾರದಲ್ಲಿ ಕ್ಲಬ್ ಹೌಸ್‍ನಲ್ಲಿ ಚರ್ಚೆ ನಡೆಯುತ್ತಿದ್ದಾಗ ಬೋಳುವಾರು ಮಹಮದ್ ತನ್ನ ಅಭಿಪ್ರಾಯ ಹೇಳಿದ್ದು ಕುವೆಂಪು ಅವರ ವ್ಯಕ್ತಿತ್ವದ ಬಗ್ಗೆ ಪ್ರಶ್ನೆ ಮಾಡಿದಂತಾಗಿದೆ. ಕುವೆಂಪು ದೊಡ್ಡ ಕವಿಯಾಗಿದ್ದರೂ ಮುಸ್ಲಿಂ ವಿರೋಧಿ ಮನಸ್ಸು ಹೊಂದಿದ್ದರು. ಇದನ್ನು ನಾನು ಕೇಳಬೇಕೆಂದು ಅವರ ಮನೆಗೂ ಹೋಗಿದ್ದೆ. ಬಳಿಕ ಅವರ ವಯಸ್ಸನ್ನು ನೋಡಿ ಸುಮ್ಮನೆ ಹಿಂತಿರುಗಿದ್ದೆ. ನಾನು ಆವತ್ತೇ ಕುವೆಂಪುಗಿಂತ ಒಳ್ಳೆಯ ಕಾದಂಬರಿ ಬರೆಯಬೇಕು ಎಂದು ನಿರ್ಧರಿಸಿದ್ದೆ. ಅದರಂತೆ ನಾನು ಕುವೆಂಪು ಅವರಿಗಿಂತ ದೊಡ್ಡ ಕಾದಂಬರಿ ಬರೆದಿದ್ದೇನೆ ಎಂದು ಹೇಳಿದ್ದಾರೆ.
ಕುವೆಂಪು ಅವರದ್ದು 600 ಪುಟದ ಕಾದಂಬರಿಯಾಗಿತ್ತು. ನಾನು 1,100 ಪುಟದ ಕಾದಂಬರಿ ಬರೆದಿದ್ದೇನೆ. ಕುವೆಂಪು ಅವರಂತಹ ಮನುಷ್ಯರ ಮನಸ್ಸಿನಲ್ಲೂ ಮುಸ್ಲಿಂ ಬಗ್ಗೆ ವಿರೋಧಿ ಕಲ್ಪನೆ ಇತ್ತು ಎಂಬುದನ್ನು ಊಹಿಸಿರಲಿಲ್ಲ. ಆದರೆ ಅವರು ಮುಸ್ಲಿಮರ ವಿಚಾರದಲ್ಲಿ ತಪ್ಪು ಭಾವನೆ ಹೊಂದಿದ್ದರು ಎಂದು ತಮ್ಮ ಭಾಷಣದಲ್ಲಿ ಬೋಳುವಾರು ಮಹಮದ್ ಕುವೆಂಪು ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಕ್ಲಬ್ ಹೌಸ್ ನಲ್ಲಿ ಆಡಿರುವ ಮಾತುಗಳ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕುವೆಂಪು ಬಗ್ಗೆ ರೋಹಿತ್ ಚಕ್ರತೀರ್ಥ ಅವಹೇಳನ ಮಾಡಿದ್ದಾರೆಂದು ಗುಲ್ಲು ಎದ್ದಿರುವಾಗಲೇ ಈಗ ಹೊಸ ವಿವಾದ ಏಳುವಂತಾಗಿದೆ.
Bolwar Mahammad Kunhi quesutins if Kuvempu was anti Muslim. Pressure has started mounting on Chief Minister Basavaraj Bommai to remove Rohith Chakrathirtha from the post of chairman of Karnataka Textbooks Revision Committee, over his remarks about the state anthem.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm