ಬ್ರೇಕಿಂಗ್ ನ್ಯೂಸ್
02-06-22 07:54 pm HK News Desk ಕರ್ನಾಟಕ
ಮೈಸೂರು, ಜೂನ್ 2: ಪಠ್ಯ ಪುಸ್ತಕದಲ್ಲಿ ಸತ್ಯ ಇರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು. ಪಠ್ಯದಲ್ಲಿ ಸತ್ಯ ಹೇಳಲು ಹೊರಟರೆ ಇವರೆಲ್ಲ ಗಲಾಟೆ ಮಾಡುತ್ತಿದ್ದಾರೆ ಎಂದು ಪಠ್ಯಪುಸ್ತಕ ವಿವಾದದ ಕುರಿತು ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನೊಬ್ಬ ಲೇಖಕ, ಕಾರ್ಯಕರ್ತ ಅಲ್ಲ. ಸತ್ಯವನ್ನಷ್ಟೇ ಹೇಳಬೇಕಾಗುತ್ತದೆ. ಹಿಂದೆ ವಾಜಪೇಯಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದರು. ಸಾಧ್ಯವಾಗಿರಲಿಲ್ಲ. ಆನಂತರ, ಮೋದಿ ಪ್ರಧಾನಿಯಾದಾಗ ಕೆಲವು ಸಾಹಿತಿಗಳು ದೇಶದ ತುಂಬೆಲ್ಲ ‘’ಪ್ರಶಸ್ತಿ ವಾಪ್ಸಿ" ಚಳವಳಿ ಶುರು ಮಾಡಿದರು. ಆಗ ನಾನು, ಪ್ರಶಸ್ತಿ ಜೊತೆಗೆ ಅದರಲ್ಲಿ ಸಿಕ್ಕಿದ್ದ ಹಣವನ್ನೂ ವಾಪಸ್ ಕೊಡಿ ಅಂತ ಸಲಹೆ ಕೊಟ್ಟಿದ್ದೆ. 15 ದಿನಗಳಲ್ಲಿ ಎಲ್ಲರೂ ಸುಮ್ಮನಾಗಿದ್ದರು.
ನಮ್ಮಲ್ಲಿ ಪಠ್ಯ ಬದಲಾವಣೆ ಮಾಡಲು ಹೊರಟರೆ ಗಲಾಟೆ ಶುರುವಾಗುತ್ತದೆ. ಗಲಾಟೆ ಒಂದು ರೀತಿ ಇರಲ್ಲ. ಹಲವು ರೀತಿಯಲ್ಲಿ ಬರುತ್ತೆ. ಇದೆಲ್ಲವೂ ಸರ್ಕಾರದ ಮೇಲೆ ಒತ್ತಡ ತರುತ್ತದೆ. ನಿನ್ನೆ ಸಚಿವ ಬಿ.ಸಿ.ನಾಗೇಶ್ ಮನೆಗೆ ಬೆಂಕಿ ಹಚ್ಚಲು ಹೋಗಿದ್ದಾರೆ. ಪೊಲೀಸರು ಇಲ್ಲದಿದ್ದರೆ ಮನೆ ಸುಟ್ಟು ಹೋಗುತ್ತಿತ್ತು. ಯಾರೋ ಹುಡುಗರು ಹೀಗೆಲ್ಲ ಮಾಡಲು ಸಾಧ್ಯವಿಲ್ಲ. ಅವರ ಹಿಂದೆ ಯಾರಿದ್ದಾರೆ ಅಂತ ಅರ್ಥ ಮಾಡಿಕೊಳ್ಳಬೇಕು ಎಂದು ಭೈರಪ್ಪ ಹೇಳಿದರು.
ಪ್ರಜಾಪ್ರಭುತ್ವಕ್ಕಾಗಿ ಚುನಾವಣೆ ನಡೆಯಬೇಕು. ಆದರೆ ಎಲೆಕ್ಷನ್ ಬಂತು ಅಂದ್ರೆ ನಾವು ಏನು ಬೇಕಾದರೂ ಮಾಡುತ್ತೇವೆ. ಹೆತ್ತ ತಾಯಿಯ ಜುಟ್ಟು ಹಿಡಿದು ಕೊಟ್ಟು ಬಿಡುವುದಕ್ಕೂ ರೆಡಿ ಇರುತ್ತೇವೆ. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕೊಡಗಿನವರು. ಟಿಪ್ಪು ಕೊಡಗು ಜಿಲ್ಲೆಯಲ್ಲಿ ಏನೆಲ್ಲ ಮಾಡಿದ ಅನ್ನೋದು ಕಾರ್ಯಪ್ಪಗೆ ಗೊತ್ತು.
ಅದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಇದರಿಂದ ಸಿಟ್ಟಾದ ಮಾಜಿ ನಿರ್ದೇಶಕರು ಸಿಎಂಗೆ ಪತ್ರ ಬರೆದರು, ಚಳವಳಿ ಶುರು ಮಾಡಿದರು. ಸ್ವಲ್ಪ ದಿನಗಳ ನಂತರ ಎಲ್ಲರೂ ಸುಮ್ಮನಾದರು.
