ಪಠ್ಯಪುಸ್ತಕ ವಿವಾದ, ಕಾಂಗ್ರೆಸ್ ಟೂಲ್ ಕಿಟ್ ರಾಜಕೀಯದ ಭಾಗ, ಹೊಟ್ಟೆಕಿಚ್ಚಿಗೆ ನಮ್ಮಲ್ಲಿ ಔಷಧಿ ಇಲ್ಲ ; ಸಿಟಿ ರವಿ ಟಾಂಗ್ 

02-06-22 02:37 pm       HK News Desk   ಕರ್ನಾಟಕ

ರಾಜ್ಯದಲ್ಲಿ ಏಳು ಕೋಟಿ ಜನರಿದ್ದಾರೆ, 70 ಜನರು ಕೂಗಿದ್ರೆ ಅದು ಜನಾಕ್ರೋಶ ಆಗಲ್ಲ. ಇದು ಕಾಂಗ್ರೆಸ್ ಟೂಲ್ ಕಿಟ್ ರಾಜಕಾರಣದ ಭಾಗ.

ಮಂಡ್ಯ, ಜೂನ್ 2: ರಾಜ್ಯದಲ್ಲಿ ಏಳು ಕೋಟಿ ಜನರಿದ್ದಾರೆ, 70 ಜನರು ಕೂಗಿದ್ರೆ ಅದು ಜನಾಕ್ರೋಶ ಆಗಲ್ಲ. ಇದು ಕಾಂಗ್ರೆಸ್ ಟೂಲ್ ಕಿಟ್ ರಾಜಕಾರಣದ ಭಾಗ. ಕೆಲವರು ಅರಿವಿಲ್ಲದೆ ಮತ್ತೆ ಕೆಲವರು ದುರುದ್ದೇಶದಿಂದ ಟೂಲ್ ಕಿಟ್ ಭಾಗವಾಗಿ ವಿವಾದ ಹುಟ್ಟುಹಾಕುತ್ತಿದ್ದಾರೆ. ಟೂಲ್ ಕಿಟ್ ರಾಜಕಾರಣಕ್ಕೆ ಮೆಡಿಷನ್ ಇಲ್ಲ. ಹೊಟ್ಟೆಕಿಚ್ಚಿಗೆ ಮೆಡಿಸಿನ್ ಕೊಡೋಕಾಗುತ್ತಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ. 

ಪಠ್ಯಪುಸ್ತಕದ ಬಗ್ಗೆ ಅರಿವಿಲ್ಲದವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಉದಾಹರಣೆಗೆ ಆದಿಚುಂಚನಗಿರಿ ಶ್ರಿಗಳು ಹೇಳಿಕೆ ಕೊಟ್ಟಿದ್ರು. ಅನಂತರ ಶಿಕ್ಷಣ ಸಚಿವರೇ ಖುದ್ದಾಗಿ ತೆರಳಿ ಮನವರಿಕೆ ಮಾಡಿದರು. ಹಿಂದೆ ಕುವೆಂಪು ಬಗ್ಗೆ ಏಳು ಪಠ್ಯ ಇತ್ತು, ಇವಾಗ ಅದನ್ನು 10 ಮಾಡಿದ್ದೇವೆ ಎಂದು ಹೇಳಿದ ಮೇಲೆ ಇದು ಗೊತ್ತಿರಲಿಲ್ಲ ಅಂತ ಹೇಳಿದ್ದಾರೆ. 

ಟೂಲ್ ಕಿಟ್ ರಾಜಕಾರಣ ಇವತ್ತು ನಿನ್ನೆಯದಲ್ಲ. ಮೋದಿ ಪ್ರಧಾನಿಯಾದ ದಿನ ಅಸಹಿಷ್ಣು ವಾತಾವರಣ ಇದೆ ಎಂದು ಕೆಲವರು ಪ್ರಶಸ್ತಿ ವಾಪಸ್ ಕೊಟ್ಟಿದ್ದರು. ಅದು ಕೂಡ ಟೂಲ್ ಕಿಟ್ ರಾಜಕಾರಣದ ಒಂದು ಭಾಗ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ತಪ್ಪುಗಳನ್ನ ಸರಿಪಡಿಕೊಳ್ಳಲು ಸಿದ್ಧರಿದ್ದೇವೆ. ಹಾಗೆಂದು ನಮಗೆ ಅಹಂಭಾವ ಇಲ್ಲ. ಆದ್ರೆ ಇವರ ಅಪಪ್ರಚಾರಗಳನ್ನ ವಾಸ್ತವಿಕ ನೆಲೆಯಲ್ಲಿ ಜನರ ಮುಂದೆ ಇಡುತ್ತೇವೆ. ಪೂರ್ವಗ್ರಹ ಪೀಡಿತ ಜನರನ್ನ ನಾವು ಎದುರಿಸುತ್ತೇವೆ.

ಕೆಲವರು ಈ ರೀತಿ ಚಟುವಟಿಕೆ ಮೂಲಕ ನಾವು ಬದುಕಿದ್ದೇವೆ ಎಂದು ತೋರಿಸ್ತಾರೆ. ಇದನ್ನೇ ಜನಕ್ರೋಶ ಅನ್ನೋದಕ್ಕೆ ಆಗೋದಿಲ್ಲ. ನಮ್ಮ ರಾಜ್ಯದ ಜನ ಸಂಖ್ಯೆ 7 ಕೋಟಿ, 70 ಜನರು ಕೂಗಿದ್ದನ್ನ ಜನಾಕ್ರೋಶ ಎನ್ನುತ್ತೀರಾ ಎಂದು ಸಿಟಿ ರವ ಪ್ರಶ್ನೆ ಮಾಡಿದರು.‌

Former Minister and BJP national general secretary C.T. Ravi has criticised the writers who had written to the State Government withdrawing their permission to use their poems, essays in the textbooks in Mandya.