ಮೈಕ್ ಬಗ್ಗೆ ಕೋರ್ಟ್ ಆದೇಶ ಪಾಲಿಸದಿದ್ದರೆ ಗುಂಡು ಹೊಡೀರಿ, ನಿಮ್ಗೆ ಸರ್ಕಾರ ನಡೆಸಲಾಗದಿದ್ದರೆ ಬಿಟ್ಟುಕೊಡಿ, ಬಿಜೆಪಿ ನಿಮ್ಮ ಅಪ್ಪನದಲ್ಲ..! 

02-06-22 02:32 pm       HK News Desk   ಕರ್ನಾಟಕ

ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸದವರ ಮೇಲೆ ನಾನೇ ಗುಂಡಿಟ್ಟು ಹೊಡೀತೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ‌

ಹುಬ್ಬಳ್ಳಿ, ಜೂನ್ 2 : ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸದವರ ಮೇಲೆ ನಾನೇ ಗುಂಡಿಟ್ಟು ಹೊಡೀತೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ‌

ರಾಜ್ಯ ಸರ್ಕಾರದ ವಿರುದ್ಧ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದು ಸುಪ್ರೀಂ ಕೋರ್ಟ್ ಅದೇಶ ಪಾಲನೆ ಮಾಡದವರ ಬಗ್ಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ.‌ ನಿಮಗೆ ಸರ್ಕಾರ ನಡೆಸಲು ಆಗದಿದ್ದರೆ ನನಗೆ ಕೊಡಿ, ಹೇಗೆ ಸರ್ಕಾರ ನಡೆಸಬೇಕು ಅನ್ನೋದನ್ನ ತೋರಿಸುತ್ತೇವೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡದವರ ಮೇಲೆ ಗುಂಡು ಹಾಕುತ್ತೇನೆ. ನನ್ ಕೈಯಲ್ಲಿ ಸರ್ಕಾರ ಕೊಡಿ, ಗುಂಡು ಹೊಡೀತೀನಿ. ನೀವ್ ಯಾಕೆ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿದ್ದೀರಿ. ನಿಮ್ಮ ಕರ್ತವ್ಯವನ್ನು ನೀವು ಮಾಡಬೇಕು ಎಂದು ಬಿಜೆಪಿ ಸರಕಾರದ ಬಗ್ಗೆ ಕಿಡಿಕಾರಿದ್ದಾರೆ. 

Supreme Court's judgment on difference between 'royalty' and 'tax' -  iPleaders

ನಿಮ್ಮನ್ನ ಬಟಾ ಬಯಲು ಮಾಡ್ತೇವೆ. ಮುಂದಿನ ದಿನಗಳಲ್ಲಿ ಅವರನ್ನ ಆರಿಸಿ ತರಬೇಡಿ ಎಂದು ಹೇಳಿಕೊಂಡು ಹೋಗ್ತೇವೆ. ಸರ್ಕಾರ ನಮ್ಮ ಸುಪ್ರಭಾತಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ರು. ದೇವಸ್ಥಾನಗಳಿಗೆ ತೆರಳಿ ಸುಪ್ರಭಾತ ಹಾಕದಂತೆ ಧಮ್ಕಿ ಹಾಕಿದ್ದಾರೆ‌. ಸರ್ಕಾರದ ಸೊಕ್ಕು ಅಡಗಿಸುವ ತನಕ ನಮ್ಮ ಹೋರಾಟ ಮುಂದುವರೆಯುತ್ತೆ. ಬಿಜೆಪಿ ನಿಮ್ಮಪ್ಪನದು ಅಲ್ಲ, ನಾವು ರಕ್ತ ಸುರಿಸಿ ಬಿಜೆಪಿ ಕಟ್ಟಿದ್ದೇವೆ ಎಂದು ಮುತಾಲಿಕ್ ಹೇಳಿದ್ದಾರೆ. ‌

While one criticises country abroad, other...': Yogi draws similarities  between Akhilesh and Rahul Gandhi | India News – India TV

Abide by HC order, no need to raise hijab issue again: CM Basavaraj Bommai  | Bengaluru News - Times of India

ರಾಜಕೀಯ ಈಗ ಮಾತನಾಡುವುದಿಲ್ಲ. ನಮ್ಮ ಶ್ರಮದಿಂದ ನೀವು ಅಧಿಕಾರ ಅನುಭವಿಸುತ್ತಿದ್ದೀರಿ. ಬೊಮ್ಮಾಯಿ ಅಧಿಕಾರಕ್ಕೆ ಬಂದಾಗ ಖುಷಿ ಪಟ್ಟಿದ್ದೆವು. ಆದ್ರೆ ಇದೀಗ ತೀವ್ರ ನಿರಾಸೆಯಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಕಾರ್ಯವೈಖರಿ ಅಳವಡಿಸಿಕೊಳ್ಳಬೇಕು.‌ ಕನಿಷ್ಠ 25% ಆದ್ರು ಯುಪಿ ಮಾದರಿ ಅಳವಡಿಸಿಕೊಳ್ಳಿ. ಬೊಮ್ಮಾಯಿ ಅವರೆ ನಿಮ್ಮ ಗಟ್ಸ್ ತಾಕತ್ತು ತೋರಿಸಿ. ಇಲ್ಲದಿದ್ದರೆ ನಿಮಗೆ ಮುಂದಿನ ಚುನಾವಣೆ ಕಷ್ಟವಾಗುತ್ತೆ ಎಂದು ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

Loudspeaker use for azan, will shoot those who don't follow the Supreme Court  rules spark row after controversial statement made by Sri Rama Sene chief  Pramod Muthalik in Hubbali.