ಟಿಪ್ಪು ವಿಚಾರದಲ್ಲಿ ಎಡಪಂಥೀಯರು, ಮುಸ್ಲಿಮರು ಅವರದ್ದೇ ಐಡಿಯಾಲಜಿ ಮಾಡುತ್ತಾರೆ. ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರು ಬದಲಿಸಬೇಕು ಅಂತ ಸಂಸದ ಪ್ರತಾಪಸಿಂಹ ಹೇಳಿದರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೆಸರಿಡಬೇಕೆಂದು ಕೇಳಿಕೊಂಡರು. ಯಾಕೆ ಇವರಿಗೆ ಅಬ್ದುಲ್ ಕಲಾಂ ಹೆಸರು ಆಗಲ್ಲ ಅನ್ನೋದು ಗೊತ್ತಾಗುತ್ತಿಲ್ಲ. ಟಿಪ್ಪು ಬಗ್ಗೆ ಬಹಳಷ್ಟು ಪುಸ್ತಕಗಳಿವೆ. ಪ್ರಧಾನ ಗುರುದತ್ ಬರೆದ ಪುಸ್ತಕ 16 ಮುದ್ರಣ ಕಂಡಿದೆ. "ಟಿಪ್ಪುವಿನ ನಿಜ ಸ್ವರೂಪ" ಪುಸ್ತಕವನ್ನು ಯಾರೂ ಓದುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿರಾಗಾಂಧಿ ಕಾಲದಲ್ಲಿ ಎನ್ ಸಿಇಆರ್ ಟಿಯಲ್ಲಿದ್ದೆ. ಆ ಸಂದರ್ಭದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ನನ್ನನ್ನೂ ಸೇರಿಸಿದ್ದರು. ಆದರೆ ಸಮಿತಿ ಅಧ್ಯಕ್ಷರಾಗಿದ್ದವರು ಇಂದಿರಾಗಾಂಧಿಯ ಆಪ್ತರಾಗಿದ್ದ ಪಾರ್ಥಸಾರಥಿ. ಔರಂಗಜೇಬ ಕಾಶಿಗೆ ದಾಳಿ ಮಾಡಿದ, ಮಸೀದಿ ಕಟ್ಟಿದ ಅನ್ನುವುದೆಲ್ಲ ಬೇಡ ಎಂದರು. ಆತ ಮಾಡಿದ್ದನ್ನು ಹಾಗೇ ಹೇಳಬೇಕಲ್ಲ. ಯಾಕೆ ಬೇಡ ಎಂದಿದ್ದಕ್ಕೆ ಎರಡು ದಿನದಲ್ಲಿ ನನ್ನನ್ನು ಸಮಿತಿಯಿಂದಲೇ ಹೊರಗಿಟ್ಟಿದ್ದರು. ನನ್ನ ಸ್ಥಾನಕ್ಕೆ ಮತ್ತೊಬ್ಬ ಕಮ್ಯುನಿಸ್ಟ್ ಮೈಂಡೆಡ್ ಒಬ್ಬರನ್ನು ಸೇರಿಸಿದ್ದರು.
ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿಯೂ ಇತಿಹಾಸ ಮರೆ ಮಾಚಲಾಗಿದೆ. ಶಿವಾಜಿಯ ಕೊಲ್ಲಲು ಬಂದಿದ್ದ ಅಫ್ಜಲ್ ಖಾನ್‌ನನ್ನು ನಾಯಕ ಎಂದು ಬಿಂಬಿಸಲಾಗಿದೆ. ನಾನು ಆ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿದ್ದ ಗೈಡ್ ಮೊದಲು ನನಗೆ ಸತ್ಯ ಹೇಳಲಿಲ್ಲ. 5 ರೂ. ಕೊಟ್ಟ ನಂತರ ಘಟನಾ ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದ. ಅಫ್ಜಲ್ ದಾಳಿ ಬಗ್ಗೆ ಅಲ್ಲಿ ಮೊದಲ ನಾಮಫಲಕ ಹಾಕಲಾಗಿತ್ತು. ಸರ್ಕಾರವೇ ನಂತರ ಅದನ್ನು ತೆಗೆದು ಹಾಕಿತ್ತು. ಇದನ್ನು ಯಾರಿಗೂ ಹೇಳಬೇಡಿ ಎಂದು ಆ ಹುಡುಗ ಕೇಳಿಕೊಂಡ. ಇದೆಲ್ಲ ಚುನಾವಣೆಗಾಗಿ ನಮ್ಮವರು ಮಾಡಿರುವುದು. ಏನು ಸತ್ಯವೋ ಅದನ್ನು ಹೇಳಲು ಹೊರಟರೆ ಇವರೆಲ್ಲ ಗಲಾಟೆ ಮಾಡುತ್ತಿದ್ದಾರೆ. ಇದ್ಯಾಕೋ ನನಗಂತೂ ಅರ್ಥವಾಗುತ್ತಿಲ್ಲ ಎಂದು ಬೇಸರ ತೋಡಿಕೊಂಡರು ಭೈರಪ್ಪ.
Kannada writer and Saraswathi Samman awardee S.L. Bhyrappa said that school textbooks ‘should contain facts, and they should not be altered to suit a particular ideology’. Speaking to mediapersons in Mysuru on June 2, Mr. Bhyrappa said that textbooks cannot be changed to prop up the ideology of any government.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm